ಇನ್ಮುಂದೆ ನೀವು ಟೋಲ್ ಬಳಿ ಬಿಲ್ ಪಾವತಿ ಮಾಡಲು ಕಾಯಬೇಕಿಲ್ಲ ಯಾಕೆ ಗೊತ್ತಾ..!

0
879

ನೀವು ಟೋಲ್ ಕಟ್ಟಲು ಟೋಲ್ ಬಳಿ ಕಾಯಬೇಕಾಗಿಲ್ಲ ಆಗಂತ ಟೋಲ್ ಟೋಲ್ ಕಟ್ಟಂಗಿಲ್ಲ ಅಂತ ಅಲ್ಲ. ನೀವು ಕಾಯುವ ಬದಲು ಬೇರೆ ವ್ಯವಸ್ಥೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಪಾವತಿಗೆ ‘ಫಾಸ್ಟ್ ಟ್ಯಾಗ್’ ಎಂಬ ಹೊಸ ವ್ಯವಸ್ಥೆ ಜಾರಿ ಮಾಡುತ್ತಿದೆ. ಈ ವ್ಯಸ್ಥೆಯನ್ನು ಸೆಪ್ಟೆಂಬರ್‌ ಮೊದಲ ವಾರದಿಂದಲೇ ಹೆದ್ದಾರಿಗಳಲ್ಲಿ ಫಾಸ್ಟ್ ಟ್ಯಾಗ್ ಟೋಲ್ ಗಳು ಕಾರ್ಯನಿರ್ವಹಣೆ ಶುರು ಮಾಡಲಿವೆ.

ಟೋಲ್ ಕಟ್ಟುವ ಸಮಯದಲ್ಲಿ ನೀವು ನೋಡಿರಬಹುದು ಯಾವ ಮಟ್ಟಿಗೆ ಒಮ್ಮೆ ಒಮ್ಮೆ ಟ್ರಾಫಿಕ್ ಜಾಮ್ ಆಗುತ್ತೆ ಅಂತ. ಇಂತಹ ಸಮಸ್ಯೆಯನ್ನು ದೂರ ಮಾಡಲು ನಾಲ್ಕು ಚಕ್ರದ ಹೊಸ ವಾಹನಗಳು ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಕೆ ಮಾಡಿಕೊಳ್ಳಬೇಕು ಅನ್ನೋ ನಿಯಮವನ್ನು ಜಾರಿಗೆ ತರಲಾಗುತ್ತಿದೆ.

ಈ ವ್ಯವಸ್ಥೆಯನ್ನು ಜಾರಿ ಮಾಡುವ ಸಲುವಾಗಿ ಆನ್‌ಲೈನ್ ಮೂಲಕವೇ ಎಲೆಕ್ಟ್ರಾನಿಕ್ ಟ್ಯಾಗ್‌ಗಳನ್ನು ಮಾರಾಟ ಮಾಡಲಾಗುತ್ತಿದ್ದು, ನೀವು ಇದರಲ್ಲಿ ಮೊಬೈಲ್ ಕರೆನ್ಸಿ ಹಾಕಿಸುವ ರೂಪದಲ್ಲೇ ಟೋಲ್ ಬಿಲ್ ಪಾವತಿ ಮಾಡಬಹುದು.

ಈ ಹೊಸ ನಿಯಮದ ಪ್ರಕಾರ ಸದ್ಯ ಚಾಲ್ತಿಯಲ್ಲಿರುವ ನಾಲ್ಕು ಚಕ್ರದ ವಾಹನಗಳು ಫಾಸ್ಟ್ ಟ್ಯಾಗ್‌ ಅನ್ನು ಆಯ್ಕೆ ಪದ್ಧತಿ ಮೇಲೆ ಅಳವಡಿಸಿಕೊಳ್ಳಬಹುದಾಗಿದ್ದು, ಇನ್ಮುಂದೆ ರಸ್ತೆಗಿಳಿಯಲಿರುವ ಹೊಸ ವಾಹನಗಳು ಫಾಸ್ಟ್ ಟ್ಯಾಗ್ ಅನ್ನು ಕಡ್ಡಾಯವಾಗಿ ಹೊಂದಬೇಕಿದೆ.

ಇದಕ್ಕಾಗಿ “ಮೈ ಫಾಸ್ಟ್ ಟ್ಯಾಗ್” ಆ್ಯಪ್ ಅನ್ನು ಡೌನ್‌ಲೋಡ್ ಮಾಡಬೇಕಿದ್ದು, ಈ ಮೂಲಕವೇ ನೀವು ಟೋಲ್ ಬಿಲ್‌ ಅನ್ನು ಪಾವತಿ ಮಾಡಬಹುದಾಗಿದೆ. ಆದ್ರೆ ನೀವು ಹೊಸ ನಾಲ್ಕು ಚಕ್ರದ ವಾಹನಗಳನ್ನು ಖರೀದಿ ಮಾಡುವವರಿಗೆ ಶೋರೂಮ್ ಗಳಲ್ಲೇ ಈ ಪಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಅಳವಡಿಸಿ ಕೊಡಲಾಗುತ್ತದೆ.

ಅಕ್ಟೋಬರ್ 1ರಿಂದ ಹೊಸ ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯ ಫಾಸ್ಟ್ ಟ್ಯಾಗ್‌ಗಳನ್ನು ಜಾರಿ ಮಾಡಲಾಗುತ್ತಿದೆ.
ಇದರಿಂದ ಟೋಲ್ ಮುಂದೆ ನೀವು ಗಂಟೆಗಟ್ಟಲೆ ಕಾಯುವುದು ತಪ್ಪುತ್ತದೆ. ಮತ್ತು ಈ ವ್ಯವಸ್ಥೆ ಇದ್ದವರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಟೋಲ್ ಬಳಿ ಮಾಡಲಾಗಿರುತ್ತದೆ.