ವಾಹನ ಮಾಲೀಕರಿಗೆ ಮತ್ತೆ ಶುರುವಾಯಿತು ಸಂಕಟ; ಡಿಸೆಂಬರ್ 1ರಿಂದ ಎಲ್ಲ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ..

0
677

ವಾಹನ ಮಾಲೀಕರಿಗೆ ಕಳೆದ ವರ್ಷದಿಂದ ಗೊಂದಲಕ್ಕೆ ತಳ್ಳಿದ ಟೋಲ್ ಪಾವತಿ ವಿಷಯ ಮತ್ತೆ ಜೀವ ಪಡೆದುಕೊಂಡಿದ್ದು, ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಲಿದೆ. ಡಿಸೆಂಬರ್‌ 1 ರಿಂದ ಇದು ಜಾರಿಗೆ ಬರಲಿದೆ. ಫಾಸ್ಟ್‌ ಟ್ಯಾಗ್‌ನಲ್ಲಿ ಸ್ವಯಂಚಾಲಿತವಾಗಿ ಟೋಲ್ ಶುಲ್ಕ ಕಡಿತಗೊಳ್ಳುತ್ತದೆ.ಇದೇ ವೇಳೆ ಒಂದು ಹೈಬ್ರಿಡ್‌ ಲೇನ್‌ ಕೂಡ ಇರಲಿದ್ದು, ಒಂದು ವೇಳೆ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್‌ ಇಲ್ಲದಿದ್ದರೆ ದುಪ್ಪಟ್ಟು ಟೋಲ್ ಕಟ್ಟಿ ಮುಂದೆ ಹೋಗಬೇಕಾಗುತ್ತದೆ.

Also read: ಇನ್ಮುಂದೆ ಬೇಕಾಬಿಟ್ಟಿ ವಾಹನ ಚಲಾಯಿಸುವ ಮುನ್ನ ಎಚ್ಚರ; ಆಕ್ಸಿಡೆಂಟ್ ಮಾಡಿದ್ರೆ ಮೃತರಿಗೆ, ಗಾಯಾಳುಗಳಿಗೆ ನೀವೆ ಪರಿಹಾರ ಕೊಡಬೇಕು..

ಹೌದು ಬರುವ ಡಿಸೆಂಬರ್ 1ರಿಂದ ಜಾರಿಗೆ ಬರುತ್ತಿರುವ ಫಾಸ್ಟ್‌ಟ್ಯಾಗ್‌ ಕಳೆದ ವರ್ಷವೇ ದೇಶಾದ್ಯಂತ ಜಾರಿಗೆ ತಂದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಸಂಗ್ರಹವನ್ನು ಸುಲಭವಾಗಿಸಿದ್ದು, ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಪ್ರತಿ ವಾಹನಗಳಿಗೂ ಕಡ್ಡಾಯವಾಗಿ ಹೊಂದುವಂತೆ ಹೊಸ ನಿಯಮವನ್ನು ಜಾರಿಗೆ ತಂದಿತ್ತು. ಹೊಸ ಸೌಲಭ್ಯದ ಕುರಿತಾದ ಮಾಹಿತಿ ಕೊರತೆಯಿಂದಾಗಿ ಮಹತ್ವದ ಯೋಜನೆಗೆ ಹಿನ್ನಡೆಯಾಗಿದ್ದು, ಬಹುತೇಕ ವಾಹನಗಳಲ್ಲಿ ಇದುವರೆಗೂ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಡಿಸೆಂಬರ್‌ 1 ರಿಂದ ಇದು ಜಾರಿಗೆ ಬರಲಿದ್ದು, ಫಾಸ್ಟ್‌ ಟ್ಯಾಗ್‌ನಲ್ಲಿ ಸ್ವಯಂಚಾಲಿತವಾಗಿ ಟೋಲ್ ಶುಲ್ಕ ಕಡಿತಗೊಳ್ಳುತ್ತದೆ.

ಒಂದು ವೇಳೆ ನಿಮ್ಮ ಬಳಿ ಫಾಸ್ಟ್‌ ಟ್ಯಾಗ್‌ ಸೌಲಭ್ಯ ಇಲ್ಲದಿದ್ದರೆ ಹೈಬ್ರಿಡ್‌ ಲೇನ್‌ ಕೂಡ ಇರಲಿದ್ದು, ಇದರಲ್ಲಿ ಫಾಸ್ಟ್‌ಟ್ಯಾಗ್‌ ಜೊತೆಗೆ ನಗದು ರೂಪದಲ್ಲೂ ಹಣ ಪಡೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಲೇನ್‌ಗಳಲ್ಲಿ ಕೇವಲ ಫಾಸ್ಟ್‌ಟ್ಯಾಗ್‌ಗಳನ್ನು ಮಾತ್ರ ಸಮ್ಮತಿಸಲಾಗುತ್ತದೆ. ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳು ಈ ಲೇನ್‌ಗಳ ಮೂಲಕ ಹಾದುಹೋಗುವುದಾದರೆ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆ. ಟೋಲ್ ಬಳಿ ವಾಹನವನ್ನು ನಿಲ್ಲಿಸಿ ಹಣ ನೀಡಿ ರಸೀದಿ ತೆಗೆದುಕೊಳ್ಳುವ ಕಿರಿಕಿರಿಯನ್ನು ಇದು ನಿವಾರಿಸುತ್ತದೆ.

Also read: ಇನ್ಮುಂದೆ ನಿಮ್ಮ ವಾಹನಕ್ಕೆ PRESS, POLICE, ARMY, ಲಾಯರ್ ಸ್ಟಿಕ್ಕರ್ಸ್ ಹಾಕಿದ್ರೆ ವಾಹನ ಸೀಝ್ ಪಕ್ಕಾ; ಯಾಕೆ ಅಂತ ಈ ಮಾಹಿತಿ ನೋಡಿ..

ಹೆದ್ದಾರಿ ಪ್ರಾಧಿಕಾರದ ಸೂಚನೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದಂತೆ, ದೇಶಾದ್ಯಂತ ಡಿಸೆಂಬರ್ 1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಎಲ್ಲಾ ವಾಹನಗಳು ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್ ಹೊಂದಿರಬೇಕು. ಇಲ್ಲವಾದಲ್ಲಿ ದುಪ್ಪಟ್ಟು ನಗದು ನೀಡಬೇಕಾಗುತ್ತದೆ ಎಂದು ಹೇಳಿದ್ದು, ಟೋಲ್ ಪ್ಲಾಜಾಗಳಲ್ಲಿ ಸುಗಮ ಸಂಚಾರ ಹಾಗೂ ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಸಂಗ್ರಹಿಸಲು ಸಾಧ್ಯವಾಗುವಂತೆ ಸದ್ಯ ಕಾರ್ಯನಿರ್ವಹಣೆಯಲ್ಲಿರುವ ಫಾಸ್ಟ್‌ಟ್ಯಾಗ್ ಟೋಲ್ ಬೂತ್‌ಗಳ ಸಂಖ್ಯೆಯನ್ನು ಶೇ.80ರಷ್ಟು ಹೆಚ್ಚಿಸಲು ಈಗಾಗಲೇ ಚಾಲನೆ ನೀಡಿರುವುದಾಗಿ ತಿಳಿಸಿರುವ ನಿತಿನ್ ಗಡ್ಕರಿಯವರು, ಶಾಲಾ ವಾಹನಗಳು ಮತ್ತು ರಾಜ್ಯ ಸಾರಿಗೆ ಬಸ್‌ಗಳ ಮೇಲಿನ ಟೋಲ್ ದರದಲ್ಲಿ ವಿನಾಯ್ತಿ ನೀಡುವ ಕುರಿತು ಚರ್ಚಿಸಿವುದಾಗಿ ಹೇಳಿದ್ದಾರೆ.

Also read: ವಾಹನ ಸವಾರರಿಗೆ ಎಚ್ಚರ ಇನ್ಮುಂದೆ ಚಿಕ್ಕ ತಪ್ಪಿಗೂ ಬೀಳುತ್ತೆ ಸಾವಿರಾರು ರೂ. ದಂಡ; ಯಾವ್ಯಾವ ರೂಲ್ಸ್ ಬ್ರೇಕ್‍ಗೆ ಎಷ್ಟೆಷ್ಟು ದಂಡ??

ಹಾಗೆಯೇ ಟೋಲ್ ವಸೂಲಿಗೆ ಕೊನೆ ಯಾವಾಗ? ಎನ್ನುವ ಪ್ರಶ್ನೆಗೆ ಉತ್ತರಿಸಿರುವ ನಿತಿನ್ ಗಡ್ಕರಿ ಅವರು, ಅದು ಮುಗಿದ ಅಧ್ಯಾಯ ಎಂದು ಸ್ಪಷ್ಟಪಡಿಸಿದ್ದಾರೆ. ಉತ್ತಮ ರಸ್ತೆಗಳು ಬೇಕಿದ್ದರೆ ವಾಹನ ಸವಾರರು ಟೋಲ್ ಪಾವತಿ ಮಾಡಲೇಬೇಕು ಎಂದಿರುವ ಅವರು, ಟೋಲ್‌ ಈಸ್ ಮೈ ಬ್ರೇನ್‌ ಚೈಲ್ಡ್‌, ಸುಂಕ ವಸೂಲಾತಿಯನ್ನು ತಡೆಯಲು ಸಾಧ್ಯವೇ ಇಲ್ಲ ಎಂದಿದ್ದಾರೆ.