ಇದೇ ಡಿಸೆಂಬರ್.1ರಿಂದಲೇ ಎಲ್ಲಾ ವಾಹನಗಳಿಗೆ ಫಾಸ್ಟ್‌ ಟ್ಯಾಗ್ ಕಡ್ಡಾಯ; ಇದನ್ನು ಎಲ್ಲಿ ಹೇಗೆ, ಪಡೆಯಬೇಕು ದಾಖಲಾತಿಗಳೇನು ಬೇಕು??

0
691

ಡಿಸೆಂಬರ್ 1ರಿಂದ ಜಾರಿಗೆ ಬರುತ್ತಿರುವ ಫಾಸ್ಟ್‌ಟ್ಯಾಗ್‌-ನ್ನು ಕಳೆದ ವರ್ಷವೇ ದೇಶಾದ್ಯಂತ ಜಾರಿಗೆ ತಂದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಸಂಗ್ರಹವನ್ನು ಸುಲಭವಾಗಿಸಿದ್ದು, ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಪ್ರತಿ ವಾಹನಗಳಿಗೂ ಕಡ್ಡಾಯವಾಗಿ ಹೊಂದುವಂತೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಹೊಸ ಸೌಲಭ್ಯದ ಕುರಿತಾದ ಮಾಹಿತಿ ಕೊರತೆಯಿಂದಾಗಿ ಮಹತ್ವದ ಯೋಜನೆಗೆ ಹಿನ್ನಡೆಯಾಗಿದ್ದು, ಬಹುತೇಕ ವಾಹನಗಳಲ್ಲಿ ಇದುವರೆಗೂ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಈಗ ಕೇಂದ್ರ ಸರ್ಕಾರ ತನ್ನ ಅಧಿಕಾರಿಗಳನ್ನು ಎಲ್ಲಾ ರಾಜ್ಯಗಳಿಗೂ ನಿಯೋಜಿಸುತ್ತಿದೆ.

Also read: ಮೊಬೈಲ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್; ಡಿ.1ರಿಂದಲೇ ಭಾರಿ ದುಬಾರಿಯಾಗಲಿದೆ ಕರೆ, ಡೇಟಾ ದರಗಳು.!

ಹೌದು ಡಿಸೆಂಬರ್‌ 1 ರಿಂದ ಇದು ಜಾರಿಗೆ ಬರಲಿದ್ದು, ಫಾಸ್ಟ್‌ ಟ್ಯಾಗ್‌ನಲ್ಲಿ ಸ್ವಯಂಚಾಲಿತವಾಗಿ ಟೋಲ್ ಶುಲ್ಕ ಕಡಿತಗೊಳ್ಳುತ್ತದೆ. ಇದರಿಂದ ಹೆದ್ದಾರಿಗಳಲ್ಲಿ ರಸ್ತೆ ಸುಂಕ ಪಾವತಿಸಲು ವಾಹನಗಳು ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ಹಾಗೂ ಟೋಲ್‌ಬೂತ್‌ಗಳನ್ನು ಕ್ಯಾಶ್‌ಲೆಸ್‌ ಆಗಿಸಲು ಕೇಂದ್ರ ಸರ್ಕಾರ ಡಿ.1ರಿಂದ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ.

ಫಾಸ್ಟ್ ಟ್ಯಾಗ್ ಎಂದರೇನು?

ಟೋಲ್ ಪ್ಲಾಜಾಗಳಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆ ತಡೆಗಟ್ಟಲು ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಸೌಲಭ್ಯವನ್ನು ಜಾರಿಗೆ ತಂದಿದೆ. ಫಾಸ್ಟ್ ಟ್ಯಾಗ್ ಪ್ರಿಪೇಯ್ಡ್ ಟ್ಯಾಗ್ ಸೌಲಭ್ಯವಾಗಿದ್ದು, ಟೋಲ್ ಶುಲ್ಕವನ್ನು ನಗದು ರಹಿತವಾಗಿ ಪಾವತಿಸಬಹುದಾಗಿದೆ. ಹೀಗಾಗಿ ಎಲ್ಲಾ ವಾಹನಗಳು ಕಡ್ಡಾಯವಾಗಿ ಫಾಸ್ಟ್‌ ಟ್ಯಾಗ್ ಅಳವಡಿಸಿಕೊಂಡು ಟೋಲ್ ಪಾವತಿಸಬೇಕಾಗುತ್ತದೆ.ಹೊಸ ವ್ಯವಸ್ಥೆಯನ್ನು ಸುಸೂತ್ರವಾಗಿ ದೇಶಾದ್ಯಂತ ಜಾರಿಗೆ ತರಲು ಕೇಂದ್ರ ಸರ್ಕಾರ ತನ್ನ ಅಧಿಕಾರಿಗಳನ್ನು ಎಲ್ಲಾ ರಾಜ್ಯಗಳಿಗೂ ನಿಯೋಜಿಸಿದೆ.

ಬ್ಯಾಂಕ್ ಖಾತೆಯಲ್ಲಿ ಮುಂಗಡ ಹಣ?

Also read: ಸಿನಿಮಾ ರೀತಿಯಲ್ಲಿ 7 ವರ್ಷದ ಬಾಲಕನನ್ನು ಕಿಡ್ನಾಪ್ ಮಾಡಿ 3 ಲಕ್ಷಕ್ಕೆ ಬೇಡಿಕೆ ಇಟ್ಟ 10ನೇ ಕ್ಲಾಸ್ ಅಪ್ರಾಪ್ತ ವಿದ್ಯಾರ್ಥಿ.!

ರೇಡಿಯೋ-ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್(RFD) ಆಧಾರಿತ ಫಾಸ್ಟ್ ಟ್ಯಾಗನ್ನು ವಾಹನದ ಮುಂಭಾಗದ ಗ್ಲಾಸ್‍ಗೆ ಅಂಟಿಸಲಾಗಿರುತ್ತದೆ. ಈ ಟ್ಯಾಗ್ ರೇಡಿಯೋ ಫ್ರಿಕ್ವೆನ್ಸಿ ಮೂಲಕ ಸ್ಕ್ಯಾನ್ ಆಗಲಿದ್ದು, ನಂತರ ಪ್ರಿಪೇಯ್ಡ್ ಅಥವಾ ಉಳಿತಾಯ ಖಾತೆಯಿಂದ ಹಣ ಕಡಿತವಾಗಲಿದೆ. ಆದರೆ ಬ್ಯಾಂಕ್ ಖಾತೆಯಲ್ಲಿ ಮುಂಗಡ ಹಣವನ್ನು ಇಟ್ಟಿರಬೇಕಾಗುತ್ತದೆ. ಎಲ್ಲ ಪ್ರಮುಖ ಬ್ಯಾಂಕುಗಳು ಫಾಸ್ಟ್ ಟ್ಯಾಗ್ ಸೌಲಭ್ಯ ನೀಡುತ್ತಿದ್ದು, ಇದನ್ನು ಗ್ರಾಹಕರ ಉಳಿತಾಯ ಖಾತೆಗೆ ಲಿಂಕ್ ಮಾಡಲಾಗುತ್ತದೆ. ನೋಂದಾಯಿತ ವಾಹನ ಟೋಲ್ ಪ್ಲಾಜಾ ಮೂಲಕ ಹಾದು ಹೋಗುತ್ತಿದ್ದಂತೆ ಅಲ್ಲಿನ ರೀಡರ್, ಟ್ಯಾಗನ್ನು ರೀಡ್ ಮಾಡುತ್ತದೆ. ಆಗ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ. ಫಾಸ್ಟ್ ಟ್ಯಾಗನ್ನು ವಾಹನದ ನೋಂದಣಿ ಸಂಖ್ಯೆಗೆ ಜೋಡಿಸಲಾಗಿರುತ್ತದೆ.

ಫಾಸ್ಟ್ ಟ್ಯಾಗ್ ಹೇಗೆ ಪಡೆಯಬೇಕು?

ಫಾಸ್ಟ್ ಟ್ಯಾಗನ್ನು ವಿವಿಧ ಬ್ಯಾಂಕುಗಳಲ್ಲಿ, ಐಎಚ್‍ಎಂಸಿಎಲ್, ಎನ್‍ಎಚ್‍ಎಐ, ಟೋಲ್ ಪ್ಲಾಜಾ, ಆರ್ ಟಿಓ ಕಚೇರಿ, ಟ್ರಾನ್ಸ್ ಪೋರ್ಟ್ ಕೇಂದ್ರಗಳು, ಕೆಲವು ಪೆಟ್ರೋಲ್ ಬಂಕ್‍ಗಳಲ್ಲಿ ಹಾಗೂ ವಿವಿಧೆಡೆ ಖರೀದಿಸಬಹುದಾಗಿದೆ. ಕಾರ್, ಜೀಪ್ ವ್ಯಾನ್‍ಗಳಿಗೆ ಅಮೇಜಾನ್‍ನಲ್ಲಿ ಹಾಗೂ ವೆಬ್‍ ಸೈಟಿಗೆ ಭೇಟಿ ನೀಡಿ ಖರೀದಿಸಬಹುದು, ಮತ್ತು ಬ್ಯಾಂಕುಗಳ ವೆಬ್‍ಸೈಟ್‍ನಲ್ಲಿ ಸಹ ಖರೀದಿಸಬಹುದು.

ಫಾಸ್ಟ್ ಟ್ಯಾಗ್ ಪಡೆಯಲು ಏನ್ ದಾಖಲೆ ಬೇಕು?

Also read: ಪುಸ್ತಕದಲ್ಲಿ ರಾಮನ ಹೆಸರು ಬರೆದರೆ ಬಹುಮಾನ; ರಾಮ್ ನಾಮ್ ಬ್ಯಾಂಕ್ ಘೋಷಣೆ.!

SBI ಖಾತೆದಾರರು www.fastag.onlinesbi.com ಭೇಟಿ ನೀಡಿ ಬ್ಯಾಂಕ್ ಪಾಸ್ ಬುಕ್, ರಿಜಿಸ್ಟ್ರೇಶನ್ ಕಾರ್ಡ್ ಒರಿಜಿನಲ್ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು. ಇದರಲ್ಲಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಕೆವೈಸಿ ಹಾಗೂ ಫುಲ್ ಕೆವೈಸಿ ಎಂದು ಮಾಡಲಾಗಿದೆ. ಕೆವೈಸಿ ಫಾಸ್ಟ್ ಟ್ಯಾಗ್ ಖಾತೆಯಲ್ಲಿ 10,000 ಸಾವಿರಕ್ಕೂ ಹೆಚ್ಚು ಹಣ ಇಡುವಂತಿಲ್ಲ. ಅಲ್ಲದೆ ಪ್ರತಿ ತಿಂಗಳು 10 ಸಾವಿರಕ್ಕೂ ಅಧಿಕ ಹಣವನ್ನು ವರ್ಗಾಯಿಸುವಂತಿಲ್ಲ. ಇನ್ನು ಫುಲ್ ಕೆವೈಸಿ ಖಾತೆಯಲ್ಲಿ 1 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಇಡುವಂತಿಲ್ಲ.