ಒಬ್ಬ ತಂದೆ ಮತ್ತು ಮಗಳ ಕರುಣಾಜನಕ ಕಥೆ ಒಮ್ಮೆ ಓದಿ, ಇದು ನಿಜವಾದ ಪ್ರೀತಿ ಕಣ್ರೀ..!

0
1809

ಸಾಮಾನ್ಯವಾಗಿ ಎಲ್ಲರು ಹೇಳುವುದು ಮಗಳ ಮೇಲೆ ತಾಯಿಗೆ ಪ್ರೀತಿ ಹೆಚ್ಚು ಅಂತ ಹೇಳುತ್ತಾರೆ ಆದರೆ ತಂದೆ ಮತ್ತು ಮಗಳ ಸಂಬಂಧ ಅನ್ನೋದು ತುಂಬ ಅಮೂಲ್ಯವಾದದ್ದು ಮತ್ತು ಮಗಳ ಮೇಲೆ ತಂದೆಯ ಪ್ರೀತಿ ಹೆಚ್ಚು ಅನ್ನೋದು ಈ ಸ್ಟೋರಿ ನೋಡಿದ್ರೆ ಖಂಡಿತ ಅರ್ಥವಾಗುತ್ತೆ.

ಒಬ್ಬ ತಂದೆ ಮತ್ತು ಮಗಳ ಕಥೆ ಇಲ್ಲಿದೆ ನೋಡಿ. ಒಂದು ದಿನ ಮಗಳು ಮತ್ತು ತಂದೆಯ ನಡುವೆ ಈ ರೀತಿಯಾಗಿ ಕಥೆ ಆರಂಭವಾಗುತ್ತೆ.
ಮಗಳು :ಅಪ್ಪ ನಂಗೆ ಒಂದು ಬೈಕ್ ಬೇಕು ಎಂದು ಕೇಳುತ್ತಾಳೆ.
ಅಪ್ಪ : ಮಗಳೇ ನಿನ್ನ ಹತ್ತಿರ ಒಂದು ಬೈಕ್ ಇದೆ ಮತ್ತೆ ಯಾಕೆ ಬೈಕ್.
ಮಗಳು : ಅದು ತುಂಬ ಹಳೇದು ಆಗಿದೆ ನನ್ನ ಪ್ರೆಂಡ್ಸ್ ಎಲ್ಲರು ಹೊಸ ಬೈಕ್ ತಗೊಂಡಿದ್ದರೆ. ಅದುಕ್ಕೆ ನಂಗೆ ಬೇಕು.
ಅಪ್ಪ : ಸರಿ ಮಗಳೇ ಮುಂದಿನ ತಿಂಗಳು ತಗೋ ಮಗಳೇ ಇವಾಗ ಆಗಲ್ಲ ಅಂತ ಹೇಳುತ್ತಾನೆ.

source:HuffPost

ಮತ್ತೆ ಒಂದು ದಿನ ಮಗಳು ಕಾಲೇಜು ಮುಗಿಸಿಕೊಂಡು ಮನೆಗೆ ಬಂದು ಸಂಜೆ ಅಪ್ಪ ಹತ್ತಿರ ಹೋಗುತ್ತಾಳೆ.
ಮಗಳು : ಅಪ್ಪ ನಂಗೆ ಒಂದು ಲ್ಯಾಪ ಟಪ್ ಬೇಕು
ಅಪ್ಪ : ಮಗಳೇ ನನ್ನ ಹತ್ತಿರ ಇವಾಗ ಹಣ ಇಲ್ಲ ಮುಂದೆ ಯಾವಾಗಾದ್ರೂ ಕೊಡಿಸುತ್ತೇನೆ ಮಗಳೇ
ಮಗಳು : ಹೋಗಪ್ಪ ಅಂತ ಸಿಟ್ಟು ಮಾಡಿಕೊಂಡು ನೀನು ಯಾಕೋ ನಂಗೆ ಏನು ಕೊಡಿಸುತ್ತಿಲ್ಲ ಅಂತ ಬೇಜಾರ್ ಮಾಡಿಕೊಂಡು ಹೋಗುತ್ತಾಳೆ.

source:Crosswalk.com

ಹೀಗೆ ಮಗಳು ಏನಾದ್ರು ಕೇಳಿದಾಗಲೆಲ್ಲ ತಂದೆ ಇದೆ ರೀತಿ ಮುಂದೂಡಿ ಮಗಳಿಗೆ ಬೇಜಾರ್ ಆಗುವಂತೆ ಮಾಡಿರುತ್ತಾರೆ.
ಒಂದು ದಿನ ಮಗಳು ಕಾಲೇಜು ಮುಗಿಸಿಕೊಂಡು ಮನೆಗೆ ಬರುತ್ತಾಳೆ. ತಂದೆ ತನ್ನ ರೂಮಿನಲ್ಲಿ ಏನೋ ಬರೆದುಕೊಂಡು ಕೂತಿರುತ್ತಾರೆ. ಮಗಳು ಬಂದ ತಕ್ಷಣ ಗಾಬರಿಯಿಂದ ಏನೋ ಮುಚ್ಚಿಡಲು ಪ್ರಯತ್ನ ಪಡುತ್ತಾರೆ. ಆಗ ಮಗಳು ಅಪ್ಪ ನೀವು ಏನೋ ಮುಚ್ಚಿಡುತ್ತಿದ್ದೀರಾ ಏನು ಅದು ಅಂತ ಕೇಳುತ್ತಾಳೆ. ಅಪ್ಪ ಇಲ್ಲ ಮಗಳೇ ಏನು ಇಲ್ಲ ಬಾ ಊಟ ಮಾಡಣ ಅಂತ ಸುಮ್ಮನೆ ಆಗುತ್ತಾರೆ.

source:Good Enough Mother

ಹೀಗೆ ಒಂದು ದಿನ ತಂದೆ ಮಗಳ ನಡುವೆ ಜಗಳವಾಗಿ ಮಗಳು ತುಂಬ ಸತ್ತು ಬೇಜಾರು ಮಾಡಿಕೊಂಡು ತನ್ನ ರೂಮಿನೊಳಗೆ ಮಲಗಿರುತ್ತಾಳೆ ತಂದೆ ಬಂದು ಮಗಳೇ ಬಾರಮ್ಮ ಊಟ ಮಾಡಣ ಯಾಕೆ ಬೇಜಾರು ಬಾ ಅಂತ ಕರೆದರೂ ಮಗಳು ಬರುವುದಿಲ್ಲ ಅಪ್ಪನು ಬೇಜಾರ್ ಮಾಡಿಕೊಂಡು ಊಟ ಮಾಡದೇ ತನ್ನ ರೂಮಿನಲ್ಲಿ ಹೋಗಿ ಮಲಗಿಕೊಳ್ಳುತ್ತಾರೆ.

ಮಾರನೇ ದಿನ ಮಗಳು ಯಾಕೋ ಅಪ್ಪ ಪ್ರತಿದಿನ ನನ್ನ ರೂಮಿಗೆ ಬಂದು ನನ್ನ ಎದ್ದೇಳಿಸುತಿದ್ದರು ಆದ್ರೆ ಇವತ್ತು ಯಾಕೋ ಬಂದಿಲ್ಲ ಅಂತ ತಂದೆಯ ರೂಮಿಗೆ ಬರುತ್ತಾಳೆ ತಂದೆ ಮಲಗಿದ್ದ ಹಾಸಿಗೆಯಲ್ಲೇ ಅಲುಗಾಡದಂತೆ ಮಲಗಿರುತ್ತಾರೆ. ಅವರ ಕೈಯಲ್ಲಿ ಒಂದು ಕೀ ಮತ್ತು ಪಕ್ಕದಲ್ಲಿ ಒಂದು ಪತ್ರ ಇರುತ್ತದೆ. ಅದನ್ನು ನೋಡಿ ಮಗಳು ತೆಗೆದುಕೊಂಡು ಓದುತ್ತಾಳೆ.

source:Jason’s Spina Bifida Journey

ಮಗಳೇ ನನ್ನ ಮುದ್ದು ಕಂದ ನಂಗೆ ಕೆಲವು ದಿನಗಳಿಂದ ಹಾರ್ಟ್ ಸಮಸ್ಯೆ ಇದ್ದು ನಾನು ಯಾವುದೇ ಆಸ್ಪತ್ರೆಗೆ ತೋರಿಸಿಕೊಳದೆ ನಿನ್ನ ಭವಿಷ್ಯಕ್ಕಾಗಿ ಅದಕ್ಕಾಗಿ ನಿನ್ನ ಹೆಸರಿನಲ್ಲಿ ಒಂದು LIC ಪಾಲಿಸಿ ಮಾಡಿಸಿನಿ ನಿನ್ನ ಮುಂದಿನ ವಿದ್ಯಾಭ್ಯಾಸ ಮತ್ತು ನಿನ್ನ ಭವಿಷ್ಯಕ್ಕೆ ಮತ್ತು ಪಕ್ಕದ ಬೀದಿಯಲ್ಲಿ ಒಂದು ಹೊಸ ಮನೆ ತಗೊಂಡಿದ್ದೇನೆ ಅದು ನಿನ್ನ ಹೆಸರಿನಲ್ಲಿ ಅದರ ಪತ್ರ ಲಾಕರ್ ನಲ್ಲಿ ಇದೆ ನೋಡು ಮಗು.ನನಗೆ ನಿನ್ನ ಬಿಟ್ಟು ಬೇರೆ ಏನು ಇಲ್ಲ ಮಗು ನೀನೇ ನನ್ನ ಜೀವ ಅಂತ ಬರೆದಿತ್ತು.

source:hektorhouse.net

ಮಗಳಿಗೆ ಏನು ತೋಚದೆ ಒಂದೇ ಸಮನೆ ಕಣ್ಣುಗಳಿಂದ ನೀರು ಸುರಿಯುತ್ತಿದೆ. ಹೃದಯ ಒಡೆದು ಹೋಗುವ ಹಾಗೆ ಗಟ್ಟಿಯಾಗಿ ಅಳುತ್ತಾ…ತಂದೆಯ ಎದೆಯ ಮೇಲೆ ಒರಗಿದಳು…ನಿಮ್ಮನ್ನು ತಪ್ಪಾಗಿ ಅರ್ಥ ಮಾಡಿಕೊಂಡೆ. ನನ್ನನ್ನು ಕ್ಷಮಿಸಿ  ಒಮ್ಮೆ ಕಣ್ಣು ತೆರೆದು ನೋಡಿ ಅಪ್ಪಾ…ಪ್ಲೀಸ್ ಕಣ್ಣು ತೆರೆಯಿರಿ. ನನ್ನನ್ನು ಬಿಟ್ಟು ಹೋಗಬೇಡಿ. ನನಗೆ ನಿಮ್ಮನ್ನು ಬಿಟ್ಟು ಬೇರ್ಯಾರೂ ಇಲ್ಲ.  ನಿಮ್ಮ ಪ್ರೀತಿ ನನಗೆ ಬೇಕಪ್ಪಾ…ಪ್ಲೀಸ್ ನನ್ನನ್ನು ಒಬ್ಬಂಟಿಗಳನ್ನಾಗಿ ಬಿಟ್ಟು ಹೋಗಬೇಡಿ ಎಂದು ಗೋಗರಿಯುತ್ತಾಳೆ.

ನೋಡಿ ಒಬ್ಬ ಮನುಷ್ಯ ಬದುಕಿದ್ದಾಗ ಅಥವಾ ನಮ್ಮ ಹತ್ತಿರ ಇದ್ದಾಗ ಅವರ ಬೆಲೆ ಗೊತ್ತಾಗುವುದಿಲ್ಲ ಅವರು ನಮ್ಮಿಂದ ದೂರವಾದಾಗ ಅವರ ಬೆಲೆ ನಮಗೆ ಅರ್ಥವಾಗುತ್ತೆ.