ಮನಕಲುಕುವ ಘಟನೆ: ಅತ್ಯಾಚಾರಕ್ಕೊಳಗಾದ ಮಗಳನ್ನು ತನ್ನ ತೋಳಿನಲ್ಲೇ ಎತ್ತಿಕೊಂಡು ಆಸ್ಪತ್ರೆಗೆ ಕರೆದೊಯ್ದ ತಂದೆ!!

0
497

Kannada News | Karnataka News

ಸದಾ ಅಪರಾಧಗಳಿಂದಲೇ ಸುದ್ದಿಯಲ್ಲಿರುವ ಬಿಹಾರದಲ್ಲಿ ಮತ್ತೊಂದು ಮನಕಲುಕುವ ಘಟನೆಯೊಂದು ನಡೆದಿದೆ. ದೇಶದಲ್ಲಿಯೇ ಅತ್ಯಂತ ಹೆಚ್ಚು ಎನ್ನುವುವಷ್ಟು ಕ್ರೈಂ ಪ್ರಕರಣಗಳು ದಾಖಲಾಗುವ ರಾಜ್ಯಗಳ ಪಟ್ಟಿಯಲ್ಲಿ ಬಿಹಾರ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತದೆ. ಇದಕ್ಕೆ ಹಿಡಿದ ಕನ್ನಡಿಯಂತಿದೆ ಈ ಪ್ರಕರಣ.

ಬಿಹಾರ ರಾಜಧಾನಿ ಪಾಟ್ನಾ-ದಲ್ಲಿ ನಡೆದಿರುವ ಈ ಘಟನೆ ಕೇಳಿದರೆ ಎಂಥವರಿಗಾದರೂ ಕೋಪ ಬಂದೆ ಬರುತ್ತದೆ.11 ವರ್ಷದ ಬಾಲಕಿಯೊಬ್ಬಳ ಮೇಲೆ ಶಾಲೆಯ ಹಿರಿಯ ವಿದ್ಯಾರ್ಥಿಯೊಬ್ಬ ಅತ್ಯಾಚಾರವೆಸಗಿರೋ ಆಘಾತಕಾರಿ ಘಟನೆ ಶುಕ್ರವಾರ ಬೆಳಗ್ಗೆ ಭೋಜ್ -ಪುರ್ ನಲ್ಲಿ ನಡೆದಿದೆ.

ಶಾಲೆಯಲ್ಲಿ 5 ರೂ. ಕೊಡುವ ಆಸೆ ತೋರಿಸಿ ನಂತರ ಬಾಲಕಿಯನ್ನು ಹತ್ತಿರದ ಹೊಲದ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಇದರಿಂದಾಗಿ ಬಾಲಕಿ ತೊಟ್ಟ ಬಟ್ಟೆಗಳು ರಕ್ತಸಿಕ್ತವಾಗಿವೆ. ಸದ್ಯ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಘಟನೆಯ ಕುರಿತು ಪೊಲೀಸರು ಬಾಲಕಿಯಿಂದ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಸುಮಾರು 11 ಗಂಟೆ ವೇಳೆಗೆ ಶಾಲೆಯ ಶೌಚಾಲಯಕ್ಕೆ ಹೋದಾಗ ಈ ಕೃತ್ಯ ನಡೆದಿರುವುದು ತಿಳಿದು ಬಂದಿದೆ. ಶಾಲೆಯ ಹಿರಿಯ ವಿದ್ಯಾರ್ಥಿ ಅಪು ಸಾಹ್ ಈ ಕೃತ್ಯವೆಸಗಿದ್ದು, ಬಾಲಕಿ ಶಾಲೆಯ ಶಿಕ್ಷಕರಿಗೆ ಈ ಬಗ್ಗೆ ತಿಳಿಸಿದ್ದಾಳೆ.

ಅತ್ಯಾಚಾರದಿಂದ ನಡೆಯಲಾರದ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಆಕೆಯ ತಂದೆ ಎತ್ತಿಕೊಂಡೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ವೈದ್ಯಕೀಯ ಪರೀಕ್ಷೆಯ ವರದಿ ಬಂದ ನಂತರ ಅಪರಾಧಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಶಾಲೆಯಲ್ಲಿ ಇಂತಹ ಘಟನೆ ನಡೆದಿರುವುದು ಎಲ್ಲ ಹೆಣ್ಣು-ಮಕ್ಕಳ ಪೋಷಕರಿಗೆ ನಡುಕ ಹುಟ್ಟಿಸಿದೆ. ಹೆಣ್ಣು-ಮಕ್ಕಳ ಪೋಷಕರು ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸಲು ಸಹ ಯೋಚಿಸವಂತೆ ಮಾಡಿದೆ ಈ ಘಟನೆ. ಶಾಲಾ ವಿದ್ಯಾರ್ಥಿಯೊಬ್ಬ ಇಂತಹ ನೀಚ ಕೃತ್ಯ ವೆಸಗಿರುವುದು ನಿಜಕ್ಕೂ ವಿಷಾದಕರ ಸಂಗತಿಯೇ ಸರಿ.

Also Read: ಶಾಕಿಂಗ್ ಸುದ್ದಿ: ಖಾಸಗಿ ಆಸ್ಪತ್ರೆಗಳು ಜನರಿಂದ 1700% ಅಧಿಕವಾಗಿ ಹಣ ಸ್ವೀಕರಿಸುತ್ತಿದ್ದಾರೆ ಎನುತ್ತೆ ಈ ಹೊಸ ವರದಿ..