ರಾಜ್ಯದಲ್ಲಿ ಸರ್ಕಾರಿ, ವಿಶ್ವವಿದ್ಯಾಲಯ, ಖಾಸಗಿ ಅನುದಾನಿತ, ಅನುದಾನರಹಿತ ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಕೋರ್ಸ್ ಗಳಿಗೆ ಶುಲ್ಕ ನಿಗದಿ..

0
157

ಇಂಜಿನಿಯರಿಂಗ್‌ ಸೇರಿದಂತೆ ನಾನಾ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ 2019-20ನೇ ಸಿಇಟಿ ಪರೀಕ್ಷೆ ಫಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಫಲಿತಾಂಶ ಪ್ರಕಟಿಸಿದ ಬೆನ್ನೆಲೆಯಲ್ಲೇ 2019-20ನೇ ಶೈಕ್ಷಣಿಕ ಸಾಲಿಗೆ ಇಂಜಿನಿಯರಿಂಗ್, ಆರ್ಕಿಟೆಕ್ಟರ್ ಕಾಲೇಜುಗಳಲ್ಲಿ ಪ್ರವೇಶಾತಿಗೆ ಸಂಬಂಧಿಸಿದ ಶುಲ್ಕಗಳನ್ನು ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.

Also read: ಪ್ರಧಾನಿ ಮೋದಿ ಅವರ ಮೊದಲ ಕ್ಯಾಬಿನೆಟ್‍ನಲ್ಲೇ ದೇಶದ ರೈತರಿಗೆ, ಶ್ರಮಿಕ ವರ್ಗದವರಿಗೆ ಭರ್ಜರಿ ಗಿಫ್ಟ್..

ಹೌದು ಸರ್ಕಾರಿ, ವಿಶ್ವವಿದ್ಯಾಲಯ, ಖಾಸಗಿ ಅನುದಾನಿತ, ಖಾಸಗಿ ಅನುದಾನರಹಿತ ಇಂಜಿನಿಯರಿಂಗ್, ಆರ್ಕಿಟೆಕ್ಟರ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಶುಲ್ಕಗಳನ್ನ ಇಷ್ಟೇ ನಿಗದಿ ಮಾಡಬೇಕು ಎಂದು ತಿಳಿಸಿದ್ದು. ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿಯ ಸಂಬಂಧ ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ ವಿಶ್ವವಿದ್ಯಾಲಯ, ಖಾಸಗಿ ಅನುದಾನಿತ, ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕಾಲೇಜುಗಳಲ್ಲಿ 2019-20ನೇ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸೀಟು ಹಂಚಿಕೆ ಪ್ರಮಾಣ ಮತ್ತು ಶುಲ್ಕ ನಿಗದಿಯ ಬಗ್ಗೆ ಮಾರ್ಚ್ 2ರಂದು ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು,
ಆ ಸಭೆಯ ಚರ್ಚೆಯಂತೆ ಬೋಧನಾ ಶುಲ್ಕ ನಿಗದಿಯ ಬಗ್ಗೆ ಮತ್ತು ಸೀಟು ಹಂಚಿಕೆ ಪ್ರಮಾಣ, ಶುಲ್ಕ ನಿಗದಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳು, ಇದರ ಮಾರ್ಗೋಪಾಯಗಳು ಇತ್ಯಾದಿಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಗಿತ್ತು. ಅದರಂತೆ ಶುಲ್ಕ ನಿಗದಿ ಮಾಡಿದ್ದು.

Also read: ಟ್ವೀಟ್‌ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌ಗೆ ವ್ಯಂಗ್ಯವಾಗಿ ಶುಭ ಹಾರೈಸಿರುವ ರಮ್ಯಾಗೆ ಚಳಿ ಬಿಡಿಸಿದ ಟ್ವಿಟ್ಟಿಗರು..

1. ಸರ್ಕಾರಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಲ್ಲಿ ಇಂಜಿನಿಯರಿಂಗ್/ಆರ್ಕಿಟೆಕ್ಚರ್ ಗೆ 19,090 ರೂ.
2. ಖಾಸಗಿ ಅನುದಾನಿತ ಕಾಲೇಜುಗಳ ಶೇಕಡಾ 95ರಷ್ಟು ಸೀಟುಗಳಿಗೆ (ಸಿಇಟಿ ಮೂಲಕ)19,090 ರೂ. 5ರಷ್ಟು ಆಡಳಿತ ಮಂಡಳಿ ಸೀಟುಗಳಿಗೆ ಹಂಚಿಕೆಗೆ ಅವಕಾಶ.
3. ಖಾಸಗಿ ಅನುದಾನಿತ ಇಂಜಿನಿಯರಿಂಗ್, ಟೆಕ್ನಾಲಜಿ, ಆರ್ಕಿಟೆಕ್ಚರ್ ಕಾಲೇಜುಗಳಲ್ಲಿನ ಸೀಟುಗಳಿಗೆ ಸರ್ಕಾರಿ ಕೋಟಾದ ಶೇಕಡಾ 45ರಷ್ಟು ಸೀಟುಗಳಿಗೆ 58,806 ಅಥವಾ 65,340 ರೂ., ಕಾಮೆಡ್ ಕೋಟಾದ ಶೇಕಡಾ 30ರಷ್ಟು ಸೀಟುಗಳಿಗೆ 1,43, 748 ಅಥವಾ 2,01,960 ರೂ ನಿಗದಿ.
4. ಖಾಸಗಿ ಅನುದಾನರಹಿತ ಇಂಜಿನಿಯರಿಂಗ್, ಟೆಕ್ನಾಲಜಿ, ಆರ್ಕಿಟೆಕ್ಚರ್ ಕಾಲೇಜಿಗಳಲ್ಲಿನ ಸರ್ಕಾರಿ ಕೋಟಾದ ಶೇಕಡಾ 40ರಷ್ಟು ಸೀಟುಗಳಿಗೆ 58,806 ಅಥವಾ 65,340 ರೂ., ಕೆಆರ್‌ಎಲ್ಎಂಪಿಸಿಎ ಕೋಟಾದ ಶೇಕಡಾ 30ರಷ್ಟು ಸೀಟುಗಳಿಗೆ 1,43,748 ಅಥವಾ 2,01,960 ರೂ ನಿಗದಿಮಾಡಿದೆ.

ಶುಲ್ಕ ನಿಗದಿಗೆ ಸಂಬಂಧಪಟ್ಟಂತೆ ಸರ್ಕಾರ, ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ಪ್ರತಿನಿಧಿಯಾದ ಕೆಯುಪಿಇಸಿಎ ಮತ್ತು ಕೆಆರ್‌ಎಲ್ಎಂಪಿಸಿಎ ಪದಾಧಿಕಾರಿಗಳೊಂದಿಗೆ ಸಮ್ಮತಾಭಿಪ್ರಾಯದ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿತ್ತು.

ಶೇಕಡಾ 45ರಷ್ಟು ಸೀಟುಗಳಿಗೆ ಸಿಇಟಿ ಮೂಲಕ ಪ್ರವೇಶ;

Also read: ಚುನಾವಣೆಯಲ್ಲಿ ಗೆಲುವು ಸಾಧಿಸಿದ ಈ ಸಂಸದ ತಮಗೆ ಹೂವಿನ ಬುಕ್ಕೆ, ಸಿಹಿತಿಂಡಿ ಬದಲು ನೋಟ್ಸ್ ಬುಕ್ಸ್ ನೀಡಿ ಎಂದು ಮನವಿ ಮಾಡಿದ್ದಾರೆ..

ಎಐಸಿಟಿಇ ಅನುಮೋದಿತ ಪ್ರವೇಶಾತಿಯಲ್ಲಿ ಶೇಕಡಾ 45ರಷ್ಟು ಪ್ರಮಾಣದ ಸೀಟುಗಳನ್ನು ಕುಪೆಕಾ ಸರ್ಕಾರಕ್ಕೆ ಬಿಟ್ಟಿಕೊಟ್ಟಿತ್ತು. ಈ ಸೀಟುಗಳಿಗೆ ಸಿಇಟಿ ಮೂಲಕ ಪ್ರವೇಶಾತಿ ನೀಡಬೇಕು. ಶೇ.30ರಷ್ಟು ಸೀಟುಗಳನ್ನು ಕಾಮೆಡ್‍-ಕೆ ಮೂಲಕ ಪ್ರವೇಶಾತಿ ಮಾಡಬೇಕು. ಶೇ.15ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರಿಂದ, ಅನಿವಾಸಿ ಭಾರತೀಯ ಪ್ರಾಯೋಕಜತ್ವದಿಂದ ಮತ್ತು ಶೇ 10ರಷ್ಟು ಸೀಟುಗಳನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಮೂಲಕ ಪ್ರವೇಶಾತಿ ಮಾಡಬೇಕು. ಎಂದು ತೀರ್ಮಾನಿಸಲಾಗಿದೆ, 2019-20ನೇ ಸಾಲಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು 4 ವರ್ಷದ ಪದವಿ ಕೋರ್ಸ್‌ ಪೂರ್ಣಗೊಳ್ಳುವವರೆಗೂ ವಾರ್ಷಿಕವಾಗಿ ಈ ಶುಲ್ಕಗಳನ್ನು ಪಾವತಿಸಬೇಕು.