ಸೆರೆಲ್ಯಾಕ್ ತಿನಿಸಿದರೆ ಏನೆಲ್ಲಾ ಅನಾಹುತವಾಗುತ್ತೆ ಎಂದು ತಿಳಿದರೆ ಶಾಕ್ ಆಗ್ತೀರಾ…!!

0
1826

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗು ಎಷ್ಟೋ NGO ಸಂಸ್ಥೆಗಳು, ರೇಡಿಯೋ ದಲ್ಲಿ, ಟಿವಿಯಲ್ಲಿ, ಜಾಹಿರಾತಿನಲ್ಲಿ ಮತ್ತು ಇತರೆ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ, ಹುಟ್ಟಿದ ಮಗುವಿಗೆ 6 ತಿಂಗಳ ವರೆಗೆ ತಾಯಿಯ ಎದೆ ಹಾಲು ಬಿಟ್ಟು ಬೇರೇನೂ ಕೊಡಬಾರದು ಎಂದು ನಿತ್ಯ ಸಾರಿ ಸಾರಿ ಹೇಳಿದರು ಸಹ ಕೆಲ ಜನರು ಮಾತ್ರ ಇವನ್ನು ಪಾಲಿಸುವುದಿಲ್ಲ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹುಟ್ಟಿದ ಮಗುವಿಗೆ 6 ತಿಂಗಳ ವರೆಗೆ ತಾಯಿಯ ಎದೆ ಹಾಲು ಬಿಟ್ಟು ಬೇರೇನೂ ಕೊಡಬಾರದು ಎಂದು ನಿತ್ಯ ನೀಡುವ ಜಾಹಿರಾತುಗಳನ್ನು ನೀವು ಸಾಮಾನ್ಯವಾಗಿ ನೋಡಿರುತ್ತೀರ, ಆದರೂ ಕೆಲವರು ಆಧುನಿಕ ಆಹಾರದ ಮೋರೆಯೋಗಿ ಮಾರುಕಟ್ಟೆಯಲ್ಲಿ ದೊರೆಯುವ ಪೌಷ್ಟಿಕ ಆಹಾರವನ್ನು ಮಗುವಿಗೆ ನೀಡುತ್ತಿರುತ್ತಾರೆ.

ಮಾರುಕಟ್ಟೆಯಲ್ಲಿ ದೊರೆಯುವ ಪೌಷ್ಟಿಕ ಆಹಾರ ಮಗುವಿನ ಆರೋಗ್ಯದ ಮೇಲೆ ಎಷ್ಟೆಲ್ಲ ಪರಿಣಾಮ ಬೀರುತ್ತದೆ ಎಂದು ನೀವು ಊಹಿಸಲು ಸಾಧ್ಯವಿಲ್ಲ. ಅಂತಹ ಆಹಾರವನ್ನು ಸ್ವೀಕರಿಸಲು ಅಥವಾ ಜೀರ್ಣಗೊಳಿಸಿಕೊಳ್ಳಲು ಮಗುವಿನ ಅಂಗಗಳು ಇನ್ನು ಬೆಳವಣಿಗೆ ಆಗಿರುವುದಿಲ್ಲ.

ಸಾಮಾನ್ಯವಾಗಿ ಮಗುವಿಗೆ ಇಂತಹ ಆಹಾರದಿಂದ ವಾಂತಿ, ಭೇದಿ, ಜ್ವರ ಅಥವಾ ಅಜೀರ್ಣ ಕಾಯಿಲೆ ಬರುತ್ತದೆ. ಆದರೆ, ಇತ್ತೀಚಿಗೆ ಮಾಗಡಿಯಲ್ಲಿ ನಡೆದ ಘಟನೆಯಲ್ಲಿ, ತಾಯಿ ಮಗುವಿಗೆ ನೀಡಿದ ಪೌಷ್ಟಿಕ ಆಹಾರದಿಂದ ಮಗು ಸಾವನ್ನಪಿದ್ದನ್ನು ಇಲ್ಲಿ ಸ್ಮರಿಸಬಹುದು. ಗಂಟಲಲ್ಲಿ ಸೆರಲ್ಯಾಕ್ ಸಿಕ್ಕಿಕೊಂಡು ಮೂರು ತಿಂಗಳ ಹೆಣ್ಣು ಮಗು ಮೃತಪಟ್ಟಿತ್ತು.

ಅದಕ್ಕೆ, ಹುಟ್ಟಿದಾಗಿನಿಂದ ಮಗುವಿಗೆ ಆರು ತಿಂಗಳು ತುಂಬುವವರೆಗೆ ತಾಯಿಯ ಎದೆ ಹಾಲನ್ನು ಬಿಟ್ಟು ಬೇರೇನು ನೀಡಬಾರದು. ಮಗುವಿಗೆ ಆರು ತಿಂಗಳು ತುಂಬಿದ ನಂತರ ದ್ರವ ರೂಪದ ನೈಸರ್ಗಿಕ ಆಹಾರ ನೀಡಬೇಕು ಇದರ ಬಗ್ಗೆ ಸಾಕಷ್ಟು ಮಾಹಿತಿಯನ್ನು ವೈದ್ಯರು ಹಂಚಿಕೊಂಡಿದ್ದಾರೆ.

ಮಗು ಒಂದು ವರ್ಷ ತುಂಬಿದ ನಂತರ ಅದಕ್ಕೆ ಮನೆಯಲ್ಲಿನ ಸಾಮಾನ್ಯ ಆಹಾರ ನೀಡಬಹುದು. ಆದರೆ, ಆಗಲು ನೀವು ಹೊರಗೆ ಸಿಗುವ ಆಹಾರವನ್ನು ಅಥವಾ ಪ್ಯಾಕ್ಡ್ ಆಹಾರವನ್ನು ನೀಡುವಂತಿಲ್ಲ. ಸಾಮಾನ್ಯವಾಗಿ ಮನೆಯಲ್ಲಿ ಸಿದ್ಧಪಡಿಸುವಂತಹ ಹಾಗು ಮಗುವಿಗೆ ಬೇಗ ಜೀರ್ಣವಾಗುವಂತಹ ಆಹಾರವನ್ನು ನೀಡಬೇಕು.