ಹೋಳಿಗೆ ಸಾರಿಲ್ಲದೆ ಹಬ್ಬದ ಅಡುಗೆ ಪರಿಪೂರ್ಣವಾಗುವುದಿಲ್ಲ.. ಮತ್ತೆಯಾಕೆ ತಡ ನೀವು ಮಾಡಿ ಸವಿದು ನೋಡಿ..!!

0
1037

ಭಾರತೀಯರ ಹಬ್ಬಗಳ ನಿಯಮದ ಪ್ರಕಾರ ಪ್ರತಿಯೊಂದು ಹಬ್ಬದಲ್ಲಿ ಹೂರಣದ ಹೋಳಿಗೆ ಮಾಡುವುದು ಸಾಮಾನ್ಯ ಏಕೆಂದರೆ ಹೂರಣ ಮಾಡಿದರೆ ಹೋಳಿಗೆ ಜತೆಗೆ ಹೋಳಿಗೆ ಸಾರುಕೂಡ ಮಾಡಬಹುದು. ಹಬ್ಬಕೆ ಸಾಮಾನ್ಯವಾಗಿ ಪ್ರತಿದಿನವೂ ಮಾಡುವ ಸಾರು ನಡೆಯೋದೇ ಇಲ್ಲ ಹೋಳಿಗೆ ಸಾರೆ ಬೇಕು ಏಕೆಂದರೆ ಈ ಸಾರಿನ ರುಚಿವು ಅಷ್ಟೊಂದು ಖ್ಯಾತಿಯನ್ನು ಪಡೆದುಕೊಂಡಿದೆ. ಇನ್ನೊಂದು ವಿಶೇಷ ಅಂದ್ರೆ ಈ ಸಾರನ್ನು ಒಂದು ವಾರದ ವರೆಗೂ ಇಟ್ಟುತಿಂದರು ಹಳಸುವುದಿಲ್ಲ ಕುದಿಸಿದ ಹಾಗೆ ರುಚಿ ಹೆಚ್ಚುತ್ತೆ ಆದರಿಂದಲೇ ಎಲ್ಲಾ ಕನ್ನಡಿಗರ ಮನೆಯಲ್ಲಿ ಹೋಳಿಗೆ ಸಾರು ಘಂ ಎನ್ನುತ್ತಿರುತ್ತದೆ. ಇಂತಹ ವಿಶೇಷವಾದ ಸಾರನ್ನು ಮಾಡುವುದು ಹೇಗೆ ಅಂದ್ರೆ ಇಲ್ಲಿದೆ ನೋಡಿ.

Also read: ಪೌಷ್ಟಿಕಭರಿತ, ಘಂ ಎನ್ನುವ ಹುರುಳಿ ಸಾರು ಮಾಡುವ ವಿಧಾನ..!!

ಬೇಕಾಗುವ ಸಾಮಗ್ರಿಗಳು:

  • ಎರಡು ಕಪ್ಪು ಬೆಲ್ಲ
  • ಎರಡು ಟೇಬಲ್ ಚಮಚ ತೆಂಗಿನ ಕಾಯಿ
  • ಒಂದು ಟೀ ಚಮಚ ಏಲಕ್ಕಿ
  • ಬೇಳೆಯಿಂದ ಬಸಿದ ನೀರು
  • ನಾಲ್ಕುಕಪ್ಪು ನೀರು
  • ಒಂದು ಚಿಟಿಕೆ ಅರಿಶಿನ ಪುಡಿ
  • ಕಿತ್ತಲೆ ಗಾತ್ರದ ಹೂರಣ
  • ಎರಡು ಟೇಬಲ್ ಚಮಚ ಸಾಂಬಾರು ಪುಡಿ
  • ಎರಡು ಟೇಬಲ್ ಚಮಚ ಕಿವುಚಿದ ಹುಣಸೆಹಣ್ಣಿನ ರಸ
  • ರುಚಿಗೆ ತಕ್ಕಷ್ಟು ಉಪ್ಪು
  • ಒಂದು ಗ್ಲಾಸ್ ಒಗ್ಗರಣೆಗೆಎಣ್ಣೆ,
  • ಸಾಸಿವೆ, ಒಣಮೆಣಸಿನ ಕಾಯಿ, ಕರಿಬೇವು ಮತ್ತು ಇಂಗು. 1 ಟೇಬಲ್ ಚಮಚ ಎಣ್ಣೆಗೆ ಒಂದೊಂದಾಗಿ ಈ ಸಾಮಗ್ರಿಗಳನ್ನು ಹಾಕಿ ಒಗ್ಗರಣೆ
    ತಯಾರಿಸಿಕೊಳ್ಳಿ.

Also read: ಈ ಸಾರನ್ನ ವಾರಕ್ಕೊಮ್ಮೆಯಾದ್ರೂ ಮಾಡ್ಕೊಂಡು ತಿಂದ್ರೆ ಹೃದ್ರೋಗ ಬಾರದಂತೆ ತಡೆಗಟ್ಟಬಹುದು..ಹೃದ್ರೋಗಿಗಳ ಪಾಲಿನ ಅಮೃತ ದಾಳಿಂಬೆ ಸಾರು ಮಾಡುವ ವಿಧಾನ.!

ಮಾಡುವ ವಿಧಾನ:

  • ಹೂರಣ ಮಾಡಲು: 4 ಕಪ್ಪು ನೀರನ್ನು ಒಂದು ಪಾತ್ರೆಗೆ ಹಾಕಿ ಕುದಿಸಿ. ನೀರು ಕುದಿಯುತ್ತಿದ್ದಂತೆ ಒಂದು ಚಿಟಿಕೆ ಅರಿಶಿನ ಪುಡಿ ಹಾಗೂ ತೊಗರಿ ಬೇಳೆಯನ್ನು ಹಾಕಿ.
  •  ಸಣ್ಣ ಉರಿಯಲ್ಲಿ ಬೇಳೆಯನ್ನು ಬೇಯಿಸಿಕೊಳ್ಳಿ. ನೀರು ಇಂಗದಂತೆ ನೋಡಿಕೊಳ್ಳಿ ಬೇಕಿದ್ದರೆ ಸ್ವಲ್ಪ ನೀರನ್ನು ಆಗಾಗ ಸೇರಿಸುತ್ತಿರಿ.
  •  ಬೇಳೆ ಬೆಂದ ನಂತರ ನೀರನ್ನ ಬಸಿದುಕೊಳ್ಳಿ. ಸಾರು ಮಾಡಲು ಈ ಬಸಿದ ನೀರು ಬೇಕು.
  •  ಈಗ ಬೇಳೆಗೆ ಬೆಲ್ಲ ಹಾಕಿ ಸಣ್ಣ ಉರಿಯಲ್ಲಿ ಬೆಲ್ಲ ಕರಗುವವರೆಗೂ ಕಲಕುತ್ತಾ ಬೇಯಿಸಿ. ಒಲೆಯ ಮೇಲಿಂದ ಕೆಳಗಿಳಿಸಿ ಏಲಕ್ಕಿ ಪುಡಿಯನ್ನು ಸೇರಿಸಿ ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
  •  ಈಗ ತೆಂಗಿನಕಾಯಿಯನ್ನು ಹಾಕಿ ಮಿಕ್ಸಿ ಅಥವಾ ಗ್ರೈಂಡರ್ ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಳ್ಳಲು ನೀರನ್ನು ಬಳಸಬೇಡಿ ಅದರಲ್ಲಿನ ನೀರೆ ಸಾಕಾಗುತ್ತದೆ.
  •  ಬೇಳೆಯನ್ನು ಒಂದೇ ಸಲ ರುಬ್ಬದೆ 2 ಅಥವಾ 3 ಭಾಗಗಳಾಗಿ ಮಾಡಿಕೊಂಡು ರುಬ್ಬಿಕೊಳ್ಳಿ, ಆಗ ರುಬ್ಬುವ ಕೆಲಸ ಸುಲಭವಾಗುತ್ತದೆ ಈಗ ಹೂರಣ ಸಿದ್ಧವಾಗುತ್ತದೆ.
  •  ಕಿತ್ತಳೆ ಹಣ್ಣಿನ ಗಾತ್ರದ ಹೂರಣವನ್ನು ಬಸಿದ ನೀರಿನೊಂದಿಗೆ ಬೆರಸಿ ಹುಣಸೆ ಹಣ್ಣಿನ ರಸವನ್ನು ಹಾಕಿ
  •  ಸಾಂಬಾರು ಪುಡಿ, ರುಚಿಗೆ ತಕ್ಕಷ್ಟು ಉಪ್ಪುನ್ನು ಹಾಕಿ ಚೆನ್ನಾಗಿ ಕಲಸಿ. ಈಗ ಮಿಶ್ರಣವನ್ನು ಒಲೆಯ ಮೇಲೆ ಕುದಿಯಲು ಬಿಡಿ.ರುಚಿಗಾಗಿ ಸಿದ್ಧವಾಗಿಟ್ಟುಕೊಂಡ ಒಗ್ಗರಣೆಯನ್ನು ಹಾಕಿ. ಸಾರು ತಣ್ಣಗಾಗಲು ಬಿಟ್ಟು ಸ್ವಲ್ಪ ಸಮಯದ ನಂತರ ಬಿಸಿ ಅನ್ನದೊಂದಿಗೆ ಬಡಿಸಿ.

Also read: ನಾಟಿ ಕೋಳಿ ಸಾರು ಮಾಡುವ ವಿಧಾನ