ಅಪ್ಪ ಮಗನ ನಡುವೆ ಟಿಕೆಟ್ ಗೆ ಪೈಪೋಟಿ.. ಬಲಿಷ್ಠ ನಾಯಕನ ವಿರುದ್ಧ ಚುನಾವಣೆಗೆ ನಿಲ್ತಾರ ಮಗ?? ಯಾರಿವರು?? ಇಲ್ಲಿದೆ ನೋಡಿ

0
602

ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಅದರ ಕಾವು ಹೆಚ್ಚುತ್ತಿದೆ.. ಇದೀಗ ಅಪ್ಪ ಮಗನ ನಡುವೆ ಟಿಕೇಟ್ ಗೆ ಪೈಪೋಟಿ ಎದ್ದಿದೆಯಾ??

ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್ ಸಿ ಮಹದೇವಪ್ಪ ಹಾಗೂ ಅವರ ಪುತ್ರ ಸುನೀಲ್ ಬೋಸ್ ರವರ ನಡುವೆ ಕಾಂಗ್ರೆಸ್ ಟಿಕೆಟ್ ಪೈಪೋಟಿ ಆರಂಭವಾಗಿದೆಯಾ?? ಎಂಬ ಪ್ರಶ್ನೆ ಮೂಡಿದೆ..


ಇಬ್ಬರೂ ಕೂಡ ಟಿಕೆಟ್ ಆಕಾಂಕ್ಷಿಗಳಾಗಿರುವುದಾಗಿ ಪ್ರತ್ಯೇಕವಾಗಿ ಹೇಳುವುದರ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದಾರೆ..


ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಸಚಿವ ಡಾ.ಹೆಚ್ ಸಿ ಮಹದೇವಪ್ಪನವರು.. ಮೈಸೂರಿನ ಜನರೊಂದಿಗೆ ಅವಿನಾಭಾವ ಸಂಬಂಧವಿದೆ.. ಟಿ ನರಸಿಪುರ ಹಾಗೂ ನಂಜನಗೂಡು ಜನರು ತಾವು ಸೋತಾಗಲು ಕಾರು ಕೊಟ್ಟು ಓಡಾಡಿಸಿದ್ದಾರೆ.. ಹೀಗಾಗಿ ಇಂತಹ ಜನರನ್ನು ಬಿಟ್ಟು ಬೇರೊಂದು ಕ್ಷೇತ್ರಕ್ಕೆ ಹೋಗಲು ಮನಸ್ಸಿಲ್ಲ.. ಅಲ್ಲದೇ ಈ ಚುನಾವಣೆ ಕರ್ನಾಟಕ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಪ್ರಮುಖ ಚುನಾವಣೆಯಾಗಿದೆ.. ಹೀಗಾಗಿ ತಮಗೆ ಅಧಿಕಾರದ ರಾಜಕಾರಣಕ್ಕಿಂತ ಕೋಮುವಾದಿ ಶಕ್ತಿಗಳನ್ನು ಮಣಿಸುವ ರಾಜಕಾರಣ ಮಾಡಬೇಕೆನಿಸಿದೆ..

ಆದರೆ ನರಸೀಪುರದಿಂದ ತಮ್ಮ ಪುತ್ರ ಸುನೀಲ್ ಬೋಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾನೆ..


ಈ ಎಲ್ಲದರ ನಡುವೆ ಅಂತಿಮವಾಗಿ ಯಾರು ಎಲ್ಲಿಂದ ಸ್ಪರ್ಧಿಸಬೇಕೆಂದು ಪಕ್ಷದ ಹೈ ಕಮಾಂಡ್ ನಿರ್ಧರಿಸಲಿದೆ ಎಂದಿದ್ದಾರೆ..

ಇದೇ ವೇಳೆ ಹೆಚ್ ಸಿ ಮಹದೇವಪ್ಪ ರವರ ಪುತ್ರ ಸುನಿಲ್ ಬೋಸ್ ಕೂಡ ಪತ್ರಕರ್ತರೊಂದಿಗೆ ಮಾತನಾಡಿ ಮುಂದಿನ ಚುನಾವಣೆಯಲ್ಲಿ ನರಸಿಪುರ ಕ್ಷೇತ್ರದಿಂದ ಸ್ಪರ್ಧಿಸಲು ನನ್ನ ಹಾಗೂ ತಂದೆಯ ಹೆಸರು ಶಿಫಾರಸ್ಸಾಗಿದೆ..

ಆದರೆ ಅನಿವಾರ್ಯವಾದರೆ ತಂದೆಯವರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುತ್ತೇನೆ ಎಂದಿದ್ದಾರೆ.. ಒಂದು ವೇಳೆ ತಂದೆ ಚುನಾವಣೆಗೆ ನಿಲ್ಲದಿದ್ದರೆ ನಾನು ನಿಲ್ಲುತ್ತೇನೆ.. ನಾನೂ ಕೂಡ ಟಿಕೆಟ್ ಆಕಾಂಕ್ಷಿ ಎಂದು ಮೊದಲಿನಿಂದಲೂ ಹೇಳಿದ್ದೇನೆ.. ಅದರಂತೆ ಇಬ್ಬರೂ ಕೂಡ ಕಾಂಗ್ರೆಸ್ ಹೈ ಕಮಾಂಡ್ ಗೆ ಅರ್ಜಿ ಹಾಕಿದ್ದೇವೆ ಎಂದಿದ್ದಾರೆ..