ಫೈಲ್ ನಂಬರ್ 70: ಪ್ರತಿಯೊಬ್ಬ ಪ್ರಧಾನಿಯೂ ಇದನ್ನು ಮುಟ್ಟೋಕ್ಕೆ ಹೋಗಿರಲಿಲ್ಲ!! ಇದಕ್ಕೆ ಮೋದಿ ಏನ್ ಮಾಡಿದ್ರು ಗೊತ್ತಾ??

0
3782

ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಮೂರು ವರ್ಷಗಳು ಕಳೆದಿವೆ. ಇಂದು ಅಂತರರಾಷ್ಟ್ರೀಯ ನಾಯಕರ ಸಾಲಿನಲ್ಲಿ ಭಾರತದ ಪ್ರಧಾನಿಯಿದ್ದಾರೆ. ಕ್ಲೀನ್ ಇಂಡಿಯಾ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಜನಧನ ಯೋಜನ, ಮುದ್ರಾ ಬ್ಯಾಂಕ್ ಯೋಜನ, ಡಿಜಿಟಲ್ ಇಂಡಿಯಾ, ಆದರ್ಶ ಗ್ರಾಮ ಯೋಜನಾ, ಭೇಟಿ ಬಚಾವೋ-ಬೇಟಿ ಪಡಾವೋ ಯೋಜನೆ, ಬುಲೆಟ್ ಟ್ರೈನ್ ಗೆ ಯೋಜನೆ ಹೀಗೆ ಹತ್ತಾರು ಯೋಜನೆಗಳು ದೇಶವನ್ನು ನಂಬರ್ ಒನ್ ಸ್ಥಾನದತ್ತ ತೆಗೆದುಕೊಂಡು ಹೋಗುತ್ತಿವೆ. ಈ ರೀತಿಯಾಗಿ ಮೋದಿ ಇವತ್ತಿಗೂ ದೇಶದ ಯುವಶಕ್ತಿಯ ಹೀರೋ ಆಗಿನೇ ಮಿಂಚ್ತಿದ್ದಾರೆ.

ಮೋದಿ ನೋಟ್ ಬ್ಯಾನ್ ಮಾಡಿದ್ದು, ಜಗತ್ತನ್ನ ಸುತ್ತಾಡಿದ್ದು, ಸರ್ಜಿಕಲ್ ದಾಳಿ ನಡೆಸಿ ಪಾಕಿಸ್ತಾನಕ್ಕೆ ಸರಿಯಾದ ಹೊಡೆತ ನೀಡಿದ್ದು ನಿಮಗೆಲ್ಲ ಗೊತ್ತೇ ಎದೆ. ಮೋದಿ ಪ್ರಧಾನಿಯಾಗಿ ಮೂರು ವರ್ಷಗಳು ಕಳೆದಿವೆ. ನಾಲ್ಕನೇ ವರ್ಷಕ್ಕೆ ಕಾಲಿಟ್ಟ ಮೋದಿ ಸರ್ಕಾರಕ್ಕೆ ಸವಾಲಾಗಿ ಕಂಡಿದ್ದು ಇದೊಂದು ಫೈಲ್. ಅದು ‘ಫೈಲ್ ನಂಬರ್ 70’ 70 ವರ್ಷಗಳ ಹಿಂದಿನ ಫೈಲ್ ಇದು. ದೇಶದ ಮೊದಲ ಪ್ರಧಾನಿ ಜವಹರ್ಲಾಲ್ ನೆಹರೂರಿಂದ ಹಿಡಿದು ಮನಮೋಹನ್ಸಿಂಗ್ ವರೆಗೆ. ಎಲ್ಲರನ್ನೂ ಬೆಂಬಿಡದೇ ಕಾಡಿತ್ತು ಈ ಭಯಾನಕ ಫೈಲ್. ಅದೇ ಗೋ ಹತ್ಯೆ ನಿಷೇಧ ಕಾಯ್ದೆ.

ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಬೇಕು ಅನ್ನೋ ಮಾತುಗಳು ಸಾಕಷ್ಟು ವರ್ಷಗಳಿಂದಲೂ ಕೇಳಿ ಬರ್ತಿತ್ತು. ಎಷ್ಟೋ ಬಾರಿ ಕೋಮು ಗಲಭೆ ಶುರುವಾಗುತ್ತೆ ಅಂತ ಜನ ನಾಯಕರು ಭಯಪಟ್ಟೀದಿದೆ. ಈ ವಿಷಯ ಸಂಸತ್ತಿನಲ್ಲಿ ಅದೆಷ್ಟೋ ಬಾರಿ ಮಂಡನೆಯಾದ್ರೂ, ಅದಕ್ಕೆ ಅಧಿಕೃತ ಮುದ್ರೆ ಬಿದ್ದಿರಲಿಲ್ಲ. ಇದಕ್ಕೆ ಮೂಲ ಕರಣ ಸರ್ಕಾರವೇ ಉರುಳಿಬಿಡುತ್ತೆ ಅನ್ನುವುದು.

ಮೂಲೆ ಗುಂಪಾಗಿದ್ದ ಫೈಲ್ ನಂಬರ್ 70 ಮೋದಿ ಅಧಿಕಾರಕ್ಕೆ ಬಂದ ನಂತರ, ಈ ಫೈಲ್ ಮತ್ತೆ ಓಪನ್ ಆಗಿದೆ. ಮೂರನೇ ವರ್ಷದ ಸಂಭ್ರಮಾಚರಣೆ ಸಮಯದಲ್ಲಿ ಏಕಾಏಕಿ ದೇಶಾದ್ಯಂತ ಪ್ರಾಣಿ ಮಾರುಕಟ್ಟೆಗಳಲ್ಲಿ ಹತ್ಯೆಗಾಗಿ ಹಸುಗಳು ಮತ್ತು ಎಮ್ಮೆಗಳನ್ನು ಮಾರಾಟ ಮಾಡಲು ನಿಷೇಧವನ್ನು ವಿಧಿಸಿತು. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960 (ಪಿಸಿಎ)ರ ಸೆಕ್ಷನ್‌ 37ರ ನಿಯಮಾವಳಿಯಲ್ಲಿ 8 ಪ್ರತಿಗಳ ಆದೇಶ ಬಿಡುಗಡೆ ಮಾಡಲಾಗಿದ್ದು, ಜಾರಿಗೊಳಿಸಲು ಕನಿಷ್ಠ ಮೂರು ತಿಂಗಳು ಆಗಬಹುದು ಎಂದು ತಿದ್ದುಪಡಿ ಮಾಡಿರುವ ಪರಿಸರ ಸಚಿವಾಲಯ, ಶುಕ್ರವಾರ ಇಂಥದ್ದೊಂದು ಮಹತ್ವದ ಅಧಿಸೂಚನೆ ಹೊರಡಿಸುವ ಮೂಲಕ ಗೋವುಗಳ ಕೊಡು-ಕೊಳ್ಳುವಿಕೆ ಪ್ರಕ್ರಿಯೆಯನ್ನು ಇನ್ನಷ್ಟು ಕ್ಲಿಷ್ಟಗೊಳಿಸಿದೆ. ಗೋವುಗಳ ವ್ಯಾಪಾರಸ್ಥರು ವಿಶೇಷವಾಗಿ ಮುಸ್ಲಿಂರ ಮೇಲೆ ಹಿಂದೂ ಸಂಘಟನೆಗಳಿಂದ ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಆದೇಶವನ್ನು ಹೊರಡಿಸಿದೆ.

ಗೋ ಹತ್ಯೆ ನಿಷೇಧ ಕಾಯ್ದೆ ನಿಯಮದಲ್ಲಿ ಏನಿದೆ?

ಕಸಾಯಿಖಾನೆಗಳಿಗೆ ಗೋವು ಮಾರಾಟ ನಿಷೇಧ.
ಕೃಷಿ ಕಾರ್ಯಗಳಿಗೆ ಮಾತ್ರ ಜಾನುವಾರುಗಳನ್ನು ಮಾರಾಟ ಮಾಡಬೇಕು.
ಗೋವುಗಳನ್ನು ಅಕ್ರಮವಾಗಿ ಮಾರಾಟ ಮಾಡಿದರೆ 7 ವರ್ಷ ಶಿಕ್ಷೆ ಹಾಗೂ 3 ಲಕ್ಷ ರೂ. ದಂಡ ವಿಧಿಸಬಹುದಾಗಿದೆ.
ಗೋವು ಮಾಲೀಕ ಮಾರಾಟ ಮಾಡಿದ್ದು ಹಾಗೂ ಖರೀದಿದಾರ ರಸೀದಿ ಹೊಂದಿರಬೇಕು.
ಗೋವು ಮಾರಾಟಕ್ಕೆ ಯೋಗ್ಯವೇ ಎಂಬುದನ್ನು ಮೆಟರ್ನಿಟಿ ವೈದ್ಯರು ನಿರ್ಧರಿಸಬೇಕು. ಅವರ ಅನುಮತಿ ಇಲ್ಲದೇ ಮಾರುವಂತಿಲ್ಲ.
ಜಾನುವಾರು ಸಾಗಿಸಲು ಸೂಕ್ತ ದಾಖಲೆ ಹೊಂದಿರುವ ವಾಹನಗಳಲ್ಲೇ ಸಾಗಿಸಬೇಕು.
ಹಸು, ದನ ಅಥವಾ ಕರುಗಳ ಕೊಂಬುಗಳಿಗೆ, ಕಾಲುಗಳಿಗೆ ಅಥವಾ ದೇಹದ ಯಾವುದೇ ಭಾಗಗಳಿಗೆ ಯಾವುದೇ ರೀತಿಯ ಬಣ್ಣಗಳನ್ನು ಹಚ್ಚುವಂತಿಲ್ಲ.
ಅವುಗಳನ್ನು ಅನವಶ್ಯಕವಾಗಿ ಕೊರಳಿಗೆ ಹಗ್ಗ ಬಿಗಿದು ಕಟ್ಟುವಂತಿಲ್ಲ.
ಗೋವು ವಾಸಿಸುವ ಸ್ಥಳಗಳಲ್ಲಿ ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ, ಉತ್ತಮ ಆಹಾರ, ಶುದ್ಧ ನೀರು ಕೊಡತಕ್ಕದ್ದು.
ಪ್ರಾಣಿಗಳಿಗೆ ಯಾವುದೇ ರೀತಿಯ ಅಲಂಕಾರ ಮಾಡುವಂತಿಲ್ಲ. ಒಡವೆ, ಹಾರ ಮುಂತಾದ ಯಾವುದೇ ಅಲಂಕಾರಿಕ ವಸ್ತುಗಳನ್ನು ಹಾಕುವಂತಿಲ್ಲ.
ಹಸುವಿನ ಹಾಲು ಕುಡಿಯದಂತೆ ಕರುಗಳ ಬಾಯನ್ನು ಯಾವುದೇ ರೀತಿಯಲ್ಲಿ ಬಂದ್ ಮಾಡುವ ಹಾಗಿಲ್ಲ.
ಆ ನಿರ್ದಿಷ್ಟ ಪ್ರಾಣಿಯ ಉಸ್ತುವಾರಿ ಹೊತ್ತಿರುವ ಮನುಷ್ಯ, ಪ್ರಾಣಿಗೆ ಈ ಮೇಲ್ಕಂಡ ಯಾವುದೇ ತೊಂದರೆ ನೀಡಲಾಗಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡಿರಬೇಕು. ಉತ್ತಮ ಆಹಾರ, ನೀರು, ಬೆಳಕು ಸಿಗುತ್ತಿರುವ ಬಗ್ಗೆ ಅರಿವು ಹೊಂದಿರಬೇಕು.
ಪ್ರಾಣಿಗಳು ಯಾವುದೇ ರೀತಿಯ ದುರವಸ್ಥೆಯಲ್ಲಿದ್ದರೆ, ಆ ಪ್ರಾಣಿಗಳ ಉಸ್ತುವಾರಿ ಹೊತ್ತಿರುವ ವ್ಯಕ್ತಿಗಳೇ ಆ ತಪ್ಪುಗಳಿಗೆ ಹೊಣೆಗಾರರಾಗುತ್ತಾರೆ.

ಅಷ್ಟೇ ಅಲ್ಲ ಗೋವ್ಯಾಪಾರಿಗಳ ಪೈಕಿ ಹೆಚ್ಚಿನವರು ಬಡವರು, ಅನಕ್ಷರಸ್ಥರು ಇರುವುದರಿಂದ, ಅವರಿಗೆ ಜಾಗೃತಿ ಮೂಡಿಸುವ ಸಲುವಾಗಿ ಅಗತ್ಯ ಕಾಲಾವಕಾಶ ಬೇಕಿರುವ ಹಿನ್ನೆಲೆ ಮುಂದಿನ ಮೂರು ತಿಂಗಳಲ್ಲಿ ಹೊಸ ನಿಯಮಗಳು ಜಾರಿಯಾಗಲಿವೆ.