ಫೀಲ್ಮ್ ಫೇರ್‍ ಪ್ರಶಸ್ತಿ ಪ್ರಕಟ: ದಂಗಾಲ್‍ ಚಿತ್ರಕ್ಕೆ 3 ಪ್ರಶಸ್ತಿ, ಆಮೀರ್‍, ಆಲಿಯಾ ಶ್ರೇಷ್ಠ ನಟ, ನಟಿ

0
814

ಬಾಲಿವುಡ್‍ನ ಬಹುನಿರೀಕ್ಷಿತ 2016ನೇ ಸಾಲಿನ ಫೀಲ್ಮ್ ಫೇರ್‍ ಪ್ರಶಸ್ತಿ ಪ್ರಕಟವಾಗಿದ್ದು, ವರ್ಷದ ಕೊನೆಯಲ್ಲಿ ಬಿಡುಗಡೆಯಾದರೂ ಬಾಕ್ಸ್‍ ಆಫೀಸ್‍ ಕೊಳ್ಳೆ ಹೊಡೆಯುತ್ತಿರುವ ದಂಗಾಲ್ ಚಿತ್ರದ ನಟನೆಗಾಗಿ ಆಮೀರ್ ಖಾನ್‍ ಶ್ರೇಷ್ಠ ನಟ ಪ್ರಶಸ್ತಿಗೆ ಪಾತ್ರರಾದರೆ, ಉಡ್ತಾ ಪಂಜಾಬ್‍ ಚಿತ್ರದ ಬಿಹಾರದ ವಲಸೆ ಹುಡುಗಿಯ ಪಾತ್ರದಲ್ಲಿ ಮಿಂಚಿದ್ದ ಆಲಿಯಾ ಭಟ್‍ ಶ್ರೇಷ್ಠ ನಟಿಯಾಗಿ ಆಯ್ಕೆಯಾಗಿದ್ದಾರೆ.

ಶನಿವಾರ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಕಟವಾಗಿದ್ದು, ದಂಗಾಲ್‍ ಚಿತ್ರದ ನಿರ್ದೇಶಕ ನಿರೀಶ್‍ ತಿವಾರಿ ಶ್ರೇಷ್ಠ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.

ನಿರಜಾ ಚಿತ್ರದ ಅಭಿನಯಕ್ಕಾಗಿ ಸೋನಮ್‍ ಕಪೂರ್‍ ವಿಮರ್ಶಕರ ಶ್ರೇಷ್ಠ ನಟಿಯಾಗಿ ಆಯ್ಕೆಯಾಗಿದ್ದಾರೆ, ಉಡ್ತಾ ಪಂಜಾಬ್‍ ಚಿತ್ರಕ್ಕಾಗಿ ಶಾಹಿದ್‍ ಕಪೂರ್ ಮತ್ತು ಅಲಿಗಢ್‍ ಚಿತ್ರಕ್ಕಾಗಿ ಮನೋಜ್ ಬಾಜಪೇಯಿ ವಿಮರ್ಶಕರಿಂದ ಶ್ರೇಷ್ಠ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಫೀಲ್ಮ್ ಫೇರ್‍ ಪ್ರಶಸ್ತಿ ಪಟ್ಟಿ  

 • ಶ್ರೇಷ್ಠ ನಟ- ಆಮೀರ್‍ ಖಾನ್ (ದಂಗಾಲ್‍)
 • ಶ್ರೇಷ್ಠ ನಟಿ- ಆಲಿಯಾ ಭಟ್ (ಉಡ್ತಾ ಪಂಜಾಬ್)
 • ಶ್ರೇಷ್ಠ ನಿರ್ದೇಶಕ-  ನಿತೀಶ್‍ ತಿವಾರಿ (ದಂಗಾಲ್)
 • ಶ್ರೇಷ್ಠ ಚಿತ್ರ- ದಂಗಾಲ್‍
 • ಜೀವಮಾನದ ಸಾಧನೆ ಪ್ರಶಸ್ತಿ- ಶತ್ರುಜ್ಞ ಸಿನ್ಹಾ
 • ವಿಮರ್ಶಕರ ಶ್ರೇಷ್ಠ ಚಿತ್ರ: ನಿರಜಾ
 • ವಿಮರ್ಶಕರ ಶ್ರೇಷ್ಠ ನಟ- ಶಾಹಿದ್ ಕಪೂರ್‍ (ಉಡ್ತಾ ಪಂಜಾಬ್‍), ಮನೋಜ್‍ ಬಾಜಪೇಯಿ (ಅಲಿಗಢ್‍)
 • ವಿಮರ್ಶಕರ ಶ್ರೇಷ್ಠ ನಟಿ- ಸೋಮನ್‍ ಕಪೂರ್‍ (ನಿರಜಾ)
 • ಶ್ರೇಷ್ಠ ಕಿರುಚಿತ್ರ- ಚೌಟ್ನಿ
 • ವೀಕ್ಷಕರ ಶ್ರೇಷ್ಠ ಕಿರುಚಿತ್ರ- ಕಾಮಾಖ
 • ಶ್ರೇಷ್ಠ ಚಿತ್ರಕಥೆ- ಕಪೂರ್‍ ಅಂಡ್‍ ಸನ್ಸ್
 • ಶ್ರೇಷ್ಠ ಕಥೆ- ಕಪೂರ್ ಅಂಡ್‍ ಸನ್ಸ್
 • ಶ್ರೇಷ್ಠ ಪೋಷಕ ನಟ- ರಿಷಿ ಕಪೂರ್‍ (ಕಪೂರ್‍ ಅಂಡ್‍ ಸನ್ಸ್)
 • ಶ್ರೇಷ್ಠ ಪೋಷಕ ನಟಿ- ಶಬನಾ ಆಜ್ಮಿ (ನೀರಜಾ)
 • ಶ್ರೇಷ್ಠ ಗಾಯಕ- ಅರ್ಜಿತ್ ಸಿಂಗ್ (ಏ ದಿಲ್‍ ಹೈ ಮುಷ್ಕಿಲ್‍)
 • ಶ್ರೇಷ್ಠ ಗಾಯಕಿ- ನೇಹಾ ಬಾಸಿನ್ (ಸುಲ್ತಾನ್‍)