ಸಿನಿಮೀಯ ರೀತಿಯಲ್ಲಿ ಕೊಲೆಪಾತಕರನ್ನು ಗುಂಡಿಕ್ಕಿ ಹಿಡಿದ ವೈಟ್ ಫೀಲ್ಡ್-ನ ಮಹಿಳಾ ಪಿ.ಎಸ್.ಐ.

0
624

ಬೆಂಗಳೂರಿನ ವೈಟ್-ಫೀಲ್ಡ್ ನಲ್ಲಿ ನಡೆದ ಡಬಲ್ ಮರ್ಡರ್ ಕೇಸ್ ಅನ್ನು ಕೆಲವೇ ಘಂಟೆಗಳಲ್ಲಿ ಕ್ಲೋಸ್ ಮಾಡಿದ ಬೆಂಗಳೂರು ಸಿಟಿ ಪೊಲೀಸ್.

ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರು ಪೊಲೀಸ್ ಬಗ್ಗೆ ಸುದ್ದಿ ವೈರಲ್.

ಬೆಂಗಳೂರಿನ ಪ್ರತಿಷ್ಠಿತ ವೈಟ್-ಫೀಲ್ಡ್ ನಲ್ಲಿ ಇತ್ತೀಚಿಗೆ ನಡೆದ ಡಬಲ್ ಮರ್ಡರ್ ಜನರ ನಿದ್ದೆ ಕೆಡಿಸಿತ್ತು, ಕೇವಲ ವೈಟ್-ಫೀಲ್ಡ್ ನ ನಿವಾಸಿಗಳು ಮಾತ್ರವಲ್ಲದೆ ಇಡೀ ನಗರದ ಜನರು ಈ ಮರ್ಡರ್-ನಿಂದ ಭಯ ಭೀತಿಯಾಗಿದ್ದರು. ಈ ಘಟನೆಯನ್ನು ತುಂಬ ಗಂಭೀರವಾಗಿ ಪರಿಗಣಿಸಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ವೈಟ್-ಫೀಲ್ಡ್ ಠಾಣೆಯ ಪೊಲೀಸರಿಗೆ ತಿಳಿಸಿದರು.

ತಕ್ಷಣ ಕಾರ್ಯಾಚರಣೆ ನಡೆಸಿದ ವೈಟ್-ಫೀಲ್ಡ್ ನ ಮಹಿಳಾ ಪಿಎಸ್ಐ, ಹಂತಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಕೂಡಲೇ ಒಂದು ಯೋಜನೆ ರೂಪಿಸಿದ ಲೇಡಿ ಸಬ್-ಇನ್ಸ್ಪೆಕ್ಟರ್ ಅವರು ತಮ್ಮ ತಂಡದೊಂದಿಗೆ ಹಂತಕರನ್ನು ಸೇರಿಹಿಡಿಯಲು ಮುಂದಾದರು, ಪೊಲೀಸರು ಬರುವುದನ್ನು ಗಮನಿಸಿದ ಹಂತಕರು ಪರಾರಿಯಾಗಲು ಓಡಲು ಶುರು ಮಾಡಿದರು.

ಹಂತಕರು ಓಡುತ್ತಿರುವುದನ್ನು ಗಮನಿಸಿ ಪಿಎಸ್ಐ ಅವರ ತಂಡ ಅವರನ್ನು ಬೆನ್ನಟ್ಟಿತು, ನಂತರ ಪಿಎಸ್ಐ ಓಡಲು ಯತ್ನಿಸಿದ ಹಂತಕನ ಮೇಲೆ ಬಂದೂಕಿನಿಂದ ಗುಂಡು ಹಾರಿಸಿ ಅವನನ್ನು ಹಿಡಿಯಲು ಯಶಸ್ವಿಯಾದರು.

ಮರ್ಡರ್ ನಡೆದ ಕೆಲವೇ ಘಂಟೆಗಳಲ್ಲಿ ಇಬ್ಬರು ಹಂತಕರನ್ನು ಜೀವಂತವಾಗಿ ಸೆರೆ ಹಿಡಿದ ವೈಟ್-ಫೀಲ್ಡ್ ಪಿಎಸ್ಐ ನೇತೃತ್ವದ ತಂಡಕ್ಕೆ ಶ್ಲಾಘನೆಯ ಮಹಾಪುರವೆ ಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಧೈರ್ಯ, ಸಾಹಸ ಮತ್ತು ಕಾರ್ಯಧಕ್ಷತೆ ಬಗ್ಗೆ ಜನ ತುಂಬ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.