ಸ್ವಿಸ್​ ಬ್ಯಾಂಕ್-ನಲ್ಲಿ ಕಪ್ಪು ಹಣವಿಟ್ಟ ಭಾರತೀಯರ ಪಟ್ಟಿ ಬಿಡುಗಡೆ; ಕೆಲವೇ ದಿನಗಳಲ್ಲಿ ಭಾರತಕ್ಕೆ ಬರಲಿದೆ ಕಪ್ಪು ಹಣ.!

0
267

ಇಡಿ ದೇಶವೇ ಕಾತುರದಲ್ಲಿ ನೋಡುತ್ತಿರುವ ಒಂದು ವಿಷಯ ಎಂದರೆ ಕಪ್ಪು ಹಣವನ್ನು ತರುವುದಕ್ಕಾಗಿ, ಅದರಂತೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಪ್ಪು ಹಣವನ್ನು ತಂದೆ ತರುತ್ತೆ ಎನ್ನುವ ಭರವಸೆಯಲ್ಲಿ ಇಡಿ ದೇಶ ಕಾದು ಕುಳಿತಿದೆ. ಈ ವಿಷಯವಾಗಿ ದೇಶಕ್ಕೆ ಜಯ ಸಿಕ್ಕಿದ್ದು, ಎಇಒಐ ಚೌಕಟ್ಟಿನಡಿಯಲ್ಲಿ ಭಾರತವು ಮೊದಲ ಬಾರಿಗೆ ಸ್ವಿಸ್ ಅಧಿಕಾರಿಗಳಿಂದ ವಿವರಗಳನ್ನು ಪಡೆದುಕೊಂಡಿದೆ, ಇದು ಹಣಕಾಸು ಖಾತೆಗಳ ಮಾಹಿತಿ ವಿನಿಮಯವಾಗಿರಲಿದ್ದು 2018 ರಲ್ಲಿ ರದ್ದಾದ ಖಾತೆಗಳ ಮಾಹಿತಿ ಸಹ ಇವುಗಳ್ ಜತೆಗೆ ಲಭ್ಯವಿದ್ದು ಕಪ್ಪು ಹಣ ಬರುವುದು ಬಹುತೇಕ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಸ್ವಿಸ್ ಬ್ಯಾಂಕ್ ಕಪ್ಪು ಹಣ ಪಟ್ಟಿ ಬಿಡುಗಡೆ?

ಕೇಂದ್ರ ಸರ್ಕಾರ ತನ್ನ ಪ್ರಜೆಗಳ ಸ್ವಿಸ್ ಬ್ಯಾಂಕ್ ಖಾತೆ ವಿವರಗಳನ್ನು ಮೊದಲ ಬಾರಿಗೆ ಪಡೆದುಕೊಂಡಿದೆ, ಇದು ವಿದೇಶದಲ್ಲಿ ಸಂಗ್ರಹವಾಗಿರುವ ಕಪ್ಪು ಹಣದ ವಿರುದ್ಧದ ಸರ್ಕಾರದ ಹೋರಾಟದ ಪ್ರಮುಖ ಮೈಲಿಗಲ್ಲಿನಲ್ಲಿ ಒಂದಾಗಿದ್ದು, ಭಾರತ-ಸ್ವಿಡ್ಜರ್ಲ್ಯಾಂಡ್ ಹೊಸ ಒಪ್ಪಂದದಡಿಯಲ್ಲಿ ಮಾಹಿತಿಯನ್ನು ಹಂಚಿಕೆ ಮಾಡಿಕೊಳ್ಳಲಿದ್ದು, ಈ ಬೆಳವಣಿಗೆಯನ್ನು ಭಾರತದಲ್ಲಿ ತೆರಿಗೆ ವಂಚಿಸಿ ವಿದೇಶಿಗಳಲ್ಲಿ ಕಪ್ಪು ಹಣವಾಗಿಟ್ಟಿದ್ದ ಪತ್ತೆಯ ಕಾರ್ಯದಲ್ಲಿ ಮೊದಲ ಹೆಜ್ಜೆಯಾಗಿದೆ.

ಹೌದು ವಿದೇಶಿ ಬ್ಯಾಂಕ್​ಗಳಲ್ಲಿ ಸಂಗ್ರಹಿಸಲಾಗಿರುವ ಭಾರತದ ಕಪ್ಪು ಹಣವನ್ನು ಮರಳಿ ದೇಶಕ್ಕೆ ಹಿಂದಿರುಗಿಸುವ ಕೇಂದ್ರ ಸರ್ಕಾರದ ನಿರಂತರ ಹೋರಾಟದಲ್ಲಿ ಇದು ಮಹತ್ವದ ಮೈಲುಗಲ್ಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ನೀಡಲಾಗಿರುವ ಪಟ್ಟಿಯಲ್ಲಿ ರಾಜಕಾರಣಿಗಳು, ವ್ಯವಹಾರಸ್ಥರು ಸೇರಿದಂತೆ ಹಲವಾರು ಗಣ್ಯರ ಹೆಸರು ಇದೆ ಎನ್ನಲಾಗುತ್ತಿದೆ. ಎಇಒಐ ಜಾಗತಿಕ ಮಾನದಂಡಗಳ ಚೌಕಟ್ಟಿನೊಳಗೆ ಸ್ವಿಜರ್ಲೆಂಡ್ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ ತಮ್ಮ ದೇಶದಲ್ಲಿನ ಭಾರತೀಯರ ಹಣಕಾಸು ಖಾತೆಗಳ ಮಾಹಿತಿಯನ್ನು ಭಾರತದೊಂದಿಗೆ ವಿನಿಮಯ ಮಾಡಿಕೊಂಡಿದೆ. ಇದಲ್ಲದೆ, 75 ದೇಶಗಳಲ್ಲಿ ಭಾರತೀಯರು ಖಾತೆ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಸ್ವಿಸ್ ಬ್ಯಾಂಕ್‍ನಲ್ಲಿ ಖಾತೆ ಹೊಂದಿರುವ ಮಾಹಿತಿಯನ್ನು ಸ್ವಯಂಚಾಲಿತ ಮಾಹಿತಿ ವಿನಿಮಯ (ಎಇಒಐ) ವ್ಯವಸ್ಥೆ ಅಡಿ ನೀಡಲಾಗಿದೆ. ಇದರಂತೆ ಭಾರತ ಮಾತ್ರವಲ್ಲದೇ ಸ್ವಿಜರ್ಲೆಂಡ್ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟೇಷನ್ (ಎಫ್‍ಟಿಎ) ಅಡಿ 75 ರಾಷ್ಟ್ರಗಳ ಒಟ್ಟು 3.1 ಮಿಲಿಯನ್ ಬ್ಯಾಂಕ್ ಖಾತೆದಾರರ ಮಾಹಿತಿಯನ್ನು ಸ್ವಿಸ್ ಆಯಾ ದೇಶಗಳಿಗೆ ನೀಡಿದೆ. ಸದ್ಯ ಮೊದಲ ಪಟ್ಟಿ ಲಭ್ಯವಾಗಿದ್ದು ಮುಂದಿನ ಪಟ್ಟಿಯನ್ನು ನಿಮಯಗಳ ಅನ್ವಯ 2020 ಸೆಪ್ಟೆಂಬರ್ ನಲ್ಲಿ ನೀಡುವುದಾಗಿ ಎಫ್‍ಟಿಎ ವಕ್ತಾರರು ತಿಳಿಸಿದ್ದಾರೆ.

ಸದ್ಯ ಸ್ವಿಸ್ ನೀಡಿರುವ ಬ್ಯಾಂಕ್ ಖಾತೆಗಳನ್ನು ಹೊಂದಿರುವವರ ಪಟ್ಟಿಯಲ್ಲಿ ನಿಯಮಗಳ ಅನ್ವಯ ತೆರಿಗೆ ಪಾವತಿ ಮಾಡಿ ಉದ್ಯಮ ನಡೆಸಲು ತೆರಳಿದ ವ್ಯಕ್ತಿಗಳ ಮಾಹಿತಿಯೂ ಇದ್ದು, ಸರ್ಕಾರ ಈ ಮಾಹಿತಿಯನ್ನು ಹೆಚ್ಚಿನ ವಿಶ್ಲೇಷಣೆಗೆ ಒಳಪಡಿಸಿ ಮುಂದಿನ ಕ್ರಮಗೊಳ್ಳಬೇಕಿದೆ. ಸದ್ಯ ಲಭಿಸಿರುವ ಪಟ್ಟಿಯಲ್ಲಿ ಹಣಕಾಸಿನ ಸಂಸ್ಥೆಯ ಹೆಸರು, ಗುರುತಿನ ಚೀಟಿ ಮಾಹಿತಿ, ಖಾತೆಯ ಹಣಕಾಸಿನ ವಿವರ, ಹೆಸರು, ವಿಳಾಸ, ರಾಜ್ಯ ಮತ್ತು ತೆರಿಗೆ ಸೇರಿದಂತೆ ಖಾತೆಯ ಹಣಕಾಸಿನ ಸ್ಥಿತಿ, ಖಾತೆಯಲ್ಲಿನ ಹಣದ ಮೊತ್ತ ಹಾಗೂ ಆದಾಯದ ಕುರಿತ ಮಾಹಿತಿಗಳನ್ನು ನೀಡಲಾಗಿದೆ. ಅಲ್ಲದೇ ಸದ್ಯ ಬ್ಯಾಂಕ್‍ನಲ್ಲಿ ಸಕ್ರಿಯವಾಗಿರುವ ಹಾಗೂ 2018 ರಲ್ಲಿ ರದ್ದಾದ ಖಾತೆಗಳ ಮಾಹಿತಿಯನ್ನು ನೀಡಲಾಗಿದೆ.