ವಾಹನ ಸವಾರರಿಗೆ ಎಚ್ಚರ ಇನ್ಮುಂದೆ ಚಿಕ್ಕ ತಪ್ಪಿಗೂ ಬೀಳುತ್ತೆ ಸಾವಿರಾರು ರೂ. ದಂಡ; ಯಾವ್ಯಾವ ರೂಲ್ಸ್ ಬ್ರೇಕ್‍ಗೆ ಎಷ್ಟೆಷ್ಟು ದಂಡ??

0
539

ಹೆಚ್ಚುತ್ತಿರುವ ಅಪಘಾತ ತಡೆಯುವ ಜತೆಗೆ ಸಂಚಾರ ನಿಯಮ ಉಲ್ಲಂಘಿಸುವವರನ್ನು ಮಟ್ವ ಹಾಕುವ ನಿಟ್ಟಿನಲ್ಲಿ ದುಬಾರಿ ದಂಡವನ್ನು ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ಗರಿಷ್ಠ ಮಟ್ಟದ ದಂಡ ಪ್ರಯೋಗಕ್ಕೆ ನಿರ್ಧರಿಸಿ ಆದೇಶ ಹೊರಡಿಸಿದೆ. ಆದರಿಂದ ಇನ್ನು ಮುಂದೆ ಸಂಚಾರ ನಿಯಮ ಉಲ್ಲಂಘಿಸಿ ಗಾಡಿ ಚಲಾಯಿಸುವವರಿಗೆ ಭಾರಿ ದಂಡ ಬೀಳಲಿದೆ. ಹಾಗೆಯೇ ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುವುದು, ನೋ ಪಾರ್ಕಿಂಗ್‍ನಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದು ಮತ್ತು ಅತಿಯಾದ ವೇಗಕ್ಕೆ ವಿಧಿಸುವ ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಹೊಸ ದಂಡವನ್ನು ಫಿಕ್ಸ್ ಮಾಡಲಾಗಿದೆ.

Also read: ಅಪಾರ್ಟ್‌ಮೆಂಟ್‌-ನಲ್ಲಿ ಮನೆ ಖರೀದಿಸುವ ಯೋಚನೆಯಲ್ಲಿರುವವರಿಗೆ ಸರ್ಕಾರದಿಂದ ಶಾಕ್; ಇನ್ನೂ ಐದು ವರ್ಷ ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ತಡೆ..

ಹೌದು ಮೊಬೈಲ್​​​ ಬಳಕೆ ಮಾಡಿಕೊಂಡ ಬೈಕ್​​ ಓಡಿಸಬೇಡಿ. ಹಾಗೆ ಓಡಿಸಬೇಕು ಅಂದ್ರೆ ಜೇಬಿನಲ್ಲಿ 1000 ರೂಪಾಯಿ ಹೆಚ್ಚುವರಿಯಾಗಿರ್ಲಿ. ಯಾಕಂದ್ರೆ ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ಗರಿಷ್ಠ ಮಟ್ಟದ ದಂಡ ಪ್ರಯೋಗಕ್ಕೆ ಕರ್ನಾಟಕ ಮೋಟಾರು ವಾಹನ ಕಾಯ್ದೆಯ ಹೊಸನಿಯಮ ಜಾರಿಗೊಳಿಸಿ ನಿಯಮ ಉಲ್ಲಂಘನೆಯ ದಂಡದ ದರವನ್ನು ಏರಿಕೆಗೊಳಿಸಿ ಆದೇಶ ಹೊರಡಿಸಿದ ಸರ್ಕಾರ. ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ದಂಡವನ್ನು ಪರಿಷ್ಕರಣೆ ಮಾಡಲಾಗಿದ್ದು, ಮಿತಿಗಿಂತಲೂ ವೇಗವಾಗಿ ಅಥವಾ ಅತಿಯಾದ ವೇಗವಾಗಿ ಗಾಡಿ ಚಲಾಯಿಸಿದರೆ 1000 ರೂಪಾಯಿ ದಂಡ ಬೀಳಲಿದೆ. ವೇಗವಾಗಿ ಗಾಡಿ ಚಲಾಯಿಸುವಂತೆ ಸೂಚಿಸಿದರೆ ಅದಕ್ಕೆ 500 ರೂಪಾಯಿ ದಂಡ ಬೀಳಲಿದೆ.

ಯಾವುದಕ್ಕೆ ಎಷ್ಟು ದಂಡ?

Also read: ಮಂಡ್ಯದಲ್ಲಿ ಜೆಡಿಎಸ್ ಶಾಸಕರು, ಸಚಿವರು ನಾಪತ್ತೆ; ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ, ಜಿಲ್ಲೆಯ ತುಂಬೆಲ್ಲ ಎಂದು ಕಾಣುತ್ತಿರುವ ಫ್ಲೆಕ್ಸ್‌ಗಳು..

ಅಪಾಯಕಾರಿ ಚಾಲನೆ ಮತ್ತು ಮೊಬೈಲ್​​ ಬಳಸಿ ವೆಹಿಕಲ್​ ಓಡಿಸಿದ್ರೆ 1000 ರೂಪಾಯಿಯಿಂದ 2000 ರೂಪಾಯಿ ದಂಡ ಬೀಳಲಿದೆ. ಈಗ ಮೊಬೈಲ್​​​ ಬಳಕೆ ಹಾಗೂ ಅಪಾಯಕಾರಿ ರೈಡಿಂಗ್​​ಗೆ 100 ರೂಪಾಯಿ ದಂಡ ಇತ್ತು.300ರೂ ಇದ್ದ ಅತಿವೇಗ ಚಾಲನೆ ದಂಡದ ದರವನ್ನ 1000ರೂಗಳಿಗೆ ಏರಿಕೆ ಮಾಡಲಾಗಿದೆ. 500ರೂ ಇದ್ದ ವಿಮೆ ರಹಿತ ಚಾಲನೆ ದಂಡ ದರವನ್ನ 10000 ಹಾಗೂ 300ರೂ ಇದ್ದ ನೋದಣಿ ರಹಿತ ಚಾಲನೆ ದಂಡ ದರವನ್ನ 5000ದಿಂದ 10 ಸಾವಿರ ರೂಪಾಯಿಗಳಿಗೆ ಏರಿಸಲಾಗಿದೆ. ಅಷ್ಟೇ ಅಲ್ದೇ, 300ರೂ ಇದ್ದ ಅರ್ಹತಾ ಪ್ರಮಾಣ ಪತ್ರ ಇಲ್ಲದೇ ವಾಹನ ಚಾಲನೆ ದಂಡ ದರವನ್ನ 2000ದಿಂದ 5000ರೂಪಾಯಿಗಳಿಗೆ ಹಾಗೂ 100ರೂ ಇದ್ದ ನೋಪಾರ್ಕಿಂಗ್​​ನಲ್ಲಿ ವೆಹಿಕಲ್ ನಿಲುಗಡೆ ದಂಡ ದರವನ್ನ 1000 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಕರ್ನಾಟಕ ಮೋಟಾರು ಕಾಯ್ದೆಗೆ ತಿದ್ದುಪಡಿ ತಂದು ಎರಡರಿಂದ ಮೂರುಪಟ್ಟು ದಂಡ ಹೆಚ್ಚಿಸಲಾಗಿದೆ.

ರೂಲ್ಸ್ ಬ್ರೇಕ್‍ಗೆ ಎಷ್ಟೆಷ್ಟು ಫೈನ್?

Also read: ಇನ್ಮುಂದೆ ಯಾವುದೇ ತುರ್ತು ಸೇವೆಗೆ ಒಂದೇ ನಂಬರ್; 112ಕ್ಕೆ ಕಾಲ್ ಮಾಡಿ ಎಲ್ಲ ತರಹದ ತುರ್ತು ಸೇವೆ ಪಡೆಯಬಹುದು..

2ನೇ ಬಾರಿಗೆ ಮೊಬೈಲ್ ಬಳಕೆ ಮಾಡಿದರೆ 2 ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ. ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದಿದ್ದರೆ, ಮೊದಲು 2 ಸಾವಿರ ರೂ. ದಂಡ, 2ನೇ ಬಾರಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಅಲ್ಲದೆ ಇನ್ಶೂರೆನ್ಸ್ ಇಲ್ಲದಿದ್ದರೆ, ಸಾವಿರ ರೂಪಾಯಿ ದಂಡ ಕಟ್ಟಬೇಕು. ಇನ್ಶೂರೆನ್ಸ್ ಇಲ್ಲದವರಿಗೆ ಮೊದಲು 500 ರೂ. ದಂಡ ಇತ್ತು. ನೋ ಪಾರ್ಕಿಂಗ್‍ನಲ್ಲಿ ಪಾರ್ಕಿಂಗ್ ಮಾಡಿದವರಿಗೆ ಮೊದಲು ಸಾವಿರ ರೂ. ದಂಡ, 2ನೇ ಬಾರಿಗೆ ಹಾಗೇ ಮಾಡಿದರೆ 2 ಸಾವಿರ ಕಟ್ಟಬೇಕಾಗುತ್ತದೆ.

ಮಾಹಿತಿ ಕೃಪೆ: Public tv