ಉಪಚುನಾವಣೆಯಲ್ಲಿ ಜೋರಾಗಿದೆ ಹಣ, ಚಿಕನ್ ಪಾಲಿಟಿಕ್ಸ್; ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲು.!

0
196

ರಾಜ್ಯದ ಮರು ಚುನಾವಣೆಯ ಪ್ರಚಾರಕ್ಕೆ ಒಂದೇ ದಿನ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಮತದಾರರಿಗೆ ಹಣ, ಉಡುಗೊರೆ, ಚಿಕನ್ ನೀಡಿ ಮತ ಹಾಕಿಸಿಕೊಳ್ಳವ ತಯಾರಿ ನಡೆಸಿದ ವೀಡಿಯೋ, ಮತ್ತು ಚಿತ್ರಗಳು ಎಲ್ಲ ಕಡೆಯಲ್ಲಿ ಹರಿದಾಡುತ್ತಿವೆ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಗ್ರಾಮಗಳಾದ ಚಿಕ್ಕ ಪೈಲಗುರ್ಕಿ, ದೊಡ್ಡಪೈಗುರ್ಕಿ, ಸಾಮಸೇನಹಳ್ಳಿ ಗ್ರಾಮಗಳಲ್ಲಿ ಹಂಚಿಕೆ ಮಾಡಲಾಗಿದೆ. ಆಪೆ ಆಟೋ ಮೂಲಕ ಕೋಳಿ ತಂದು ಗ್ರಾಮಸ್ಥರಿಗೆ ಹಂಚಿದ್ದರೆ, ಬಿಜೆಪಿ, ಹಣ ಹಂಚಿಕೆಗೆ ಮುಂಚಿತವಾಗಿ ಪ್ರತಿ ಮನೆ ಮನೆಗೆ ತೆರಳಿ ಚೀಟಿ ತಲುಪಿಸುತ್ತಿದೆ. ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

Also read: ಉಪಚುನಾವಣೆಯಲ್ಲಿ ಡಿಕೆಶಿ ಹೋದ ಕಡೆಯಲೆಲ್ಲಾ ಜನರ ಜಾತ್ರೆ ಕಂಡು ಹೆದರಿ ಮತ್ತೆ ಐಟಿ ನೋಟಿಸ್ ನೀಡಿತಾ ಮೋದಿ ಸರ್ಕಾರ??

ಹೌದು ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ ಬೀಳಲಿದ್ದು, ಈಗಾಗಲೇ ತೆರೆಮರೆಯ ಕಸರತ್ತು ಆರಂಭಿಸಿರುವ ಬಿಜೆಪಿ, ಹಣ ಹಂಚಿಕೆಗೆ ಮುಂಚಿತವಾಗಿ ಪ್ರತಿ ಮನೆ ಮನೆಗೆ ತೆರಳಿ ಚೀಟಿ ತಲುಪಿಸುತ್ತಿದೆ. ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರ ಬಾವಚಿತ್ರ ಹೊಂದಿರುವ ಮತ ಚೀಟಿ ಹಂಚುತ್ತಿರುವ ಬಿಜೆಪಿ ಕಾರ್ಯಕರ್ತರು, ಹಣ ಹಂಚಲು ಬಂದಾಗ ಈ ಚೀಟಿ ತೋರಿಸಿದರೆ ಹಣ ನೀಡುವುದಾಗಿ ಮತದಾರರಿಗೆ ಭರವಸೆ ನೀಡುತ್ತಿದ್ದಾರೆ. ಯಾಕೆ ಈ ಚೀಟಿ ಹಂಚುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ಕಾರ್ಯಕರ್ತ, ತಾನು ಆಂನದ್ ಸಿಂಗ್ ಕಡೆಯ ವ್ಯಕ್ತಿ ಎಂದು ಹೇಳಿದ್ದಾರೆ. ಕಾರ್ಯಕರ್ತನ ಈ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ.

ಮುಖ್ಯಮಂತ್ರಿ ಬಿ.ಎಸ್‌ವೈ ವಿರುದ್ಧ ಎಫ್‌ಐಆರ್?

Also read: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಎಚ್ ಡಿಕೆ, ಡಿಕೆಶಿ ಭೇಟಿ!! ಉಪಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತ??

ಹೌದು ವೀರಶೈವ ಲಿಂಗಾಯತ ಸಮುದಾಯದ ಮತದಾರರ ಒಂದೇ ಒಂದು ಮತವೂ ಬಿಜೆಪಿ ಬಿಟ್ಟು ಆ ಕಡೆ ಈ ಕಡೆ ಹೋಗುವಂತಿಲ್ಲ ಎಂದು ಹೇಳಿಕೆ ನೀಡಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ವಿರುದ್ಧ ದೂರು ದಾಖಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ. ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಪರ ಪ್ರಚಾರದ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೀರಶೈವ ಸಮುದಾಯದ ಮತದಾರರಿಗೆ ಆಮಿಷ ಒಡ್ಡಿದ ಆರೋಪ ಸಂಬಂಧ ದೂರು ಬಂದಿದೆ ಸಿಎಂ ವಿರುದ್ಧ ದೂರು ಸ್ವೀಕರಿಸಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಬಿಜೆಪಿಗೆ ಮತಹಾಕದಿದ್ದರೆ ಬಿಎಸ್​ವೈ ಕೆನ್ನೆಗೆ ಬಾರಿಸಿದಂತೆ;

ಜಾತಿ ರಾಜಕಾರಣಕ್ಕೆ ಸಾಕ್ಷಿಯಾಗುವ ಹೇಳಿಕೆಯನ್ನು ಸಚಿವ ಮಾಧುಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ವೀರಶೈವ ಲಿಂಗಾಯತರು ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು. ಒಂದು ವೇಳೆ ನೀವು ಬಿಜೆಪಿ ಮತ ಹಾಕದಿದ್ದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಕೆನ್ನೆಗೆ ಬಾರಿಸಿದಂತೆ ಇಂದು ಹೊಸಪೇಟೆಯಲ್ಲಿ ಅನರ್ಹ ಶಾಸಕ ಆನಂದ್ ಸಿಂಗ್ ಪರ ಪ್ರಚಾರದಲ್ಲಿ ತೊಡಗಿದ್ದ ವೇಳೆ ವೀರಶೈವ ಲಿಂಗಾಯತ ಸಮುದಾಯದ ಸಭೆಯಲ್ಲಿ ಮಾತನಾಡಿರುವ ಅವರು, “ವೀರಶೈವ ಲಿಂಗಾಯತರು ಬಿಜೆಪಿ ಪಕ್ಷಕ್ಕೆ ಮತ ಹಾಕಲೇಬೇಕು. ಯಡಿಯೂರಪ್ಪ ಅವರಿಗೆ ಮತ ಹಾಕದೆ ಇರುವುದು ಅವರ ಕೆನ್ನೆಗೆ ಹೊಡೆದು ಅವಮಾನ ಮಾಡಿದಂತೆ. ಎಂದು ಹೇಳಿದ್ದಾರೆ.

Also read: ಚಂದ್ರಯಾನ 2 ರ ವಿಕ್ರಂ ಲ್ಯಾಂಡರ್ ಪತನವಾದ ಸ್ಥಳವನ್ನು ನಾಸಾ ಕಂಡು ಹಿಡಿದಿದೆ, ನಾಸಾಗೆ ಸಹಾಯ ಮಾಡಿದ್ದು ಭಾರತದ ಟೆಕ್ಕಿ ಅಂತ ಗೊತ್ತಾದ್ರೆ ಆಶ್ಚರ್ಯ ಪಡ್ತೀರ!!

ಬಿಜೆಪಿ ನೋಟು, ಕಾಂಗ್ರೆಸ್​​ಗೆ ವೋಟು?

ಬಿಜೆಪಿಯ ದುಡ್ಡು, ಕಾಂಗ್ರೆಸ್​​ಗೆ ವೋಟು” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಬಿಜೆಪಿ ಚುನಾವಣೆಗಾಗಿ ಬೇಕಾಬಿಟ್ಟಿ ಹಣ ಖರ್ಚು ಮಾಡುತ್ತಿದೆ. ಹಾಗಾಗಿ ಬಿಜೆಪಿಯಿಂದ ಹಣ ಪಡೆದು ಕಾಂಗ್ರೆಸ್​ಗೆ​ ವೋಟ್​​​​ ಮಾಡಿ ಎಂದು ಮತದಾರರಿಗೆ ಮನವಿ ಮಾಡಿದ್ದಾರೆ.