ಬಿಎಸ್’ವೈ ವಿರುದ್ಧ ಎಫ್’ಐಆರ್ ದಾಖಲು ಯಾವುದೇ ಕ್ಷಣದಲ್ಲೂ ಬಂಧನ ಸಾಧ್ಯತೆ ಆದ್ರೆ ಇತ್ತ ಡಿಕೆ ಶಿವಕುಮಾರ್ ಮತ್ತು ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ..!

0
883

ಹೌದು ನಮ್ಮ ರಾಜ್ಯದಲ್ಲಿ ದ್ವೇಷದ ರಾಜಕಾರಣ ಶುರುವಾಗಿದೆ ಅನ್ನೋದು ಎಲ್ಲೆಡೆ ಕೇಳಿಬರುತ್ತಿದೆ ಇದರ ಬೆನ್ನಲೇ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಎಸಿಬಿ ಯಲ್ಲಿ ಪ್ರಕರಣ ದಾಖಲಾಗಿದೆ. ಡಿಕೆ ಶಿವಕುಮಾರ್ ಮೇಲೆ ಐಟಿ ರೇಡ್ ಆಯ್ತು, ಅಮಿತ್ ಶಾ ಆಗಮಿಸಿ ಸಿದ್ದರಾಮಯ್ಯ ಸರಕಾರವನ್ನು ಅತ್ಯಂತ ಭ್ರಷ್ಟ ಎಂದು ಬಣ್ಣಸಿ ಹೋಗಿದ್ದಾಯ್ತು.. ಈಗ ಪ್ರತ್ಯಸ್ತ್ರ ಬಿಡುವುದು ಕಾಂಗ್ರೆಸ್ ಸರದಿ ಇದ್ದ ಹಾಗಿದೆ. ಏಳು ವರ್ಷಗಳ ಹಿಂದಿನ ಪ್ರಕರಣಕ್ಕೆ ಈಗ ಮರುಜೀವ ಸಿಕ್ಕಿದೆ. ಡಾ. ಡಿ. ಅಯ್ಯಪ್ಪ ದುರೈ ಎಂಬ ಸಾಮಾಜಿಕ ಹೋರಾಟಗಾರರೊಬ್ಬರು ಬಿಎಸ್’ವೈ ವಿರುದ್ಧ ಅಕ್ರಮ ಡೀನೋಟಿಫಿಕೇಶ್ ಆರೋಪ ಮಾಡಿದ್ದಾರೆ.

ಯಡಿಯೂರಪ್ಪ ಸಿಎಂ ಆಗಿದ್ದಾಗ, ಹೆಸರುಘಟ್ಟ-ಯಲಹಂಕ ವ್ಯಾಪ್ತಿಯ 17 ಗ್ರಾಮಗಳಲ್ಲಿ ಒಟ್ಟು 3546 ಎಕರೆ ಜಮೀನನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಸುಮಾರು 19 ಸಾವಿರ ನಿವೇಶನಗಳ ಬೃಹತ್ ಶಿವರಾಮ್ ಕಾರಂತ್ ಬಡಾವಣೆ ನಿರ್ಮಾಣಕ್ಕಾಗಿ ಭೂಸ್ವಾಧೀನವಾಗಿತ್ತು. ಇದರಲ್ಲಿ ಯಡಿಯೂರಪ್ಪನವರು ಸುಮಾರು 257 ಎಕರೆ ಜಮೀನನ್ನು ಡೀನೋಟಿಫೈ ಮಾಡಿಸಿದ್ದರೆನ್ನಲಾಗಿದೆ. ಆದರೆ, ಈ ವಿಚಾರದಲ್ಲಿ ಸುಮಾರು 250 ಎಕರೆಯಷ್ಟು ಜಮೀನಿನ ಡೀನೋಟಿಫಿಕೇಶನ್’ನಲ್ಲಿ ಸರಿಯಾದ ನಿಯಮಗಳನ್ನು ಪಾಲಿಸಲಾಗಿಲ್ಲ. ಅಂದರೆ ಅಕ್ರಮವಾಗಿ ಡೀನೋಟಿಫಿಕೇಶನ್ ಮಾಡಲಾಗಿದೆ ಎಂದು ಅಯ್ಯಪ್ಪ ದುರೈ ಆರೋಪಿಸಿದ್ದಾರೆ.

ಇದು ಒಂದು ವಿಚಾರವಾದರೆ ಇತ್ತ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ.ಆದಾಯ ತೆರಿಗೆ ಇಲಾಖೆ ದಾಳಿಗೆ ಒಳಗಾಗಿರುವ ಸಚಿವ ಡಿ.ಕೆ.ಶಿವಕುಮಾರ್ ಮತ್ತು ರಮೇಶ್ ಜಾರಕಿ ಹೊಳಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ವಿಧಾನಸೌಧ ಮುತ್ತಿಗೆ ಕಾರ್ಯ ಕ್ರಮ ಹಮ್ಮಿಕೊಂಡಿದೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಈ ಮುತ್ತಿಗೆ ಕಾರ್ಯಕ್ರಮ ನಡೆಯುತ್ತಿದೆ. ಹಿರಿಯ ಮುಖಂಡರೂ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದು. ನಗರದ ಫ್ರೀಡಂ ಪಾರ್ಕ್ ಬಳಿ ಎಲ್ಲ ಮುಖಂಡರು ಹಾಗೂ ಕಾರ್ಯ ಕರ್ತರು ಸೇರಿದ ನಂತರ ಅಲ್ಲಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳಲಿದ್ದಾರೆ.