ಸತ್ತ ಮೇಲೂ ಗರ್ಭಕೋಶ ಕಸಿಯಿಂದ ತಾಯಿಯಾದ ಈ ಮಹಿಳೆಯ ಸ್ಟೋರಿ ಓದಿ, ನಿಮ ಕಣ್ಣಲ್ಲಿ ನೀರು ಬರುತ್ತೆ…

0
966

ವೈದ್ಯಕೀಯ ಕ್ಷೆತ್ರದಲ್ಲಿ ಎಷ್ಟೊಂದು ಮುಂದುವರಿದಿದೆ ಎಂಬುವುದನ್ನು ಊಹಿಸಲು ಅಸಾಧ್ಯವಾಗಿದೆ. ಏಕೆಂದರೆ ಮನುಷ್ಯನ ಪ್ರತಿಯೊಂದು ದೇಹದ ಭಾಗಗಳನ್ನು ಶಸ್ತ್ರಚಿಕ್ಸಿತೆ ಮೂಲಕ ಜೋಡಣೆ ಮಾಡಿ ಯಶಸ್ವಿಯಾಗುತ್ತಿದ್ದಾರೆ. ಇಲ್ಲಿಯವರೆಗೆ ಕಣ್ಣು, ಮೂತ್ರಪಿಂಡ, ತಲೆಕೂದಲು, ಹಲ್ಲುಗಳು, ಹೃದಯ, ಅಷ್ಟೇಯಾಕೆ ಲಿವರ್ ಕೂಡ ಜೋಡಣೆಮಾಡಿ. ವೈದ್ಯಕೀಯ ಕ್ಷೆತ್ರವು ಎಷ್ಟೊಂದು ಸಾಹಸ ಮಾಡುತ್ತಿದೆ ಎಂದು ತಿಳಿದಿತ್ತು. ಈಗ ಮತ್ತೊಂದು ಹೆಜ್ಜೆಮುಂದೆ ಇಟ್ಟು ಮಹಿಳೆಯರ ಗರ್ಭಕೋಶ ಜೋಡಣೆ ಮಾಡಿ ಮಗು ಪಡೆದಿದ್ದಾರೆ. ಇದು ವಿಶ್ವದಲ್ಲೇ ಮೊದಲ ಪ್ರಕರಣವಾಗಿದೆ.

Also read: ನಿಮಗೆ ಗೊತ್ತಿಲ್ಲದೇ ಖದೀಮರು ನಿಮ್ಮ Accountನಿಂದ ಹಣ ವರ್ಗಾಯಿಸಿಕೊಂಡಿದ್ದರೆ, ಅದನ್ನು ಹಿಂಪಡೆಯುವುದು ಹೇಗೆ ಅಂತ ನೋಡಿ!!

ಹೌದು ಕೇಳಲು ಆಶ್ಚರ್ಯಕರವಾದರೂ ಇದು ಸತ್ಯವಾಗಿದೆ. ಈ ವಿಷಯದಿಂದ ಮಕ್ಕಳಿಲ್ಲದವರಿಗೆ ಮಗು ಪಡೆಯುವ ಆಸೆ ಹುಟ್ಟಿದೆ. ಸದ್ಯ ಈ ಸಾಹಸ ನಡೆದಿದ್ದು ಬ್ರೆಜಿಲ್​-ನಲ್ಲಿ ಮೃತಪಟ್ಟ ಮಹಿಳೆಯ ಗರ್ಭಕೋಶ ಕಸಿ ಮಾಡಲಾಗಿದ್ದ ಮಹಿಳೆಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದು ವಿಶ್ವದಲ್ಲೇ ಮೊದಲ ಪ್ರಕರಣವಾಗಿದೆ.

ಏನಿದು ವೈದ್ಯಕೀಯ ಹೊಸ ಬೆಳವಣಿಗೆ?

Also read: ತಕ್ಷಣ ಹಣ ಹೊಂದಿಸಲು ಕಷ್ಟವಾಗುತ್ತಿದೆ ಅಂದ್ರೆ, ಈ App ಉಪಯೋಗಿಸಿ 5 ನಿಮಿಷದೊಳಗೆ 60 ಸಾವಿರದ ವರೆಗೆ ಸಾಲ ಸಿಗುತ್ತೆ!!

ಈ ಹಿಂದೆ ಯುಎಸ್​, ಜೆಕ್​ ಗಣರಾಜ್ಯ ಹಾಗೂ ಟರ್ಕಿ ದೇಶಗಳಲ್ಲಿ ಮೃತರ ಗರ್ಭಕೋಶವನ್ನು ಇನ್ನೊಬ್ಬ ಮಹಿಳೆಗೆ ಕಸಿ ಮಾಡಿದ ಸುಮಾರು 10 ಪ್ರಕರಣಗಳು ನಡೆದಿದ್ದವು. ಆದರೆ, ಅವರು ಯಾರೂ ಮಗುವಿಗೆ ಜನ್ಮ ನೀಡಲು ಸಾಧ್ಯವಾಗಿರಲಿಲ್ಲ. ಆದರೆ, ಈಗ ಬ್ರೆಜಿಲ್​ ಮಹಿಳೆಗೆ ಮಾಡಿದ ಕಸಿ ಯಶಸ್ವಿಯಾಗಿದ್ದು ವೈದ್ಯಕೀಯ ಲೋಕದ ಮತ್ತೊಂದು ಮೈಲಿಗಲ್ಲಾಗಿದೆ.

ಮೊದಲು ಮಾಡಿದ 10 ಗರ್ಭಕೋಶ ಕಸಿ ಯಶಸ್ವಿಯಾದರು ಕೂಡ ಮಗು ಪಡೆಯಲು ಸಾಧ್ಯವಾಗಿರಲಿಲ್ಲ ಈ ಪ್ರಯತ್ನ ಬಿಡದ ವ್ಯೆದ್ಯರು ಗರ್ಭಕೋಶ ಇಲ್ಲದೆ ಜನಿಸಿರುವ ಮಹಿಳೆಗೆ ಜೋಡಣೆ ಮಾಡಿದ್ದಾರೆ. ಕಸಿ ಮಾಡಿದ ಬಳಿಕ ಅವರು ನಿಯಮಿತವಾಗಿ ಋತುಚಕ್ರ ಹೊಂದುತ್ತಿದ್ದರು. ಸ್ಕ್ಯಾನಿಂಗ್​ ಮಾಡಿದಾಗ ಎಲ್ಲವೂ ಸರಿಯಾಗಿತ್ತು. ಏಳು ತಿಂಗಳ ಬಳಿಕ ಫ್ರಾಝನ್​ ಮೊಟ್ಟೆಗಳನ್ನು ಕಸಿ ಮಾಡಲಾಗಿತ್ತು. ಅದಾದ 10 ದಿನದಲ್ಲಿ ಆಕೆ ಗರ್ಭಿಣಿಯಾಗಿದ್ದರು ನಂತರ ಮಹಿಳೆ ಗರ್ಭ ಧರಿಸಿದ್ದ 35 ವಾರಗಳಲ್ಲಿ ಮಗುವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದ್ದು 2,550 ಗ್ರಾಂ ತೂಕವಿದೆ ಎಂದು ಅಲ್ಲಿನ ವೈದ್ಯಕೀಯ ಜರ್ನಲ್​ ವರದಿ ಮಾಡಿದೆ.

ವೈದ್ಯರು ಹೇಳಿದು ಏನು?

Also read: ಇನ್ಮುಂದೆ ಕಲಬೆರಕೆ ಹಾಲಿನ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ; ಸ್ಮಾರ್ಟ್​ಫೋನ್​ನಲ್ಲೇ ಪತ್ತೆ ಹಚ್ಚಬಹುದು ಹಾಲಿನ ಕಲಬೆರಕೆಯನ್ನ…

ಬ್ರೆಜಿಲ್​ ಸಾವ್ ಪಾಲೊ ಯೂನಿವರ್ಸಿಟಿ ಆಸ್ಪತ್ರೆಯ ವೈದ್ಯ ಡನಿ ಎಝೆನ್​ಬರ್ಗ್​ ಅವರು ಈ ಕಸಿ ಶಸ್ತ್ರಚಿಕಿತ್ಸೆಯ ಪ್ರಮಖ ರೂವಾರಿಯಾಗಿದ್ದು ಮಾಹಿತಿ ನೀಡಿದ್ದಾರೆ. ಈ ಮಹಿಳೆ ಗರ್ಭಕೋಶವೇ ಇಲ್ಲದೆ ಜನಿಸಿದ್ದರು. ಈಗ 32 ವರ್ಷ ಆಗಿದ್ದು ಮಗು ಪಡೆಯಬೇಕು ಎಂಬ ಆಸೆ ಹೊಂದಿದ್ದರು. ಹಾಗಾಗಿ 2016ರ ಸೆಪ್ಟೆಂಬರ್​ನಲ್ಲಿ ಕಸಿ ಮಾಡಲಾಗಿತ್ತು. ಸ್ಟ್ರೋಕ್​ನಿಂದ ಮೃತಪಟ್ಟ 45 ವರ್ಷದ ಮಹಿಳೆಯ ಕುಟುಂಬಸ್ಥರು ಆಕೆಯ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರಿಂದ ಅವರ ಗರ್ಭಾಶಯವನ್ನೇ ಈ ಮಹಿಳೆಗೆ ಹಾಕಲಾಗಿತ್ತು ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ; ವೈದ್ಯಕೀಯ ಲೋಕದಲ್ಲಿ ಹೊಸ ಹೊಸ ಸಂಶೋಧನೆ ಮತ್ತು ಅಂಗಾಂಗ ಜೋಡಣೆಗಳು ಯಶಶ್ವಿಯಾಗುತ್ತಿದ್ದು ಸಾಯಿವ ಹಂತದಲ್ಲಿರುವ ಜನರು ಮತ್ತೆ ಜೀವ ಪಡೆಯುವಲ್ಲಿ ಯಾವುದೇ ಅನುಮಾನ ವಿಲ್ಲ ಇದಕ್ಕೆ ಸಾರ್ವಜನಿಕರು ಕೂಡ ಸಹಕಾರ ಮಾಡಬೇಕಾಗುತ್ತೆ. ಏಕೆಂದರೆ ಮೃತಪಟ್ಟ ತಮ್ಮ ಸಂಬಂಧಿಕರ ದೇಹವನ್ನು ಸುಡದೆ ಇಲ್ಲ ಮಣ್ಣುಮಾಡದೆ ದೇಹದಾನ ಮಾಡಿದರೆ ಮತ್ತೊಂದು ಜೀವಕ್ಕೆ ಆಧಾರವಾಗುತ್ತೆ. ಹಾಗೆಯೇ ವೈದ್ಯಕೀಯ ಸಂಶೋಧನೆಗೆ ಸಹಾಯಕವಾಗುತ್ತೆ.