ಇಂದು “ಸೂರ್ಯಗ್ರಹಣ” ಈ ದಿನದಂದು ಈ 5 ಕೆಲಸಗಳನ್ನು ತಪ್ಪದೆ ಮಾಡಿದರೆ ತುಂಬಾ ಒಳ್ಳೆಯದಾಗುತ್ತಂತೆ.!

0
569

Kannada News | Kannada Astrology

2019ರ ಎರಡನೇ ಸೂರ್ಯಗ್ರಹಣ ಇಂದು ಸಂಭವಿಸಲಿದ್ದು, ಇದು ಈ ವರ್ಷದ ಏಕೈಕ ಸಂಪೂರ್ಣ ಸೂರ್ಯಗ್ರಹಣವಾಗಿದೆ. ಈ ಸೂರ್ಯಗ್ರಹಣ ಭಾರತ ಹಾಗೂ ವಿಶ್ವದ ಇತರ ಅನೇಕ ಭಾಗಗಳಲ್ಲಿ ಕಾಣಿಸದು. ನ್ಯೂಜಿಲೆಂಡ್ ಕರಾವಳಿಯಲ್ಲಿ ಆರಂಭವಾಗಲಿರುವ ಗ್ರಹಣ ಪೆಸಿಫಿಕ್‌ ಸಮುದ್ರ, ಚಿಲಿ, ಅರ್ಜೆಂಟೀನಾ ಹಾಗೂ ದಕ್ಷಿಣ ಅಮೆರಿಕದಲ್ಲಿ ಮಾತ್ರ ಗೋಚರಿಸಲಿದೆ. ಚಿಲಿ ಮತ್ತು ಅರ್ಜೆಂಟೀನಾ ನೇರವಾಗಿ ಸಂಪೂರ್ಣತೆಯ ಹಾದಿಯಲ್ಲಿರಲಿದ್ದು, ಇಲ್ಲಿ ಪೂರ್ವ ಹಗಲು ಸಮಯ (ಇಡಿಟಿ) ಪ್ರಕಾರ ಮಧ್ಯಾಹ್ನ 12:55ಕ್ಕೆ ಸಂಪೂರ್ಣ ಸೂರ್ಯಗ್ರಹಣ ಆರಂಭವಾಗಲಿದೆ.

ಭಾರತೀಯ ಕಾಲಮಾನದ ಪ್ರಕಾರ ಗ್ರಹಣ ಸ್ಪರ್ಶ ಕಾಲ ಇಂದು ರಾತ್ರಿ 10.25ಕ್ಕೆ ಸಂಭವಿಸಲಿದೆ. ಸುಮಾರು 4 ನಿಮಿಷ 33 ಸೆಕೆಂಡ್‌ವರೆಗೆ ಗ್ರಹಣ ಕಾಲ ಇರಲಿದ್ದು. ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.

ವಿಜ್ಞಾನದ ಪ್ರಕಾರ ಇದು ಒಂದು ಪ್ರಕೃತಿ ವಿಸ್ಮಯವಷ್ಟೇ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಗ್ರಹಣವು ಮಾನವರ ಮೇಲೆ ಪರಿಣಾಮ ಬೀರುತ್ತದೆ. ಇದರ ಪರಿಣಾಮ ಗ್ರಹಣದ ದಿನ ಅಥವಾ ತಕ್ಷಣವೇ ಅನುಭವಕ್ಕೆ ಬರುವುದಿಲ್ಲ. ಎರಡು, ಮೂರು ತಿಂಗಳ ನಂತರ ಅನುಭವಕ್ಕೆ ಬರುವುದು. ಹಾಗಾಗಿ ಈ ಸೂರ್ಯ ಗ್ರಹಣದ ದಿನ ಯಾವ ಕೆಲಸಗಳನ್ನು ಮಾಡಿದರೆ ಒಳ್ಳೆಯದು ಎಂದು ತಿಳಿಯೋಣ ಬನ್ನಿ….

  • ಗ್ರಹಣ ಸಂಭವಿಸುವ ಮೊದಲು ಮನೆಯಲ್ಲಿರುವ ಎಲ್ಲಾ ನೀರಿನಲ್ಲೂ ದರ್ಬೆ ಕಡ್ಡಿ ಅಥವಾ ತುಳಸಿದಳ ಹಾಕಿ.
  • ಬೆಳಿಗ್ಗೆ ಎದ್ದ ಕೂಡಲೆ ಅರಿಶಿನ ಬೆರಸಿದ ನೀರಿನಿಂದ ಸ್ನಾನ‌ ಮಾಡುವುದು ಒಳ್ಳೆಯದು. ಮತ್ತು ಗ್ರಹಣ ಹಿಡಿದ ಸಮಯದಲ್ಲಿ ಯಾವುದೇ ಆಹಾರ ಸೇವಿಸಬಾರದು.
  • ಗ್ರಹಣದಂದು ಶುಭ್ರವಾಗಿ ಸ್ನಾನ ಮಾಡಿದನಂತರ ದೇವರ ಪೂಜೆ ಧ್ಯಾನ ಮಾಡಬೇಕು. ನಂತರ ಮನೆಯಲ್ಲಿ ತುಪ್ಪದ ದೀಪ ಹಚ್ಚಿ ನಿಮ್ಮ ಮನೆಯ ಸುತ್ತಲು ಪವಿತ್ರ ನೀರಿನಿಂದ ಪ್ರೊಕ್ಷಣೆ ಮಾಡಿ.
  • ಇದರ ಜೊತೆಗೆ ಇಂದು ಹಸುವಿಗೆ ಪೂಜೆ ಮಾಡಿ ಬಾಳೆಹಣ್ಣನ್ನು ತಿನ್ನಿಸಿ. ತುಳಸಿಗೆ ದೀಪ ಹಚ್ಚಿ ನಮಸ್ಕರಿಸಿ. ಅಥವಾ ನಿಮ್ಮ‌ ಹತ್ತಿರದ ಯಾವುದಾದರು ಅರಳಿಕಟ್ಟೆಗೆ ತೆರಳಿ ಮೂರು ಬಾರಿ ಪ್ರದಕ್ಷಿಣೆ ಹಾಕಿ.
  • ಸಾದ್ಯವಾದರೆ ಇಂದು ಗಣೇಶನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಹೆಸರುಕಾಳನ್ನು ಅಚಕರಿಗೆ ದಾನವಾಗಿ ನೀಡಿ ಆಶಿರ್ವಾದ ಪಡೆದುಕೊಂಡು ಬನ್ನಿ.
  • ಹೀಗೆ ಮಾಡಿದರೆ ನಿಮಗೆ ಯಾವುದೇ ತರಹದ ಗ್ರಹಣದ ಕೆಟ್ಟ ಪರಿಣಾಮಗಳು ಆಗುವುದಿಲ್ಲ‌ ಮತ್ತು ನಿಮಗೆ ಒಳಿತಾಗುತ್ತದೆ.

Also read: ಇಂದು ಸಂಪೂರ್ಣ ಸೂರ್ಯಗ್ರಹಣವಿರುವ ಕಾರಣ ಹಲವು ರಾಶಿಗಳ ಮೇಲೆ ದುಷ್ಪರಿಣಾಮ ಬೀರಲಿದೆ, ಪರಿಹಾರ ಇಲ್ಲಿದೆ ನೋಡಿ!!