ಫಿಶ್ ಕಬಾಬ್ ಹೇಗೆ ಮಾಡೋದು ಇಲ್ಲಿ ನೋಡಿ..!

0
1516

ಫಿಶ್ ನಲಿ ಹಲವು ಬಗೆಯ ಅಡುಗೆಯನ್ನು ಮಾಡಬಹುದು ಅದರಲ್ಲಿ ಈ ಪಿಶ್ ಕಬಾಬ್ ಸಹ ಒಂದು ಇನ್ನು ಈ ಫಿಶ್ ಕಬಾಬ್ ಹೇಗೆ ಮಾಡೋದು ಅಂತೀರಾ ನಾವು ಹೇಳ್ತಿವಿ ಕೇಳಿ.

ಬೇಕಾಗಿರುವ ಸಾಮಾಗ್ರಿಗಳು
ಜೀರಿಗೆ
ಕೊತ್ತಂಬರಿ
ಏಲಕ್ಕಿ
ಲವಂಗ
ದಾಲ್ಚಿನ್ನಿ
ಮೊಸರು
ಸಣ್ಣ ಸಣ್ಣದಾಗಿ ಹೆಚ್ಚಿದ ಈರುಳ್ಳಿ
ತಾಜಾ ನಿಂಬೆ ರಸ
ಮೆಣಸಿನ ಪುಡಿ
ಮೀನು,ದಪ್ಪ ಹೋಳುಗಳಾಗಿ ಅಡ್ಡಲಾಗಿ ಕತ್ತರಿಸಬೇಕು
ಆಲಿವ್ ಎಣ್ಣೆ,
ಉಪ್ಪು ಮತ್ತು ಕಾಳು ಮೆಣಸು
ಇನ್ನು ಈ ಫಿಶ್ ಕಬಾಬ್ ಮಾಡುವ ಅಥವಾ ತಯಾರಿಸುವು ವಿಧಾನ:

ಬಾಣಲೆಯಲ್ಲಿ ಮೇಲೆ ಹೇಳಿದ ಎಲ್ಲಾ ಮಸಾಲೆಗಳನ್ನು 40ರಿಂದ 60 ಸೆಕೆಂಡುಗಳವರೆಗೆ ಹುರಿದುಕೊಂಡು ಅದಾದ ನಂತರ ಅದನ್ನು ಆರಲು ಬಿಡಬೇಕು.ನಂತರ ಮೊಸರು, ಈರುಳ್ಳಿ, ನಿಂಬೆ ರಸ, ಮೆಣಸು ಮತ್ತು ಹುರಿದು

ಆರಿಸಿದ ಮಸಾಲೆಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

Image result for fish kabab

ನಂತರ ಈ ಮಿಶ್ರಣದ ಒಳಗೆ ಮೀನಿನ ತುಂಡುಗಳನ್ನು ಅದ್ದಬೇಕು. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಮೀನಿನ ತುಂಡುಗಳನ್ನು ಫ್ರೈ ಮಾಡಿಕೊಳ್ಳಬೇಕು.ಇದಕ್ಕೆ ಮೇಲಿನಿಂದ ಉಪ್ಪು ಹಾಗೂ ಕಾಳುಮೆಣಸು ಹಾಕಿಕೊಳ್ಳಬೇಕು. 2 ರಿಂದ 3 ನಿಮಿಷ ಎರಡೂ ಬದಿಯಲ್ಲಿ ಬೇಯಿಸಿಕೊಳ್ಳಬೇಕು. ನಂತರ ಬಿಸಿ ಬಿಸಿಯಾದ ಫಿಶ್ ಕಬಾಬ್ ಸವಿಯಲು ಸಿದ್ದವಾಗಿರುತ್ತದೆ.

Related image