ತಪಾಸಣೆ ವೇಳೆ ವೈದ್ಯ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ ಎಂದು ಸುಳ್ಳು ಆರೋಪ ಮಾಡಿದ್ದ 5 ಜನ ವಂಚಕರ ತಂಡ ಬಂಧನ!!

0
242

ವೈದ್ಯರ ವಿರುದ್ಧ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ ಇಡಿ ದೇಶಾದ್ಯಂತ ಪ್ರತಿಭಟನೆ ನಡೆದಿದೆ. ಆದರು ಹಣದ ಆಸೆಗೆ ವೈದ್ಯರ ಮೇಲೆ ಸುಳ್ಳು ಆರೋಪಗಳು ಕೇಳಿ ಬರುತ್ತಿವೆ. ಇಂತಹದೆ ಒಂದು ಪ್ರಕರಣ ತೆಲಂಗಾಣದಲ್ಲಿ ನಡೆದಿದ್ದು, ವೈದ್ಯರು ಮಹಿಳೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಸುಳ್ಳು ಆರೋಪದ ಮೇಲೆ ವೈದ್ಯರನ್ನು ದೋಷಾರೋಪಣೆ ಮಾಡಲು ಯತ್ನಿಸಿದ್ದ ಐವರನ್ನು ವಾರಂಗಲ್ ಪೊಲೀಸರು ಬಂಧಿಸಿದ್ದಾರೆ.

ಹೌದು ವೈದ್ಯರ ಮೇಲೆ ಸುಳ್ಳು ದೂರು ದಾಖಲಿಸಿ ಹಣ ಕಿತ್ತುಕೊಳ್ಳುತ್ತಿದ್ದ ಐವರನ್ನು ತೆಲಂಗಾಣದ ಪೊಲೀಸ್-ರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಡಿಯೋ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳು ವೈದ್ಯರ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಾದ ಬ್ಯಾಂಕ್ ಕಾಲೋನಿ ನಿವಾಸಿ ನಾಗೇಶ್ವರ ರಾವ್ ಎಂಬ ವ್ಯಕ್ತಿಯ ಮುಖ್ಯ ಆರೋಪಿಯಾಗಿದ್ದು, ವೈದ್ಯರಿಗೆ ಬ್ಲಾಕ್ ಮೇಲೆ ಮಾಡಲು ರೌತು ರಂಬಾಬು ಅವರಿಗೆ 1.30 ಲಕ್ಷ ರೂ. ನೀಡಿದ್ದಾನೆ ಇದೆಲ್ಲ ವಯಕ್ತಿಯ ದ್ವೇಷದಿಂದ ಮಾಡಿಸಿದ್ದು ಎನ್ನಲಾಗಿದೆ. ಎಸ್‌ಸಿ / ಎಸ್‌ಟಿ ಕಾಯ್ದೆಯಡಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿದರೆ 5 ಲಕ್ಷ ರೂ. ಹಣ ಸಿಗುತ್ತೆ ಎನ್ನುವ ಉದ್ದೇಶದಿಂದ ಮಾಡಿದ್ದು ಎಂದು ರಂಬಾಬು ಮತ್ತು ನೋಮುಲಾ ವೆಂಕಟೇಶ್ವರ ರಾವ್ ಇಬ್ಬರೂ ಈ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ತೆಲಂಗಾಣ ಟುಡೆ ವರದಿ ಮಾಡಿದೆ.

ಏನಿದು ಪ್ರಕರಣ?

ಜೂನ್ 12 ರಂದು ರೇವಾಜು ಸಂಧ್ಯಾ ವಾರಂಗಲ್‌ನ ಮಾಟ್ವಾಡಾದ ಬಾಲಾಜಿ ಆಸ್ಪತ್ರೆಗೆ ತೆರಳಿದ್ದು, ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಂಡಿದೆ. ಎಂದು ಆಸ್ಪತ್ರೆಗೆ ಬಂದ ಮಹಿಳೆಯನ್ನು ಡಾ. ಪಿ. ಸುಧೀರ್ ಕುಮಾರ್ ಅವರು ಇತರ ಇಬ್ಬರು ಮಹಿಳಾ ವೈದ್ಯಕೀಯ ಸಿಬ್ಬಂದಿಗಳು ಇರುವಾಗಲೇ ವೈದ್ಯರು ತಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿ ದೇಹವನ್ನು ಪರೀಕ್ಷಿಸಲು ತಿರುಗಲು ವೈದ್ಯರು ಕೇಳಿದಾಗ ಅದನ್ನೇ ಗುರಿಯಾಗಿಟ್ಟುಕೊಂಡು ಆರೋಪಿಸಿದ್ದರು. ಈ ವೇಳೆ ಡಾಕ್ಟರ್ ಪರೀಕ್ಷಿಸಲು ಹೋದಾಗ ಮಹಿಳೆಯ ಪತಿ ಬಂದು ವೈದ್ಯರ ಜೊತೆಗೆ ವಾದವನ್ನು ಮಾಡಲು ಶುರುಮಾಡಿದ್ದಾನೆ. ಹೀಗೆ ಜಗಳವಾಡುತ್ತಾ ತಮ್ಮ ಮೊಬೈಲ್-ಗಳನ್ನು ಕೂಡ ಕಡಿಯಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು. ಇದೆಲ್ಲ ಸುಳ್ಳು ಸರ್ಕಸ್ ಆಟ CCTV-ಯಲ್ಲಿ ಸೆರೆಯಾಗಿದ್ದು. ಸತ್ಯಾಂಶ ಹೊರಬಿದಿದ್ದೆ.

ಈ ಕುರಿತು ಸಂಧ್ಯಾ ಅವರು ಪೊಲೀಸರನ್ನು ಸಂಪರ್ಕಿಸಿ ವೈದ್ಯರ ವಿರುದ್ಧ ಆರೋಪಗಳನ್ನು ಮಾಡಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು. ಆಕೆಯ ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಮಹಿಳೆಯ ವಿರುದ್ಧ ದೌರ್ಜನ್ಯ ಅಥವಾ ಕ್ರಿಮಿನಲ್ ಫೋರ್ಸ್) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವೈದ್ಯರೂ ಸಹ ಸಂಧ್ಯಾ ಜೊತೆಗಿದ್ದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದರು ಆಂಧ್ರಪ್ರದೇಶದ ವೈದ್ಯಕೀಯ ರಕ್ಷಣೆಯಡಿ ಎಫ್ಐಆರ್ ದಾಖಲಿಸಿದ್ದಾರೆ ಈ ಪಿತೂರಿಯಲ್ಲಿ ಭಾಗಿಯಾಗಿರುವ ಒಟ್ಟು 11 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ಐದು ಜನರನ್ನು ಬಂಧಿಸಲಾಗಿದ್ದು, ಉಳಿದ ಆರು ಆರೋಪಿಗಳು ಪರಾರಿಯಾಗಿದ್ದಾರೆ.