ಕೇರಳ-ಕೊಡಗಿನ ಥರಾನೇ ಬೆಂಗಳೂರಂತಹ ದೊಡ್ಡ ನಗರಗಳಲ್ಲಿ ಪ್ರವಾಹವಾಗಲಿದೆಯಂತೆ, ಇದನ್ನು ಎದರಿಸುವುದಕ್ಕೆ ನಾವು ತಯಾರಾಗಿದ್ದೇವ??

0
742

ಪ್ರವಾಹದ ಸರದಿಯಲ್ಲಿ FIRST ಕೇರಳ, ಕೊಡಗು NEXT ‘ ಬೆಂಗಳೂರು, ಮಂಗಳೂರು, ಮುಂಬೈ’ ದೇಶದಲ್ಲಿ ಎಂದು ಕಾಣದ ಭೀಕರ ಜಲಪ್ರಹಾವವನ್ನು ನೋಡಿದ ಜನರಿಗೆ ಒಂದು ಯಕ್ಷಪ್ರಶ್ನೆ ಮೂಡಿತ್ತು!! ಅದುವೇ ಮುಂದಿನ ಪ್ರವಾಹದ ಪಾಳೆ ಯಾವಪ್ರದೇಶದಲ್ಲಿ? ಯಾವ ನಗರದಲ್ಲಿ? ಅಂತಹ ಮಹಾನ್ ಪ್ರಶ್ನೆಗೆ ಎರಡೇ-ಮೂರೇ ವಾಕ್ಯದಲಿ ಉತ್ತರ ಸಿಕ್ಕಿದೆ. ಅದು ಎನ್ ಅಂದ್ರೆ ಇಲ್ಲಿದೆ ನೋಡಿ.

ಜರನ ಕಾಲಿಗೆ ಮಣ್ಣುಹತ್ತ ಬಾರದು ಎಂದು ಮತ್ತು ಲಕ್ಷಾಂತರ ಹಣ ನೀಡಿ ತರುವ ವಾಹನಗಳ ಪ್ರಯಾಣಕ್ಕೆ ಸುಗಮವಾಗಲಿ ಎಂದು ಮಾಡುತ್ತಿರುವ ಕಾಂಕ್ರಿಟೀಕರಣ 2050ರ ವೇಳೆಗೆ ದೇಶದ ಕನಿಷ್ಠ ಶೇ.50ರಷ್ಟು ಪ್ರದೇಶಗಳನ್ನು ಆಕ್ರಮಿಸಲಿದೆ ಇದುವೇ ಬಹುದೊಡ್ಡ ಸಮಸ್ಯೆಯನ್ನು ಸೃಷ್ಟಿಸಲಿದೆ. ಎಂದು “ನಾಸಾ” (NDMA) ಪ್ರವಾಹದ ಎಚ್ಚರಿಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು (KSNDMC) ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರಗಳು ಮುನ್ಸೂಚನೆ ನೀಡಿವೆ. ಇದಕ್ಕೆ ಪ್ರಮುಖ್ಯ ಕಾರಣ ಮಾನವನ ದುರಾಸೆಯೇ ದುಃಖಕ್ಕೆ ಮೂಲವಾಗಳಿದೆ ಎಂದು ಪ್ರವಾಹದ ಎಚ್ಚರಿಕೆ ನೀಡಿದೆ.

ಹೌದು ಮಹಾನಗರಗಳಲ್ಲಿ ಒಂದಾದ ಸಿಲಿಕಾನ್​ ಸಿಟಿ, ಉದ್ಯಾನ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ಬೆಂಗಳೂರು ಸೇಫ್​ ಅಂದುಕೊಂಡಿದ್ದವರಿಗೆ ಅಪಾಯ ಕಾದಿದೆ ಎಂಬ ಕಹಿ ಸತ್ಯ ಹೊರಬಿದ್ದಿದೆ, ಸೆಪ್ಟೆಂಬರ್​ ತಿಂಗಳಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ. ಈ ಬಾರಿಯ ಮಾನ್ಸೂನ್​ನಲ್ಲಿ ಬೆಂಗಳೂರಿನಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಶೇ.30 ರಷ್ಟು ಕಡಿಮೆ ಮಳೆ ಸುರಿದಿದೆ. ಕಳೆದ ವರ್ಷ ಮಾನ್ಸೂನ್​ನಲ್ಲಿ ಇದೇ ಸ್ಥಿತಿ ಇತ್ತು. ಮುಂದಿನ ಎರಡು ತಿಂಗಳಲ್ಲಿ ಸಾಮಾನ್ಯ ನಿರೀಕ್ಷೆಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರು ಸೇಫ್​ ಸಿಟಿ ಅಂತ ಹೇಳಲು ಸಾಧ್ಯವಿಲ್ಲ ಎಂದು KSNDMC ನಿರ್ದೇಶಕ ಶ್ರೀನಿವಾಸ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದಕೆಲ್ಲ ಕಾರಣ ಆಧುನೀಕರಣ, ಕೈಗಾರೀಕರಣ ಮತ್ತು ಜಾಗತೀಕರಣದ ಹೆಸರಿನಲ್ಲಿ ಮಾನವ ದುರಾಸೆಯಿಂದ ಪ್ರಕೃತಿ ನಾಶಕ್ಕೆ ಮುಂದಾಗಿದ್ದಾನೆ. ನಗರದಲ್ಲಿ ಅವ್ಯವಸ್ಥಿತ ರಸ್ತೆಗಳು ಮತ್ತು ಒಳಚರಂಡಿ ವ್ಯವಸ್ಥೆಗಳೇ ಇಲ್ಲಿನ ಕೃತಕ ಪ್ರವಾಹ ಪರಿಸ್ಥಿತಿಗೆ ಮೂಲ ಕಾರಣ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ತ್ಯಾಜ್ಯಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸದೆ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ತ್ಯಾಜ್ಯವೆಲ್ಲವೂ ಮಳೆಯಲ್ಲಿ ಚರಂಡಿ ಸೇರಿ ಪ್ರವಾಹಕ್ಕೆ ಕಾರಣವಾಗುತ್ತಿದೆ.

ಈಗಾಗಲೇ ಜಾಗತಿಕ ತಾಪಮಾನ ಅಧಿಕವಾಗಿ ಹಿಮ ಕರಗುತ್ತಿರುವುದರಿಂದ ಸಮುದ್ರದ ನೀರಿನ ಮಟ್ಟ ಏರಿಕೆಯಾಗುತ್ತದೆ. ಇದರಿಂದ ಸಮುದ್ರದ ದಡದಲ್ಲಿರುವ ಮಂಗಳೂರು, ಮುಂಬೈ ನಗರಗಳಿಗೆ ಅಪಾಯ ಇದೆ ಎಂದು ನಾಸಾ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಅಲ್ಲದೆ ಮುಂದಿನ ಒಂದು ಶತಮಾನದಲ್ಲಿ ಮಂಗಳೂರಿನ ಸಮುದ್ರ ಮಟ್ಟ 15.98 ಸೆ.ಮೀ. ಏರಿಕೆಯಾಗಲಿದೆ. ಹಾಗೆಯೇ ಅಂಡಮಾನ್ ಮತ್ತು ನಿಕೋಬಾರ್‌ಗಳು ಹಿಮ ಕರಗುವಿಕೆಯಿಂದಾಗಿ ಸಂಪೂರ್ಣ ಮುಳುಗಡೆಯಾಗಲಿವೆ ಎಂದು ವಿಶ್ವಬ್ಯಾಂಕ್ ಕಳೆದ ವರ್ಷ ಹೇಳಿತ್ತು. ಆರ್ಥಿಕ ಸಹಕಾರ ಸಂಸ್ಥೆಯೊಂದು ನಡೆಸಿದ ಅಧ್ಯಯನದಲ್ಲಿ ಮುಂಬೈ ಮತ್ತು ಕೊಲ್ಕತ್ತಾ ನಗರಗಳು 2070ರ ವೇಳೆಗೆ ಸಂಪೂರ್ಣ ಮುಳುಗಡೆಯಾಗಲಿವೆ ಎಂದು ಹೇಳಲಾಗಿದೆ.