ರಕ್ಷಣೆಗಾಗಿ ಚಿಕ್ಕ ಮಹಡಿಯ ಮೇಲೆ Helicopter -ಅನ್ನು ನಿಲ್ಲಿಸಿದ ಬಗೆ ಕೇಳಿ, ಮೈ ಜುಮ್ ಅನ್ನುತ್ತೆ!!

0
569

ಕೇರಳ ಜಲಪ್ರಳಯ ಎಷ್ಟು ಭೀಕರವಾಗಿತ್ತು ಎಂಬುದು ಪ್ರಪಚಕ್ಕೆ ತಿಳಿದಿರುವ ವಿಷಯ ಈ ಪ್ರವಾಹದಲ್ಲಿ ಸಿಲುಕಿದ ಚಾಲಕುಡಿ ಪಟ್ಟಣದ 26 ಜನರನ್ನು ಸಿನಿಮಯ ರೀತಿಯಲ್ಲಿ “ಲೈಟ್‌ ಆನ್‌ ವೀಲ್‌” ಪ್ರಯೋಗದ ಮೂಲಕ ರಕ್ಷಿಸಿದ Helicopter ಪೈಲೆಟ್ ಸಾಹಸ ಕೇಳಿದ್ರೆ ಪ್ರಾಣವೇ ಕೈಯಲ್ಲಿ ಬರುತ್ತೆ.

ಕೇರಳದ ಸಂಭವಿಸಿದ ಮಹಾಜಲಪ್ರಳದಲ್ಲಿ ಇಡಿ ಕೇರಳವೆ ನೀರಿನಲ್ಲಿ ಮುಳುಗಿ ಸೇತುವೆಗಳು ಮನೆ, ಬೆಟ್ಟ, ರಸ್ತೆ ಕುಸಿದು ಸಾವಿರಾರು ಜನರು ನೀರಿನಲ್ಲಿದರು ಇವರೆಲ್ಲರನ್ನು ರಕ್ಷಿಸುವುದು ಅಷ್ಟು ಸುಲಭದ ಕೆಲಸವೇನಲ್ಲ ಇಂತಹ ರಕ್ಷಣಾ ಕಾರ್ಯದಲ್ಲಿ ಜೀವನವನ್ನೇ ಒತ್ತೆ ಇಟ್ಟು NDRF, ನೌಕಾಪಡೆ, ಕೋಸ್ಟ್ ಗಾರ್ಡ್, CRPF,BSF, ವಾಯುಪಡೆ, ಹೀಗೆ ಹಲವಾರು ಪಡೆಗಳು ರಕ್ಷಣೆಗೆ ಬಂದು ತಮ್ಮ ಜೀವವನ್ನೇ ಲೆಕ್ಕಿಸದೆ ಹಲವಾರು ರೀತಿಯಲ್ಲಿ ಸಾಹಸಮಾಡಿ ಅಪಾಯದ ಅಂಚಿನಲ್ಲಿ ಸಿಲುಕಿಸಿದವರನ್ನು ರಕ್ಷಿಸಿದ್ದಾರೆ. ಈ ಅಂಚಿನಲ್ಲಿ ಪಿಝಾಲಾ ದ್ವೀಪ, ಎಡಪಲ್ಲಿ, ಪೆರಂಬೂರ್‌, ಅಲುವಾ, ಚೆಂಗನ್ನೂರು ಹಾಗೂ ಕಡಂಗಲ್ಲೂರ್‌ ಪ್ರದೇಶಗಳು ಹೆಚ್ಚು ಅಪಾಯದಲ್ಲಿದವು ಮತ್ತು ಮನೆಗಳು ಕೂಡ ನೀರಿನಲ್ಲಿ ಮುಳಿಗಿದ್ದವು. ಈ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ರಕ್ಷಣಾ ಪಡೆ ನೆರೆ ಸ್ಥಳಗಳಿಗೆ ತಲುಪುವುದೇ ದುಸ್ಥರವಾಗಿತ್ತು ಮನೆಯಿಂದ ಹೊರಬರಲಾರದೆ ಸಿಲುಕಿರುವ ಜನರು ಆಹಾರ ಪದಾರ್ಥಗಳ ನಿರೀಕ್ಷೆಯಲ್ಲಿ ಮುಗಿಲಿಗೆ ಮೊರೆಯಿಡುತ್ತಿದ್ದರು, ಪೊಲೀಸರು ಹಾಗೂ ರಕ್ಷಣಾ ತಂಡದ ವಾಹನಗಳು ಕೆಸರಿನಲ್ಲಿ ಸಿಲುಕಿದವು.

ಇದೇ ಸಮಯದಲ್ಲಿ ಚಾಲಕುಡಿ ಪಟ್ಟಣದ 26 ಜನರು ಒಂದೇ ಮನೆಯಲ್ಲಿ ಸಿಲುಕಿಕೊಂಡಿದರು ಇವರನ್ನು ಹೊರತರುವುದು ಬಹಳ ಕಷ್ಟಕರವಾಗಿತ್ತು ಏಕೆಂದರೆ ಮನೆಯ ಮೇಲ್ಚಾವಣಿಯ ಮೇಲೆ ಹೆಲಿಕಾಪ್ಟರ್‌ ಇಳಿಸಿ “ಲೈಟ್‌ ಆನ್‌ ವೀಲ್‌” ರೀತಿಯಲ್ಲಿ ಸಂತ್ರಸ್ತರನ್ನು ರಕ್ಷಿಸಿವುದು ಅಪಾಯಕರವಾಗಿತ್ತು. ಮನೆಯ ಮೇಲ್ಚಾವಣಿಯ ಮೇಲೆ ಹೆಲಿಕಾಪ್ಟರ್‌ ಇಳಿಸಿ ಸಂತ್ರಸ್ತರನ್ನು ರಕ್ಷಿಸುವಾಗ ಸಣ್ಣ ತಪ್ಪಾಗಿದ್ದರೂ ಮೂರು ಸೆಕೆಂಡ್‌ಗಳಲ್ಲಿ ಹೆಲಿಕಾಪ್ಟರ್‌ ಪುಡಿಪುಡಿಯಾಗುತ್ತಿತ್ತು.

ಈ ಉಪಾಯ ಬಿಟ್ರೆ ಬೇರೆ ದಾರಿನೆ ಇರಲಿಲ್ಲವಾಗಿತ್ತು ಇದಕ್ಕೆ ಹೆದರದ ಪೈಲಟ್‌ ಹೆಲಿಕಾಪ್ಟರ್‌ ಮನೆಯ ಟೆರೇಸ್‌ ಮೇಲೆ ಇಳಿಸುವ ನಿರ್ಧಾರ ಕೈಗೊಂಡು ಮನೆಯ ಮೇಲೆ ಸಂಪೂರ್ಣ ಭಾರ ಹಾಕದೇ ಬಹುತೇಕ ಭಾರ ಗಾಳಿಯಲ್ಲಿ ಇರುವಂತೆ ನೋಡಿಕೊಂಡು ನಾಲ್ವರನ್ನು ಹಗ್ಗದ ಮೂಲಕ ಹೆಲಿಕಾಪ್ಟರ್‌ಗೆ ಹತ್ತಿಸಿಕೊಂಡ ಬಳಿಕ ಉಳಿದ 22 ಮಂದಿಯನ್ನು ಹತ್ತಿಸುವುದು ಸವಾಲಿನ ವಿಷಯವಾಗಿತ್ತು. ಹೆಲಿಕಾಪ್ಟರ್‌ ಸಿಬ್ಬಂದಿ ಕೆಳಗಿಳಿದು ಎಲ್ಲರನ್ನೂ ಹೆಲಿಕಾಪ್ಟರ್‌ಗೆ ಹತ್ತಿಸಿದರು ಸಿಬ್ಬಂದಿಯ ಸಹಕಾರ ಇಲ್ಲದೇ ಇದ್ದಿದ್ದರೆ ಇದು ಸಾಧ್ಯವಾಗುತ್ತಲೇ ಇರಲಿಲ್ಲ ಈ ಸಾಹಸವನ್ನು ಸಹ ಪೈಲಟ್‌ ಲೆ.ರಜನೀಶ್‌, ನಾವಿಕ ಲೆ. ಸತ್ಯಾಥ್‌, ಹಗ್ಗದ ಮೂಲಕ ಮೇಲೆ ಎತ್ತುವ ಸಿಬ್ಬಂದಿ ಅಜಿತ್‌, ಮತ್ತು ಡೈವರ್‌ ರಾಜನ್‌ ಅವರ ಇಂತಹ ರಕ್ಷಣೆ ಮಾಡಿದ್ದಾರೆ ಇವರೆಲ್ಲರ ದೈರ್ಯವೆ ರಕ್ಷಣೆಗೆ ಸಾಧ್ಯವಾಯಿತು. ಒಂದು ವೇಳೆ ಸ್ವಲ್ಪವೇ ಹೆಚ್ಚು ಕಡಿಮೆಯಾಗಿದ್ದರೂ ಮೂರು ಸೆಕೆಂಡ್‌ಗಳಲ್ಲಿ ಹೆಲಿಕಾಪ್ಟರ್‌ ಪುಡಿ ಪುಡಿಯಾಗುತ್ತಿತ್ತು ಈ  ಸಾಹಸ ಮಾಡಲು ನಿರ್ಧಾರ ಕೈಗೊಂಡಿದ್ದಕ್ಕೆ ನನಗೆ ಹೆಮ್ಮೆ ಇದೆ’ ಎಂದು ಪೈಲಟ್‌ ಹೇಳಿದ್ದಾರೆ. ಇಂತಹ ಸಾಹಸಕ್ಕೆ ತಾಂತ್ರಿಕವಾಗಿ ‘ಲೈಟ್‌ ಆನ್‌ ವೀಲ್‌’ ಎಂದು ಕರೆಯಲಾಗುತ್ತದೆ ಎಂದು “ಕಮಾಂಡರ್‌ ಅಭಿಜಿತ್‌ ಗರುಡ್‌” ವಿವರಿಸಿದ್ದಾರೆ.