ಪ್ರವಾಹ ಸಂತ್ರಸ್ತರು ಯಾವುದೇ ದಾಖಲೆಗಳಿಲ್ಲದೆ ಜೀವ ವಿಮೆ, ವಾಹನ ವಿಮೆ ಮತ್ತು ಗೃಹ ವಿಮೆಯ ಕ್ಲೇಮ್ ಮಾಡಿಕೊಳ್ಳಬಹುದು ಹೇಗೆ ಅಂತ ಇಲ್ಲಿದೆ ನೋಡಿ..

0
420

ರಾಜ್ಯದಲ್ಲಿ ಸಂಭವಿಸಿದ ಪ್ರವಾಹದಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಹಣ, ಮನೆ, ಬೆಳೆ ಎಲ್ಲವೂ ನೀರಲ್ಲಿ ಮುಳುಗಿದ್ದು, ಇದರ ಜೊತೆಗೆ ಬೈಕ್, ಕಾರ್, ಸೇರಿದಂತೆ ರೈತರ ಹಲವು ವಾಹನಗಳು ನೀರಿನಲ್ಲಿ ಹಾಳಾಗಿದ್ದು. ಜನರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು ಕೊನೆಗೆ ಪ್ರಾಣವಾದರೂ ಉಳಿದ್ದಿದೆ ಎಂದು ಆತಂಕದಲ್ಲಿ ಜೀವನ ನಡೆಸುತಿರುವ ಜನರಿಗೆ ತಾವು ಮಾಡಿಸಿದ ಯಾವುದೇ ವಿಮೆಯನ್ನು ದಾಖಲೆಗಳು ಇಲ್ಲದೆ ಪಡೆದುಕೊಳ್ಳಬಹುದು, ಇದರಲ್ಲಿ ಆಸ್ತಿ, ವಾಹನ ಅರೋಗ್ಯ ಮತ್ತು ಗೃಹ ವಿಮೆಯ ಕ್ಲೇಮ್ ಪಡೆದುಕೊಳ್ಳುಬಹುದು ಹೇಗೆ ಅಂತ ಮಾಹಿತಿ ಇಲ್ಲಿದೆ ನೋಡಿ.

Also read: ಮತ್ತೆ ಕರ್ನಾಟಕಕ್ಕೆ ಜಲ ಪ್ರಳಯ; ಜಗತ್ತು ಕಂಡರಿಯದ ವಾಯು ಆಘಾತ; ಕರುನಾಡಿಗೆ ಭೀತಿ ಹುಟ್ಟಿಸಿದ ಕೋಡಿ ಮಠದ ಶ್ರೀಗಳ ಭವಿಷ್ಯ!!

ದಾಖಲೆಯಿಲ್ಲದೆ ಸಂತ್ರಸ್ತರಿಗೆ ವಿಮೆ?

ಹೌದು ಪ್ರವಾಹ ಪರಿಸ್ಥಿತಿಯಿಂದ ಪ್ರಾಣ ಹಾನಿಯ ಜತೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿಗೂ ನಷ್ಟ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಜೀವ ವಿಮೆ, ವಾಹನ ವಿಮೆ ಮತ್ತು ಗೃಹ ವಿಮೆಯ ಕ್ಲೇಮ್ ಮಾಡಿಕೊಳ್ಳಬಹುದು, ಇಂತಹ ಸಮಯದಲ್ಲಿ ನೀವು ಮಾಡಿಸಿಕೊಂಡಿರುವ ಜೀವ ವಿಮೆ ಕುರಿತು ಕೊಂಚ ಯೋಚಿಸುವುದು ಅವಶ್ಯಕವಾಗಿದೆ. ನಿಮ್ಮ ಬಳಿ ವಿಮೆ ಮಾಡಿಸಿದ ದಾಖಲೆಗಳು ಇಲ್ಲ ಎಂದರೂ ಪರವಾಗಿಲ್ಲ. ನೀವು ಅದನ್ನು ಪಡೆಯಲು ಅರ್ಹರಾಗಿರುತ್ತೀರಿ. ಇದಕ್ಕಾಗಿಯೇ ಐಆರ್​ಡಿಎ (ಭಾರತೀಯ ವಿಮಾನ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ) ವಿಮಾ ಕಂಪನಿಗಳಿಗೆ ಸೂಚನೆ ನೀಡಿದೆ. ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ ವಿಮಾ ಹಣವನ್ನು ನೀಡುವಂತೆ ಮಾರ್ಗದರ್ಶನ ನೀಡಿದೆ.

ಇನ್ಶುರೆನ್ಸ್ ಕಂಪನಿಗೆ ಮಾಹಿತಿ ನೀಡಿ

Also read: ಪ್ರವಾಹದಿಂದ ಪಾರು ಮಾಡಿ ಜೀವ ಉಳಿಸಿದ ವೀರಯೋಧರಿಗೆ ರಾಖಿ ಕಟ್ಟಿ ಕಣ್ಣೀರಿನ ವಿದಾಯ ಹೇಳಿದ ಸಂತ್ರಸ್ತರು.!

ಜೀವ ವಿಮೆ, ವಾಹನ ವಿಮೆ ಅಥವಾ ಗೃಹ ವಿಮೆ ಸೇರಿದಂತೆ ಇನ್ಯಾವುದೇ ವಿಮೆಯ ಕ್ಲೇಮ್ ಪಡೆಯಬೇಕಾದರೆ ಮೊದಲು ಇನ್ಶುರೆನ್ಸ್ ಕಂಪನಿಗೆ ಮಾಹಿತಿ ಮುಟ್ಟಿಸಿ. ಅಸಲಿ ದಾಖಲೆಗಳಿಲ್ಲ ಎನ್ನುವ ಕಾರಣಕ್ಕೆ ವಿಳಂಬ ಮಾಡಬೇಡಿ. ಇ-ಮೇಲ್ ಮೂಲಕ , ಪೋಸ್ಟ್ ಮೂಲಕ, ನಿಮ್ಮ ಇನ್ಶುರೆನ್ಸ್ ಏಜೆಂಟ್ ಮೂಲಕ ಅಥವಾ ಇನ್ಶುರೆನ್ಸ್ ಕಂಪನಿಯ ಟೋಲ್ ಫ್ರೀ ನಂಬರ್ ಬಳಸಿಕೊಂಡು ವಿಮೆ ಕಂಪನಿಗೆ ನಿಮಗಾಗಿರುವ ನಷ್ಟದ ಬಗ್ಗೆ ವಿಷಯ ಮುಟ್ಟಿಸಿ. ಅಸಲಿ ದಾಖಲೆಗಳು ಪ್ರವಾಹದ ಪರಿಸ್ಥಿತಿಯಿಂದ ಕಳೆದುಹೋಗಿದ್ದ ಪಕ್ಷದಲ್ಲಿ
ಇನ್ಶುರೆನ್ಸ್ ಕಂಪನಿಗೆ ಈ ಬಗ್ಗೆ ತಿಳಿಸಿ.

ಇದಕ್ಕಾಗಿ ಅನೇಕ ಮಾರ್ಗದರ್ಶಿ ಸೂಚಕ ನೀಡಿರುವ ಐಆರ್​ಡಿಎ, ಪ್ರವಾಹಕ್ಕೆ ಒಳಗಾಗಿರುವ ವಿಮೆದಾರರನ್ನು ಹುಡುಕಿ ಅವರಿಗೆ ಹಣ ನೀಡಲು ನೋಡಲ್​ ಅಧಿಕಾರಿಗಳನ್ನು ನೇಮಕ ಮಾಡಿ, ಕಾರ್ಯ ಚುರುಕುಗೊಳಿಸುವಂತೆ ಸೂಚನೆ ನೀಡಿದೆ. ಇನ್ನು ಪ್ರವಾಹಕ್ಕೆ ಒಳಗಾದವರಿಗೆ ಈ ಸಂದರ್ಭದಲ್ಲಿ ವಿಮೆ ಪಾಲಿಸಿ ಬಗ್ಗೆ ನೆನಪಾಗುವುದಿಲ್ಲ. ಈ ಬಗ್ಗೆ ಅವರಿಗೆ ಜಾಗೃತಿ ಮೂಡಿಸಿ, ವಾಹನ, ಜೀವ, ಆಸ್ತಿ ಕುರಿತು ಕ್ಲೈಮ್​ ಮಾಡುವಂತೆ ತಿಳಿಸಬೇಕು ಎಂದಿದ್ದಾರೆ. insurance ಐಆರ್​ಡಿಎ ಜಾರಿಗೆ ತಂದಿರುವ ಮಾರ್ಗದರ್ಶಿ ಸೂಚನಾ ಕೇವಲ ಆಸ್ತಿ ಬಗ್ಗೆ ಮಾತ್ರವಲ್ಲದೇ ಆರೋಗ್ಯ ವಿಮೆ ಕ್ಲೈಮ್​ ಮಾಡುವಲ್ಲಿಯೂ ಅವರು ಅರ್ಹರಿದ್ದು, ಈ ಬಗ್ಗೆ ಸಲಹೆ ನೀಡಬೇಕು ಎಂದು ಸೂಚಿಸಿದೆ.

Also read: ಪ್ರವಾಹದಲ್ಲಿರುವ ಉತ್ತರ ಕರ್ನಾಟಕ ಸಂತ್ರಸ್ತರ ನೆರವಿಗೆ ನಿಂತ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ. ಸುಧಾ ಮೂರ್ತಿ, ನಟ ಯಶ್!!

ಸಂತ್ರಸ್ತರು ವಿಮೆ ಪಡೆಯಲು ಏನು ಮಾಡಬೇಕು?

1. ವಿಮೆದಾರರು ದಾಖಲೆ ಇಲ್ಲವಾದರೂ, ಅವರಿಗೆ ಯಾವ ಏಜೆಂಟ್​ ಯಾರೆಂದರೂ ಗೊತ್ತಿಲ್ಲದಿದ್ದರೂ ಪರವಾಗಿಲ್ಲ. ಕಂಪನಿಗೆ ಮಾಹಿತಿ ಮುಟ್ಟಿಸುವುದು ಅಗತ್ಯ.
2. ವಿಮೆ ಹೊಂದಿರುವ ವ್ಯಕ್ತಿಯ ಗುರುತಿನ ಚೀಟಿ, ಮಾಹಿತಿ, ಆಸ್ಪತ್ರೆಯ ಬಿಲ್​ಗಳನ್ನು ವಿಮಾ ಕಂಪನಿಗಳಿಗೆ ನೀಡಬೇಕು.
3. ಆಸ್ತಿ ಹಾಗೂ ಮನೆ ಹಾನಿ ಕುರಿತು ಮೊದಲು ಕಂಪನಿಗಳಿಗೆ ಸುದ್ದಿ ಮುಟ್ಟಿಸಿ.
4. ವಿಮಾದಾರರ ಪ್ಯಾನ್​ ಕಾರ್ಡ್​​, ವಿಳಾಸದ ಗುರುತು, ವಯಸ್ಸಿನ ಮಾಹಿತಿಯನ್ನು ವಿಮಾ ನೋಡಲ್​ ಅಧಿಕಾರಿಗಳಿಗೆ ತಿಳಿಸಿದರೆ ಸಾಕು. ಅವರೇ ಮುಂದಿನ ಪ್ರಕ್ರಿಯೆಯನ್ನು ಮುಂದುವರೆಸುತ್ತಾರೆ.