ಕೇವಲ ಒಂದು ವಾರದ ಮಳೆಗೆ ಕರ್ನಾಟಕ-ಕೇರಳ ಅಲ್ಲೋಲ ಕಲ್ಲೋಲ, ಪಶ್ಚಿಮ ಘಟ್ಟದ ಕಾಡು ಕಡೆದಕ್ಕೆ ಈ ಪ್ರವಾಹ ಉಂಟಾಯಿತೇ??

0
495

ಚಂದದನಾಡು ಶೀಗಂದದ ಬೀಡು ನೂರಾರು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಕರ್ನಾಟಕದ ಮೇಲೆ ಅದು ಯಾವಕಣ್ಣು ಬಿತ್ತೋ ಗೊತ್ತಿಲ್ಲ ಕಳೆದ ಒಂದು ವಾರದಿಂದ ಮೇಲೆನಾಡು ಪ್ರದೇಶದಲ್ಲಿ ಜಲ ಪ್ರಳಯಕ್ಕೆ ಸಿಕ್ಕು ರಾಜ್ಯವೆ ಮುಳುಗುವ ಸ್ಥಿತಿಯಲ್ಲಿದೆ. ಕಾಡು ಕಡೆದಕ್ಕೆ ಇಷ್ಟೊಂದು ದೊಡ್ಡ ಪ್ರಾಮಾಣದಲ್ಲಿ ಹಾನಿಯಾಗಿರುವುದು ದೊಡ್ಡ ಕಾರಣ ಇರಬಹುದೇ?? ಹಾಸನ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ, ಮಳೆಯ ರಭಸಕ್ಕೆ ಎಡಕುಮೇರಿಯಲ್ಲಿ ರೈಲ್ವೆ ಸೇತುವೆಗಳು ಕೊಚ್ಚಿ ಹೋಗಿದೆ.

ಬೆಂಗಳೂರು ಮಂಗಳೂರು ರೈಲು ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ 50 ಕಡೆ ಗುಡ್ಡ ಕುಸಿದಿದೆ. ರೈಲ್ವೇ ಹಳಿ ಮೇಲೆ ಭಾರಿ ಪ್ರಮಾಣದ ಗುಡ್ಡಗಳು ಕುಸಿಯುತ್ತಿವೆ ಈ ಹಿನ್ನೆಲೆ, ರೈಲ್ವೇ ಹಳಿ ಮೇಲೆ ಭಾರಿ ಪ್ರಮಾಣದ ಗುಡ್ಡಗಳು ಕುಸಿಯುತ್ತಿವೆ. ಸುಮಾರು 50 ಕಡೆ ಗುಡ್ಡ ಕುಸಿದಿದ್ದು, ಮಣ್ಣು, ಬಂಡೆ ತೆರವುಗೊಳಿಸಲು ರೈಲ್ವೇ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೆ ಗುಡ್ಡ ಕುಸಿದಿದೆ. ಸುಮಾರು 10 ರಿಂದ 15 ಜೆಸಿಬಿ, ಹಿಟ್ಯಾಚಿಗಳು ಸಹ ಮಣ್ಣು ತೆರವಿನಲ್ಲಿ ಭಾಗಿಯಾಗಿವೆ. ನಿರಂತರ ಮಳೆಯಿಂದಾಗಿ ರೈಲ್ವೇ ಹಳಿಗಳು ಸಡಿಲಗೊಂಡಿವೆ. ಮಳೆ ಸುರಿಯುತ್ತಿರುವ ಹಿನ್ನೆಲೆ ತೆರವು ಕಾರ್ಯಾಚರಣೆ ಮಂದಗತಿಯಲ್ಲಿ ಸಾಗುತ್ತಿದೆ.

ಚಿಕ್ಕಮಗಳೂರಲ್ಲಿ ಮಳೆ ಪ್ರಳಯ: ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು ಕೊಪ್ಪ ತಾಲೂಕಿನ ಹೇರೂರು, ಮೇಗೂರು, ಅಂಬಳೆ ಗ್ರಾಮದಲ್ಲಿ 3 ಮನೆಗಳು ಕುಸಿದು ಬಿದ್ದಿವೆ. ದಟ್ಟ ಮಂಜು, ತುಂತುರು ಮಳೆಯಿಂದ ಚಾರ್ಮಾಡಿ ಘಾಟ್ನಲ್ಲಿ ಗಂಟೆಗಟ್ಟಲೇ ಟ್ರಾಫಿಕ್‌ ಜಾಮ್‌ ಆಗಿತ್ತು. ಶೃಂಗೇರಿಯಲ್ಲಿ ತುಂಗಾ ನದಿ ಪ್ರವಾಹದಿಂದ 2 ದಿನಗಳಿಂದ ಶೌಚಾಲಯದಲ್ಲಿ ಸಿಲುಕಿದ್ದ ವ್ಯಕ್ತಿಯನ್ನ ರಕ್ಷಣೆ ಮಾಡಲಾಗಿದೆ.

ಮಡಿಕೇರಿ ಮುತ್ತಪ್ಪ ದೇವಸ್ಥಾನ ಬಳಿಯಲ್ಲಿ ಭೂಕುಸಿತಗೊಂಡು ಮನೆ ನೆಲಕಚ್ಚಿದೆ. ಕಾಟಕೇರಿ ಗ್ರಾಮದಲ್ಲಿ ಭೂಕುಸಿತಗೊಂಡಿದ್ದು, ಯಶವಂತ್, ವೆಂಕಟರಮಣ, ಪವನ್ ಮೃತಪಟ್ಟಿದ್ದಾರೆ. ಒಬ್ಬರು ಗಾಯಗೊಂಡಿದ್ದಾರೆ. ಪುತ್ತೂರು ತಾಲೂಕಿನ ಶಿರಾಡಿ, ಗುಂಡ್ಯ ಭಾಗದಲ್ಲಿ ಹೆದ್ದಾರಿ ಮುಂಜಾನೆಯಿಂದಲೇ ಜಲಾವೃತಗೊಂಡಿದೆ. ರಸ್ತೆ ಬಿರುಕು ಬಿಟ್ಟು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕೊಪ್ಪ ತಾಲೂಕಿನ ಗುಡ್ಡೆತೋಟದ ರಸ್ತೆಯಲ್ಲಿ ನಾಲ್ಕು ಗ್ರಾಮಗಳಿಗೆ ಸಂಚಾರ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಭೂ ಕುಸಿತಗೊಂಡು ರಸ್ತೆ ಬಿರುಕು ಬಿಟ್ಟ ಪರಿಣಾಮ ರಸ್ತೆ ಮಾರ್ಗವಿಲ್ಲದೆ ನೂರಾರು ಗ್ರಾಮದ ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಮಡಿಕೇರಿಯಲ್ಲಿ ಮಳೆಯ ಪ್ರವಾಹ ಗುಡ್ಡಕುಶಿದಿದೆ, ಅದರಡಿ ಇರುವ ಕಟ್ಟಡಗಳೆಲ್ಲಾ ಹಪ್ಪಳದಂತೆ ಅಪ್ಪಚ್ಚಿಯಾಗುತ್ತಿವೆ. ಧಾರಾಕಾರವಾಗಿ ಸುರಿತಿರೋ ಮಳೆ ಎಲ್ಲೆಂದರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಇತ್ತ ಭೋರ್ಗರೆಯುತ್ತಾ ಉಕ್ಕಿ ಹರೀತಿರೋ ನದಿ ನೀರು ಮನೆ, ಮಠ, ತೋಟ, ರಸ್ತೆಗೆಲ್ಲಾ ನುಗ್ಗಿ ಭಯಾನಕ ಪ್ರವಾಹವನ್ನೇ ಸೃಷ್ಟಿಸಿದೆ.

ಜಲಾಶಯ ಭರ್ತಿಯಾಗಿ ಹೊರಹರಿವು ಹಿನ್ನೆಲೆಯಲ್ಲಿ ಶಿವಮೊಗ್ಗ, ಹಾಸನ, ಮೈಸೂರು ಭಾಗದಲ್ಲಿ ರೈತರ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಈ ಬಗ್ಗೆ ವರದಿ ಕೇಳಲಾಗಿದೆ. ಕೊಡಗಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಕಳೆದ ಮೂರು ದಿನಗಳಿಂದ ಕೇಂದ್ರ ಹಾಗೂ ರಾಜ್ಯದ ರಕ್ಷಣಾ ತಂಡಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಕೊಡಗಿನಲ್ಲಿ 50 ಜೆಸಿಬಿ, ಸಾವಿರಕ್ಕಿಂತಲೂ ಹೆಚ್ಚು ರಕ್ಷಣಾ ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. 2,500 ಹೆಚ್ಚು ಜನರನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ. ಜೋಡಪಾಲ ಗ್ರಾಮದಲ್ಲಿ ಭೂಕುಸಿತ ಆಗಿದೆ, ಅಲ್ಲಿ 347 ಜನರನ್ನು ರಕ್ಷಣೆ ಮಾಡಲಾಗಿದೆ,

ಕೊಡಗಿನಲ್ಲಿ 11,427 ಮನೆ ಹಾನಿ,  6 ಜನ ಮೃತ, 723 ಜಾನುವಾರು ಮೃತ

ಶಿರಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ
ಮಂಗಳೂರು-ಬೆಂಗಳೂರು ಸಂಪರ್ಕದ ಶಿರಾಡಿ ಘಾಟ್ ರಸ್ತೆಯಲ್ಲಿ ಕಳೆದ ಹಲವು ದಿನಗಳಿಂದ ಗುಡ್ಡ ಕುಸಿಯುತ್ತಲೇ ಇದೆ‌. ಸಕಲೇಶಪುರ ಭಾಗದಿಂದ ಶಿರಾಡಿ ವರೆಗೂ ರಸ್ತೆ ಉದ್ದಕ್ಕೂ ಮಣ್ಣು ಕುಸಿಯುತ್ತಿದ್ದು ಭಾರವಾದ ವಾಹನಗಳು ಮಣ್ಣಿನಡಿಗೆ ಬೀಳುತ್ತಿದೆ. ಭಾರವಾದ ಟ್ಯಾಂಕರ್ ಲಾರಿ ಸಾಗುತ್ತಿದ್ದಂತೆ ಮೇಲ್ಭಾಗದಿಂದ ಗುಡ್ಡ ಕುಸಿದು ಬಿದ್ದಿದೆ. ಈ ಎಲ್ಲದರ ಬಗ್ಗೆ ಎತ್ತಿನಹೊಳೆ ಯೋಜನೆ ಆರಂಭಗೊಳ್ಳುವ ಮೊದಲೇ ತಜ್ಞರು ಎಚ್ಚರಿಕೆ ನೀಡಿದ್ದರು.

ಕೊಡಗಿನಲ್ಲೂ ಗುಡ್ಡ ಕುಸಿದು ಸಮತಟ್ಟಾಗುತ್ತಿರುವುದಕ್ಕೆ ಅಲ್ಲಿಯ ನೈಸರ್ಗಿಕ ವ್ಯವಸ್ಥೆಯಲ್ಲಿ ಮಾಡಿರುವ ಹಸ್ತಕ್ಷೇಪವೇ ಪ್ರಮುಖ ಕಾರಣ . ಈ ಬಾರಿ ಕೊಡಗಿನಲ್ಲಿ ಕಂಡು ಕೇಳರಿಯದ ರೀತಿ ಯಲ್ಲಿ ಮಳೆ ಸುರಿದಿದೆ . ಮಳೆಗೆ ಮಣ್ಣು ಸಡಿಲಗೊಂಡು ಜಾರುತ್ತಿದೆ. ಅರಣ್ಯ ಕಡಿದು ಪ್ಲಾಂಟೇಶನ್ , ಫಾರಂ ಹೌಸ್ ಗಳನ್ನು ಮಾಡಿಕೊಂಡು ಭೂಮಿಯ ಧಾರಣಾ ಸಾಮರ್ಥ್ಯ ಬಗ್ಗೆ ಅಧ್ಯಯನ ನಡೆಸದೇ ಪ್ರಾಕೃತಿಕ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ದೊಂದಿಗೆ ಮಾಡಲಾದ ಅವೈಜ್ಞಾನಿಕ ಕಾಮಗಾರಿಗಳು ಈ ಅನಾಹುತ ಗಳಿಗೆ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕೊಡಗು, ಹಾಸನ, ಚಿಕ್ಕಮಗಳೂರು, ಮಂಡ್ಯಗಳಲ್ಲಿ ಮಳೆಯ ಅವಾಂತರ ಮುಂದುವರಿದಿದೆ. ಸಂಚಾರ ಬಂದ್‌ ಆಗಿದ್ದು ಜನ ಪರದಾಡುವಂತಾಗಿದೆ. ಮೈಸೂರಿನಿಂದ ಒಂಬತ್ತು ವೈದ್ಯರ ತಂಡಗಳು ಮತ್ತು ಹೊದಿಕೆ, ನೀರಿನ ಬಾಟಲಿ, ಡ್ರೈಫ್ರೂಟ್ಸ್‌ ಮತ್ತಿತರ ಆಹಾರ ಹಾಗೂ ಅಗತ್ಯ ಸಾಮಗ್ರಿಗಳು ಕೊಡಗಿಗೆ ತಲುಪಿವೆ.

ಮಲೆನಾಡಿನಲ್ಲಿ ಭಾರಿ ಗಾಳಿಯಿಂದಾಗಿ ತಡೆಗೋಡೆ ಸಮೇತ ಧರೆ ಕುಸಿದಿದೆ. ಕೊಪ್ಪ ತಾಲೂಕಿನ ಹೇರೂರು ಗ್ರಾಮದಲ್ಲಿ ಧರೆ ಕುಸಿದು ಗ್ರಾಮಸ್ಥರು ಭಯದಲ್ಲೇ ಸಂಚರಿಸುವಂತಾಗಿದೆ. ಕೊಪ್ಪ ತಾಲೂಕಿನ ಶಾನುವಳ್ಳಿಯಲ್ಲಿ ಬಾವಿಯೊಂದು ಮೂವತ್ತು ಅಡಿ ಕುಸಿದು ಸುರಂಗವಾಗಿ ಮಾರ್ಪಟ್ಟಿದೆ. ಕೊಪ್ಪ ತಾಲೂಕಿನ ಶಾನುವಳ್ಳಿಯಲ್ಲಿ ಬಾವಿಯೊಂದು ಮೂವತ್ತು ಅಡಿ ಕುಸಿದಿದೆ.

ಶ್ರೀರಂಗಪಟ್ಟಣ ವಿದ್ಯುತ್‌ ವಿತರಣಾ ಕೇಂದ್ರ ಮುಳುಗಡ ಕಾವೇರಿ ನದಿ ಪ್ರವಾಹ ತಗ್ಗದ ಕಾರಣ ಶ್ರೀರಂಗಪಟ್ಟಣದ ವಿದ್ಯುತ್ ವಿತರಣಾ ಕೇಂದ್ರ ಮುಳುಗಡೆಯಾಗಿದೆ. ಕೆಆರ್ಎಸ್ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆಯಾಗುತ್ತಿದ್ದು, ಜಲಾಶಯ ಕೆಳಭಾಗದಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದೆ. ಭಾರಿ ನೀರಿನಿಂದ ಶ್ರೀರಂಗಪಟ್ಟಣ-ಮೇಳಾಪುರದ ವಿದ್ಯುತ್ ವಿತರಣಾ ಕೇಂದ್ರ ಜಲಾವೃತಗೊಂಡಿದೆ.

ಹೀಗೆ ಕೊಡಗಿನಲ್ಲಿ ಮುಂದುವರಿದ ಮಹಾಮಳೆಯ ಆರ್ಭಟ, ಕಣ್ಮರೆಯಾಗುವ ಸ್ಥಿತಿಯಲ್ಲಿ ಇಲ್ಲ ಮಕ್ಕಂದೂರು, ಮುಕ್ಕೋಡ್ಲು, ಕಾಲೂರು ಗ್ರಾಮಗಳು. ಕುಸಿಯುತ್ತಲೇ ಇರುವ ಬೃಹತ್ ಗುಡ್ಡಗಳು, ಆತಂಕದಿಂದ ಮನೆ ತೊರೆದ ನೂರಾರು ಕುಟುಂಬಗಳು. ಈವರೆಗೆ ಸುಮಾರು 837 ಮಂದಿಯ ರಕ್ಷಣೆ, 1 ಸಾವಿರಕ್ಕೂ ಅಧಿಕ ಜನರಿಗೆ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಕೊಡಗಿನಲ್ಲಿ ಅಧಿಕೃತವಾಗಿ 6 ಮಂದಿ ಸಾವುನ್ನಪಿದ್ದಾರೆ ಇನ್ನೂ ಹಲವರು ಮೃತಪಟ್ಟಿರುವ ಶಂಕೆಇದೆ, ಈ ಹಿನ್ನೆಲೆಯಲ್ಲಿ ಡೋಗ್ರಾ ರೆಜ್‌ಮೆಂಟ್‌ನ 60 ಸೈನಿಕರು. ಭಾರತೀಯ ಸೇನಾ ಪಡೆಯ ತಾಂತ್ರಿಕ ವಿಭಾಗದ 73 ಸೈನಿಕರು,12 ಜನ ಪರಿಣಿತ ಮುಳುಗು ತಜ್ಞರು, 200 ಅಗ್ನಿಶಾಮಕ ದಳ ಸಿಬ್ಬಂದಿ, ನಾಗರಿಕ ರಕ್ಷಣಾ ಪಡೆಯಿಂದ ನನಡೆಯುತ್ತಿರುವ ರಕ್ಷಣಾಕಾರ್ಯ ಮುಂದುವರಿದಿದೆ.

ಪಶ್ಚಿಮ ಘಟ್ಟದ ಕಾಡುಗಳನ್ನು ನಾಶ ಮಾಡಿ ಕಾಫಿ ಎಸ್ಟೇಟ್, ರುಬ್ಬರ್ ಪ್ಲಾಂಟೇಶನ್-ಗಳು, ಕರ್ನಾಟಕಕ್ಕಿಂತ ಕೇರಳದಲ್ಲಿ ತುಂಬಾ ಜಾಸ್ತಿ ಎದ್ದಿವೆ, ಅಲ್ಲದೇ ನದಿ ಹಾಗು ಸಮುದ್ರ ದಂಡೆಗಳಲ್ಲಿ ಅಕ್ರಮ ಮರಳು ಸಾಗಣಿಕೆ ೧೦ ವರ್ಷಗಳಿಂದ ಎಗ್ಗಿಲದೆ ಸಾಗಿವೆ. ಕೇರಳದಲ್ಲಿ ಇಂತಹ ಮಳೆ ನೂರು ವರ್ಷದಲ್ಲೇ ಆಗಿಲ್ಲ ನಿಜ, ಆದರೆ ಕಾಡು ಉಳಿಸಿಕೊಂಡಿದ್ದೆ ಆದರೆ, ಇಂತಹ ಪ್ರವಾಹ ತಡೆಯುತಿತ್ತು. ಮರಳು ಗಣಿಕಾರಿಕೆ ನದಿಯ ಪ್ರವಾಹವನ್ನು ತಡೆಯುತಿತ್ತು. ಪರಿಸರ ತಜ್ಞರು ಅಂದು ಇಂತಹ ಮುನ್ನೆಚೆರಿಕೆಗಳನ್ನು ಕೊಡುತ್ತಾನೆ ಬಂದಿದ್ದಾರೆ, ಬೆಳವಣಿಗೆ ಹೆಸರಿನಲ್ಲಿ ನಾವು ಮಾಡಿರುವುದಾದರು ಏನು??