ಬೆಂಗಳೂರಿನಲ್ಲಿ ಪ್ರವಾಹ; 3 ಸಾವಿರಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು, ಸಂತ್ರಸ್ತರಿಗೆ ಶಿಬಿರಗಳಲ್ಲಿ ವ್ಯವಸ್ಥೆ.!

0
208

ರಾಜ್ಯದಲ್ಲಿ ಪ್ರವಾಹ ಸುದ್ದಿ ಕೇಳಿ ಮರುಗಿದ ಬೆಂಗಳೂರಿನ ಜನರಿಗೆ ಪ್ರವಾಹದ ಬಿಸಿ ತಟ್ಟಿದ್ದು 800 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ, ಇದೇನಿದು ಮಳೇ ಇಲ್ಲ ಹೊಳೆಯಿಲ್ಲ ಪ್ರವಾಹ ಎಲ್ಲಿಂದು ಅನಿಸಿದರು ಹುಳಿಮಾವು ಕೆರೆ ಒಡ್ಡು ಒಡೆದು ಹಲವು ಪ್ರದೇಶದಲ್ಲಿ ರಸ್ತೆ, ಮನೆಗಳು ನೀರಲ್ಲಿ ನಿಂತಿವೆ. ಏಕಾಏಕಿ ನೀರು ನುಗ್ಗಿದ್ದರಿಂದ ಆರು ಬಡಾವಣೆಗಳ 800ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಕೆರೆಗಿಂತ ತಗ್ಗು ಪ್ರದೇಶದಲ್ಲಿರುವ ಕೃಷ್ಣ ಬಡಾವಣೆ, ಅವನಿ ಶೃಂಗೇರಿನಗರ ಬಡಾವಣೆ, ಆರ್‌.ಆರ್‌ ಬಡಾವಣೆ, ನ್ಯಾನಪ್ಪನ ಹಳ್ಳಿ, ಹುಳಿಮಾವು ಕೆರೆ ಪಕ್ಕದ ಗ್ರಾಮ ಹಾಗೂ ಸಾಯಿಬಾಬಾ ದೇವಸ್ಥಾನ ರಸ್ತೆಯ ಆಸುಪಾಸಿನ ಮನೆಗಳು ಜಲಾವೃತಗೊಂಡವು.


Also read: ತತ್​ಕ್ಷಣದಿಂದಲೇ ರಾಜ್ಯದ ಎಲ್ಲಾ ಬಾರ್ ಲೈಸೆನ್ಸ್ ರದ್ದು; ಬಾರ್​ಗಳ ಸಂಖ್ಯೆ ಕಡಿಮೆ ಮಾಡುವುದಾಗಿ ಘೋಷಣೆ ಮಾಡಿದ ಮುಖ್ಯಮಂತ್ರಿ.!

ಬೆಂಗಳೂರಿನಲ್ಲಿ ಪ್ರವಾಹ?

ಹೌದು ಸಿಲಿಕಾನ್ ಸಿಟಿ ಹೊರ ವಲಯದ ಹುಳಿಮಾವು ಕೆರೆ ಒಡೆದು ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಹುಳಿಮಾವು ಕೆರೆಗೆ ಕಟ್ಟಿದ್ದ ಒಡ್ಡಿನಲ್ಲಿ ಮತ್ತೆ ನೀರು ಸೋರಿಕೆಯಾಗಿ ಹರಿಯುತ್ತಿದೆ. ಹುಳಿಮಾವು ಕೆರೆ ಸುತ್ತಮುತ್ತಲ ಶಾಂತಿನಿಕೇತನ, ಕೃಷ್ಣನಗರ ಸೇರಿ ಆರಕ್ಕೂ ಹೆಚ್ಚು ಬಡಾವಣೆಗಳು ನಮ್ಮನಾಳುವ ಮಂದಿ ಸೃಷ್ಟಿಸಿದ ಕೃತಕ ಪ್ರವಾಹದಲ್ಲಿ ಸಿಲುಕಿವೆ. ಈ ಮಧ್ಯೆ ನೀರಿನಲ್ಲಿ ಬಂದ ಹಾವುಗಳ ಕಾಟವೂ ಹೆಚ್ಚಾಗಿದ್ದು, ಜನರು ಆತಂಕದಲ್ಲಿದ್ದಾರೆ. ಸರಿಸುಮಾರು 3 ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, ಸೊಂಟ ಮಟ್ಟಕ್ಕೆ ನೀರು ಆವರಿಸಿದೆ. ಅಪಾರ್ಟ್ ಮೆಂಟ್‍ಗಳು, ಅಂಗಡಿಗಳು ಸಂಪೂರ್ಣ ಜಲಾವೃತವಾಗಿವೆ.


Also read: ಕನ್ನಡಿಗ ಕಂಡು ಹಿಡಿದ ಕ್ಯಾನ್ಸರ್ ನಿಯಂತ್ರಣ ಸಾಧನಕ್ಕೆ ಅಂತರಾಷ್ಟ್ರೀಯ ಅನುಮೋದನೆ; ಜನವರಿ ವೇಳೆಗೆ ಆಸ್ಪತ್ರೆಗಳಲ್ಲಿ ಲಭ್ಯ.!

ಕಾರು, ಬೈಕ್ ಹೀಗೆ ಎಲ್ಲಾ ವಾಹನಗಳು ನೀರಲ್ಲಿ ಮುಳುಗಿವೆ. ಓಡಾಡಲು ಜಾಗವೇ ಇಲ್ಲದಂತೆ ರಸ್ತೆಗಳಲ್ಲಿ ನದಿಯೋಪಾದಿಯಲ್ಲಿ ನೀರು ಹರಿಯುತ್ತಿದೆ. ಮನೆಯಲ್ಲಿದ್ದ ಪಾತ್ರೆ ಪಗಡಿ, ಫ್ರಿಡ್ಜ್, ದವಸ ಧಾನ್ಯ ಸೇರಿ ನಿತ್ಯದ ವಸ್ತುಗಳು ಬೀದಿಪಾಲಾಗಿವೆ. ಆರು ಬಡಾವಣೆಗಳ ಸಾವಿರಾರು ಜನ ರಾತ್ರಿ ನಿದ್ದೆಯಿಲ್ಲದೇ ಕಾಲ ಕಳೆದಿದ್ದಾರೆ. ಮಲಗಲು, ಕುಳಿತುಕೊಳ್ಳಲು ಜಾಗವಿಲ್ಲದೇ ರಾತ್ರಿಯಿಡೀ ಒದ್ದಾಡಿದ್ದಾರೆ. ಬೀಳೆಕಳ್ಳಿಯ ನ್ಯಾನೋ ಆಸ್ಪತ್ರೆಗೂ ನೀರು ನುಗ್ಗಿ ರೋಗಿಗಳು ಪರದಾಡಿದ್ದಾರೆ. ಹರಿವ ನೀರಿನ ಮಧ್ಯೆಯೇ ರಬ್ಬರ್ ಬೋಟ್‍ಗಳ ಮೂಲಕ ರೋಗಿಗಳನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ನೀರಲ್ಲಿ ಕೊಚ್ಚಿ ಹೋಗ್ತಿದ್ದ ಮೂರು ನಾಯಿಗಳನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಕೃಷ್ಣಲೇಔಟ್‍ನಲ್ಲಿ ನಡೆದಿದೆ.
ಮೂರು ನಾಯಿಗಳು ರಭಸದಿಂದ ಹರಿಯುತ್ತಿದ್ದ ನೀರಲ್ಲಿ ಕೊಚ್ಚಿ ಹೋಗುತ್ತಿದ್ದವು. ಕೂಡಲೇ ಇದನ್ನು ಗಮನಿಸಿದ ಸ್ಥಳೀಯರು, ನಾಯಿಗಳನ್ನು ಹಿಡಿದು ತಳ್ಳು ಗಾಡಿಯಲ್ಲಿರಿಸಿ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ:ಬಿಡಿಎ ನಿರ್ಲಕ್ಷ್ಯ, ಒಡೆದ ಹುಳಿಮಾವು ಕೆರೆ-ಸಾವಿರಾರು ಮನೆಗಳಿಗೆ ನುಗ್ಗಿದ ನೀರು ಸುಮಾರು 140 ಎಕರೆ ವಿಸ್ತೀರ್ಣದ ಕೆರೆ ಇತ್ತೀಚೆಗೆ ಸುರಿದ ಮಳೆಯ ಕಾರಣ ತುಂಬಿತ್ತು. ಇದೀಗ ಹುಳಿಮಾವು ಕೆರೆಯ ಅರ್ಧದಷ್ಟು ನೀರು ಖಾಲಿ ಆಗಿದೆ. ಕೃತಕ ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರನ್ನು ಸಾಯಿ ಬಾಬಾ ಟೆಂಪಲ್, ಟೆನಿಸ್ ಕೋರ್ಟ್ ಹಾಗೂ ಮ್ಯಾರೇಜ್ ಹಾಲ್‍ಗಳಲ್ಲಿ ಸಂತ್ರಸ್ತರ ಶಿಬಿರ ತೆರೆದು ಇರಿಸಲಾಗಿದೆ.


Also read: ಅತ್ಯಾಚಾರ ಆರೋಪ ಹೊತ್ತಿರುವ ಬಿಡದಿ ನಿತ್ಯಾನಂದಸ್ವಾಮಿ ದೇಶ ಬಿಟ್ಟು ಪರಾರಿ; ಪಾಸ್‌ಪೋರ್ಟ್ ಇಲ್ಲದೆ ವಿದೇಶಕ್ಕೆ ಮಾಯವಾಗಿ ಹೋದ್ರಾ??

ಆರ್.ಆರ್ ಲೇಔಟ್‍ನ ರಸ್ತೆಯ ಕೆಳಮಹಡಿಯಲ್ಲಿ ನಿಂತಿರೊ ಕೆರೆ ನೀರು ತೆರವು ಕಾರ್ಯಚರಣೆ ಮುಂದುವರಿದಿದೆ. ಕೆರೆ ನೀರು ನುಗ್ಗಿರೊ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣ ಕೆಸರು ಮಾಯವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಚರಣೆ ಮುಂದುವರಿಸಿದ್ದಾರೆ. ಸ್ವಚ್ಚತಾ ಕಾರ್ಯಕ್ಕಾಗಿ 102 ಪೌರಕಾರ್ಮಿಕರ ನೇಮಕ ಮಾಡಲಾಗಿದೆ. ಪ್ರತಿ ಲೇಔಟ್‍ಗೂ 12 ಜನ ಪೌರಕಾರ್ಮಿಕರನ್ನು ನೇಮಿಸಲಾಗಿದೆ. ಹಾಗೆಯೇ ಮಾರ್ಷಲ್‍ಗಳಿಗೆ ಸ್ವಚ್ಚತಾ ಕಾರ್ಯದ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.