ವಿಟಮಿನ್ ಇರುವ ಹೂ ಕೋಸಿನ ಬಾತ್ ಮಾಡುವ ವಿಧಾನ..!!

0
969

ಈರುಳ್ಳಿ, ಟೊಮೆಟೋವನ್ನು ನಾವು ದಿನನಿತ್ಯವೂ ಬಳಸಿದಂತೆ ಹೂಕೋಸನ್ನು ಕೂಡ ಬಳಸಿದರೆ ಇದರಿಂದ ಹಲವಾರು ರೀತಿಯ ಲಾಭಗಳಿವೆ. ಹೂಕೋಸು ತುಂಬಾ ರುಚಿಯಾಗಿರುವ ಕಾರಣ ಇದರಿಂದ ಹಲವಾರು ರೀತಿಯ ಪದಾರ್ಥಗಳನ್ನು ಮಾಡಬಹುದು. ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವ ಹೂಕೋಸಿನಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಸಮೃದ್ಧವಾಗಿದೆ.

ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವುದರ ಜೊತೆಗೆ, ದೇಹವು ವಯಸ್ಸಾದಂತೆ ಕಾಣುವುದು ತಪ್ಪುತ್ತದೆ. ಇದರಲ್ಲಿ ವಿಟಮಿನ್ ಬಿ1, ಬಿ2, ಬಿ3, ಬಿ5, ಬಿ6 ಮತ್ತು ಬಿ9 ಇದೆ. ಮತ್ತು ವಿಟಮಿನ್ ಕೆ ಮತ್ತು ಒಮೆಗಾ 3 ಕೊಬ್ಬಿನ ಆ್ಯಸಿಡ್, ಪೊಟಾಶಿಯಂ, ಪ್ರೋಟೀನ್, ವಿಟಮಿನ್ ಸಿ, ಮೆಗ್ನಿಶಿಯಂ ಮತ್ತು ಪ್ರೊಸ್ಪರಸ್ ಅಂಶಗಳಿರುವ ಹೂಕೋಸಿನಲ್ಲಿ ಸಲ್ಫೊರ್ಪನೆ ಎನ್ನುವ ಅಂಶವು ಕ್ಯಾನ್ಸರ್ ಕೋಶಗಳನ್ನು ತೆಗೆದು ಹಾಕುವುದು. ಇಷ್ಟೆಲ್ಲಾ ಉಪಯೋಗಗಳು ಇರುವ ಹೂಕೋಸ್ ನಿಂದ ಹಲವಾರು ತರಹದ ಅಡುಗೆಯನ್ನು ತಯಾರಿಸಬಹುದು ಅದರಲ್ಲಿ ಹೆಚ್ಚು ರುಚಿ ಇರುವ “ಹೂಕೋಸ್ ಬಾತ್” ಸರಳವಾಗಿ ಮಾಡುವುದು ಇಲ್ಲಿದೆ ನೋಡಿ.

ಬೇಕಾಗುವ ಪದಾರ್ಥಗಳು:

* ಒಂದು ಹೂಕೋಸು
* ಒಂದು ಗ್ಲಾಸ್ ರೈಸ್
* ಎರಡು ದೊಡ್ಡ ಗಾತ್ರದ ಈರುಳ್ಳಿ
* ಮೂರೂ ಟೊಮಾಟೋ
* ಅರ್ಧ ಚಮಚ ಕೆಂಪು ಮೆಣಸಿನಪುಡಿ
* ಅರ್ಧ ಚಮಚ ಗರಂ ಮಸಾಲ ಪುಡಿ
* ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
* ಎರಡು ಚಮಚ ಅಡುಗೆ ಎಣ್ಣೆ
* ಒಂದು ನಿಂಬೆಹಣ್ಣು
* ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

1. ಈರುಳ್ಳಿ, ಹಸಿರು ಮೆಣಸಿನ ಕಾಯಿ, ಹಸಿ ಶುಂಠಿ, ಮೊದಲು ಎಣ್ಣೆಯಲ್ಲಿ ಹುರಿಯಿರಿ ನಂತರ ಹಸಿ ಶುಂಠಿಯೊಂದಿಗೆ ಅದನ್ನು ರುಬ್ಬಿಕೊಂಡು ಮಸಾಲೆ ತಯಾರಿಸಿಕೊಳ್ಳಿ
2. ಟೊಮಾಟೊವನ್ನು 10 ನಿಮಿಷ ಬಿಸಿನೀರಿನಲ್ಲಿ ನೆನೆಸಿ. ಅದರ ಸಿಪ್ಪೆ ತೆಗೆದು ರುಬ್ಬಿಟ್ಟುಕೊಳ್ಳಿ. ಈಗ ಶೋಧಿಸಿ, ಸಿಪ್ಪೆಯನ್ನು ಬೇರ್ಪಡಿಸಿರಿ ನಂತರ ಹೂಕೋಸನ್ನು ಸಣ್ಣ ತುಂಡುಗಳಾಗಿ ಹೆಚ್ಚಿ. ಅದನ್ನು ಉಪ್ಪು ಮತ್ತು ಅರಿಶಿನಪುಡಿ ಸೇರಿಸಿದ ನೀರಿನಲ್ಲಿ ನೆನೆಸಿ. ಕೆಲ ನಿಮಿಷಗಳ ನಂತರ ಹೂಕೋಸನ್ನು ಹೊರತೆಗೆದು ಗರಿಗರಿಯಾಗಿ ಎಣ್ಣೆಯಲ್ಲಿ ಹುರಿದಿಟ್ಟುಕೊಳ್ಳಿ.
3. ಹಸಿ ಬಟಾಣಿಯನ್ನು ಪ್ರತ್ಯೇಕವಾಗಿ ಬೇಯಿಸಿಕೊಳ್ಳಿ.
4. ಎರಡು ಲೋಟ ನೀರಿನಲ್ಲಿ ಅಕ್ಕಿಯನ್ನು ನೆನೆಸಿ. ಕುಕ್ಕರಿನಲ್ಲಿ ಬೇಯಿಸಿರಿ. ಅದು ತಣ್ಣಗಾಗಲು ಮತ್ತು ಹುಡಿ ಹುಡಿಯಾಗಲು ಸ್ವಲ್ಪ ಕಾಲ ಅಗಲವಾದ ಪಾತ್ರೆಯಲ್ಲಿ ಹರಡಿ.
5. ಬೇರೊಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ. ಈರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಇದಕ್ಕೆ ರುಬ್ಬಿಟ್ಟುಕೊಂಡ ಟೊಮಾಟೊ ಹಾಗೂ ಈರುಳ್ಳಿ, ಹಸಿ ಶುಂಠಿಯ ಮಸಾಲೆ ಸೇರಿಸಿ. ನೀರಿನ ಅಂಶ ಇಂಗುವವರೆಗೆ ಹುರಿಯಿರಿ.
6. ಈಗ ಉಪ್ಪು, ಕೆಂಪು ಮೆಣಸಿನಪುಡಿ, ಗರಂ ಮಸಾಲೆ ಮತ್ತು ಬೇಯಿಸಿದ ಬಟಾಣಿ ಸೇರಿಸಿ ಚೆನ್ನಾಗಿ ಕಲಸಿರಿ.
7. ನಂತರ ಈ ಪಾತ್ರೆಗೆ ಮೊದಲೇ ತಯಾರಿಸಿಕೊಂಡ ಅನ್ನ ಮತ್ತು ಅರ್ಧದಷ್ಟು ಹುರಿದಿಟ್ಟ ಹೂಕೋಸನ್ನು ಸೇರಿಸಿ ಅನ್ನ ಬಿಸಿಯಾಗುವವರೆಗೆ ಹುರಿಯಿರಿ.
8. ನಂತರ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸಿ. ಅದಕ್ಕೆ ಹುರಿದ ಗೋಡಂಬಿ, ನಿಂಬೆ ಹಣ್ಣಿನ ರಸವನ್ನು ಸೇರಿಸಿ, ಚೆನ್ನಾಗಿ ಕಲಸಿ.
9. ಉಳಿದ ಹುರಿದ ಹೂಕೋಸು, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ತಾಜಾ ತೆಂಗಿನಕಾಯಿ ತುರಿಯಿಂದ ಹೂಕೋಸ್ ಬಾತ್ ಅನ್ನು ಅಲಂಕರಿಸಿ ಸವಿದು ನೋಡಿ.