ನವರಾತ್ರಿ ಹಬ್ಬದಲ್ಲಿ ವಾಸ್ತು ಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಈ ನಿಯಮಗಳನ್ನು ಪಾಲಿಸಿದ್ದೇ ಆದಲ್ಲಿ ಜೀವನದಲ್ಲಿ ಏಳಿಗೆ ಕಾಣಬಹುದು!!

0
229

ನವರಾತ್ರಿ ಹಬ್ಬವು ಬಹಳಷ್ಟು ವಿಶೇಷತೆಯನ್ನು ಹೊಂದಿದ್ದು. ಹಿರಿಯರ ಕಾಲದಿಂದ ನವರಾತ್ರಿಯಲ್ಲಿ ಕೆಲವು ಪದ್ದತಿಗಳು ಬೆಳೆದುಕೊಂಡು ಬಂದಿವೆ, ಅವುಗಳಲ್ಲಿ ಮನೆಗೆ ಒಳ್ಳೆದಾಗುವ ಮತ್ತು ಸಂಪತ್ತು ವೃದ್ಧಿಯಾಗುವ ಮಹತ್ವದ ವಿಚಾರಗಳು ಇದರಲ್ಲಿರುತ್ತೇವೆ. ಅದಕ್ಕಾಗಿ ಜೋತಿಷ್ಯ ಶಾಸ್ತ್ರ ಕೂಡ, ಕಾರ್ಯಗಳ ಬಗ್ಗೆ ಹೆಚ್ಚು ತಿಳಿಸುತ್ತಿದ್ದು ಈ ಸಮಯದಲ್ಲಿ ನಿಮ್ಮ ಮನೆಯಲ್ಲಿ ಪ್ರತಿನಿತ್ಯವೂ ಈ ಕೆಲಸಗಳನ್ನು ಮಾಡಿದರೆ. ಧನಾತ್ಮಕ ಶಕ್ತಿಯ ಲಾಭವನ್ನು ಪಡೆಯಬಹುದು. ಇದರಿಂದ ಜೀವನದಲ್ಲಿ ಸಂತೋಷ ಮತ್ತು ಉಳಿತಾಯದ ಮಾರ್ಗವನ್ನು ಕಂಡುಕೊಳ್ಳಬಹುದು. ಇದರಿಂದಾಗಿ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ವ್ಯಕ್ತಿಯ ಬುದ್ಧಿಶಕ್ತಿ ಮತ್ತು ಸಂದರ್ಭಾನುಸಾರವಾಗಿ ಈ ಶಕ್ತಿಯು ಪರಿಣಾಮ ಬೀರುತ್ತದೆ. ವಾಸ್ತು ವಿಜ್ಞಾನದ ಪ್ರಕಾರ, ಧರ್ಮಶಾಸ್ತ್ರದ ಪ್ರಕಾರವೂ ಇದು ಅತ್ಯಂತ ಶುಭಕಾರಿಯಾಗಿದೆ. ಇದರಿಂದ ನಿಮಗೆ ಧನಾತ್ಮಕ ಶಕ್ತಿಯು ಚಿಂತನೆಯೂ ಸಹ ಪ್ರಾರಂಭವಾಗುತ್ತದೆ.

Also read: ನವರಾತ್ರಿಯ ವೈಶಿಷ್ಟ್ಯತೆಗಳು ಮತ್ತು 9 ದಿನದ ದೇವಿಯ ಪೂಜೆಯ ಹಿಂದಿರುವ ಇತಿಹಾಸ…

ಆಧುನಿಕತೆ ಮುಂದುವರಿದರೂ ಭಾರತೀಯ ಮಹಿಳೆಯರು ಹಬ್ಬಕ್ಕೆ, ದೇವರ ಕೋಣೆಗೆ ಕೊಡುವ ಪ್ರಾಮುಖ್ಯತೆಗೆ ಮಾತ್ರ ಧಕ್ಕೆ ಉಂಟಾಗಿಲ್ಲ. ದೀಪಗಳ ಹಬ್ಬ ಆರಂಭವಾಗುತ್ತಿದ್ದು ಮಹಿಳೆಯರಿಗೆ ಸಡಗರದ ಸಂಗತಿ. ಅನೇಕ ದಿನಗಳ ಮೊದಲೇ ಹಬ್ಬವನ್ನು ಯಾವ ರೀತಿಯಲ್ಲಿ ಅದ್ಧೂರಿಯಾಗಿ ಆಚರಿಸಬಹದೆಂದು ಯೋಜನೆ ರೂಪಿಸಿ ಮಹಿಳೆಯರು ದೇವರ ಕೋಣೆಯನ್ನು ಸಜ್ಜುಗೊಳಿಸುತ್ತಾರೆ. ದೇವಸ್ಥಾನವು ಹೇಗೆ ಇಡೀ ಗ್ರಾಮ ಅಥವಾ ಊರಿಗೆ, ಶಕ್ತಿ ಅಥವಾ ಚೈತನ್ಯವನ್ನು ಪೂರೈಸುತ್ತದೆಯೋ, ಅದೇ ರೀತಿ ದೇವರಕೋಣೆಯು ಇಡೀ ಮನೆಗೆ ಶಕ್ತಿ, ಚೈತನ್ಯವನ್ನು ಪೂರೈಸಬೇಕು, ಮನೆಯ ವಾತಾವರಣವನ್ನು ಶುದ್ಧ ಮಾಡಬೇಕು.

ನವರಾತ್ರಿ ವೇಳೆ ಪೂಜೆ, ಧ್ಯಾನ ಎಷ್ಟು ಮುಖ್ಯವೋ ಅದನ್ನು ನೆರವೇರಿಸುವ ಪ್ರಕಾರಗಳೂ ಅಷ್ಟೇ ಮುಖ್ಯವಾಗುತ್ತದೆ. ವಾಸ್ತು ಶಾಸ್ತ್ರವು ಅದನ್ನು ಸುಲಭವಾಗಿಸಿದೆ. ಈ ಕ್ರಮಗಳನ್ನು ಅನುಸರಿಸಿದರೆ ದೇವಿ ಒಲಿಯುತ್ತಾಳೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹಾಗಾದ್ರೆ ಈ ನವರಾತ್ರಿ ಪೂಜೆಯ ಪೂರ್ಣ ಫಲ ಪಡೆಯಬೇಕಾದರೆ ಈ ವಾಸ್ತು ನಿಯಮಗಳನ್ನು ಅನುಸರಿಸಿ.

ದೇವರ ಕೋಣೆ ನಿರ್ಮಾಣಕ್ಕೆ ವಿಶೇಷ ಕಾಳಜಿ ಅವಶ್ಯ. ಏಕೆಂದರೆ ಪೂಜೆ, ಧ್ಯಾನಕ್ಕಾಗಿ ಬಳಸಲಾಗುವ ಈ ಸ್ಥಳದಲ್ಲಿ ಸಕಾರಾತ್ಮಕ ಶಕ್ತಿ ಇರಬೇಕು.
ದೇವರ ಪ್ರತಿಷ್ಟಾಪನೆಗಾಗಿ ನಿಗದಿಪಡಿಸುವ ಈ ಜಾಗವನ್ನು ನಿರ್ಲಕ್ಷಿಸುವಂತಿಲ್ಲ.

ವಾಸ್ತು ಶಾಸ್ತ್ರದ ಪ್ರಕಾರ ದೇವರ ಕೋಣೆ ಪೂರ್ವಕ್ಕೆ ಸಮೀಪವಾಗಿದ್ದು ಪುರ್ವಾಭಿಮುವಾಗಿದ್ದರೆ ಅತ್ಯುತ್ತಮ. ಅದರಲ್ಲೂ ಪೂಜಾ ಕೋಣೆ ಈಶಾನ್ಯ ದಿಕ್ಕಿನಲ್ಲಿ ನಿರ್ಮಾಣ ಮಾಡಬೇಕೆಂಬುದು ಹಿರಿಯರ ನಂಬಿಕೆ. ಅತ್ಯಂತ ಪ್ರಮುಖ ವಿಚಾರವೆಂದರೆ ದೇವರ ಕೋಣೆಯನ್ನು ಶೌಚಾಲಯದ ಬಳಿ ನಿರ್ಮಿಸಲೇಬಾರದು.

ಪೂಜೆ, ಪ್ರಾರ್ಥನೆ ಮಾಡುವಾಗ ಪೂರ್ವ ಇಲ್ಲವೇ ಉತ್ತರಾಭಿಮುಖವಾಗಿರಬೇಕು.

ಪೂಜಾ ಕೋಣೆಯಲ್ಲಿ ದೇವರ ವಿಗ್ರಹಗಳಿರುವುದು ಸಾಮಾನ್ಯ. ಆದರೆ ಇದರ ಎತ್ತರ ಒಂಬತ್ತು ಇಂಚಿಗಿಂತ ಹೆಚ್ಚು ಹಾಗೂ ಎರಡು ಇಂಚಿಗಿಂತ ಕಡಿಮೆ ಇರಕೂಡದು.

ವ್ಯಕ್ತಿ ಕೂರುವ ಸ್ಥಾನಕ್ಕೆ ಅನುಗುಣವಾಗಿ(ಕೂರುವ ಇಲ್ಲವೇ ನಿಲ್ಲುವ) ಈ ವಿಗ್ರಹದ ಪಾದಗಳು ಪೂಜಿಸುವವರ ಎದೆಯ ಮಟ್ಟಕ್ಕೆ ಇರಬೇಕು.

ಪೂಜಾ ಸ್ಥಳ ಯಾವತ್ತೂ ಮಲಗುವ ಕೋಣೆಯಲ್ಲಿ, ಇಲ್ಲವೇ ಸ್ನಾನದ ಮನೆಯ ಗೋಡೆಗೆ ಹೊಂದಿಕೊಂಡಂತೆ ಇರಬಾರದು.

ಕೈಕಾಲು ತೊಳೆಯದೇ ದೇವರ ಕೋಣೆ ಪ್ರವೇಶಿಸುವುದು ನಿಶಿದ್ಧ. ಇಷ್ಟೇ ಅಲ್ಲದೆ ಪರಸ್ಪರ ಕಾಲುಗಳನ್ನು ತಿಕ್ಕಿ ಒರೆಸಿಕೊಂಡು ದೇವರ ಕೋಣೆ ಪ್ರವೇಶಿಸುವುದು ಒಳ್ಳೆಯದಲ್ಲ. ಬಲಗೈನಿಂದ ನೀರು ಹಾಕಿಕೊಂಡು, ಎಡಗೈನಿಂದ ಕಾಲುಗಳನ್ನು ತೊಳೆಯಬೇಕು. ಯಾವಾಗಲೂ ಮೊದಲು ಕಾಲಿನ ಹಿಂಭಾಗವನ್ನು ತೊಳೆದುಕೊಳ್ಳಬೇಕು.

ದೇವರ ಕೋಣೆಯಲ್ಲಿ ನೀರು ಸಂಗ್ರಹಕ್ಕೆ ಯಾವಾಗಲೂ ತಾಮ್ರದ ಪಾತ್ರೆಯನ್ನೇ ಬಳಸಬೇಕು. ಕಬ್ಬಿಣ ಅಥವಾ ಉಕ್ಕಿನ ವಸ್ತುಗಳಿಂದ ದೇವರನ್ನು ಪೂಜಿಸುವುದು ಒಳ್ಳೆಯದಲ್ಲ. ತಾಮ್ರದ ಪಾತ್ರೆಗಳನ್ನು ದೇವರ ಪೂಜೆ ಮಾಡುವಾಗ ಬಳಸಬಹುದಾಗಿದೆ.

ದೇವರ ಕೋಣೆಯೊಳಗೆ ಚಿನ್ನ ಅಥವಾ ಬೆಳ್ಳಿಯ ತಟ್ಟೆಗಳನ್ನು ಬಳಸಿ ಪೂಜೆ ಮಾಡಬೇಕು.

ತ್ರಿಕೋಣಾಕಾರದ ಯಾವುದೇ ದೇವರ ಚಿತ್ರ ಪೂಜಾ ಕೋಣೆಯಲ್ಲಿರಕೂಡದು.

ದೇವರ ಮನೆಯ ಗೋಡೆಗೆ ಯಾವಾಗಲೂ ಬಿಳಿ, ನಿಂಬೆ ಬಣ್ಣ ಇಲ್ವೇ ತಿಳಿ ನೀಲಿ ಇದ್ದು, ಬಿಳಿ ಬಣ್ಣದ ಮಾರ್ಬಲ್ ಬಳಸಬಹುದು.

ಪೂಜಾ ಕೋಣೆಯ ಬಾಗಿಲು ಕಿಟಕಿಗಳು ಉತ್ತರ ಇಲ್ಲವೇ ಪೂರ್ವ ದಿಕ್ಕಿಗಿರಬೇಕು. ಲೋಹದಿಂದ ಮಾಡಿದ ಬಾಗಿಲುಗಳನ್ನು ದೇವರ ಮನೆಗೆ ಅಳವಡಿಸಬೇಡಿ.

ದೇವರ ಫೋಟೊಗಳು, ಆಲಂಕಾರಿಕ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅದು ತಿಳಿ ಬಣ್ಣದ್ದಾಗಿರಬೇಕು.

ಅಗ್ನಿಕುಂಡವು ದೇವರ ಮನೆಯ ಅಗ್ನೇಯ ದಿಕ್ಕಿಗಿರಬೇಕು. ದೇವರಿಗೆ ಅಗ್ನಿ ಸಂಬಂಧಿತ ಪೂಜೆ (ಹೋಮ ಹವನಗಳು) ಮಾಡುವಾಗ ಪೂರ್ವಾಭಿಮುಖವಾಗಿ ಕೂರಬೇಕು.

source: way2nirman.com

ಒಂದು ವೇಳೆ ನೀವು ನವರಾತ್ರಿಯ ದಿನದಂದು ಅಖಂಡ ಜ್ಯೋತಿಯನ್ನು ಬೆಳಗುವುದಾದರೆ ಪರಸ್ಪರ ಮುಖ ಮಾಡಿ ಇಟ್ಟು ವಾಯುವ್ಯ ದಿಕ್ಕಿನಲ್ಲಿ ಸ್ಥಾಪನೆ ಮಾಡಿ. ಈ ರೀತಿ ದೀಪಲಕ್ಷ್ಮೀ ಯನ್ನು ಪೂಜಿಸಿದರೆ ಐಶ್ವರ್ಯ ಅರೋಗ್ಯ ಪ್ರಾಪ್ತಿಯಗುತ್ತೆ ಅಂತ ನಮ್ಮ ಶಾಸ್ತ್ರಗಳು ಹೇಳುತ್ತವೆ.

Also read: ನವರಾತ್ರಿ ಹಬ್ಬದ ದಿನ ಈ ವಸ್ತುಗಳನ್ನು ನಿಮ್ಮ ಮನೆಗೆ ತಂದರೆ ಕುಬೇರರಾಗುತ್ತಿರ…