ಸಾರಾಯಿ, ಸಿಗರೇಟ್, ಗಾಂಜಾ ಈ ದೇವಿಯ ಪೂಜೆಗೆ ಬೇಕಂತೆ; ಈ ಮಾದಕ ವಸ್ತುಗಳನ್ನು ನೀಡಿದರೆ ನೀವೂ ಬೇಡಿದ ವರವನ್ನು ನೀಡುತ್ತಾಳೆ ಈ ದೇವಿ.!

0
97

ಜನರಿಗೆ ಈ ದೇವಿ ಎಂದರೇನೆ ಭಯ, ಅದರಂತೆ ಹರಕೆ ಹೊತ್ತು ದೇವಿಯ ಬಳಿ ಹೋದವರಿಗೆ ಶೀಘ್ರವಾಗಿ ವರವನ್ನು ನೀಡುತ್ತಾಳಂತೆ ಈ ಪವಾಡ ದೇವಿ, ಅದಕ್ಕಾಗಿಯೇ ದೇಶದ ಹಲವು ರಾಜ್ಯದಿಂದ ದೇವಿಯ ದರ್ಶನಕ್ಕೆ ಸಾವಿರಾರು ಜನರು ಬಂದು ತಮ್ಮ ಕಷ್ಟವನ್ನು ಬಗೆಹರಿಸಿಕೊಳ್ಳುತ್ತಾರೆ. ಇಂತಹ ವಿಶೇಷ ಪವಾಡ ಹೊಂದಿರುವ ದೇವಿ ಇರುವುದು ಗೋಕಾಕ್ ನಲ್ಲಿ ಈ ಚೌಡೇಶ್ವರಿ ದೇವಿ ದೇವಸ್ಥಾನವಿದ್ದು, ಈ ದೇವಸ್ಥಾನದಲ್ಲಿ ಭಕ್ತರು ದೇವರಿಗೆ ಪ್ರೀತಿಯಿಂದ ಅರ್ಪಿಸುವುದು ಮದ್ಯ, ಸಿಗರೇಟು, ಗಾಂಜಾ ಮೊದಲಾದವುಗಳನ್ನು. ಇಲ್ಲಿ ಪೂಜೆ, ಸಂಪ್ರದಾಯಗಳಲ್ಲಿ ತೊಡಗಿರುವವರು ತೃತೀಯ ಲಿಂಗಿಗಳಂತೆ.

Also read: ವಿಶೇಷವಾದ “ಯೋನಿ” ರೂಪದಲ್ಲಿ ಪೂಜಿಸುವ ಕಾಮಾಕ್ಯ ದೇವಿಯ ದರ್ಶನ ಮಾಡಿದರೆ ನಿಮ್ಮೆಲ್ಲಾ ಕಷ್ಟಗಳು ದೂರವಾಗಿ ಮೋಕ್ಷ ಪ್ರಾಪ್ತಿಯಾಗುತ್ತಂತೆ..!

ಇದೇನ್ ವಿಚಿತ್ರ ಅನಿಸಬಹುದು ಏಕೆಂದರೆ ಸಾಮಾನ್ಯವಾಗಿ ದೇವರಿಗೆ ಹಣ್ಣು, ಕಾಯಿ, ಸಿಹಿ ತಿನಿಸು ಮಾಂಸವನ್ನು ನೆವಿದ್ಯ ಮಾಡಿದರೆ ಪೂಜೆಗೆ ಉದುಬತ್ತಿ, ಕರುಪುರ, ಲೋಬಾನ ಕೊಡುವುದು ಮೊದಲಿನಿಂದ ನಡೆದು ಬಂದಿದೆ ಆದರೆ ಗೋಕಾಕ್ ಚೌಡೇಶ್ವರಿ ದೇವಿಗೆ ಮಾತ್ರ ಮದ್ಯ, ಸಿಗರೇಟು, ಗಾಂಜಾ, ಬೀಡಿ -ಗಳನ್ನು ಪೂಜೆಗೆ ನೀಡುವುದೇ ಒಂದು ವಿಶೇಷವಾಗಿದೆ. ಈ ದೇವಿಯ ಇತಿಹಸ ಹೇಳಬೇಕೆಂದರೆ. ದಶಕಗಳಿಂದ ಈ ದೇವಸ್ಥಾನಕ್ಕೆ ದೇಶದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಪ್ರತಿವರ್ಷ ಬರುತ್ತಾರೆ. ಇಲ್ಲಿಗೆ ಹರಕೆ ಹೊತ್ತು ಬರುವ ಭಕ್ತರ ಇಷ್ಟಾರ್ಥಗಳು ಈಡೇರಿವೆ ಎಂದು ಹಲವರು ಹೇಳುತ್ತಾರೆ.ಇಲ್ಲಿ ಚೌಡೇಶ್ವರಿ ದೇವಸ್ಥಾನ ನಿರ್ಮಾಣವಾದ ಬಗ್ಗೆ ಸತೀಶ್ ತಲ್ವರ್ ಮತ್ತು ಆಡಳಿತ ಸಿಬ್ಬಂದಿ ಕುತೂಹಲಕಾರಿ ಕಥೆ ಹೇಳುತ್ತಾರೆ.

Also read: ಈ ದೇವಿಯ ಸನ್ನಿಧಿಯೇ ನ್ಯಾಯಾಲಯ, ದೇವಿಯ ಅಣತಿಯೇ ತೀರ್ಪು. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿಯೇ ಒಮ್ಮೆ ಭೇಟಿ ಕೊಡಿ ಸಿಗಂಧೂರಿನ ಚೌಡೇಶ್ವರಿ ದೇವಸ್ಥಾನಕ್ಕೆ..

40 ವರ್ಷಗಳ ಹಿಂದೆ ಚೌಡೇಶ್ವರಿ ದೇವಿ ಕನಸಿನಲ್ಲಿ ಬಂದು ಈ ಜಮೀನಿನಲ್ಲಿ ನಾನು ನೆಲೆಸಿದ್ದೇನೆ. ನನ್ನ ಪೂಜಿಸಲು ಆರಂಭಿಸಿ ಎಂದು ಹೇಳಿ ಹೇಗೆ ಪೂಜಿಸಬೇಕೆಂದು ಸಹ ಹೇಳಿದ್ದಳಂತೆ. ಕನಸು ಬಿದ್ದಾದ ಬಳಿಕ ತಮ್ಮ ಭೂಮಿಯಲ್ಲಿ ಹುಡುಕಿದಾಗ ಸತೀಶ್ ಅವರಿಗೆ ದೇವಿಯ ವಿಗ್ರಹ ಸಿಕ್ಕಿ ಪೂಜೆ ಮಾಡಲು ಆರಂಭಿಸಿದರಂತೆ. ತಮ್ಮ ಜಮೀನಿನ ಪಕ್ಕದಲ್ಲಿರುವ ಹಾದಿಯಲ್ಲಿ ಹಾದುಹೋಗುವ ಜನರು ತಾವು ಪೂಜೆ ಮಾಡುತ್ತಿರುವುದು ಕಂಡು ತಾವು ಕೂಡ ಆಚರಿಸಲು ಆರಂಭಿಸಿದರು. ಹಲವು ಭಕ್ತರ ಇಷ್ಟಾರ್ಥಗಳು ಇಲ್ಲಿ ನೆರವೇರಿದ್ದು ಹೀಗಾಗಿ ಚೌಡೇಶ್ವರಿ ದೇವಸ್ಥಾನ ಜನಪ್ರಿಯವಾಗಿದೆ. ಮಂಗಳವಾರ ಮತ್ತು ಶುಕ್ರವಾರಗಳಂದು ಇಲ್ಲಿ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗಿರುತ್ತದೆ.

Also read: ದೇವಿಗೆ ಯಾಕೆ ಕೋಳ ಹಾಕಿ ವಿಚಿತ್ರವಾಗಿ ಪೂಜೆ ಮಾಡುತ್ತಾರೆ ಅಂತ ತಿಳಿದುಕೊಳ್ಳಿ, ಆ ದೇವಿಯ ಕೃಪೆ ನಿಮಗೆ ಸಿಗುತ್ತೆ!!

ದುಶ್ಚಟಕ್ಕೆ ಮುಕ್ತಿ ಹೇಳುವ ದೇವಿ

ಇಲ್ಲಿ ಪೂಜಾ ವಿಧಾನ ವಿಭಿನ್ನ. ಭಕ್ತರು ತೆಂಗಿನಕಾಯಿ ಮತ್ತು ಸೀರೆಯನ್ನು ತರುತ್ತಾರೆ. ಒಂದು ಬಟ್ಟೆಯಲ್ಲಿ ತೆಂಗಿನಕಾಯಿ ಕಟ್ಟಿ ದೇವಸ್ಥಾನದ ಹಿಂದಿನ ಮರದಲ್ಲಿ ಕಟ್ಟಿ ತಮ್ಮ ಮನದಿಚ್ಛೆಯನ್ನು ಕೇಳುತ್ತಾರೆ. ಸೀರೆಯನ್ನು ಮರದ ತುಂಡಿನೊಂದಿಗೆ ಉರಿಸಿ ನೀರು ಬಿಸಿ ಮಾಡಿ ಆ ನೀರಿನಲ್ಲಿ ದೇವತೆ ಮೂರ್ತಿಯನ್ನು ತೊಳೆಯಲಾಗುತ್ತದೆ. ಮದ್ಯ, ಸಿಗರೇಟು, ಗಾಂಜಾ ವ್ಯಸನ ಹೊಂದಿರುವವರು ಈ ದೇವಸ್ಥಾನಕ್ಕೆ ಬಂದು ಅದನ್ನು ಬಿಟ್ಟುಬಿಡಲು ಹರಕೆ ಹೊತ್ತು ಆ ವಸ್ತುಗಳನ್ನು ದೇವಿಯ ಮುಂದಿಟ್ಟು ಹೋಗುತ್ತಾರೆ. ಕೆಲ ದಿನಗಳು ಕಳೆದ ನಂತರ ತಮ್ಮ ದುಶ್ಚಟ ಕೊನೆಯಾಗಿದೆ ಎಂದು ಹೇಳಿ ಮತ್ತೆ ದೇವಸ್ಥಾನಕ್ಕೆ ಬಂದು ಹರಕೆ ತೀರಿಸುತ್ತಾರೆ ಎನ್ನುತ್ತಾರೆ ಸತೀಶ್ ತಲ್ವರ್.

Also read: ಅತಿ ಮುಖ್ಯ, ಪ್ರಭಾವಶಾಲಿ ಹಾಗೂ ಏಳು ಬೆಟ್ಟಗಳ ಅಧಿದೇವಿಯಾಗಿ ನೆಲೆಸಿರುವ ಸಪ್ತಶೃಂಗಿ ಮಹಿಷಾಸುರ ಮರ್ದಿನಿ ಕ್ಷೇತ್ರಕ್ಕೆ ಒಮ್ಮೆ ಭೇಟಿ ಕೊಡಿ..!!