ಬೆಂಗಳೂರಿನ ಜನಪ್ರೀಯ ಚಾಟ್ ತಿಂಡಿಗಳಲ್ಲಿ ಒಂದಾದ ಮಸಾಲಾ ಪುರಿ ಮಾಡುವ ವಿಧಾನ

0
1666

ಬೇಕಾಗುವ ಸಾಮಗ್ರಿಗಳು

 • ಬೇಯಿಸಿದ ಆಲೂಗಡ್ಡೆ ೨
 • ನೆನೆಸಿದ ಬಟಾಣಿ ೧ ಕಪ್
 • ಕ್ಯಾರಟ್ ತುರಿ ೧/೪ ಕಪ್
 • ಈರುಳ್ಳಿ ೩
 • ಬೆಳ್ಳುಳ್ಳಿ ೬ ಎಸಳುಗಳು
 • ಶುಂಟಿ ಸಣ್ಣ ಚೂರು
 • ಹಸಿಮೆಣಸು ೨
 • ಚಾಟ್ ಮಸಾಲಾ ಪುಡಿ ೧/೪ ಟೀ ಚ
 • ಗರಂ ಮಸಾಲಾ ಪುಡಿ ೧ ಟೀ ಚ
 • ಲವಂಗ ೧
 • ಚಕ್ಕೆ ಸಣ್ಣ ಚೂರು
 • ಚಕ್ರಮೊಗ್ಗು ಸಣ್ಣ ಚೂರು
 • ಉಪ್ಪು ರುಚಿಗೆ ತಕ್ಕಷ್ಟು
 • ಕೊತ್ತೊಂಬರಿ ಸೊಪ್ಪು
 • ಸಿಹಿ ಚಟ್ನಿ ೧/೪ ಕಪ್
 • ಹಸಿರು ಚಟ್ನಿ ೧/೪ ಕಪ್
 • ಹೆಚ್ಚಿದ ಈರುಳ್ಳಿ ಸ್ವಲ್ಪ
 • ಸೇವ್ ಸ್ವಲ್ಪ
 • ಪಾನಿಪುರಿ ಪುರಿಗಳು ೧೦-೧೫
 • ಹೆಚ್ಚಿದ ಟೊಮೇಟೊ ಸ್ವಲ್ಪ
 • ಎಣ್ಣೆ ಸ್ವಲ್ಪ
 • ಜೀರಿಗೆ ೧/೪ ಟೀ ಚ

ಮಾಡುವ ವಿಧಾನ

 1. ಮೊದಲು ನೆನೆಸಿದ ಬಟಾಣಿಯನ್ನು ಕುಕ್ಕರ್ ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ.
 2. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಅದಕ್ಕೆ ಜೀರಿಗೆ, ಹೆಚ್ಚಿದ ಈರುಳ್ಳಿ, ಶುಂಟಿ ಹಾಗು ಬೆಳ್ಳುಳ್ಳಿ ಹಾಕಿ ಹುರಿದು ಇಟ್ಟುಕೊಳ್ಳಿ.
 3. ನಂತರ ಹುರಿದ ಮಿಶ್ರಣಕ್ಕೆ ಚಕ್ಕೆ, ಲವಂಗ, ಹಸಿಮೆಣಸು, ಕೊತ್ತೊಂಬರಿ ಸೊಪ್ಪು ಹಾಗು ಚಕ್ರಮೊಗ್ಗು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಟ್ಟುಕೊಳ್ಳಿ.
 4. ಈಗ ಒಂದು ಬಾಣಲೆಗೆ ರುಬ್ಬಿದ ಮಸಾಲಾ, ರುಬ್ಬಿದ ಬಟಾಣಿ, ಬೇಯಿಸಿದ ಆಲೂಗಡ್ಡೆ, ಉಪ್ಪು, ಗರಂ ಮಸಾಲಾ ಪುಡಿ ಹಾಗು ಚಾಟ್ ಮಸಾಲಾ ಪುಡಿ ಸೇರಿಸಿ ಅದಕೆಷ್ಟು ಬೇಕೋ ಅಷ್ಟು ನೀರು ಸೇರಿಸಿ ಕುದಿಯಲು ಬಿಡಿ. ಮಿಶ್ರಣ ಸ್ವಲ್ಪ ತೆಳುವಾಗಿಯೇ ಇರಬೇಕು.

ಈಗ ಒಂದು ಪ್ಲೇಟ್ ಗೆ ಪಾನಿಪುರಿ ಪುರಿಗಳನ್ನು ಹಾಕಿ ಅದರ ಮೇಲೆ ಕುದಿಯುತ್ತಿರುವ ಮಸಾಲಾ ಹಾಕಿ, ಅದಕ್ಕೆ ಕ್ಯಾರಟ್ ತೂರಿ, ಹಸಿ ಈರುಳ್ಳಿ, ಟೊಮೇಟೊ, ಸಿಹಿ ಹಾಗು ಹಸಿರು ಚಟ್ನಿ ಹಾಗು ಸೇವ್ ನಿಂದ ಅಲಂಕರಿಸಿ ಸರ್ವ್ ಮಾಡಿ.