ಕಷ್ಟಪಟ್ಟು ಮಾಡುವ ಹಿಟ್ಟುಗಳನ್ನು ಸರಿಯಾಗಿ ಇಡದಿದ್ದರೆ ಹಾಳಾಗುತ್ತದೆ, ಯಾವ ಹಿಟ್ಟನ್ನು ಹೇಗೆ ಸಂರಕ್ಷಿಸಬೇಕು ಅಂತ ಹೇಳ್ತೀವಿ ನೋಡಿ…

0
1704

ಅಡುಗೆ ಮನೆಯಲ್ಲಿರುವ ಗೋಧಿ, ಅಕ್ಕಿ, ರಾಗಿ, ಮೈದಾ ಇತ್ಯಾದಿಗಳ ಹಿಟ್ಟುಗಳನ್ನು ಸೂಕ್ತವಾಗಿ ಸಂರಕ್ಷಿಸಿ ಇಡದಿದ್ದರೆ ಅಂದರಲ್ಲಿ ಹುಳುಗಳು ಸೇರಿಕೊಳ್ಳುತ್ತವೆ. ಇದರಿಂದ ಹಿಟ್ಟು ಬಳಸಲು ಯೋಗ್ಯವಾಗುವುದಿಲ್ಲ ಸುಮ್ಮನೆ ವೇಸ್ಟ್ ಆಗಿ ಹೋಗುತ್ತದೆ. ಅದಕ್ಕೆ ಅಂತಾನೆ ಕೆಲವು ಸುಲಭ ಉಪಾಯಗಳಿವೆ.

ಮೊದಲಿಗೆ ಹೊರಗಡೆ ಇಂದ ತಂದಂತಹ ಹಿಟ್ಟನ್ನು ಯಾವುದಕ್ಕೂ ಒಂದು ಸಲ ಜರಡಿಯಲ್ಲಿ ಹಿಡಿದು ಹಿಟ್ಟುಗಳನ್ನು ಗಾಳಿಯಾಡದ ಡಬ್ಬಗಳಲ್ಲಿ ಶೇಖರಿಸಿ ಇಡೀ. ಡಬ್ಬಗಳ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿರಬೇಕು. ಹಿಟ್ಟುಗಳ ಡಬ್ಬಗಳನ್ನು ಚೆನ್ನಾಗಿ ಬೆಳಕು ಬೀಳುವ ಸ್ಥಳದಲ್ಲಿ ಇಡಬೇಕು. ಇದರಿಂದ ಕೀಟಗಳ ಬಾಧೆ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಕತ್ತಲೆ ಜಾಗದಲ್ಲಿ ಇಟ್ಟ ಹಿಟ್ಟುಗಳಿಗೆ ಕೀಟಗಳು ಬೇಗ ಪ್ರವೇಶಿಸುತ್ತವೆ.

ಅಡಿಗೆ ಮಾಡುವಾಗ ಹಿಟ್ಟನ್ನು ಬಳಸುವಾಗ ನೀರು ಬೀಳದಂತೆ ನೋಡಿಕೊಳ್ಳಬೇಕು. ಹಳೆ ಹಿಟ್ಟನ್ನು ಹೊಸ ಹಿಟ್ಟಿಗೆ ಮಿಕ್ಸ್‌ ಮಾಡಿ ಇಡಬೇಡಿ. ಹಿಟ್ಟುಗಳಿಗೆ ಕೊಂಚ ಗಾಳಿ ತಾಗಿದರೂ ಅದು ಪೆಡಸಾಗುತ್ತದೆ. ಹಿಟ್ಟುಗಳನ್ನು ಇಟ್ಟಿರುವ ಕಪಾಟನ್ನು ವಾರಕ್ಕೊಮ್ಮೆ ಚೆನ್ನಾಗಿ ಸ್ವಚ್ಛಗೊಳಿಸಿ. ಹಿಟ್ಟುಗಳ ಡಬ್ಬದ ಮೇಲೆ ಬೇವಿನ ಎಲೆಗಳನ್ನು ಇಟ್ಟರೆ ಕೀಟಗಳು ಹತ್ತಿರ ಸುಳಿಯುವುದಿಲ್ಲ.

ರೆಫ್ರಿಜರೇಟರ್ ಹಿಟ್ಟಿನ ಉತ್ತಮ ಶೇಖರಣಾ ಪ್ರದೇಶವಾಗಿದೆ, ಆದರೆ ರೆಫ್ರಿಜರೇಟರ್ನಲ್ಲಿ ಸಂಗ್ರಹವಾಗಿರುವ ಇತರ ಆಹಾರಗಳಿಂದ ತೇವಾಂಶ ಮತ್ತು ವಾಸನೆ ಮತ್ತು ಸುವಾಸನೆಯನ್ನು ಹೀರಿಕೊಳ್ಳುವುದರಿಂದ ಹಿಟ್ಟನ್ನು ಸಂರಕ್ಷಿಸಲು ಒಂದು ಮೊಹರು ಕಂಟೇನರ್ ಅನ್ನು ಬಳಸುವುದು ಹೆಚ್ಚು ಉತ್ತಮ.