ಬೆಂಗಳೂರು ನಾಗರಿಕರೇ ಎಚ್ಚರ!! ಬೆಂಗಳೂರಿಗೆ ಬರುತ್ತಿರುವ ಆಹಾರ ಪದಾರ್ಥಗಳಲ್ಲಿ ಅಡಗಿದೆ ಭಯಾನಕ ವಿಷ!!

1
1055

ಬೆಂಗಳೂರಿನಲ್ಲಿ ಹಾಲು, ತರಕಾರಿ, ಸ್ವೀಟ್ಕಾರ್ನ್, ರೈಸ್, ರಾಗಿಮುದ್ದೆ ಸೇವಿಸುವರು ಸ್ವಲ್ಪದಿನದಲ್ಲಿ ಕ್ಯಾನ್ಸರ್ ಸ್ನೇಹಿತರು ಆಗ್ತೀರಾ. ಎಚ್ಚರ!! ಹೌದು ಮ್ಯಾಗ್ನೇಶಿಯಂ, ಕ್ರೋಮಿಯಂ, ಸೀಸದ ಅಂಶ ಜೀವಕ್ಕೆ ಅಪಾಯಕಾರಿ ಇದ್ರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ, ಇದೆಲ್ಲ ಬೆಂಗಳೂರಿನ ಉಪಹಾರಕೂ, ಕ್ಯಾನ್ಸರ್ ಗೂ ಹೇಗೆ ಸಂಭದ ಅಂದ್ರೆ ‘ಏಟ್ರೀ’ ಎಂಬ ನೀರಿನಗುಣಮಟ್ಟ ಮತ್ತು ಶುದ್ದತೆಯನ್ನು ಪರಿಕ್ಷಿಸುವ ಖಾಸಗಿ ಸಂಸ್ಥೆಯೊಂದು ಬೆಂಗಳೂರಿಗೆ ಬರುತ್ತಿರುವ ಆಹಾರ ಪ್ರದಾರ್ಥಗಳ ಮೇಲೆ ಅಧ್ಯಯನ ನಡೆಸಿ ಭಯಾನಕ ವರದಿಯನ್ನು ಬಹಿರಂಗಪಡಿಸಿದೆ.

ಈ ವರದಿಯ ಪ್ರಕಾರ ಬೆಂಗಳೂರಿಗೆ ಬರುವ ದಿನ ಉಪಯೋಗಿ ಆಹಾರ ಪ್ರದಾರ್ಥಗಳಾದ ಅಕ್ಕಿ, ತರಕಾರಿ, ಜೋಳ , ಬೇಬಿಕಾರ್ನ್, ಅಮೃತ ಅಂತಾ ಕುಡಿಯೋ ಹಾಲು, ಸೊಪ್ಪು ಎಲ್ಲವೂ ರಾಮನಗರ, ಬೈರಮಂಗಲ, ಕನಕಪುರ, ಸುತ್ತಮುತ್ತಲಿನ ಊರೀನಲ್ಲಿ ಬೆಳೆಯುತ್ತಿದು, ಅಲ್ಲಿನ ಸಂಪೂರ್ಣ ಹೊಲಗಳಿಗೆ ಬರುವ ನೀರು ಬೆಳ್ಳಂದೂರಿಗಿಂತಲೂ ವಿಷವಾಗಿರುವ ವೃಷಾಭವತಿಯು ಬೈರಮಂಗಲದ ಮೂಲಕ ಹಾದು ಅರ್ಕಾವತಿ ಸೇರಿ, ಕಾವೇರಿಯಲ್ಲಿ ಸಂಗಮವಾಗುತ್ತೆ ಈ ನೀರಿನಲ್ಲಿ ಕ್ಯಾನ್ಸರ್ ಕಾರಕ ಸೀಸದ ಅಂಶ, ಮ್ಯಾಗ್ನೇಶಿಯಂ, ಕ್ರೋಮಿಯಂ ಇರುವುದನ್ನು ‘ಏಟ್ರೀ’ ದೃಢಪಡಿಸಿದೆ.

ಈ ಸಂಬಂಧ ‘ಏಟ್ರೀ’ ಸಂಸ್ಥೆಯು ಸರ್ಕಾರಕ್ಕೆ ವರದಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜಲಮಂಡಳಿ ಸಹ ನೀರನ್ನು ಶುದ್ಧೀಕರಣ ಮಾಡುವತ್ತ ಗಮನ ಹರಿಸಿಲ್ಲ. ಇದರ ಬಗ್ಗೆ ಪರಿಸರವಾದಿಗಳು ಆಕ್ರೋಷಗೊಂಡು NGT(NATIONAL GREEN TRIBUNAL) ಗೇ ಕಂಪ್ಲೇಟ್ ನೀಡಲು ಸಜಾಗಿದ್ದಾರೆ ಎಂದು ತಿಳಿದುಬಂದಿದೆ. ಇಂತಹ ಆಹಾರ ಪ್ರದಾರ್ಥ ಸೇವಿಸುವ ಬೆಂಗಳೂರಿನ ಪ್ರಜೆಗಳು ನಿಮ್ಮ ಮನೆಗೆ ತರುವ ವಸ್ತುಗಳ ಮೇಲೆ ಗಮನಹರಿಸಿ ಸೇವಿಸುವುದು ಒಳ್ಳೆಯದು.