ಅಭಿಷೇಕಪ್ರಿಯ ಶಿವನಿಗೆ ಪ್ರಿಯವಾದ ನೈವೇದ್ಯ ಹೆಸರುಬೇಳೆ ಪಾಯಸ ಮಾಡುವ ವಿಧಾನ

0
1353

ಹಿಂದೂಗಳಲ್ಲಿ ಧಾರ್ಮಿಕ ಆಚರಣೆಗಳು ನಂಬಿಕೆಗಳು ಹೇಗೆ ಚ್ಯುತಿ ಇಲ್ಲದೆ ನಡೆದುಕೊಂಡು ಬರುತ್ತದೋ ಅದೇ ರೀತಿ ದೇವರನ್ನು ಸಂತೃಪ್ತಗೊಳಿಸುವ ತಿನಿಸು, ನೈವೇದ್ಯ ಕೂಡ ಶಿಸ್ತು, ಶುಚಿ, ರುಚಿಯ ವೈವಿಧ್ಯತೆಯಾಗಿರುತ್ತದೆ. ಪ್ರತಿಯೊಂದು ಹಬ್ಬಕ್ಕೂ ಮಾಡುವ ತಿಂಡಿ ತಿನಿಸುಗಳು ಅಷ್ಟೇ ಪ್ರೀತಿ ಭಯ ಭಕ್ತಿಯಿಂದ ಮಾಡಲ್ಪಟ್ಟಿರುತ್ತದೆ. ಈಶ್ವರನಿಗೆ ಪ್ರಿಯವಾದ ಹಲವು ತಿನಿಸುಗಳಲ್ಲಿ ಹೆಸರುಬೇಳೆ ಪಾಯಸ ಕೂಡ ಒಂದು. ಅದರಲ್ಲೂ ಶಿವನಿಗೆ ಹೆಸರುಬೇಳೆ ಪಾಯಸ ತುಂಬಾ ಪ್ರಿಯವಾದ ನೈವೇದ್ಯ.

ಬೇಕಾಗುವ ಪದಾರ್ಥಗಳು…

 • ಹೆಸರುಬೇಳೆ – 1 ಬಟ್ಟಲು
 • ಹಾಲು – 3 ಬಟ್ಟಲು
 • ಸಕ್ಕರೆ – 1 ಬಟ್ಟಲು
 • ಏಲಕ್ಕಿ ಪುಡಿ – ಸ್ವಲ್ಪ
 • ಕೇಸರಿ ದಳ – 2-3
 • ದ್ರಾಕ್ಷಿ, ಗೋಡಂಬಿ – ಸ್ವಲ್ಪ
 • ತುಪ್ಪ – 3-4 ಚಮಚ

ಮಾಡುವ ವಿಧಾನ…

 1. ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಹಾಲನ್ನು ಕುದಿಸಬೇಕು.
 2. ಪ್ರೆಶರ್ ಕುಕ್ಕರ್ ತೆಗೆದುಕೊಂಡು ಅದಕ್ಕೆ ಹೆಸರುಬೇಳೆ ಹಾಗೂ ಬೇಯಲು ನೀರು ಹಾಕಿ 2-3 ವಿಶಲ್ ಕೂಗಿಸಿಕೊಳ್ಳಬೇಕು.
 3. ನಂತರ ಕುಕ್ಕರ್ ಮುಚ್ಚಳ ತೆಗೆದು ಅದಕ್ಕೆ ಸಕ್ಕರೆಯನ್ನು ಹಾಗೂ ಸಕ್ಕರೆ ಸಂಪೂರ್ಣ ಕರಗುವವರೆಗೂ ಕೈಯಿಂದ ಕೆದಕುತ್ತಿರಬೇಕು.
 4. ನಂತರ ಕಾದ ಹಾಲನ್ನು ಇದಕ್ಕೆ ಹಾಗಿ 5-10 ನಿಮಿಷ ಕುದಿಸಬೇಕು.
 5. ಪ್ಯಾನ್ ವೊಂದನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
 6. ಬೆಂದ ಹೆಸರುಬೇಳೆಗೆ ಹುರಿದುಕೊಂಡ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ ಹಾಗೂ ಕೇಸರಿ ದಳಗಳನ್ನು ಹಾಕಿ 3 ನಿಮಿಷ ಕುದಿಸಿದರೆ ರುಚಿಕರವಾದ ಹೆಸರುಬೇಳೆ ಪಾಯಸ ಸವಿಯಲು ಸಿದ್ಧ.