ಬೆಂಗಳೂರಿನ ತಿಂಡಿ ರಾಜಧಾನಿ, ವಿವಿಪುರದ ತಿಂಡಿ ಬೀದಿ!!!

0
998

ರಾತ್ರಿ 8ರ ಸುಮಾರಿಗೆ ಹಸಿವಿನಿಂದ ಕಂಗೆಟ್ಟಿದ್ದ ಬಕಾಸುರನೋರ್ವನಿಗೆ ಸುತ್ತ-ಮುತ್ತ ಯಾವುದೇ ಹೋಟೆಲ್‍ಗಳು ಕಾಣಲಿಲ್ಲ. ನಂತರ ಆಟೋ ಹತ್ತಿ ಬಂದಿಳಿದಿದ್ದು ವಿವಿಪುರಂಗೆ, ವಿವಿಪುರಂ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಂತೆ ಆತನ ಕಣ್ಣಿಗೆ ಬೀದಿದ್ದು ಫುಡ್‍ಸ್ಟ್ರೀಟ್. ಎಲ್ಲಿ ನೋಡಿದರೂ  ಸಾಲು ಸಾಲು ಖಾದ್ಯಗಳ ಅಂಗಡಿಗಳು, ಒಂದೆಡೆ ವಿವಿಧ ಬಗೆಯ ದೋಸೆಗಳನ್ನು ಮಾಡುತ್ತಿದ್ದರೆ, ಮತ್ತೊಂದೆಡೆ ಪಾವ್ ಬಾಜಿಸ್ಟಾಲ್, ಸ್ವೀಟ್‍ಕಾರ್ನ್, ಮಂಚೂರಿಯನ್, ಗುಲ್ಕಂಡ್, ಗೋಬಿಮಂಚೂರಿ….

Image result for vv puram street food

ಇನ್ನೊಂದೆಡೆ ಇಡ್ಲಿವಡೆ, ಶುದ್ದ ಎಣ್ಣೆಯಲ್ಲಿ ಆಗಷ್ಟೆ ಕರಿದು ಬಣಲೆಗೆ ಹಾಕುತ್ತಿರುವ ತರಕಾರಿಯಿಂದ ತಯಾರಿಸಿದ ಬಜ್ಜಿಗಳು…. ಮೊದಲೇ ಹಸಿವಿನಿಂದ ಕಂಗೆಟ್ಟಿದ್ದ ಬಕಾಸುರನಿಗೆ ಯಾವುದು ತಿನ್ನುವುದು, ಯಾವುದನ್ನು ಬಿಡುವುದು ಎಂದು ತೋಚಲಿಲ್ಲ…… ತರಕಾರಿ ಬಜ್ಜಿ ಪಾವ್‍ಬಾಜಿಸ್ಟಾಲ್‍ಗೆ ತೆರಳಿ ವಿವಿಧ ಬಗೆಯ ಪಾವ್‍ಬಾಜಿಯನ್ನು ಒಂದಾದ ಮೇಲೊಂದರಂತೆ ಸವಿಯುತ್ತಾನೆ. ನಂತರ ಗೋಬಿ ಮಂಚೂರಿ ಸ್ಟಾಲ್‍ಕಡೆಗೆ ಬಂದು ಒಂದು ಪ್ಲೇಟ್ ಗೋಬಿ ಮಂಚೂರಿ ತಿನ್ನುತ್ತಾನೆ. ಅದು ಆತನಿಗೆ ಎಲ್ಲೂ ಸಾಲುವುದಿಲ್ಲ.

Image result for vv puram street food

ನಂತರ ಮಾಣಿಯ ಬಳಿ ಇನ್ನಷ್ಟು ಮಂಚೂರಿ ಕೊಡುವಂತೆ ಸೂಚಿಸಿ ಹತ್ತು ಹಲವು ಬಗೆಯ ಮಂಚೂರಿಗಳನ್ನು ತಿಂದು ಡುರ್…..ಎಂದು ತೇಗಿದಾಗ ಪಕ್ಕದಲ್ಲಿದ್ದ ಲಲನಾ ಮಣಿಯರು ಬಕಾಸುರನನ್ನು ನಿಬ್ಬೆರಗಾಗುತ್ತಾರೆ. ಪಕ್ಕದ ಸ್ಟಾಲ್‍ನಲ್ಲಿ ಆಗಷ್ಟೆ ತಯಾರಿಸಿದ ಬಿಸಿ ಬಿಸಿ ಬೆಣ್ಣೆದೋಸೆಗಳನ್ನು ನೋಡಿ ಬಕಾಸುರನ ಬಾಯಲ್ಲಿ ನೀರೂರಿತು………ಆಲೂಗಡ್ಡೆ ಪಲ್ಯ ಮತ್ತು ಚಟ್ನಿಯೊಂದಿಗೆ ಹಂಚಿಕೊಂಡು ಬೆಣ್ಣೆ ದೋಸೆತಿಂದಾಗ ಆಹಾ…..ಎಂಥಹ ರುಚಿ ವಿವರಿಸಲು ಅಸಾಧ್ಯ……ನಂತರ ಪಕ್ಕದಲ್ಲಿ ತಯಾರಿಸುತ್ತಿದ್ದ ಎಣ್ಣೆಯಲ್ಲಿ ಕರಿದ ತರಕಾರಿ ಬಜ್ಜಿಗಳನ್ನು ಗಬ ಗಬನೆ ತಿಂದ…….

Image result for vv puram street food

ಆಗ ಬಕಾಸುರನ ಮೂಗಿಗೆ ಕಾಫಿಯ ಘಮ ಘಮ ವಾಸನೆ ಬಡಿಯಿತು. ಬಳಿಕ ಕಾಫಿಸ್ಟಾಲ್‍ಗೆ ಹೋಗಿ ಬಿಸಿ ಬಿಸಿ ಕಾಫಿ ಹೀರಿ…….. ಮುಗುಳ್ನಗುತ್ತಾ ಫುಡ್‍ಸ್ಟ್ರೀಟ್‍ಗೆ ಬೀಳ್ಕೊಟ್ಟ….. ಒಂದೇ ಸೂರಿನಡಿ ಹಲವು ಖಾದ್ಯ ಸಿಲಿಕಾನ್ ಸಿಟಿ ಬೆಂಗಳೂರಿನ ವಿವಿಪುರಂ ರಸ್ತೆಯಲ್ಲಿ ನಡೆದಾಡಿದರೆ ಹತ್ತು ಹಲವಾರು ಫುಡ್‍ಸ್ಟ್ರೀಟ್ ಸ್ಟಾಲ್‍ಗಳು ಸಿಗುತ್ತವೆ. ಇಲ್ಲಿ ಎಲ್ಲಾ ಬಗೆಯ ತಿನಿಸುಗಳು ಒಂದೇ ಸೂರಿನಡಿಯಲ್ಲಿ ದೊರಕುತ್ತವೆ. ಒಂದು ಬಾರಿ ಫುಡ್‍ಸ್ಟ್ರೀಟ್‍ಗೆ ಭೇಟಿ ನೀಡಿ, ಅಲ್ಲಿನ ತಿನಿಸುಗಳನ್ನು ಸವಿದರೆ ಮತ್ತೆ ಆ ಸವಿಯನ್ನು ತಿನ್ನಲೆಂದು ಮತ್ತೆ ಅಲ್ಲಿಗೆ ಹೋಗೋದಂತೂ ಗ್ಯಾರಂಟಿ.

Image result for vv puram street food

ವಿವಿಪುರಂ ಫುಡ್‍ಸ್ಟ್ರೀಟ್‍ನಲ್ಲಿ ಬಾಯಲ್ಲಿ ನೀರೂರಿಸುವ ಹಾಟ್ ಅಂಡ್ ಸ್ಪೈಸಿ ಮಸಾಲ ದೋಸೆಯಿಂದ ಹಿಡಿದು ಶುದ್ಧ ತುಪ್ಪದಲ್ಲಿ ಮಾಡಿದಂತಹ ದಾಲ್ ಹೋಳಿಗೆಯವರೆಗೆ ಎಲ್ಲಾ ರೀತಿಯ ತಿನಿಸುಗಳು ಒಂದೇ ಸೂರಿನಡಿಯಲ್ಲಿ ಸಿಗುವ ತಾಣವಾಗಿದೆ. ಇಲ್ಲಿರುವ ಇತರ ಜನಪ್ರಿಯ ಸ್ಟಾಲ್‍ಗಳೆಂದರೆ ಪಾವ್ ಬಾಜಿಸ್ಟಾಲ್, ಸ್ವೀಟ್‍ಕಾರ್ನ್, ಮಂಚೂರಿಯನ್ ಹಾಗೂ ಗುಲ್ಕಂಡ್ ಸೆಂಟರ್. ಫುಡ್‍ಸ್ಟ್ರೀಟ್‍ನ ಸ್ಟಾಲ್‍ಗಳು ಮಧ್ಯರಾತ್ರಿ 2ರ ವರೆಗೂ ತೆರೆದಿರುವುದು ಇದರ ಇನ್ನೊಂದು ವಿಶೇಷ. ಇಲ್ಲಿನ ಖಾದ್ಯಗಳನ್ನು ಸವಿಯಲೆಂದೇ ನಗರದ ನಾನಾ ಕಡೆಯಿಂದ ಜನ ಮುಗಿಬೀಳುತ್ತಾರೆ. ಬ್ಯಾಚುಲರ್ಸ್‍ಗಳಂತೂ ಪ್ರತಿದಿನ ಭೇಟಿ ನೀಡಿ, ತಮಗೆ ಬೇಕಾದ ತಿನಿಸುಗಳನ್ನು ತಿಂದು ಆನಂದ ಪಡುತ್ತಾರೆ.