ನೀವೂ ಪ್ರತಿನಿತ್ಯವೂ ಒಂದೇ ತರಹದ ಆಹಾರ ಸೇವಿಸುತ್ತಿರಾ? ಈ ಅಭ್ಯಾಸ ಒಳ್ಳೆಯದಲ್ಲ ಯಾಕೆ ಅಂತ ಈ ಮಾಹಿತಿ ನೋಡಿ.!

0
652

ಪ್ರತಿಯೊಬ್ಬರಿಗೂ ಅವರದೇ ಆದ ನೆಚ್ಚಿನ ಆಹಾರ ಇರುತ್ತೆ, ಅದನ್ನೇ ಪ್ರತಿನಿತ್ಯವೂ ತಿನ್ನುತ್ತಾರೆ ಬೇರೆ ಯಾವುದೇ ತಿಂಡಿ, ಊಟ ಇದ್ದರು ಕೂಡ ಅವರ ಇಷ್ಟದ ಆಹಾರವನ್ನು ಮಾತ್ರ ಸೇವಿಸುತ್ತಾರೆ. ಅದರಲ್ಲಿ ಇದು ಒಂದೇ ಅಂತಲ್ಲ ಇಡ್ಲಿ ದೋಸೆ, ರೈಸ್, ರೊಟ್ಟಿ, ಅವಲಕ್ಕಿ, ಬಾಳೆಹಣ್ಣು ಸೇರಿದಂತೆ ಹಲವು ಆಹಾರಗಳಲ್ಲಿ ಪ್ರತಿನಿತ್ಯವೂ ಒಂದನ್ನೇ ಸೇವಿಸಿದರೆ ನಿಮ್ಮ ಆರೋಗ್ಯಕ್ಕೆ ಸರಿಯಲ್ಲ ಎಂದು ಸಂಶೋಧನೆ ಒಂದು ಹೇಳಿದೆ. ಏಕೆಂದರೆ ಅತಿಯಾದ ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ ಹಾಗೆಂದ ಮಾತ್ರಕ್ಕೆ ನಿತ್ಯ ಅದನ್ನೇ
ಸೇವಿಸುವುದು ಉತ್ತಮ ಅಭ್ಯಾಸವಲ್ಲ.

ಹೋದು ಕೆಲವರಂತೂ ಸರಳವಾದ ಆಹಾರಕ್ರಮವನ್ನು ಅನುಸರಿಸುವುದರಿಂದ ಬೊಜ್ಜು ಕರಗಿಸಬಹುದು, ದೇಹದ ಅರೋಗ್ಯ ಕಾಪಾಡಬಹುದು ಎನ್ನುವ ಉದ್ದೇಶದಿಂದ. ಅಥವಾ ಹಣ್ಣು, ತರಕಾರಿ ತಿನ್ನಲು ಇಷ್ಟವಿಲ್ಲ ಎನ್ನುವ ಕಾರಣಗಳಿಂದಾಗಿ ಕೆಲವಷ್ಟೇ ಆಹಾರಗಳಿಗೆ ನೀವು ಸೀಮಿತವಾಗಿ ಬಳಸುತ್ತಾರೆ. ಇದರಿಂದ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದು, ನಮ್ಮ ದೇಹಕ್ಕೆ ಎಲ್ಲಾ ರೀತಿಯ ಆಹಾರದ ಅಗತ್ಯವಿದೆ, ಕೊಬ್ಬಿನಂಶವೂ ಬೇಕು, ಪೌಷ್ಟಿಕಾಂಶವೂ ಬೇಕು. ಏಳು ಬಣ್ಣಗಳ ಹಣ್ಣು, ತರಕಾರಿ, ಪೋಷಕಾಂಶಗಳುಳ್ಳ ಆಹಾರವನ್ನು ಸೇವಿಸುವುದು ಉತ್ತಮ ಆಹಾರ ಕ್ರಮ. ಅದಕ್ಕಾಗಿ ಒಂದೇ ಮಾದರಿ ಸರಿಯಲ್ಲ.

ಒಂದು ವೇಳೆ ನೀವು ಒಂದೇ ರೀತಿಯ ಆಹಾರವನ್ನು ತಿಂದರೆ ಏನೆಲ್ಲಾ ತೊಂದರೆ ಅನುಭವಿಸಬೇಕಾಗುತ್ತೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

1. ಮುಖ್ಯ ಪೌಷ್ಠಿಕಾಂಶಗಳ ಕೊರತೆ

ಒಂದೇ ರೀತಿಯ ಆಹಾರ ಕ್ರಮ ಸರಿಯಾದ ಪೌಷ್ಠಿಕಾಂಶವನ್ನು ಒದಗಿಸಲು ಸಾಧ್ಯವಿಲ್ಲ, ನಮ್ಮ ದೇಹ ಸರಿಯಾಗಿ ಕಾರ್ಯನಿರ್ವಹಿಸಲು ಸ್ಥೂಲ ಹಾಗೂ ಸೂಕ್ಷ್ಮ ಪೋಷಕಾಂಶಗಳುಳ್ಳ ಆಹಾರವನ್ನು ಸೇವಿಸುವುದು ಅತ್ಯಗತ್ಯ. ದೇಹದ ಈ ಬೇಡಿಕೆ ಪೂರ್ಣವಾಗುವುದು ವಿವಿಧ ಆಹಾರ, ಹಣ್ಣು, ತರಕಾರಿಗಳನ್ನು ತಿಂದಾಗ ಮಾತ್ರ. ಅದನ್ನು ಬಿಟ್ಟು ಒಂದೇ ವಿಧಧ ಹಣ್ಣು, ಪೋಷಕಾಂಶವುಳ್ಳ ಆಹಾರವನ್ನು ಸೇವಿಸಿದರೆ ಪೌಷ್ಠಿಕಾಂಶದ ಕೊರತೆ ಉಂಟಾಗುತ್ತದೆ. ನಿಮ್ಮ ಆಹಾರದ ಪಥ್ಯದಲ್ಲಿ ಸಾಕಷ್ಟು ಹಣ್ಣು, ತರಕಾರಿ, ಮೊಳಕೆ ಕಾಳುಗಳು ಕಡ್ಡಾಯವಾಗಿ ತಿನ್ನಬೇಕಾಗುತ್ತೆ.

2. ದೇಹದ ತೂಕ ಇಳಿಕೆ ತಿನ್ನುವ ಆಹಾರ

ಪ್ರತಿಯೊಬ್ಬರಿಗೂ ತೆಳ್ಳಗೆ ಬೆಳ್ಳಗೆ ಕಾಣಬೇಕು ಎನ್ನುವ ಇಚ್ಚೆಯಿಂದ ತೂಕ ಕಡಿಮೆ ಮಾಡಬೇಕು ಎಂದು ನಿತ್ಯ ಒಂದೇ ವಿಧಧ ಆಹಾರ ಸೇವಿಸುವುದು ಒಳ್ಳೆಯದಲ್ಲ. ಬದಲಾಗಿ ಇಂತಹ ವೈವಿಧ್ಯವಿಲ್ಲದ ಆಹಾರ ಕ್ರಮದಿಂದ ತೂಕ ಇಳಿಕೆ ನಿಧಾನವಾಗುತ್ತದೆ. ಅಧ್ಯಯನದ ಪ್ರಕಾರ ನಿತ್ಯ ಏಕತಾನತೆಯ ಆಹಾರ ಸೇವಿಸಿದವರಿಗಿಂತ, ವಿವಿಧ ಹಣ್ಣು-ತರಕಾರಿಗಳನ್ನು ಸೇವಿಸಿದವರು ಶೀಘ್ರವಾಗಿ ತೂಕದಲ್ಲಿ ಇಳಿಕೆ ಕಂಡಿದ್ದಾರೆ. ಅದಕ್ಕಾಗಿ ಎಲ್ಲಾ ಆಹಾರಗಳು ಎಲ್ಲದಕ್ಕೂ ಬೇಕಾಗುತ್ತೆ ಎನ್ನುವುದು ತಿಳಿಯಲೇಬೇಕು.

3. ಕರುಳಿನ ಆರೋಗ್ಯಕ್ಕೆ ಹಾನಿಕರ

ಬೇರೆ ಬೇರೆ ಆಹಾರಗಳನ್ನು ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟಿರೀಯಾಗಳ ವೃದ್ಧಿ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಕಾರಣವಾಗುತ್ತದೆ, ಅಲ್ಲದೆ ಜೀರ್ಣಕ್ರಿಯೆಗೂ ಸಹಕಾರಿ. ಒಂದೇ ಆಹಾರ ಪದ್ಧತಿ ಮೇಲಿನ ಕ್ರಿಯೆಗಳಿಗೆ ಅಡಚಣೆ ಉಂಟುಮಾಡುತ್ತದೆ. ಆದ್ದರಿಂದ ಕರುಳಿನ ಆರೋಗ್ಯಕ್ಕಾಗಿ ಅಗತ್ಯ ಪ್ರಮಾಣದ ಹಣ್ಣು, ತರಕಾರಿ ಮತ್ತು ಮೊಳಕೆ ಆಹಾರಗಳನ್ನು ಸೇವಿಸಿ.

4. ಕಾಯಿಲೆಗಳು ಬರಬಹುದು

ಒಂದೇ ಆಹಾರವನ್ನು ನಿತ್ಯ ಸೇವಿಸುವುದರಿಂದ ತಿನ್ನುವುದರಲ್ಲಿ ಆಯ್ಕೆ ಮಾಡುವ ಆಭ್ಯಾಸಕ್ಕೆ ನೀವು ಒಳಗಾಗಬಹುದು ಅಥವಾ ಕೆಲವು ಆಹಾರದಿಂದ ದೂರವಿರಲು ಯತ್ನಿಸುತ್ತೀರಿ. ಕೆಲವು ಆಹಾರವನ್ನು ಅದರ ಬಣ್ಣದಿಂದ, ಅದರ ವಿನ್ಯಾಸದಿಂದ ಅಥವಾ ವಾಸನೆಯಿಂದ ನಿರಾಕರಿಸುತ್ತೀರಿ. ಇದು ನಿಮ್ಮಲ್ಲಿ ಪೌಷ್ಟಿಕಾಂಶದ ಕೊರತೆ ಹಾಗೂ ಅನಾರೋಗ್ಯಕರ ತೂಕ ಇಳಿಕೆಗೆ ಸಹ ಕಾರಣವಾಗಬಹುದು.

5. ಆಹಾರದಲ್ಲಿ ನಿರುತ್ಸಾಹ

ಯಾವುದೇ ಆಹಾರದಲ್ಲಿ ಬದಲಾವಣೆ ಇರುವುದು ಮುಖ್ಯ, ಬಾಯಿಯ ರುಚಿ ಕೇಳಬೇಕೆ. ನಾಲಿಗೆಗೆ ನಿತ್ಯ ಒಂದೇ ರೀತಿಯ ರುಚಿಯನ್ನು ನೀಡಿದರೆ ಬೇಸರವೆನಿಸುತ್ತದೆ. ವಿವಿಧ ರುಚಿಯನ್ನು ನಾಲಿಗೆ ಸವಿಯಬೇಕು. ಇಲ್ಲವಾದಲ್ಲಿ ದೇಹದ ಆರೋಗ್ಯದ ಜತೆಗೆ ಬಾಯಿಯ ಆರೋಗ್ಯವೂ ಹಾಳಗಬಹುದು, ಆಹಾರದಲ್ಲಿ ನಿರುತ್ಸಾಹ ಮೂಡಬಹುದು ಅಥವಾ ಒಂದೇ ತೆರನಾದ ಆಹಾರ ಸೇವಿಸಿ ನಿಮ್ಮ ನಾಲಿಗೆ ಬೇರೆ ರುಚಿಯನ್ನು ಸೇವಿಸಲು ಇಷ್ಟ ಪಡದೆ ಇರಬಹುದು ಅದಕ್ಕಾಗಿ ಸರಿಯಾದ ಆಹಾರ ಸೇವಿಸುವುದು ಮುಖ್ಯ.