ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ಜನರಿಗೆ ಸಿ.ಎಂ.ಪರಿಹಾರ ನಿಧಿಯಿಂದ ಜನರಿಗೆ ಸಹಾಯ ಆಗ್ತಿರೋದು!!

0
285

ರಾಜಕೀಯದಲ್ಲಿ ಎಲ್ಲರೂ ಒಂದೇ ಚುನಾವಣೆಯ ಮೊದಲು ಆಡಿದ ಮಾತುಗಳು ಗೆದ್ದ ನಂತರ ಇರುವುದಿಲ್ಲ ಬಡವರು ನೆನಪಾಗುವುದು ಬರಿ ವೋಟ್ ಕೇಳುವ ಮುನ್ನವಷ್ಟೇ. ಇದನ್ನು ನೋಡಿರುವುದು ಕೇಳಿರುವುದು ತುಂಬಾನೇ ಇದೆ. ಅದರಲ್ಲಿ ಮಂತ್ರಿಗಳು ಜನರ ಕಷ್ಟಕ್ಕೆ ನೆನೆಯದೆ. ಬರಿ ಸ್ವಾರ್ತ ಸ್ವಂತ ಹಣಗಳಿಸುವ ಮಂತ್ರಿಗಳು ಎಷ್ಟಿಲ್ಲ ಹೇಳಿ? ಇದೆ ಕಾರಣಕ್ಕೆ ರಾಜಕೀಯ ನಾಯಕರನ್ನು ದ್ವೆಷಮಾಡುತ್ತಾರೆ. ಇಂತಹ ಕಾಲದಲ್ಲಿ ಒಳ್ಳೆಯ ಮಂತ್ರಿ ಎಲ್ಲಿ ಇದ್ದಾರೆ ಅಂದರೆ ಜನರು ಸಿದಾ ಕೈ ಮಾಡಿ ತೋರಿಸುವುದು ಎಚ್. ಡಿ ಕುಮಾರಸ್ವಾಮಿಯವರನ್ನು.

Also read: ಮೋದಿ ತರುತ್ತಿರುವ ದೇಶದ ಅತಿ ವೇಗದ ಟ್ರೈನ್ ಬಗ್ಗೆ ತಿಳಿದುಕೊಳ್ಳಿ, ನಮ್ಮ ದೇಶಾನೂ ಪಾಶ್ಚಾತ್ಯ ದೇಶಗಳಿಗಿಂತ ಕಮ್ಮಿಯಿಲ್ಲ ಅನ್ಸೋಕ್ಕೆ ಶುರು ಆಗುತ್ತೆ!!

ಹೌದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕರ್ನಾಟಕದ ನಂ. 1 ಮಂತ್ರಿ ಎಂಬ ಹೆಗ್ಗಳಿಕೆ ಪಡೆಯುತ್ತಿದ್ದಾರೆ. ಕಷ್ಟದಲ್ಲಿರುವ ಜನರಿಗೆ ಸದಾ ಮುಂದೆ ಬಂದು ನೆರವಾಗುತ್ತಿರುವ ಕುಮಾರಸ್ವಾಮಿಯವರು ಕರುಣೆ, ಸಹಾಯ ಮಾಡುವ ಮಾನವೀಯತೆಯಲ್ಲಿ ರಾಜ್ಯದ ನಂ.1 ಸಿಎಂ ಆಗಿದ್ದಾರೆ. ಕುಮಾರಸ್ವಾಮಿ ಅವರು ಕಷ್ಟ ಅಂತ ಬಂದವರಿಗೆ ಯಾವತ್ತು ಇಲ್ಲ ಅಂದಿಲ್ಲ. ಆರೋಗ್ಯ ಸಮಸ್ಯೆ ಅಂದರೆ ಸಾಕು ಹೇಗಾದರೂ ಮಾಡಿ ಸಹಾಯ ಮಾಡೇ ಮಾಡುತ್ತಾರೆ. ಇಂತಹ ಸಮಸ್ಯೆಗೆ ಸಹಾಯ ಮಾಡಲು ಇರುವ ಮುಖ್ಯಮಂತ್ರಿ ಪರಿಹಾರ ನಿಧಿಯನ್ನ ಸಿಎಂ ಕುಮಾರಸ್ವಾಮಿ ಹಿಂದಿನ ಎಲ್ಲಾ ಸಿಎಂಗಳಿಗಿಂತ ಹೆಚ್ಚು ಉಪಯೋಗಿಸಿದ್ದಾರೆ. ಸಿಎಂ ಆಗಿ 6 ತಿಂಗಳಲ್ಲೇ ಬರೋಬ್ಬರಿ 28 ಕೋಟಿ ಹಣ ಸಹಾಯವನ್ನ ನೊಂದವರಿಗಾಗಿ ಮಾಡಿದ್ದಾರೆ.

ಕಷ್ಟಕ್ಕೆ ಜನತಾ ದರ್ಶನ’

Also read: ಇನ್ಮುಂದೆ ಮೊಬೈಲ್‌ ಫೋನ್‌ಗಳ ಮಾದರಿಯಲ್ಲಿಯೇ ವಿದ್ಯುತ್‌ ಬಳಕೆಗೂ ಬಂತು ಪ್ರೀ ಪೇಯ್ಡ್‌ ರೀಚಾರ್ಜ್‌..

ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ‘ಜನತಾ ದರ್ಶನ’ಕ್ಕೆ ತರೇಹವಾರಿ ಸಮಸ್ಯೆ ಹೊತ್ತು ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಮಂದಿ ಆಗಮಿಸುತ್ತಾರೆ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿ ‘ಕೃಷ್ಣಾ’ ಆವರಣದಲ್ಲಿ ಜನಜಾತ್ರೆಯೇ ನೆರೆದಿರುತ್ತದೆ. ಈ ಜನತಾ ದರ್ಶನ’ ದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ನಿತ್ಯ 100ಕ್ಕೂ ಹೆಚ್ಚು ಅರ್ಜಿಗಳು ಬರುತ್ತವೆ. ಯಾವ ಅರ್ಜಿಗಳನ್ನ ವಾಪಸ್ ಕಳಿಸಿದ ಉದಾಹರಣೆ ಇಲ್ಲ. ಒಂದು ವೇಳೆ ದಾಖಲೆ ಇಲ್ಲದೆ ಇದ್ದರೂ, ಸಮಸ್ಯೆಯ ಸಂಪೂರ್ಣ ಮಾಹಿತಿ ಪಡೆದು ಸಹಾಯ ಮಾಡಿದ ಉದಾಹರಣೆ ಇವೆ. ಹೀಗೆ 6 ತಿಂಗಳಲ್ಲಿ 10 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಿಎಂ ಸಹಾಯಕ್ಕೆ ಬಂದಿವೆಯಂತೆ. ಎಲ್ಲರ ಅರ್ಜಿಗಳನ್ನ ಪರಿಶೀಲನೆ ಮಾಡಿ ಸಹಾಯ ಮಾಡಿದ್ದಾರೆ.

ಜನತಾ ದರ್ಶನದಲ್ಲಿ ಮಂತ್ರಿಗಳು ಮಾಡಿದ ಸಹಾಯಗಳು:

Also read: ಒಂದು ವರ್ಷ ಮೊಬೈಲ್-ನಿಂದ ದೂರ ವಿದ್ರೆ ಸಿಗಲಿದೆ 71 ಲಕ್ಷ ಬಹುಮಾನ; ಖಾಸಗಿ ಕಂಪನಿ ನೀಡಿದ ಸವಾಲಿಗೆ ನೀವ್ ರೇಡಿನಾ..?

ಹುಣಸೂರು ತಾಲ್ಲೂಕಿನ ತಿಪ್ಪಲಾಪುರ ಗ್ರಾಮದ ಮಂಜುನಾಥ್‌ ಎಂಬುವರಿಗೆ ಬೆನ್ನುಹುರಿ (ಸ್ಪೈನಲ್‌ ಕಾರ್ಡ್‌) ಚಿಕಿತ್ಸೆಗೆ ಸಿಎಂ ಪರಿಹಾರ ನಿಧಿಯಿಂದ 1 ಲಕ್ಷ ರೂ.ಗಳ ಚೆಕ್‌ ನೀಡಲಾಗಿದೆ. ಶಿರಾ ತಾಲ್ಲೂಕಿನ ನಾಗಮಣಿ ಎಂಬಾಕೆ ತಮ್ಮ ಮೂರು ತಿಂಗಳ ಮಗು ಎತ್ತಿಕೊಂಡೇ ಜನತಾ ದರ್ಶನಕ್ಕೆ ಬಂದು ಅವರ ಕಷ್ಟಗಳನ್ನು ಹೇಳಿಕೊಂಡರು ಇದಕ್ಕೆ ಮಂತ್ರಿಗಳು ಕೂಡಲೇ 2 ಲಕ್ಷ ರೂ.ಗಳ ಚೆಕ್ಕನ್ನು ಸ್ಥಳದಲ್ಲೇ ವಿತರಣೆ ಮಾಡಿದ್ದಾರೆ. ಬೆಂಗಳೂರಿನ ಆಟೋ ಚಾಲಕನ ಮಗಳಿಗೆ ಹೃದಯ ಸಮಸ್ಯೆಗೆ 5 ಲಕ್ಷ, ಬಳ್ಳಾರಿಯ ಬಡ ಕುಟುಂಬದ ಇಬ್ಬರು ಮಕ್ಕಳಿಗೆ ಬೋನ್ ಮ್ಯಾರೋ ಸಮಸ್ಯೆಗೆ 10 ಲಕ್ಷ, ಕಲಬುರ್ಗಿಯ ಯುವಕನೊಬ್ಬನಿಗೆ ಕೈಕಾಲು ಸ್ವಾಧೀನ ಇಲ್ಲದ ವ್ಯಕ್ತಿಗೆ 2 ಲಕ್ಷ ಹೀಗೆ ನೂರಾರು ಜನರಿಗೆ ಸಿಎಂ ಸಹಾಯ ಮಾಡಿದ್ದಾರೆ.

ಬೆಂಗಳೂರಿನ ನಾಗಮಣಿ ಎಂಬುವರು ತಾವು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಚಿಕಿತ್ಸೆ ವೆಚ್ಚವನ್ನು ಭರಿಸಲು ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು. ಈ ಮಹಿಳೆಗೆ ಉಚಿತ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸಿಎಂ ಕಿದ್ವಾಯಿ ನಿರ್ದೇಶಕರಿಗೆ ಸೂಚನೆ ನೀಡಿದರು. ಹೀಗೆ ಸಾವಿರಾರು ಜನರು ಯಾವುದೇ ತಮ್ಮ ಕಷ್ಟವನ್ನು ಹೇಳಿಕೊಂಡರು ತಕ್ಷಣಕ್ಕೆ ಪರಿಹಾರ ನೀಡುತ್ತಿದ್ದಾರೆ. ಬರಿ 6 ತಿಂಗಳಲ್ಲಿ 28 ಕೋಟಿ ಜನರ ಕಷ್ಟಕ್ಕೆ ನೀಡಿ ಕರುಣೆಯ ಕುಬೇರರಾಗಿದ್ದಾರೆ.