ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಣಿಕಂಠನ್ ಇಂದು ಮದ್ಯಾಹ್ನ ಒಂಟಿಸಲಗದ ದಾಳಿಗೆ ಬಲಿಯಾಗಿದ್ದಾರೆ….!!

0
579

Kannada News | Health tips in kannada

ಇಂದು ಕರ್ತವ್ಯನಿರತ ಅಧಿಕಾರಿ ಅನ್ಯಾಯವಾಗಿ ಕೊನೆಯುಸಿರೆಳೆದಿದ್ದಾರೆ. ನಾಗರಹೊಳೆ ಹುಲಿ ಯೋಜನೆ ನಿರ್ದೇಶಕರಾಗಿದ್ದ ಮಣಿಕಂಠನ್ ಅವರ ಮೇಲೆ ಆನೆಯಿಂದು ದಾಳಿ ಮಾಡಿದೆ, ಆನೆ ದಾಳಿಗೆ ಅವರು ಬಲಿಯಾಗಿದ್ದಾರೆ. ರಕ್ಷಿತಾರಣ್ಯದ ಬಳ್ಳೆ ಶಿಬಿರದ ಬಳಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಇಂದು ಮಧ್ಯಾಹ್ನ ಸುಮಾರು 12.45 ಕ್ಕೆ, ಬಳ್ಳೆ ವಲಯದಲ್ಲಿ ಸಿಬ್ಬಂದಿಯೊಂದಿಗೆ ಜೀಪಿನಲ್ಲಿ ತೆರಳುತ್ತಿದ್ದಾಗ ಆನೆ ದಾಳಿ ನಡೆಸಿದೆ‌. ಸಿಬ್ಬಂದಿ‌ ಗುಂಡು ಹಾರಿಸಲು‌ ಸಿದ್ಧತೆ ನಡೆಸುತ್ತಿರುವಷ್ಟರಲ್ಲಿ ಮಣಿಕಂಠನ್ ಅವರ ಎದೆಭಾಗ ಹಾಗೂ ತಲೆ ಭಾಗವನ್ನು ಸಲಗ ತುಳಿದು ಹಾಕಿತು ಎಂದು ತಿಳಿದು ಬಂದಿದೆ.

ನಾಗರಹೊಳೆ ಹುಲಿ ಯೋಜನೆ ನಿರ್ದೇಶಕರಾಗಿದ್ದ ಮಣಿಕಂಠನ್ ಅವರ ಮೇಲೆ ಆನೆಯಿಂದು ದಾಳಿ ಮಾಡಿದೆ, ಆನೆ ದಾಳಿಗೆ ಬಲಿಯಾಗಿದ್ದಾರೆ ಎಂದು ಎಚ್.ಡಿ.ಕೋಟೆ ತಾಲ್ಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಭಾಸ್ಕರ್ ಅವರು ಈ ಆಘಾತಕಾರಿ ವಿಷಯವನ್ನು ತಿಳಿಸಿದ್ದಾರೆ.

ವನ್ಯಜೀವಿಗಳ ಆಹಾರ ಚಕ್ರದಲ್ಲಿ ಹುಲಿಯ ಪಾತ್ರವೇ ಬಹುಮುಖ್ಯವಾಗಿದ್ದು, ಅರಣ್ಯದಲ್ಲಿನ ನೀರಿನ ಸಂಪನ್ಮೂಲ ಅಭಿವೃದ್ಧಿಗೂ ಈ ವನ್ಯಜೀವಿಗಳ ಆಹಾರ ಚಕ್ರವೇ ಬಹುಮುಖ್ಯ. ಹೀಗಾಗಿ ಯಾವುದೇ ಪ್ರಾಣಿಗಳ ಜೊತೆ ಲಘುವಾಗಿ ನಡೆದುಕೊಳ್ಳದೇ ಅರಣ್ಯದಲ್ಲಿ ಸಹಜತೆಯನ್ನು ಕಾಪಾಡುವಲ್ಲಿ ಬದ್ಧತೆ ತೋರಬೇಕು ಎಂದು ಮಣಿಕಂಠನ್ ಅವರು ಹೇಳಿದ್ದರು. ಇಷ್ಟರ ಮಟ್ಟಿಗೆ ಅವರು ಕಾಡನ್ನು ಮತ್ತು ಅಲ್ಲಿನ ವನ್ಯಜೀವಗಳನ್ನು ಪ್ರೀತಿಸುತ್ತಿದ್ದರು.

Also Read: ಮನುಷ್ಯ ಮಾಡಿದ ಸಹಾಯವನ್ನು ಬೇಗನೆ ಮರೆಯುತ್ತಾನೆ ಆದರೆ ಪ್ರಾಣಿಗಳು ಹಾಗಲ್ಲ ಇದಕ್ಕೆ ಒಂದು ಉದಾಹರಣೆ ಈ ಚಿಂಪಾಂಜಿ…!