ಸ್ನೇಹಿತೆಯ ಮಾತು ಕೇಳಿ ಉಪವಾಸ ಮಾಡಿದ ಸಾಯಿ ಭಕ್ತಳಾದ ಈ ವಿದೇಶಿ ಮಹಿಳೆಗೆ ಏನಾಯಿತು ಗೊತ್ತಾ?

0
995

ಜನರಿಗೆ ನಂಬಿಕೆ ಇರಬೇಕು ಮೂಢನಂಬಿಕೆ ಅಲ್ಲ, ದೇವರು ಗುರುಹಿರಿಯರ ಮೇಲೆ ಭಕ್ತಿ ಇರಬೇಕೆ ಹೊರತು ಭಯ ಮತ್ತು ಮೌಲ್ಯವಲ್ಲ. ಸ್ನೇಹಿತೆಯ ಮಾತು ಕೇಳಿ ವಾರಗಟ್ಟಲೆ ಉಪವಾಸ ಮಾಡಲು ಹೋದ ಸಾಯಿ ಭಕ್ತಳಾದ ಈ ವಿದೇಶಿ ಮಹಿಳೆ ಸಾವನ್ನಪ್ಪಿದ್ದಾಳೆ.

ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟು ಬೆಳೆದರು ಜನರ ನಂಬಿಕೆಗಳನ್ನು ಬದಲಾಯಿಸುವಲ್ಲಿ ಸೋತಿದೆ ಎಂಬುದಕ್ಕೆ ಈ ಮಹಿಳೆಯೇ ಉದಾಹರಣೆ. ಇಂಟಿರಿಯೆರ್ ಡಿಸೈನರ್ ಆದ ರಷ್ಯಾದ ಎಲೆನಾ ಸ್ಮೊರೊಡಿನೋವಾ ತನ್ನ ಪತಿಯೊಂದಿಗೆ ವಿಚ್ಛೇದನವಾದ ಬಳಿಕ ಸಾಯಿ ಬಾಬಾ ಭಕ್ತೆಯಾಗಿದ್ದರು. ಆದರೆ, ಸಾಯಿ ಪಂಥವನ್ನು ಮುನ್ನಡೆಸುತ್ತಿದ ಲೋಲಾ ಅವರ ಮಾತು ಕೇಳಿ ತನ್ನ ಜೀವವನ್ನೇ ಕಳೆದು ಕೊಂಡಿದ್ದಾಳೆ.

ಮೃತಪಟ್ಟ 35 ವರ್ಷದ ಎಲೆನಾ ಸ್ಮೊರೊಡಿನೋವಾ ಮೂಲತಃ ಸೈಬೀರಿಯಾದವಳು, ಎಲ್ಲರ ಜೊತೆ ನಗು-ನಗುತ್ತ ಸದಾ ಉತ್ಸಾಹದಿಂದ ಇರುತ್ತಿದ್ದ ಸ್ವಭಾವದವಳಾಗಿದ್ದಳು. ಆದರೆ, ತನ್ನ ಪತಿಯೊಂದಿಗೆ ವಿಚ್ಛೇದನವಾದ ಬಳಿಕ ಸಾಯಿ ಬಾಬಾ ಭಕ್ತೆಯಾಗಿ ಪಂತ ಸೇರಿದಳು, ಪಂಥ ಸೇರಿದ ನಂತರ ಸಂಪೂರ್ಣ ಬದಲಾಗಿದ್ದಳು ಎಂದು ಆಕೆಯ ಸ್ನೇಹಿತರು ವಿವರಿಸಿದರು.

ಎಲೆನಾ ಸೇರಿದ್ದ ಪಂಥವನ್ನು ಮಾಜಿ ಫ್ಯಾಶನ್ ಡಿಸೈನರ್ ಹಾಗೂ ಮನಶಾಸ್ತ್ರಜ್ಞೆಯಾದ ಲೋಲಾ ಮುನ್ನಡೆಸುತ್ತಿದ್ದಳು. ಲೋಲಾ ತಾನು 2011 ರಲ್ಲಿ ವಿಧಿವಶರಾದ ಸತ್ಯ ಸಾಯಿ ಬಾಬಾ ಪ್ರತಿನಿಧಿ ಎಂದು ಹೇಳಿದ್ದಳು. ಲೋಲಾ ಎಲೆನಾಗೆ ದೀರ್ಘ ಉಪವಾಸ ಮಾಡುವ ಸವಾಲು ಹಾಗೂ ತನ್ನ ಸ್ನೇಹಿತರಿಂದ ದೂರವಿರಲು ಹೇಳುತ್ತಿದ್ದಳು.

ದಕ್ಷಿಣ ಕೇಂದ್ರ ರಷ್ಯಾದ ನೋವೋಸಿಬಿಸ್ರ್ಕ್ ನಗರದಲ್ಲಿ 2 ವರ್ಷಗಳ ಹಿಂದೆ ಎಲೆನಾ ಸಾಯಿ ಬಾಬಾ ಅನುಯಾಯಿಯಾದ ನಂತರ ಎಲೆನಾ ಸ್ನೇಹಿತರನ್ನು ಮತ್ತು ಸಂಬಂಧಿಗಳಿಂದ ದೂರವಿರಲು ಶುರು ಮಾಡಿದ್ದಳು. ಲೋಲಾ ನೀಡಿದ್ದ ಹಲವಾರು ಉಪವಾಸಗಳನ್ನು ಎಲೆನಾ ಪೂರ್ತಿ ಮಾಡಿದ್ದಳು, ಆದರೆ ಕೊನೆಗೆ ಮೂರು ವಾರಗಳ ಉಪವಾಸ ಮಾಡಲು ಹೇಳಿ ಮೊದಲೆರಡು ವಾರ ನೀರು ಕೂಡ ಸೇವಿಸದಂತೆ ನಿರ್ದೇಶಿಸಿದ್ದಳು. ಇದು ಸಾಧ್ಯವಿಲ್ಲ ಎಂದು ಎಲೆನಾ ಮದ್ಯೆಯೇ ಬಿಟ್ಟಿದ್ದಳು ಆದರೂ ದೀರ್ಘ ಅಪೌಷ್ಟಿಕತೆ ಹಾಗೂ ನಿರ್ಜಲೀಕರಣದಿಂದ ಆಕೆ ಕೊನೆಯುಸಿರೆಳೆದಿದ್ದಾಳೆ.

ಎಲೆನಾ ಸಾವಿನ ನಂತರ ಲೋಲಾ ಪೊಲೀಸರಿಂದ ತಲೆಮರಿಸಿಕೊಂಡಿದ್ದಾಳೆ, ಎಲೆನಾ ಬಾಯ್ ಫ್ರೆಂಡ್ ಲೋಲಾ ಳ ನಿಷೇಧದ ನಂತರವೂ ಪದೇ-ಪದೇ ಮೆಸೇಜ್ ಮಾಡುವುದು ಮತ್ತು ಕರೆ ಮಾಡುವುದರಿಂದ ಲೋಲಾ ಗೆ ಅಸೂಯೆ ಉಂಟಾಗಿದ್ದ ಕಾರಣ ಅವಳು ಎಲೆನಾ ಗೆ ಇಂತಹ ಉಪವಾಸಗಳನ್ನು ನೀಡಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಒಟ್ಟಿನಲ್ಲಿ ಜನ ತಮ್ಮ ಹೊಟ್ಟೆಕಿಚ್ಚಿಗೋಸ್ಕರ ಇನ್ನೊಬ್ಬರ ಜೀವ ತೆಗೆಯಲು ಹಿಂಜರಿಯುವುದಿಲ್ಲ ಎನ್ನುವುದು ಈ ಘಟನೆಯಿಂದ ಸಾಬೀತಾದಂತಾಗಿದೆ…!!