ಬಿಗ್ ಬ್ರೇಕಿಂಗ್; ಐಟಿ ಅಧಿಕಾರಿಗಳು ದಾಳಿಗೆ ಹೆದರಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ.!

0
270

ಎರಡು ದಿನಗಳಿಂದ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಮನೆಯಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸಿದ್ದು ಈ ಬೆನ್ನಲ್ಲೇ ಐಟಿ ಅಧಿಕಾರಿಗಳು ಪರಂ ಪಿಎ ಮನೆ ಮೇಲೂ ದಾಳಿ ನಡೆಸಿದರು ಈ ವೇಳೆ ಅಧಿಕಾರಿಗಳ ಪ್ರಶ್ನೆಗೆ ಹೆದರಿದ ಪರಂ ಪಿಎ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಮಾಹಿತಿ ಬಂದಿದೆ, ಐಟಿ ದಾಳಿ ಮತ್ತು ವಿಚಾರಣೆಗೆ ಹೆದರಿ ರಮೇಶ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಜ್ಞಾನಭಾರತಿ ಯುನಿವರ್ಸಿಟಿ ಕ್ಯಾಂಪಸ್​ನ ಸಾಯಿ ಮೈದಾನದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರಮೇಶ್​ ಮೃತದೇಹ ಪತ್ತೆಯಾಗಿದೆ.

ಬೆದರಿಕೆ ಹಾಕಿದ ಪಿಎ ಆತ್ಮಹತ್ಯೆ?

ಹೌದು ಪರಂ ಪಿಎ ಮನೆ ಮೇಲೂ ಐಟಿ ದಾಳಿಯಾದ ಹಿನ್ನೆಲೆಯಲ್ಲಿ ಪರಮೇಶ್ವರ್ ಅವರ ಪಿಎ ರಮೇಶ್ ತನ್ನ ಆಪ್ತರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು ಎನ್ನುವ ಮಾಹಿತಿ ಇತ್ತು, ಈಗ ನೀಜವಾಗಿದ್ದು, ಐಟಿ ದಾಳಿ ಮತ್ತು ವಿಚಾರಣೆಗೆ ಹೆದರಿ ರಮೇಶ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಆಗಲ್ಲ ಎಂದು ರಮೇಶ್​ ಈ ಮೊದಲೇ ತನ್ನ ಗೆಳೆಯರಿಗೆ ಫೋನ್​ ಮಾಡಿ ಹೇಳಿದ್ದರು ಎಂದು ತಿಳಿದುಬಂದಿದೆ. ಜೊತೆಗೆ ಫೋನ್ ಸ್ವಿಚ್​ ಆಫ್​ ಮಾಡಿ ನಾಪತ್ತೆಯಾಗಿದ್ದ.

ಆತ್ಮಹತ್ಯೆ ಮಾಡಿಕೊಂಡ ರಮೇಶ್​ ಕುಣಿಗಲ್ ಮೂಲದವರಾಗಿದ್ದು, ಕೆಲವು ವರ್ಷ ಕೆಪಿಸಿಸಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಕಾಂಗ್ರೆಸ್​​ ಸರ್ಕಾರ ಬಂದ ಬಳಿಕ ಪರಮೇಶ್ವರ್​ ಅವರ ಪಿಎ ಆಗಿದ್ದರು. ಮೈತ್ರಿ ಸರ್ಕಾರದಲ್ಲಿ ಪರಮೇಶ್ವರ್ ಡಿಸಿಎಂ ಆದ ಬಳಿಕ ಸರ್ಕಾರದಿಂದ ಪಿಎ ಆಗಿ ನೇಮಕವಾಗಿದ್ದರು ಎಂದು ತಿಳಿದು ಬಂದಿದೆ. ಇಬ್ಬರು ಆಪ್ತರ ಬಳಿ ಮಾತನಾಡಿ, ನಾನು ಯೂನಿವರ್ಸಿಟಿ ಕ್ಯಾಂಪಸ್‍ನಲ್ಲಿದ್ದೀನಿ ಎಂದು ಹೇಳಿ ರಮೇಶ್ ನಾಪತ್ತೆ ಆಗಿದ್ದರು ಈ ವೇಳೆ ಸ್ನೇಹಿತರಿಗೆ ನಾನು ಬಡವ. ಹೀಗಿದ್ದರೂ ಐಟಿ ಅಧಿಕಾರಿಗಳು ನನ್ನ ಮನೆ ಮೇಲೆ ಐಟಿ ದಾಳಿ ನಡೆಸಿದ್ದಾರೆ. ನನಗೆ ಐಟಿ ವಿಚಾರಣೆ ಎದುರಿಸುವುದಕ್ಕೆ ಆಗುವುದಿಲ್ಲ.

ಐಟಿ ಅಧಿಕಾರಿಗಳು ಸಿಕ್ಕಾಪಟ್ಟೆ ಪ್ರಶ್ನೆಗಳನ್ನು ಕೇಳುತ್ತಾರೆ. ನನಗೆ ಅವರ ಪ್ರಶ್ನೆಗಳಿಗೆ ಉತ್ತರಿಸಲು ಆಗುವುದಿಲ್ಲ ಎಂದು ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿದರು. ಇದು ಕೇವಲ ಬೆದರಿಕೆ ಹಾಕಲು ಹೇಳಿರಬಹುದು ಎನ್ನಲಾಗಿತ್ತು. ಆದರೆ ಜ್ಞಾನಭಾರತಿ ಯುನಿವರ್ಸಿಟಿ ಕ್ಯಾಂಪಸ್ ನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

Also read: ಐಟಿ ದಾಳಿಯಲ್ಲಿ 100 ಕೋಟಿ ರೂ.ಅಕ್ರಮ ಹಣ ಪತ್ತೆ; ಐಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲು ಆಗದೆ ಡಿಸಿಎಂ ಪರಮೇಶ್ವರ್ ಪಿಎ ಆತ್ಮಹತ್ಯೆ ಬೆದರಿಕೆ.!