ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಚಿತ್ರರಂಗಕ್ಕೆ ಎಂಟ್ರಿ; ಮೊದಲ ಸಿನಿಮಾಕ್ಕೆ ಅಣ್ಣಾಮಲೈ ಸಂಭಾವನೆ ಎಷ್ಟು??

0
337

ಏಕಾಏಕಿ ರಾಜೀನಾಮೆ ತಗೆದುಕೊಂಡು ಅಚ್ಚರಿಗೊಳಿಸಿದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕರ್ನಾಟಕದಲ್ಲಿ ಅಪಾಯ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ರಾಜೀನಾಮೆ ನಂತರ ಕುಟುಂಬದ ಜೊತೆಗೆ ಕಾಲ ಕಳೆಯುವ ಕುರಿತು ಹೇಳಿಕೊಂಡಿದರು, ಆದರೆ ರಾಜಕೀಯಕ್ಕೆ ಸೇರುವ ಉದ್ದೇಶ ಹೊಂದಿದ್ದಾರೆ ಎನ್ನುವುದು ಎಲ್ಲರಿಗೂ ಖಚಿತವಾಗಿತ್ತು, ಆದರೆ ಈಗ ಇದೆ ಸಿಂಗಂ ಅಣ್ಣಾಮಲೈ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಭಾರಿ ವೈರಲ್ ಆಗಿದ್ದು, ಅದರಂತೆ ಅರಬ್ಬಿ’ ಎನ್ನುವ ಚಿತ್ರದಲ್ಲಿ ಅಣ್ಣಾಮಲೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ‘ಅರಬ್ಬಿ’ ಪ್ಯಾರಾ ಈಜುಪಟು ಕೆ ಎಸ್ ವಿಶ್ವಸ್ ಜೀವನಾಧಾರಿತ ಚಿತ್ರವಾಗಿದ್ದು ವಿಶ್ವಾಸ್ ಪಾತ್ರದಲ್ಲಿ ಅವರೇ ಕಾಣಿಸಿಕೊಳ್ಳುತ್ತಿದ್ದಾರೆ. ಎನ್ನುವ ಸುದ್ದಿ ಹರಡಿದ್ದು ಏನಿದು ಎನ್ನುವುದು ನೋಡೋಣ ಬನ್ನಿ.

ಸ್ಯಾಂಡಲ್‍ವುಡ್‍ಗೆ ಸಿಂಗಂ ಅಣ್ಣಾಮಲೈ ಎಂಟ್ರಿ?

ಪೊಲೀಸ್ ಅಧಿಕಾರ ತೊರೆದ ಕರ್ನಾಟಕದ ಸಿಂಗಂ ಅಣ್ಣಾಮಲೈ ಸದ್ಯ ಸಾಮಾಜಿಕ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಜನರಿಗೆ ಸಹಾಯ ಮಾಡಬೇಕು ಎನ್ನುವುದು ಅಣ್ಣಾಮಲೈ ಕನಸು. ಸದ್ಯ ಸಮಾಜಿಕ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ಅಣ್ಣಾಮಲೈ ಇದರ ಜೊತೆಗೆ ಸಿನಿಮಾರಂಗಕ್ಕು ಎಂಟ್ರಿಕೊಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅರಬ್ಬಿ’ ಚಿತ್ರದ ಮೂಲಕ ಅಣ್ಣಾಮಲೈ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಅರಬ್ಬಿ ಚಿತ್ರದಲ್ಲಿ ಅಣ್ಣಾಮಲೈ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ಯಾರಾ ಈಜುಪಟು ಕೆ.ಎಸ್ ವಿಶ್ವಾಸ್ ಅವರ ಜೀವನಚರಿತ್ರೆ ಇದಾಗಿದ್ದು, ಚಿತ್ರದಲ್ಲಿ ತಮ್ಮ ಪಾತ್ರದಲ್ಲಿ ಸ್ವತಃ ವಿಶ್ವಾಸ್ ಅವರೇ ನಟಿಸಲಿದ್ದಾರೆ. ವಿಶೇಷ ಎಂದರೆ ವಿಶ್ವಾಸ್ ಕೋಚ್ ಆಗಿ ಅಣ್ಣಾಮಲೈ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ವಿಶ್ವಾಸ್ ಅವರಿಗೆ ನಾಯಕಿಯಾಗಿ ಕಿರುತೆರೆ ನಟಿ ಚೈತ್ರಾ ರಾವ್ ನಟಿಸಲಿದ್ದಾರೆ.

ಯಾರಿವರು ಕೆ.ಎಸ್ ವಿಶ್ವಾಸ್?

ಪ್ಯಾರಾ ಸ್ವಿಮ್ಮಿಂಗ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಪ್ರತಿಭೆ. ಹತ್ತನೆ ವಯಸ್ಸಿನಲ್ಲಿ ಮನೆಯಲ್ಲಿ ಹೈಟೆನ್ಷನ್ ವೈರ್ ಮೇಲೆ ಬಿದ್ದು ಎರಡು ತಿಂಗಳು ಕೋಮದಲ್ಲಿ ಇದ್ದರು. ವಿದ್ಯುತ್ ಸ್ಪರ್ಶಕ್ಕೆ ತನ್ನ ಎರಡು ಕೈಗಳನ್ನು ಕಳೆದುಕೊಂಡರು. ವಿಶ್ವಾಸ್ ಕಾಪಾಡಲು ಮುಂದಾದ ತಂದೆ ವಿದ್ಯುತ್ ಶಾಕ್ ನಿಂದ ನಿಧನಹೊಂದಿದರು. ಎರಡು ಕೈ ಕಳೆದುಕೊಂಡು ವಿಶ್ವಾಸ್ ಚಲ ಬಿಡದೆ ಏನಾದರು ಮಾಡಬೇಕು ಎಂದು ಮುನ್ನುಗ್ಗುತ್ತಿರುವಾಗ ತಾಯಿಯನ್ನು ಕಳೆದುಕೊಳ್ಳುತ್ತಾರೆ.

ಅಣ್ಣಾಮಲೈ ಅವರು 1 ರೂ. ಸಂಭಾವನೆ?

ವಿಶ್ವಾಸ್ ಪ್ಯಾರಾ ಸ್ವಿಮ್ಮಿಂಗ್ ಕಲಿತ ನಂತರ ಕೆನಡಾ ಮತ್ತು ಜರ್ಮನಿಯಲ್ಲಿ ನಡೆದ ಪ್ಯಾರಾ ಈಜು ಸ್ಪರ್ಧೆಯಲ್ಲಿ ಚಿನ್ನ ಹಾಗೂ ಕಂಚು ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದರು. ಹೀಗಾಗಿ ವಿಶ್ವಾಸ್ ಜೀವನಾಧಾರಿತ ಚಿತ್ರದಲ್ಲಿ ಅಣ್ಣಾಮಲೈ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಈ ಚಿತ್ರಕ್ಕೆ ಅಣ್ಣಾಮಲೈ ಅವರು 1 ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೆ ಸಂಭಾವನೆ ಪಡೆದ ಬಗ್ಗೆ ಆಗಲಿ ಅಥವಾ ಚಿತ್ರದಲ್ಲಿ ಅಣ್ಣಾಮಲೈ ನಟಿಸುತ್ತಿರುವುದರ ಬಗ್ಗೆ ಅಧಿಕೃತವಾಗಿ ಮಾಹಿತಿ ಇಲ್ಲ. ಒಟ್ಟಾರೆಯಾಗಿ ಅಣ್ಣಾಮಲೈ ಸಿನಿಮಾ ರಂಗಕ್ಕೆ ಕಾಲಿಟ್ಟರೆ ಇನ್ನಷ್ಟು ವರ್ಚಸ್ಸು ಪಡೆಯುವುದರಲ್ಲಿ ಅನುಮಾನವಿಲ್ಲ. ಆದರೆ ಅಣ್ಣಾಮಲೈ ಸಿನಿಮಾ ಸೇರುವ ಕುರಿತು ಎಲ್ಲಿವೂ ಅಧಿಕೃತ ಮಾಹಿತಿ ಇಲ್ಲ.