ಸಿದ್ದರಾಮಯ್ಯ ವಿರುದ್ದ ಸೋನಿಯಾ ಗಾಂಧಿಗೆ 18 ಪುಟಗಳ ದೂರು ಸಲ್ಲಿಸಿದ ಎಚ್‍ಡಿಡಿ; ಕೆಂಡಾಮಂಡಲವಾದ ಸಿದ್ದು ಹಾಗಾದ್ರೆ ಮೈತ್ರಿ ಪತನವಾಗುವುದು ನಿಜವಾ??

0
280

ಲೋಕಸಭಾ ಚುನಾವಣೆಯ ನಂತರ ಮೈತ್ರಿ ಸರ್ಕಾರ ಪತನವಾಗುವುದು ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದೆ ವಿಷಯಕ್ಕೆ ಕಳೆದ ಒಂದು ವಾರದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವೆ ಹಲವು ವಿವಾದಗಳು ನಡೆಯುತ್ತಾನೆ ಇವೆ. ನಿನ್ನೆ ನಡೆದ ಎರಡು ನಾಯಕರು ತಮ್ಮ ತಿಕ್ಕಾಟವನ್ನು ಕೈ ಬಿಟ್ಟು ಸರ್ಕಾರ ಉಳಿಸಲು ಮತ್ತು ರಾಜ್ಯದ ಜನರ ಹಿತ ಕಾಪಾಡಲು ಒಂದ್ದಾಗಿರುತ್ತೇವೆ ಎನ್ನುವ ಮಾತುಗಳನ್ನು ಜಿಟಿ ದೇವೆಗೌಡರೆ ಹೇಳಿದ್ದರು. ಇದರಿಂದ ಮೈತ್ರಿಯ ಕುರ್ಚಿ ನಾಲ್ಕು ವರ್ಷ ಇರುವುದು ಪಕ್ಕಾ ಎನ್ನುವ ಭರವಸೆಯನ್ನು ಇಟ್ಟುಕೊಂಡ ಸಿದ್ದರಾಮಯ್ಯ ನವರಿಗೆ ದೇವೇಗೌಡರು ಶಾಕ್ ನೀಡಿದ್ದು ಇವರ ವಿರುದ್ದ ಸೋನಿಯಾ ಗಾಂಧಿಯವರಿಗೆ 18 ಪುಟಗಳ ದೂರು ಸಲ್ಲಿಸಿದ್ದಾರೆ.

Also read: ಲೋಕಸಭಾ ಚುನಾವಣೆಯಲ್ಲಿ ಸಚಿವ ರೇವಣ್ಣನವರ ಸೆಕ್ಯೂರಿಟಿ ವಾಹನದಲ್ಲಿ ಸಿಕ್ಕ ಹಣದ ವೀಡಿಯೊ ಸಾಕ್ಷಿ ರಾತ್ರೋ ರಾತ್ರಿ ಡಿಲೀಟ್ ಏನಿದು ಜಾದು??

ಹೌದು ಕಳೆದ ಒಂದು ವಾರದಿಂದ ಸರ್ಕಾರದಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಬರೆದ ಪತ್ರ ಕಾರಣವಂತೆ. ದೇವೇಗೌಡರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ 18 ಪುಟಗಳ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಹೇಗೆ ಅಡ್ಡಿ ಆಗುತ್ತಿದ್ದಾರೆ ಎನ್ನುವ ವಿಚಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವ ದೇವೇಗೌಡರು ಸಂಪೂರ್ಣವಾಗಿ ಮೈತ್ರಿಗೆ ದಕ್ಕೆ ತರುತ್ತಿರುವುದು ಸಿದ್ದರಾಮಯ್ಯ ಎಂದು ಹೇಳಿದ್ದಾರೆ. ಈ ವಿಚಾರ ಹೈ ಕಮಾಂಡ್ ನಿಂದ ತಿಳಿಯುತ್ತಿದ್ದಂತೆ ಸಿದ್ದರಾಮಯ್ಯ ಗರಂ ಆಗಿದ್ದು ಇದೆ ರೀತಿಯ ಮನಸ್ತಾಪಗಳು ಮುಂದುವರೆದರೆ ಸರ್ಕಾರ ಉಳಿಯುತ್ತೆ ಎನುವುದು ಅನುಮಾನವಾಗಿದೆ.

ದೇವೇಗೌಡರ ದೂರಿನಲ್ಲಿ ಏನಿದೆ?

ಸಿದ್ದರಾಮಯ್ಯ ವಿರುದ್ದ ಸೋನಿಯಾ ಗಾಂಧಿಗೆ ದೂರು ಸಲ್ಲಿಸಿರುವ ದೇವೇಗೌಡರು 18 ಪುಟಗಳ ದೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಯಶಸ್ವಿಯಾಗಿದ್ದರೆ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಅವಕಾಶವಿತ್ತು. ಸಿದ್ದರಾಮಯ್ಯ ಅವರು ಸಮ್ಮಿಶ್ರ ಸರ್ಕಾರವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಸರ್ಕಾರವನ್ನ ದುರ್ಬಲಗೊಳಿಸಿ ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಲೋಕಸಭೆಯಲ್ಲಿ ದೋಸ್ತಿಗಳಿಗೆ ಕಮ್ಮಿ ಸೀಟು ಬಂದರೆ ಅದಕ್ಕೆ ಸಿದ್ದರಾಮಯ್ಯ ಅವರೇ ನೇರ ಕಾರಣರಾಗಿರುತ್ತಾರೆ.

Also read: ಸಿಎಂ ಕುಮಾರಸ್ವಾಮಿಯಿಂದ ಒಂದು ಕಡೆ ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿ ಮಾಡುವ ಭರವಸೆ; ಇನ್ನೊಂದು ಕಡೆ ಖಾಸಗಿ ಕಾಲೇಜುಗಳಿಗೆ ಅನುಮತಿ, ಎತ್ತ ಸಾಗಿದೆ ಶಿಕ್ಷಣ??

ಸಿದ್ದರಾಮಯ್ಯ ತಂತ್ರದಿಂದಾಗಿಯೇ ಲೋಕಸಭಾ ಚುನಾವಣೆಯಲ್ಲಿ ದೋಸ್ತಿ ಮೈತ್ರಿ ಫಲಕೊಟ್ಟಿಲ್ಲ. ಜೆಡಿಎಸ್‍ನಲ್ಲಿದ್ದಾಗ ಅಹಿಂದ ಚಟುವಟಿಕೆ ನಡೆಸಿ ಆ ಬಳಿಕ ಅವರು ಕಾಂಗ್ರೆಸ್‍ಗೆ ಬಂದು ಮುಖ್ಯಮಂತ್ರಿಯಾದರು. ಹೀಗಾಗಿ ಸಮ್ಮಿಶ್ರ ಸರ್ಕಾರ ಉಳಿಯಬೇಕಾದರೆ ನೀವು ಸಿದ್ದರಾಮಯ್ಯರನ್ನು ನಿಯಂತ್ರಿಸಲೇಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದೆಲ್ಲ ವಿಷಯ ತಿಳಿಯುತ್ತಿದಂತೆ, ಸಿದ್ದರಾಮಯ್ಯ ಆಪ್ತರಿಂದ ಮತ್ತೆ ಸಿಎಂ ಅಭಿಯಾನ ಶುರುವಾಗಿದ್ದು, ಈ ಮೂಲಕ `ಸಮ್ಮಿಶ್ರ ಸರ್ಕಾರ ಸ್ಥಿರವಾಗಿಲ್ಲ’ ಎಂಬ ಜನಾಭಿಪ್ರಾಯ ಮೂಡಿಸುವ ಯತ್ನ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಆಪ್ತರು ಕೂಡ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು ಎನ್ನುವ ಮೂಲಕ ದೋಸ್ತಿ ನಾಯಕರ ನಿದ್ದೆಗೆಡಿಸಿದ್ದಾರೆ.

ಒಟ್ಟಾರೆಯಾಗಿ ರಾಜ್ಯ ಮೈತ್ರಿ ಸರ್ಕಾರದಲ್ಲಿನ ಎಲ್ಲ ಗೊಂದಲಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣಕರ್ತರಾಗಿದ್ದು ಅವರೇ ಈ ಸರ್ಕಾರಕ್ಕೆ ಟೈಂ ಬಾಂಬ್‌ ಫಿಕ್ಸ್‌ ಮಾಡಿದ್ದಾರೆ ಮಂಡ್ಯದ ಗೊಂದಲ ಸೇರಿದಂತೆ ಸದ್ಯದ ಮೈತ್ರಿ ಸರ್ಕಾರದ ಎಲ್ಲ ಗೊಂದಲಗಳ ಕೇಂದ್ರ ಬಿಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವ ಆರೋಪಗಳು ಕೇಳಿ ಬರುತ್ತಿದ್ದು, ಮೇ 23ರ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಟೈಂ ಬಾಂಬ್‌ನ ಬಟನ್‌ ಒತ್ತಿ ಸಮ್ಮಿಶ್ರ ಸರ್ಕಾರ ಪತನಗೊಳಿಸಲಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.