ಬಿಗ್ ಬ್ರೇಕಿಂಗ್: ಮಾಜಿ ಪ್ರಧಾನಿ ದೇವೇಗೌಡರಿಂದ ಮೈತ್ರಿ ಸರ್ಕಾರ ಪತನದ ಸೂಚನೆ; ಮದ್ಯಂತರ ಚುನಾವಣೆ ಪಕ್ಕಾ ಎಂದ ಹೆಚ್​.ಡಿ..

0
405

ರಾಜ್ಯದಲ್ಲಿ ಗೊಂದಲಕ್ಕೆ ಎಡೆಮಾಡಿದ ಮೈತ್ರಿ ಸರ್ಕಾರದ ಅಳಿವು ಉಳಿವಿನ ವಿಚಾರಕ್ಕೆ, ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರು ಹೊಸ ಬಾಂಬ್ ಸಿಡಿಸಿದ್ದು, ಸರ್ಕಾರ ಎಷ್ಟು ದಿನ ಇರುತ್ತೆ ಅಂತ ನಮಗೂ ಗೊತ್ತಿಲ್ಲ. ಎಲ್ಲವೂ ಕಾಂಗ್ರೆಸ್​ ಮುಖಂಡರ ಕೈಯಲ್ಲಿದೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆಯಾಗುವುದು ನಿಶ್ಚಿತ, ಅದರಲ್ಲಿ ಸಂಶಯವೇ ಇಲ್ಲ ಎಂದು ಹೇಳಿಕೆ ನೀಡಿದ್ದು ಬಾರಿ ಚರ್ಚೆಗೆ ಗ್ರಾಸವಾಗಿದೆ.

Also read: ರಾಜ್ಯ ಸರ್ಕಾರದಿಂದ `ಪೊಲೀಸರಿಗೆ ಭರ್ಜರಿ ಸಿಹಿಸುದ್ದಿ; ಜುಲೈ 1ರಿಂದಲೇ ಕಷ್ಟಭತ್ಯೆ ದ್ವಿಗುಣಗೊಳಿಸಿ ಆದೇಶ ಹೊರಡಿಸಿದ ಮೈತ್ರಿ ಸರ್ಕಾರ..

ಹೌದು ಇಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಕೂಡ ಯೋಗಾಸನ ಮಾಡಿ ಮಾತನಾಡಿದ್ದು. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ. ಈ ಬಗ್ಗೆ ಸಂಶಯವೇ ಇಲ್ಲ. ಬಿ ಎಸ್ ಯಡಿಯೂರಪ್ಪ ಸಿಎಂ ಆಗ್ಬಾರ್ದು ಅಂತಾ ಕಾಂಗ್ರೆಸ್‌ನವರು ಓಡಿ ಬಂದ್ರು. ಎಲ್ಲ ಚರ್ಚೆ ಮಾಡದೇ ಸರಕಾರ ರಚನೆಗೆ ಮುಂದಾದ್ರು. ಬಳಿಕ ಕುಮಾರಸ್ವಾಮಿ ಅವರನ್ನೇ ಸಿಎಂ ಮಾಡಿ ಎಂದ್ರು. ಆದರೆ ಈಗ ಒನ್ ಥರ್ಡ್ ನಿಯಮವೂ ಇಲ್ಲ, ಏನೂ ಇಲ್ಲ. ನಮ್ಮ ಒಂದು ಮಂತ್ರಿ ಸ್ಥಾನವನ್ನೂ ಕಾಂಗ್ರೆಸ್‌ಗೆ ಸರಂಡರ್ ಮಾಡಿದಿವಿ ಎಂದು ದೇವೇಗೌಡರು ಹೇಳಿದ್ದಾರೆ.

Also read: ರಾಜ್ಯದಲ್ಲಿ ಮುಂದುವರೆದ ಸೋತ ಜೆಡಿಎಸ್ ಪಕ್ಷದ ನಾಯಕರ ದರ್ಪ; ವೋಟ್ ಬಿಜೆಪಿಗೆ ಹಾಕ್ತಾನೆ, ನನ್ನತ್ರ ಬಂದು ಚೀಟಿ ಕೊಟ್ಟಿದ್ದಾನೆ, ಮತದಾರನಿಗೆ ರೇವಣ್ಣ ಕ್ಲಾಸ್..

ಸರ್ಕಾರ ಸರಿಹೋಗಲಿ ಎನ್ನುವ ಉದೇಶದಿಂದ ಎಲ್ಲವನ್ನು ಸಹಿಸ್ಕೊಂಡು ಹೋಗ್ತಿದ್ದೇನೆ, ನಾನು ಯಾವುದನ್ನೂ ಮಾತನಾಡಿಲ್ಲ, ಹಾಲಿ ಸಂಸದರಿರುವ ಕ್ಷೇತ್ರ ನಮಗೆ ಬೇಡ ಎಂದಿದ್ದೆ. ಅಲ್ಲದೆ ತುಮಕೂರು ಕ್ಷೇತ್ರವನ್ನು ನಾವು ಕೇಳಲೇ ಇಲ್ಲ. ಜತೆಗೆ ಕಾಂಗ್ರೆಸ್ ಸೋತಿರುವ ಕ್ಷೇತ್ರವನ್ನೇ ಕೊಡಿ ಎಂದಿದ್ದು. ಮೈಸೂರಿಗೋಸ್ಕರ ತುಮಕೂರು ಕ್ಷೇತ್ರ ಕೊಟ್ರು. ನಂತರ ಲೋಕಸಭೆ ಚುನಾವಣೆ ಸೋಲಿಗೆ ನಾವು ಕಾರಣ ಎಂದಾದರೆ, ಹಾಗೇನಾದ್ರು ಇದ್ರೆ ಬಹಿರಂಗವಾಗೇ ಹೇಳಬಹುದು. ಖರ್ಗೆಗೆ ಸಿಎಂ ಮಾಡಿ ಎಂದಿದ್ದೆ, ಇದೀಗ ಕಾಂಗ್ರೆಸ್‌ಗೆ ಸರಕಾರ ನಡೆಸುವ ಮನಸ್ಸಿದೆಯಾ ಇಲ್ವಾ ನಂಗೆ ಗೊತ್ತಿಲ್ಲ. ಇಲ್ಲಿ ಎಲ್ಲದಕ್ಕು ಆಕ್ಷನ್ ಆಂಡ್ ರಿಯಾಕ್ಷನ್ ನೆಸೆಸರಿ ಇಲ್ಲ ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿಕೆ ನೀಡಿದ್ದಾರೆ.

ಯೋಗದ ಮಹತ್ವ ತಿಳಿಸಿದ ಹೆಚ್​.ಡಿ

Also read: ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21ರಂದೇ ಯಾಕೆ ಆಚರಣೆ ಮಾಡುತ್ತಾರೆ? ವಿಶ್ವ ಯೋಗ ದಿನದ ಬಗ್ಗೆ ತಿಳಿಯಲೇ ಬೇಕಾದ ವಿಷಯಗಳು.!

ಇದೇ ವೇಳೆ ಮಾತನಾಡಿದ ಮಾಜಿ ಪ್ರಧಾನಿ, ಯೋಗವನ್ನು ಪ್ರಾಚೀನ ಕಾಲದಿಂದಲೂ ಋಷಿ-ಮುನಿಗಳು ಮಾಡುತ್ತಿದ್ದಾರೆ. ನಾನು ವಿದ್ಯಾರ್ಥಿಯಾಗಿದ್ದಾಗ ಸೂರ್ಯ ನಮಸ್ಕಾರ ಮಾಡುತ್ತಿದ್ದೆ. ಅದು ಆರೋಗ್ಯಕ್ಕೆ ಒಳ್ಳೆಯದು, ಮಹಾತ್ಮ ಗಾಂಧೀಜಿಯವರು ಯೋಗದ ಮಹತ್ವ ಸಾರಿದ್ದರು. ನರೇಂದ್ರ ಮೋದಿಯವರು ಹೆಚ್ಚು ಯೋಗಕ್ಕೆ ದೇಶವಿದೇಶಗಳಲ್ಲಿ ಹೆಚ್ಚು ಪ್ರಚಾರ ಮಾಡಿದ್ದರು. ಹೀಗಾಗಿ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.