ಫೋರ್ಟಿಸ್ ಆಸ್ಪತ್ರೆಯಲ್ಲಿ ೭ ವರ್ಷದ ಮಗು ಡೆಂಗೀನಿಂದಾಗಿ ಅಸುನೀಗಿತು, ಆಸ್ಪತ್ರೆಯ ವೆಚ್ಚ ೧೮ ಲಕ್ಷ ರೂಪಾಯಿ ನೋಡಿ ಶಾಕ್-ಆದ ಕುಟುಂಬ!!

0
633

ಹರ್ಯಾಣದ ಒಬ್ಬ ೭ ವರ್ಷದ ಬಾಲಕಿ ಡೆಂಗೂ ಜ್ವರದಿಂದ ಬಳಲುತ್ತಿದ್ದಳು ಖಾಸಗಿ ಆಸ್ಪತ್ರೆಯಲ್ಲಿ ಕೆಲ ದಿನ ಚಿಕಿತ್ಸೆ ನೀಡಲಾಯಿತು , ನಂತರ ಆಕೆಯನ್ನು ಗುರುಗಾವ್ ನ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಭರ್ತಿ ಮಾಡಲಾಯಿತು , ಆದರೆ ಆಗಸ್ಟ್ ೩೧ ರಂದು ಆಕೆಯ ಪರಿಸ್ಥಿತಿ ಹದಗೆಟ್ಟಿತು , ಇದಾದ ಮರುದಿನವೇ ಆ ಮಗುವನ್ನು ವೆಂಟಿಲೇಟರ್ ನಲ್ಲಿ ಇಡಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಆ ಹುಡುಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಮರಣಹೊಂದಿತು , ಈಗ ಅವಳ ತಂದೆ ಈಗ ಆ ಆಸ್ಪತ್ರೆಯ ವೈದ್ಯಕೀಯ ಬಿಲ್ ನ ತನಿಖೆಗೆ ಆಗ್ರಹಿಸಿದ್ದಾರೆ. ಇವರ ವಿವರಗಳ ಪ್ರಕಾರ ಆಸ್ಪತ್ರೆ ಕೇವಲ ೧೫ ದಿನಗಳ ಚಿಕಿತ್ಸೆಗಾಗಿ ಸುಮಾರು ೨೦ ಹಳೆಯ ರಸೀದಿಯನ್ನು ನೀಡಿದೆ ಅದರಲ್ಲಿ ೬೬೦ ಸಿರಿಂಜಸ್ , ೨೭೦೦ ಗ್ಲೋವ್ಸ್ ಮತ್ತು ಇತರೆ ವಸ್ತುಗಳು ಸೇರಿವೆ ಇವೆಲ್ಲವನ್ನೂ ಸೇರಿಸಿ ಆಸ್ಪತ್ರೆ ಒಟ್ಟು ೧೮ ಲಕ್ಷ ರೂಪಾಯಿಗಳ ರಸೀದಿ ನೀಡಿದೆ.

ಈ ವಿಷಯದ ಬಗ್ಗೆ ಕೇಂದ್ರ ಸಚಿವ ಜೆ ಪಿ ನಡ್ಡಾ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮೂಲಕ ಹುಡುಗಿಯ ತಂದೆಗೆ ತನಿಖೆಯ ಭರವಸೆ ನೀಡಿದ ನಂತರ ವಿಷಯ ಇನ್ನು ವೈರಲ್ ಆಗಿದೆ. ಆಗಸ್ಟ್ ೩೧ ರಿಂದ ಬಾಲಕಿ ಆಧ್ಯ ಸಿಂಗ್ಳನ್ನು ವೆಂಟಿಲೇಟರ್ ನಲ್ಲಿ ೧೫ ದಿನ ಇಡಲಾಯಿತು. ಇದಾದ ಮೂರ್ನಾಲ್ಕು ದಿನಗಳ ನಂತರ ವೈದ್ಯರು ಮಗುವಿಗೆ ಮೆದುಳು ಹಾನಿಯಾಗಿದೆ ಎಂದರು , ಆದರೆ ಆಧ್ಯ ತಂದೆ ಐ ಟಿ ಉದ್ಯಮಿ ಜಯಂತ್ ಸಿಂಗ್ , ವೈದ್ಯರು ಯಾವುದೇ ಸಿ ಟಿ ಅಥವಾ ಎಂ ರ್ ಐ ಸ್ಕ್ಯಾನ್ ಮಾಡಿಲ್ಲ ಎಂದು ಹೇಳಿದರು.

ಆಸ್ಪತ್ರೆಗೆ ಮಗುವನ್ನು ತಂದಾಗ ಅವಳಿಗೆ ತೀವ್ರ ಡೆಂಗೂ ಜ್ವರವಿದ್ದು ನಂತರ ಡೆಂಗೂ ಶಾಕ್ ಸಿಂಡ್ರೋಮ್ ಇರುವುದು ದೃಢಪಡಿಸಿತು ಈ IV ಫ್ಲ್ಯೂಯಿಡ್ಸ್ ಮತ್ತು ಚಿಕಿತ್ಸೆ ನೀಡುತ್ತಿದ್ದರು ಅವಳ ಪ್ಲೇಟ್- ಲೆಟ್ ಸಂಖ್ಯೆ ಮತ್ತು ರಕ್ತದಲ್ಲಿ ಪ್ಲಾಸ್ಮಾ ವೊಲ್ಯೂಮ್ ಗಣನೀಯವಾಗಿ ಇಳಿಕೆಯಾಗುತ್ತಿತು ನಂತರ ಮುಂದಿನ ೪೮ ಘಂಟೆಗಳ ವರೆಗೂ ವೆಂಟಿಲೇಟರ್ ನಲ್ಲಿ ಇಡಲಾಯಿತು , ಹುಡುಗಿಯ ಇವೆಲ್ಲ ಸ್ಥಿತಿಯ ಬಗ್ಗೆ ಪೋಷಕರಿಗೆ ಕಾಲಕಾಲಕ್ಕೆ ತಿಳಿಸಲಾಗಿದೆ ಎಂಬುದು ಆಸ್ಪತ್ರೆ ಸಿಬ್ಬಂದಿಯ ವಾದ.

ಇಷ್ಟೆಲ್ಲ ವೈದ್ಯರು ಪ್ರಯತ್ನ ಮಾಡಿದರು ಬಾಲಕಿ ಉಳಿಯಲಿಲ್ಲ , ಆದರೂ ಜಯಂತ್ ವೈದ್ಯರು ತಮ್ಮ ಪ್ರಯತ್ನ ಮಾಡಿದರು ಎಂದು ಸಮಾಧಾನದಿಂದ ಇದ್ದರು , ಆದರೆ ಯಾವಾಗ ವೈದ್ಯರು ಬಾಲಕಿಯ ದೇಹವನ್ನು ಪೂರ್ತಿ ಪ್ಲಾಸ್ಮಾ ಟ್ರಾನ್ಸ್ಪ್ಲ್ಯಾಂಟ್ ಮಾಡಬೇಕು ಎಂದರು ಅವಾಗ ಪೋಷಕರು ಆಸ್ಪತ್ರೆಯ ನಡೆಯನ್ನು ಪ್ರಶ್ನಿಸಲಾರಂಭಿಸಿದರು. ಶೇ.೮೦ ರಸ್ತು ಮೆದುಳು ಹಾನಿಯಾದ ಮಗುವಿಗೆ ಪ್ಲಾಸ್ಮಾ ಟ್ರಾನ್ಸ್ಪ್ಲ್ಯಾಂಟ್ ಚಿಕಿತ್ಸೆಯ ಅವಶ್ಯಕತೆ ಆದ್ರೂ ಏನು ಎಂಬುದು ಜಯಂತ್ ಸಿಂಗ್ ಅವರ ಪ್ರಶ್ನೆ. ಇದಾದ ನಂತರ ಜಯಂತ್ ಮತ್ತು ಅವರ ಮನೆಯವರು ಮಗುವನ್ನು ಡಿಸ್ಚಾರ್ಜ್ ಮಾಡುವಂತೆ ವೈದ್ಯರಲ್ಲಿ ಕೇಳಿಕೊಂಡರು ಆದರೆ ಅವರು ಇದು ಸಾಧ್ಯವಿಲ್ಲ ಎಂದರು ಒಂದು ವೇಳೆ ನೀವು ಡಿಸ್ಚಾರ್ಜ್ ಮಾಡಿದ್ದೆ ಆದರೆ ಅದು ವೈದ್ಯಕೀಯ ಸಲಹೆಯ ವಿರುದ್ದವಾಗುತ್ತದೆಂದು ಎಚ್ಚರಿಸಿದರು. ಡಿಸ್ಚಾರ್ಜ್ ಆಗಿ ಬೇರೆ ಆಸ್ಪತ್ರೆಗೆ ಕೇವಲ ಮಗು ಮರಣ ಹೊಂದಿದೆ ಎಂದು ದೃಢ ಪಡಿಸಲು ತೆಗೆದುಕೊಂಡು ಹೋಗಲು ಸಹ ಇವರು ಅಡ್ಡಿಪಡಿಸಿದರು , ಆಸ್ಪತ್ರೆಯವರು ನೀವು ವೈದ್ಯಕೀಯ ಸಲಹೆಯ ವಿರುದ್ದ ಡಿಸ್ಚಾರ್ಜ್ ಮಾಡಿದ ಕಾರಣ ಆಂಬುಲೆನ್ಸ್ ಒದಗಿಸಲಾಗುವುದಿಲ್ಲ ಎಂದರು.

ಕೊನೆಗೂ ಜಯಂತ್ ಅವರು ಖಾಸಗಿ ಆಂಬುಲೆನ್ಸ್ ಮೂಲಕ ಬಾಲಕಿಯನ್ನು ತೆಗೆದುಕೊಂಡು ಹೋದರು. ಜಯಂತ್ ಸಿಂಗ್ ಅವರು ೧೦ ಲಕ್ಷ ವೈದ್ಯಕೀಯ ವಿಮೆಯನ್ನು ಸಹ ಮಾಡಿಸಿದ್ದರು ಇದನ್ನು ಸಹ ಅವರು ಆಸ್ಪತ್ರೆಗಾಗಿ ನೀಡಿದರು ನಂತರ ಇವರಿಗೆ ವೈದ್ಯಕೀಯ ಸಲಹೆಯ ವಿರುದ್ದ ಡಿಸ್ಚಾರ್ಜ್ ಮಾಡಿದ ಕಾರಣ ಹುಡುಗಿಗೆ ಹಾಕಿದ್ದ ಆಸ್ಪತ್ರೆಯ ಬಟ್ಟೆಗೆ ಬಿಲ್ ಅನ್ನು ಕಟ್ಟಲು ತಿಳಿಸಲಾಯಿತು. ಬಿಲ್ ಅನ್ನು ನೋಡಿದ ಜಯಂತ್ ಗೆ ಅಚ್ಚರಿಯಾಯಿತು ಅದು ೧೮ ಲಕ್ಷದ ಬಿಲ್ ಅದರಲ್ಲಿ ೬೬೦ ಸಿರಿಂಜಸ್ , ೨೭೦೦ ಗ್ಲೋವ್ಸ್ ಮತ್ತು ಫೋರ್ಟಿಸ್ ಆಸ್ಪತ್ರೆಯ ವೆಬ್ ನಲ್ಲಿಯೇ ೧೩ ಗೆ ಸಿಗುವ ಶುಗರ್ ಟೆಸ್ಟಿಂಗ್ ಸ್ಟ್ರಿಪ್ಸ್ ಗಳನ್ನೂ ೨೦೦.ರೂ ಎಂದು ಬರೆಯಲಾಗಿತ್ತು , ಇವೆಲ್ಲವನ್ನೂ ಜಯಂತ್ ಅವರ ಗೆಳೆಯ ಟ್ವಿಟ್ಟರ್ ನಲ್ಲಿ ಹಾಕಿದ್ದಾನೆ.

ಮಗುವಿನ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು , ೧೫ ದಿನಗಳ ಕಾಲ ಪಿಡಿಯಾಟ್ರಿಕ್ ಐ ಸಿ ಯು(ಪಿ ಐ ಸಿ ಯು) ನಲ್ಲಿ ಇಡಲಾಗಿತ್ತು. ಆಕೆಗೆ ಮೆಕ್ಯಾನಿಕಲ್ ವೆಂಟಿಲೇಷನ್ , ಹೈ ಫ್ರೀಕ್ವೆನ್ಸಿ ವೆಂಟಿಲೇಷನ್ , ಕಂಟಿನ್ಯುಅಸ ರೆನಲ್ ರಿಪ್ಲೇಸೆಮೆಂಟ್ ಥೆರಪಿ , ಇಂಟ್ರಾವೇನೌಸ್ ಅಂಟಿಬಿಯೋಟಿಕ್ಸ್ , ಇನೊಟ್ರೊಪ್ಸ್ , ಸೆಡಟಿವ್ನ್ ಮತ್ತು ಅನಲ್ಗೇಷ್ಯಾ ಚಿಕಿತ್ಸೆಗಳನ್ನು ನೀಡಲಾಗಿತ್ತು. ಐ ಸಿ ಯು ರೋಗಿಗಳಿಗೆ ಬೇರೆ-ಬೇರೆ ರೀತಿಯ ವಸ್ತುಗಳ ಅಗತ್ಯವಿರುತ್ತದೆ , ಈ ರೀತಿ ಸೋಂಕು ನಿಯಂತ್ರಣ ಜಗತ್ತಿನೆಲ್ಲೆಡೆ ಮಾನ್ಯತೆ ಪಡೆದಿದೆ ಇವೆಲ್ಲವನ್ನೂ ರೋಗಿಗಳ ರಶೀದಿಯಲ್ಲಿ ಸೇರಿಸಲಾಗಿದೆ ಎಂಬುದು ಆಸ್ಪತ್ರೆ ವೈದ್ಯರ ವಾದ.

ಇಷ್ಟೆಲ್ಲ ಯಾತನೆ ಅನುಭವಿಸಿದ ಆಧ್ಯಾಳ ಕುಟುಂಬ ಸದಸ್ಯರು , ನಾವು ಗ್ರಾಹಕರ ನಾಯ್ಯಾಲಯದಲ್ಲಿ ಆಸ್ಪತ್ರೆಯ ವಿರುದ್ಧ ಕೇಸ್ ದಾಖಲಿಸುತ್ತದೆ ಎಂದು ಹೇಳಿದರು.