ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಯಾರಿಗುಂಟು? ಯಾರಿಗಿಲ್ಲ? ದೇವೇಗೌಡರಿಗೆ ಟಾಂಗ್ ಕೊಡಲು ಸುಮಲತಾಗೆ ಸಚಿವ ಸ್ಥಾನ ನೀಡುತ್ತಾರ ಮೋದಿ??

0
430

ದೇಶದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆರುತ್ತಿರುವ ನರೇಂದ್ರ ಮೋದಿ ಸರ್ಕಾರದ ಸಮಾರಂಭದಲ್ಲಿ 6 ಸಾವಿರಕ್ಕೂ ಹೆಚ್ಚು ಅತಿಥಿಗಳ ಭಾಗವಹಿಸಲಿದ್ದಾರೆ. ಇಂದು ಸಂಜೆ 7ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೂತನ ಪ್ರಧಾನಿಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಇದೇ ವೇಳೆ, ಸಚಿವ ಸಂಪುಟದ ಕೆಲ ಸದಸ್ಯರೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೆಲ್ಲವೂ ಒಂದು ಕಡೆಯಾದರೆ ಇನ್ನೊಂದು ಕಡೆ ಸಚಿವ ಸ್ಥಾನಕ್ಕಾಗಿ ರಾಜ್ಯ ಸಂಸದರಲ್ಲಿ ಕಳವಳ ಶುರುವಾಗಿದೆ.

Also read: ಎರಡನೇ ಬಾರಿಗೆ ಅಧಿಕಾರಕ್ಕೆರುವ ನರೇಂದ್ರ ಮೋದಿ ಸರ್ಕಾರದಲ್ಲಿ ಕರ್ನಾಟಕದಿಂದ ಯಾರಿಗಿದೆ ಮಂತ್ರಿ ಗಿರಿ??

ಹೌದು ನರೇಂದ್ರ ಮೋದಿ ಇಂದು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದೇಶ-ವಿದೇಶದ ಸುಮಾರು 6 ಸಾವಿರಕ್ಕೂ ಅಧಿಕ ಗಣ್ಯರು ದೆಹಲಿಗೆ ಆಗಮಿಸಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ನೂತನ ಸಚಿವರ ಪಟ್ಟಿಯನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಲಾಗುತ್ತದೆ. ಆದರೆ, ಕೇಂದ್ರ ಸಚಿವ ಸಂಪುಟದಲ್ಲಿ ಯಾರ್ಯಾರು ಇರಲಿದ್ದಾರೆ? ಯಾರ್ಯಾರಿಗೆ ಯಾವ ಖಾತೆ ನೀಡಲಾಗಿದೆ? ರಾಜ್ಯದಲ್ಲಿ ಎಷ್ಟು ಜನರಿಗೆ ಸಚಿವ ಸ್ಥಾನ ನೀಡಲಾಗಿದೆ? ಎಂಬ ಕುರಿತ ಅಂಶಗಳನ್ನು ಈವರೆಗೆ ಗೌಪ್ಯವಾಗಿಡಲಾಗಿದೆ. ಹೀಗಾಗಿ ರಾಜ್ಯದಲ್ಲೂ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಯಾರ್ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಕುರಿತು ಬಹುತೇಕ ಎಲ್ಲಾ ಸಂಸದರು ಹೈಕಮಾಂಡ್ ಫೋನ್​ ಕರೆಗಾಗಿ ಕಾದು ಕುಳಿತಿದ್ದಾರೆ ಎನ್ನಲಾಗುತ್ತಿದೆ.

ಯಾರಿಗೆ ಅಹ್ವಾನ?

ರಾಷ್ಟ್ರಪತಿ ಭವನದಲ್ಲಿ ನಡೆಯುವ ಈ ಪದಗ್ರಹಣ ಸಮಾರಂಭದಲ್ಲಿ ಸಾಕಷ್ಟು ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. BIMSTEC ದೇಶಗಳ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಈಗಾಗಲೇ ಹಲವು ನಾಯಕರು ಭಾರತಕ್ಕೆ ಆಗಮಿಸಿದ್ದಾಗಿದೆ. ಹಾಗೆಯೇ, ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ವಿಪಕ್ಷಗಳ ಮುಖಂಡರಿಗೆ ಆಹ್ವಾನ ಕೊಡಲಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸಮಾರಂಭಕ್ಕೆ ಬರಲಿದ್ದಾರೆ.

Also read: ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರದಿಂದ ಬಿಸಿತುಪ್ಪ; ಜಯಂತಿಗೆ ರಜೆ ರದ್ದು ಮಾಡಿದ ಮೈತ್ರಿ ನಾಲ್ಕನೇ ಶನಿವಾರ ರಜೆ ಘೋಷಣೆ..

ದೇಶದಲ್ಲಿ ಸಾಧಕರಿಗೆ ಅಹ್ವಾನ;

ಪಿ.ಟಿ. ಉಷಾ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಹರ್ಭಜನ್ ಸಿಂಗ್, ಸೈನಾ ನೆಹ್ವಾಲ್, ಪಿ. ಗೋಪಿಚಂದ್, ದೀಪಾ ಕರ್ಮಾಕರ್ ಮೊದಲಾದ ಕ್ರೀಡಾ ಸಾಧಕರನ್ನು ಸಮಾರಂಭಕ್ಕೆ ಬರುವಂತೆ ಕೋರಲಾಗಿದೆ. ರಜಿನಿಕಾಂತ್, ಕಂಗನಾ ರಾಣಾವತ್, ಶಾರುಕ್ ಖಾನ್, ಸಂಜಯ್ ಭನ್ಸಾಲಿ, ಕರಣ್ ಜೋಹರ್ ಮೊದಲಾದ ಸಿನಿ ಕ್ಷೇತ್ರದ ದಿಗ್ಗಜರು; ಮುಕೇಶ್ ಅಂಬಾನಿ, ಗೌತಮ್ ಅದಾನಿ, ರತನ್ ಟಾಟಾ, ಅಜಯ್ ಪಿರಾಮಲ್, ಜಾನ್ ಚೇಂಬರ್ಸ್, ಬಿಲ್ ಗೇಟ್ಸ್ ಮೊದಲಾದ ಉದ್ಯಮಿಗಳನ್ನೂ ಆಹ್ವಾನಿಸಲಾಗಿದೆ.

Also read: ರಾಜ್ಯದಲ್ಲಿ ಕುಡಿಯಲು ನೀರಿಲ್ಲ ಈ ಸಮಯದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಕೇಂದ್ರ ಜಲ ಆಯೋಗ ಆದೇಶ ನೀಡಿದ್ದು ಸರಿನಾ??

BIMSTEC ದೇಶಗಳ ಪೈಕಿ, ಬಾಂಗ್ಲಾ ಅಧ್ಯಕ್ಷ ಅಬ್ದುಲ್ ಹಮೀದ್, ಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ, ಮಯನ್ಮಾರ್ ಅಧ್ಯಕ್ಷ ವಿನ್ ಮಯಿಂಟ್, ಭೂತಾನ್ ಪ್ರಧಾನಿ ಲೋಟೇ ಶೆರಿಂಗ್ ಅವರು ಸಮಾರಂಭಕ್ಕೆ ಬರುವುದು ಖಚಿತವಾಗಿದೆ. ಥಾಯ್ಲೆಂಡ್, ಕಿರ್ಗಿಸ್ತಾನ್ ಮತ್ತು ಮಾಲ್ಡೀವ್ಸ್ ದೇಶಗಳಿಂದಲೂ ಪ್ರತಿನಿಧಿಗಳು ಬರುವ ನಿರೀಕ್ಷೆ ಇದೆ.

ಮೋದಿಯವರಿಂದ ದೇವೇಗೌಡರಿಗೆ ಟಾಂಗ್?

ಸಂಸದೆ ಸುಮಲತಾರನ್ನ ಮಂತ್ರಿ ಮಾಡುವ ಮೂಲಕ ನರೆಂದ್ರ ಮೋದಿ ಅವರು ಪೊಲಿಟಿಕಲ್ ಸರ್ಜಿಕಲ್ ಸ್ಟ್ರೈಕ್ ಮಾಡಲು ಮುಂದಾಗಿದ್ದು, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕೇಂದ್ರ ಸಚಿವರಾಗುತ್ತಾರ ಎಂಬ ಕುತೂಹಲ ಮೂಡಿದೆ. ಜೊತಗೆ ಪಕ್ಷೇತರ ಸಂಸದೆ ಸುಮಲತಾ ಅವರಿಂದ ಮೋದಿ ಅವರು ಬಾಹ್ಯ ಬೆಂಬಲ ಪಡೆಯುತ್ತಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸುಮಲತಾ ಅವರಿಗೆ ಸಚಿವ ಸ್ಥಾನ ಕೊಡುವ ಯೋಚನೆ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳಿದ್ದು, ಸುಮಲತಾ ಮಂತ್ರಿ ಮಾಡುವುದರ ಮೂಲಕ ದೇವೇಗೌಡರಿಗೆ ಟಾಂಗ್ ಕೊಡುವ ಲೆಕ್ಕಾಚಾರವನ್ನು ಮೋದಿ ಮಾಡಿದ್ದಾರೆ ಎನ್ನಲಾಗಿದೆ.

Also read: ಚುನಾವಣೆ ಗೆಲ್ಲಲ್ಲು ಕೋಟಿ ಕೋಟಿ ಹಣ ಬೇಕು ಅನ್ನುವುದನ್ನು ಸುಳ್ಳು ಮಾಡಿದ ಸಂಸ್ಕೃತ ಪಂಡಿತನ ಬಳಿ ಇರುವುದು ಬರೀ ಒಂದು ಚಿಕ್ಕ ಗುಡಿಸಲು, ಒಂದು ಸೈಕಲ್ ಮತ್ತೆ ಒಂದು ಬ್ಯಾಗು!!

ಸುಮಲತಾರಿಗೆ ಸಚಿವ ಸ್ಥಾನ ಕೊಟ್ಟು ಜೆಡಿಎಸ್ ಪ್ರಭಾವ ಕಡಿಮೆ ಮಾಡುವ ತಂತ್ರ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ. ಮಂಡ್ಯ, ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಭಾವ ಅಧಿಕವಾಗಿದೆ. ಹೀಗಾಗಿ ಅಲ್ಲಿ ಜೆಡಿಎಸ್‍ನ ಪ್ರಭಾವನ್ನು ಕುಗ್ಗಿಸಲು ಮತ್ತು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿ ಹೆಚ್ಚಿಸುವ ಮೋದಿ ಈ ರೀತಿ ಐಡಿಯಾ ಮಾಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.