ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ಬೆಂಗಳೂರಿನ ಈ ವಿದ್ಯಾರ್ಥಿನಿ ಈ ಸರ್ತಿ ಮೋದಿ ಜೊತೆ ಕೂತು ಗಣರಾಜ್ಯೋತ್ಸವದ ಪೆರೇಡ್ ನೋಡುತ್ತಾಳೆ!!

0
489

ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ 26 ರಂದು ಆಚರಿಸಲಾಗುವ ದಿನಾಚರಣೆ. ಈ ದಿನದ ವಿಶೇಷತೆ ಅಂದರೆ ಸ೦ವಿಧಾನ ಜಾರಿಗೆ ಬ೦ದು ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಇದರ ಪ್ರಯುಕ್ತ ನವದೆಹಲಿಯಲ್ಲಿ ಭಾರತ ಸಶಸ್ತ್ರಪಡೆಗಳ ಪ್ರಭಾತಭೇರಿ ನಡೆಯುತ್ತದೆ.

@publictv.in

ಇದಲ್ಲದೆ ಬೇರೆ ದೇಶದಿಂದ ಗಣ್ಯರು ಆಗಮಿಸುತ್ತಾರೆ ಇದೆ ವಿಶೇಷತೆಯಾಗಿದೆ, ಹಾಗೆಯೇ ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಗಣ್ಯಾತೀತ ಗಣ್ಯರು ಆಗಮಿಸುತ್ತಾರೆ. ಮತ್ತು ದೇಶದ ಪ್ರಧಾನಿಗಳು ಇರುವುದರಿಂದ ಬಾರಿ ಭದ್ರತೆ ಇರುತ್ತದೆ. ಇಂತಹ ಒಂದು ಸಮಾರಂಭದಲ್ಲಿ ಪಾಲ್ಗೊಳ್ಳಲು ನಮ್ಮ ರಾಜಧಾನಿಯ ವಿದ್ಯಾರ್ಥಿಯೋಬ್ಬಳಿಗೆ ಅಹ್ವಾನ ಬಂದಿದೆ.
ಹೌದು 26ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್ ಸಮಾರಂಭದಲ್ಲಿ ಭಾಗಿಯಾಗಲು ಬೆಂಗಳೂರಿನ ವಿದ್ಯಾರ್ಥಿನಿಗೆ ದೆಹಲಿಯ ಮಾನವ ಸಂಪನ್ಮೂಲ ಇಲಾಖೆಯಿಂದ ಆಹ್ವಾನ ಬಂದಿದೆ. ಈ ಪ್ರತಿಭಾವಂತ ವಿದ್ಯಾರ್ಥಿನಿ ಈ ಬಾರಿ ಪ್ರಧಾನಿ ಮೋದಿ ಜೊತೆ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವುದು ಹೆಮ್ಮೆಯಾಗಿದೆ. ಈ ವಿದ್ಯಾರ್ಥಿ ನಗರದ ಗೋಕುಲ್ ಎಕ್ಸ್ ಟೆನ್ಶನ್ ನಲ್ಲಿರುವ ನವ್ಕೀಸ್ ಶಾಲೆಯಲ್ಲಿ ಓದುತ್ತಿರುವ ‘ದೇವಿಕಾ ಸಂತೋಷ್’ ಪ್ರಧಾನ ಮಂತ್ರಿ ಬಾಕ್ಸ್ ನಲ್ಲಿ ಕುಳಿತು ಗಣರಾಜ್ಯೋತ್ಸವ ಪರೇಡ್ ವೀಕ್ಷಣೆ ಮಾಡಲಿದ್ದಾಳೆ. ದೇವಿಕಾ ಕಳೆದ ವರ್ಷ ಸಿಬಿಎಸ್‍ಸಿಯ 10ನೇ ತರಗತಿಯಲ್ಲಿ ದೇಶದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಲ್ಲಿ ಒಬ್ಬಳಾಗಿದ್ದಳು. ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲ ಸಚಿವಾಲಯದಿಂದ ಈ ವಿಶೇಷ ಆಹ್ವಾನ ಬಂದಿದೆ. ಎಂದು ತಿಳಿಸಿದ್ದಾರೆ.

100 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಹ್ವಾನ:

@publictv.in

ಪ್ರತಿ ವರ್ಷ ಗಣರಾಜ್ಯೋತ್ಸವದಲ್ಲಿ ನೂರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭಾಗವಹಿಸಲು ಆಹ್ವಾನ ಬರುತ್ತದೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಿದಂತಾಗುತ್ತದೆ. ಅದರಲ್ಲಿ ಸಿಲಿಕಾನ್ ಸಿಟಿ ಯ ದೇವಿಕಾರನ್ನು ಆಯ್ಕೆ ಮಾಡಿರುವುದು ಶಾಲೆಯ ಕುಟುಂಬಸ್ಥರು, ಸ್ನೇಹಿತರು ಹಾಗೂ ಶಿಕ್ಷಕರಿಗೆ ಸಂತಸ ತಂದಿದೆ. ಈ ಬಗ್ಗೆ ದೇವಿಕಾ ಮಾತನಾಡಿ, “ನನಗೆ 10ನೇ ತರಗತಿಯ ಸಿಬಿಎಸ್‍ಸಿ ಪರೀಕ್ಷೆಯಲ್ಲಿ ಶೇ. 99.2 ಅಂಕಗಳು ಬಂದಿತ್ತು. ನಮಗೆ ಪ್ರಧಾನಿ ಮೋದಿ ಪರವಾಗಿ ಜಲಸಂಪನ್ಮೂಲ ಇಲಾಖೆಯಿಂದ ಪತ್ರ ಬಂತು. ಗಣರಾಜ್ಯೋತ್ಸವದ ಪರೇಡ್ ನೋಡಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ನಾನು 26 ಜನವರಿಯಂದು ಉಳಿದ 99 ಮಕ್ಕಳ ಜೊತೆ ಪರೇಡ್ ವೀಕ್ಷಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾಳೆ.

ಈ ಆಹ್ವಾನ ದೇಶದ ವಿದ್ಯಾರ್ಥಿಗಳಿಗೆ ಮತಷ್ಟು ಓದಿನಲ್ಲಿ ಆಸಕ್ತಿ ಹೆಚ್ಚಿಸುತ್ತದೆ. ಗಣರಾಜ್ಯೋತ್ಸದಂತ ಆಚರಣೆಯಲ್ಲಿ ಭಾಗವಹಿಸುವ ಅವಕಾಶಗಳು ಬರಲಿ ಎಂದು ವಿದ್ಯಾರ್ಥಿಗಳು ಹೆಚ್ಚಿನ ಗಮನವನ್ನು ಹರಿಸುತ್ತಾರೆ. ಹೀಗೆ ರಾಜ್ಯದ ಬಹಳಷ್ಟು ವಿದ್ಯಾರ್ಥಿಗಳು ಇಂತಹ ಸಾಧನೆ ಮಾಡಲಿ. ಮತ್ತು 2019ರ ಗಣರಾಜ್ಯೋತ್ಸವದ ಮುಖ್ಯ ಅತಿಥಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ..! ಸಿರಿಲ್​ ರಮಫೊಸಾ ಆಗಮಿಸಲಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಗೆ 2019 ರ ಜನವರಿ 26 ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಆಹ್ವಾನ ನೀಡಿದ್ದರು. ಜನವರಿ ಅಂತ್ಯದಲ್ಲಿ ಟ್ರಂಪ್​ ಚಳಿಗಾಲದ ಅಧಿವೇಶನದಲ್ಲಿ ಹಾಗೂ ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಕಾರ್ಯನಿರತರಾಗುವ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸದ ಅತಿಥಿಯಾಗಲು ಟ್ರಂಪ್​ ನಿರಾಕರಿಸಿದ್ದರು. ನಂತರ ಗಾಂಧಿವಾದಿಗಳಾದ ಸಿರಿಲ್​ ರಮಫೊಸಾ ಅವರಿಗೆ ಆಹ್ವಾನಿಸಲಾಗಿದೆ. ಇಂತಹ ಗಣರಾಜ್ಯೋತ್ಸವದಲ್ಲಿ ಬೆಂಗಳೂರಿನ ವಿದ್ಯಾರ್ಥಿಗೆ ಆಹ್ವಾನ ಬಂದಿರುವುದು ಸಂತಸ ತಂದಿದೆ.

Also read: ಟಿವಿ ವಿಕ್ಷಕರಿಗೆ ಬಿಗ್ ಶಾಕ್; ನಾಳೆ ಸಂಪೂರ್ಣವಾಗಿ ಭಾರತದ್ಯಾದಂತ ಟಿವಿ ಕೇಬಲ್ ಬಂದ್..