ಬೆಂಗಳೂರಿನ ವಂಡರ್ಲಾದಲ್ಲಿ ಅವಘಡ; ಮಕ್ಕಳ ಜೊತೆಯಲ್ಲಿ ಅಮ್ಯೂಸ್‍ಮೆಂಟ್ ಪಾರ್ಕಿಗೆ ಹೋಗುವ ಮುನ್ನ ಈ ವಿಡಿಯೋ ನೋಡಿ;

0
1378

ವಂಡರ್ ಲಾ ದಲ್ಲಿ ಅವಘಡ ಸಂಭವಿಸಿದ್ದು, ಇದರ ವಿಡಿಯೋ ಈಗ ಬಾರಿ ವೈರಲ್ ಆಗಿದೇ, ಹೌದು ಅಮ್ಯೂಸ್‍ಮೆಂಟ್ ಪಾರ್ಕಿನಲ್ಲಿ ರೋಲರ್ ಕೋಸ್ಟರ್ ಮುಗುಚಿ ನಾಲ್ವರು ಗಾಯಗೊಂಡಿರುವ ಘಟನೆ ರಾಮನಗರ ಜಿಲ್ಲೆಯ ಬಿಡದಿಯ ವಂಡರ್ ಲಾ ದಲ್ಲಿ ನಡೆದಿದೆ. ರೋಲರ್ ಕೋಸ್ಟರ್ ಯಂತ್ರ ತಿರುಗುವ ವೇಳೆ ಜನರಿದ್ದ ರೋಲರ್ ಮಗುಚಿ ಬಿದ್ದಿದೆ. ಈ ವೇಳೆ ಐವರು ಯುವಕರು ನಾಲ್ಕೈದು ನಿಮಿಷಗಳ ಕಾಲ ಮುಗುಚಿದ ಯಂತ್ರದಡಿ ಸಿಲುಕಿದ್ದರು. ಯುವಕರ ಕಾಲುಗಳು ಆಟವಾಡುವ ರೋಲರ್ ಅಡಿ ಸಿಲುಕಿ ಗಾಯವಾಗಿದ್ದು, ನೋವಿನಿಂದ ಚೀರಾಡಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋದಲ್ಲಿ ಗಾಯಾಳುಗಳು ಅಳುತ್ತಿರುವುದು ಮನಕಲಕುವಂತಿದೆ.

Also read: ಬಿಹಾರದಲ್ಲಿ 200ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಲಿಚಿ ಹಣ್ಣು ಕಾರಣವಂತೆ; ಚೀನಾ ಮೂಲದ ಲಿಚಿ ಹಣ್ಣಲ್ಲಿ ಇರುವ ವಿಷಕಾರಿ ವೈರಸ್ ಯಾವುದು ಗೊತ್ತಾ??

ಇದಕ್ಕೆ ಕಾರಣ ವಿದ್ಯುತ್ ಹೋದಾಗ ರೋಲರ್ ಕೋಸ್ಟರ್ ನಿಲ್ಲಿಸಲಾಯಿತು. ಆಗ ಮೇಲೇರಿದವರನ್ನು ಕಾಪಾಡಲು ಅಲ್ಲಿನ ಸಿಬ್ಬಂದಿಗಳು ಕೈಯಿಂದ ತಿರುಗಿಸಲು ಶುರುಮಾಡಿದ್ದಾರೆ. ಆಗ ಈ ಯಂತ್ರ ಅಪ್ಪಳಿಸಿ ಇದರ ಅಡಿಯಲ್ಲಿ ನಾಲ್ಕು ಜನ ಸಿಲುಕಿದ್ದರು, ಇಂತಹ ಅಪಾಯಕಾರಿ ಥ್ರಿಲ್ ರೈಡ್ ನಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಅಪಘಾತದ ವಿಡಿಯೋ ಶುಕ್ರವಾರ ವೈರಲ್ ಆಗಿದೆ. ದೂರು ನೀಡಲು ಪೊಲೀಸರನ್ನು ಸಂಪರ್ಕಿಸದ ಕಾರಣ ಗಾಯಾಳುಗಳ ಹೆಸರು ತಿಳಿದಿಲ್ಲ ಎಂದು ಬೀಡಾಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆ ಕಳೆದ ಸೋಮವಾರವೇ ನಡೆದಿದ್ದು ಆಡಳಿತ ಮಂಡಳಿ ಗಾಯಾಳು ಯುವಕರಿಗೆ ಚಿಕಿತ್ಸೆ ನೀಡಿ ರಾಜಿ ಸಂಧಾನ ಮಾಡಿಕೊಂಡಿದ್ದಾರೆ. ಇದೀಗ ಯುವಕರು ಯಂತ್ರದಡಿ ಸಿಲುಕಿ ನರಳಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಪೊಲೀಸ್ ಅಧಿಕಾರಿಗಳು ನಮ್ಮ ವ್ಯಾಪ್ತಿಯಲ್ಲಿ ಯಾವುದೇ ದೂರು ದಾಖಲಾಗಿಲ್ಲ, ವಂಡರ್ಲಾ ಮತ್ತು ಆಸ್ಪತ್ರೆಯ ಸಿಬ್ಬಂದಿ ಅಪಘಾತದ ಬಗ್ಗೆ ಮಾಹಿತಿ ನೀಡಿಲ್ಲ ಮತ್ತು ಶುಕ್ರವಾರವೆ ಇದರ ಬಗ್ಗೆ ಮಾಹಿತಿ ತಿಳಿದಿದ್ದು ನಾವು ಘಟನೆಯ ಬಗ್ಗೆ ವಿವರಗಳನ್ನು ಸಂಗ್ರಹಿಸಲು ನಮ್ಮ ಸಿಬ್ಬಂದಿಯನ್ನು ಕಳುಹಿಸಲಾಗಿದೆ ಅದರಂತೆ ಘಟನೆಗೆ ಸಂಬಂಧಪಟ್ಟ ಸರಿಯಾದ ಕ್ರಮ ಕೈಗೊಳ್ಳಲಾಗುವುದು” ಎಂದು ಬಿದಾಡಿ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಹೇಳುವುದು ಏನೆಂದರೆ ಪಾಲಕರು ತಮ್ಮ ಮಕ್ಕಳ ಜೊತೆಯಲ್ಲಿ ಇಂತಹ ಹಲವು ಪಾರ್ಕ್ ಮತ್ತು ಜಾತ್ರೆಯಲ್ಲಿ ಹೋಗುತ್ತಾರೆ ಅಲ್ಲಿ ಥ್ರಿಲ್ ನೀಡುವ ಗೇಮ್-ಗಳನ್ನು ಮಕ್ಕಳು ಇಷ್ಟ ಪಡುವುದರಿಂದ ಹೋಗುವುದು ಸಾಮಾನ್ಯವಾದರು ಹೆಚ್ಚು ಅಪಘಾತಕ್ಕೀಡಾಗುವ ಸಂಭವವಿರುತ್ತದೆ. ಅದಕ್ಕಾಗಿ ಹೆಚ್ಚು ಜವಾಬ್ದಾರಿವಹಿಸುವುದು ಮುಖ್ಯವಾಗಿದೆ.