ದೊಡ್ಡ ದೊಡ್ಡ ಉದ್ಯಮಿಗಳು ಬ್ಯಾಂಕ್-ಗಳಲ್ಲಿ ಸಾಲ ಮಾಡಿ ಹಿಂದಿರುಗಿಸಲು ಆಗದೇ ಇರುವ ಮೊತ್ತ 3 ಲಕ್ಷ ಕೋಟಿ… ಆದರೂ ಅವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ, ಆದರೆ ನಮ್ಮ ರೈತರು??

0
516

Kannada News | Karnataka News

ಈಗ ಜನರಿಗೆ ಬ್ಯಾಂಕುಗಳೆಂದರೆ ಭರವಸೆಯ ಹೂಡಿಕೆಯ ತಾಣಗಳು, ಎಲ್ಲರೂ ಬ್ಯಾಂಕಿನಷ್ಟು ಯಾವುದು ಸುರಕ್ಷಿತವಲ್ಲ ಎಂದು ಬ್ಯಾಂಕಿನಲ್ಲಿ ಹಣ ಇಡುತ್ತಾರೆ, ಆದರೆ ಈ ವಿಷಯವನ್ನು ಕೇಳಿದ ಮೇಲೆ ಖಂಡಿತ ನೀವು ಅಂತಹ ತಪ್ಪು ಮಾಡುವುದಿಲ್ಲ ಬಿಡಿ. ಭಾರತದ ಬ್ಯಾಂಕುಗಳು ಕೊಟ್ಟ 3 ಲಕ್ಷ ಕೋಟಿ. ರೂ. ಸಾಲಗಳು ಎಂದು ಮರುಪಾವತಿಯಾಗುವುದಿಲ್ಲ ಎಂಬ ಆತಂಕಕಾರಿ ವಿಷಯವನ್ನು ಖುದ್ದು ಪ್ರಧಾನಿ ಸಲಹೆಗಾರ ಬಿಬೆಕ್ ಡೆಬ್ರಾಯ್ ತಿಳಿಸಿದ್ದಾರೆ.

ಪಂಜಾಬ್ ನ್ಯಾಶನಲ್ ಬ್ಯಾಂಕ್ (PNB) ನಿಯಂತ್ರಕ ದಾಖಲೆಯಲ್ಲಿ, 1.77 ಶತಕೋಟಿ ಡಾಲರ್ ಮೌಲ್ಯದ ಮೋಸದ ಮತ್ತು ಅನಧಿಕೃತ ವಹಿವಾಟುಗಳನ್ನು ಕಂಡು ಬಂದಿದೆ. ಕಾನೂನು ಜಾರಿ ಸಂಸ್ಥೆಗಳಿಗೆ ಈ ವಿಷಯವನ್ನು ತಿಳಿಸಲಾಗಿದೆ ಎಂದು PNB ಹೇಳಿದೆ. PNB ಫೆಬ್ರವರಿ 26 ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಇದು ಉಲ್ಲೇಖವಾಗಿದೆ, ಇಷ್ಟು ಮೊತ್ತದ ಮೋಸವನ್ನು ನಿರಾವ್ ಮೋದಿಯೆಂಬ ವ್ಯಾಪಾರಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ನಿರಾವ್ ಮೋದಿ ಮಾಡಿದ 1.77 ಶತಕೋಟಿ ಡಾಲರ್ ಮೌಲ್ಯದ ವಂಚನೆ ಪ್ರಕರಣದಿಂದ ಷೇರು ವಹಿವಾಟು ಶೇ.20 ರಷ್ಟು ಎಂದರೆ ಸುಮಾರು 8.9 % ಕುಸಿದಿತ್ತು. ಇದಲ್ಲದೆ ಭಾರತೀಯ ಬ್ಯಾಂಕುಗಳು ಶೇ.30 ರಷ್ಟು ಇಂತಹ ಇಂತಹ ಕೆಟ್ಟ ಸಾಲಗಳುನ್ನು ನೀಡಿದೆ ಎಂದು ಅವರು ಹೇಳಿದರು.

ಭಾರತೀಯ ಬ್ಯಾಂಕುಗಳು ಶೇ.30 ರಷ್ಟು ಎಂದರೆ ಮೂರು ವರ್ಷಗಳ ಅವಧಿಯಲ್ಲಿ 6 ಲಕ್ಷ ಕೋಟಿ ಸಾಲವನ್ನು ನೀಡಿವೆ. ಇನ್ನು ಕಳೆದ ಮೂರು ವಾರಗಳಲ್ಲಿ 1.77 ಶತಕೋಟಿ ಡಾಲರ್ ಮೌಲ್ಯದ ಸಾಲಗಳು ಮರುಪಾವತ್ತಿಯಾಗುವುದಿಲ್ಲ, ಇವೆಲ್ಲ ಮೋಸ ಅಥವಾ ವಂಚನೆ ಪ್ರಕರ್ಣಗಳಾಗಿವೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರ ದೇಶದ ಎಲ್ಲ ಸರ್ಕಾರಿ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇಷ್ಟು ಮೊತ್ತದ ಸಾಲವನ್ನು ನೀಡಿರುವ ಬ್ಯಾಂಕುಗಳ ಬಳಿ ಹೋಗುವ ಬದಲು ಸರ್ಕಾರ ಹೊಸ ಬ್ಯಾಂಕ್ ಅನ್ನು ಹುಟ್ಟು ಹಾಕಬಹುದಾಗಿದೆ ಅದಕ್ಕೆ ಸದ್ಯಕ್ಕೆ ಅಂತಹ ಮೂರ್ಖತನಕ್ಕೆ ನಮ್ಮ ಸರ್ಕಾರ ಕೈಹಾಕುವುದಿಲ್ಲ ಎಂದು ಉತ್ತರಿಸಿದರು.

ಒಟ್ಟಿನಲ್ಲಿ ಜನಸಾಮಾನ್ಯರಿಗೆ ಸಾಲ ನೀಡಲು ವರ್ಷಗಳವರೆಗೆ ಬ್ಯಾಂಕಿನ ಸುತ್ತ ಅಳೆಯುವಂತೆ ಮಾಡಿ ಶ್ರೀಮಂತರಿಗೆ ಸುಲಭವಾಗಿ ಸರಿಯಾದ ದಾಖಲೆ ಇಲ್ಲದೆ ಸಾಲ ನೀಡಿದ ಬ್ಯಾಂಕುಗಳು ಈಗ ಮುಜುಗರಕ್ಕೊಳಗಾಗಿವೆ.

Also Read: ತುಳಸಿ ನೀರಿನಲ್ಲಿರುವ ಔಷಧೀಯ ಅಂಶ ಹಲವಾರು ರೋಗ ರುಜಿನಗಳನ್ನು ದೂರಮಾಡುತ್ತದೆ !! ಇದೆ ಕಾರಣಕ್ಕೆ ನಮ್ಮ ಹಿರಿಯರು ನಿತ್ಯ ತುಳಸಿ ತೀರ್ಥವನ್ನು ಸೇವಿಸುತಿದ್ದಿದ್ದು!!