NTTF ಸಂಸ್ಥೆಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ, 2 ರಿಂದ 3 ವರ್ಷದ ತರಬೇತಿ ಜೊತೆಗೆ ಸ್ಟೈಪೆಂಡ್ ನೀಡುತ್ತಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

0
358

ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಓದಲು ಮನಸ್ಸಿದರು ಕಲಿಯಲು ಅವಕಾಶಗಳು ಕಡಿಮೆ ಇರುತ್ತೇವೆ. ಏಕೆಂದರೆ ಬರಿ ಶಿಕ್ಷಣಕ್ಕೆ ಸಂಬಂಧಪಟ್ಟ ಕಾಲೇಜ್ -ಗಳು ಮಾತ್ರ ಇರುತ್ತೇವೆ. ವೃತ್ತಿಗೆ ಸಂಬಂಧಪಟ್ಟ ಯಾವುದೇ ಉಚಿತ ತರಬೇತಿಗಳು ಇರುವುದು ಕಡಿಮೆ ಇರುವುದರಿಂದ ಗ್ರಾಮೀಣ ಪ್ರದೇಶದ ಮಕ್ಕಳು ಹಿಂದೆ ಉಳಿದಿರುತ್ತಾರೆ ಅದಕ್ಕಾಗಿ NTTF ಸಂಸ್ಥೆ ಸರ್ಕಾರದ NEEM ಸ್ಕಿಮ್ ಅಡಿಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ತರಬೇತಿ ಜೊತೆಗೆ ಸ್ಟೇಪಂಡ್ ನೀಡುತ್ತಿದ್ದು ಇದೊಂದು ಸುವರ್ಣ ಅವಕಾಶವಾಗಿದೆ.

ಏನಿದು NTTF NEEM ಸ್ಕಿಮ್?

10/12 ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ Diploma in Manufacturing. ಮೂರು ವರ್ಷದ ತರಬೇತಿ. ಜೊತೆಗೆ ರೂ 8000/- ಸ್ಟೇಪಂಡ್.

ITI (Fitter, Turner, Machinist, Grinder. ಆದ ವಿದ್ಯಾರ್ಥಿಗಳಿಗೆ 2 ವರ್ಷದ Diploma in Manufacturing ತರಬೇತಿ, ಜೊತೆಗೆ 9,000/- ಸ್ಟೇಪಂಡ್

Diploma in Mechanical ಆದ ವಿದ್ಯಾರ್ಥಿಗಳಿಗೆ ಎರಡು ವರ್ಷದ Post Diploma in Manufacturing technology ತರಬೇತಿಯನ್ನು ನೀಡಿ 10,000 ಸ್ಟೈಪೆಂಡ್

ಈ ಎಲ್ಲ ನೀಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಡ್ಮಿಶನ್ ಯುನಿಫಾರ್ಮ್, ಶೂ, ಬ್ಯಾಗ್, ಊಟ ವಸತಿ, ಬ್ಯಾಂಕ್ ಅಕೌಂಟ್ ಮಾಡಿ ನೀಡಿ. ಈ ಸಂಸ್ಥೆ ತರಬೇತಿ ನೀಡಲು ಗ್ರಾಮೀಣ ವಿದ್ಯಾರ್ಥಿಗಳಿಗೆ ಒಂದು ಸುವರ್ಣಾವಕಾಶವನ್ನು ನೀಡುತ್ತಿದೆ ಇದಕ್ಕೆ 18 ರಿಂದ 24 ವರ್ಷದ ಒಳಗಿನ ವಿದ್ಯಾರ್ಥಿಗಳು ಈ ಲಾಭವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ: 9901891928 ಸಂಪರ್ಕ ಮಾಡಿ ಮಾಹಿತಿ ಪಡೆಯಬಹುದು.

ಈ ತರಬೇತಿಯಿಂದ ಏನೆಲ್ಲಾ ಪ್ರಯೋಜನ?

ಇಲ್ಲಿ ತರಬೇತಿಯನ್ನು ಪಡೆದರೆ ಯಾವುದೇ ಟೆಕ್ನಾಲಜಿ ಸಂಬಂಧಪಟ್ಟ ಎಲ್ಲ ಉದ್ಯೋಗ ಪಡೆಯಲು ಒಂದು ಮಹತ್ವದ ವೇದಿಕೆಯಾಗಿದೆ. ಇದರಲ್ಲಿ ಉದ್ಯೋಗದ ಅನುಭವದ ಪ್ರಮಾಣ ಪತ್ರವನ್ನು ನೀಡುತ್ತಾರೆ. ರಾಷ್ಟ್ರೀಯ ಉದ್ಯೋಗದ ವರ್ಧಕ ಮಿಷನ್ ನೀಡುವ ಈ ತರಬೇತಿ ಕೈಗಾರಿಕೆಗಳೊಂದಿಗೆ ಸಹಭಾಗಿತ್ವ ಕಲ್ಪಿಸುತ್ತದೆ. NTTF ಕೂಡ ಭಾರತದಲ್ಲಿ 20 ತರಬೇತಿ ಕೇಂದ್ರಗಳು. ಸ್ಥಾಪಿಸಿದ್ದು 16 ರಾಜ್ಯಗಳಲ್ಲಿ ತರಬೇತಿ ಆರಂಭಿಸಿದ್ದು, ಕೌಶಲ್ಯ ಅಭಿವೃದ್ಧಿ ತರಬೇತಿ ಘಟಕಗಳು, ಫ್ಯಾಕಲ್ಟಿ ಬೇಸ್ 800 ಕ್ಕೂ ಹೆಚ್ಚು ಸ್ಟೇಟ್ ಆಫ್ ದಿ ಆರ್ಟ್ ಕಲಿಕೆ ಸೌಲಭ್ಯಗಳನ್ನು ಮತ್ತು ತಾಂತ್ರಿಕ ತರಬೇತಿಯನ್ನು ಕೈಗೆತ್ತಿಕೊಳ್ಳುವುದಕ್ಕೆ ಹೆಸರುವಾಸಿಯಾಗಿದೆ.

ಈ ಸ್ಕಿಮ್ ನಲ್ಲಿ ತರಬೇತಿ ಪಡೆದು ಉತ್ತಮವಾದ ಉದ್ಯೋಗಕ್ಕೆ ಹೊರದೇಶಗಳಿಗೂ ಕೂಡ ಹೋಗಬಹುದು. ಅದಕ್ಕಾಗಿ NTTF ಮುಗಿಸಿದ ವಿದ್ಯಾರ್ಥಿಗಳಿಗೆ ದೇಶ ವಿದೇಶಗಳಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳಿವೆ.