ಕೇವಲ ಬಿ.ಪಿ.ಎಲ್. ಕಾರ್ಡ್ ದಾರರಲ್ಲದೇ ಬೇರೆ ಬಡವರಿಗೂ ಉಚಿತ ಗ್ಯಾಸ್ ಸಿಲಿಂಡರ್, ಎಲೆಕ್ಷನ್ ಸೋತಿದ್ದಕೆ ಬಿ.ಜೆ.ಪಿ. ಮಾಡಿರುವ ಹೊಸ ತಂತ್ರಾನ?

0
866

ದೇಶದ ಬಡಕುಟುಂಬಗಳು ಉತ್ತಮ ಜೀವನ ನಡೆಸಲು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಸಬ್ಸಿಡಿಯಲ್ಲಿ ಎಲ್​ಪಿಜಿ ಗ್ಯಾಸ್​ ಸಿಲಿಂಡರ್ ವಿತರಣೆ ಮಾಡುತ್ತಿತು. ಈ ಯೋಜನೆಯಲ್ಲಿ ರೀಟೇಲರ್​ಗಳಿಗೆ 1600 ರೂ ನೀಡಿ ಗ್ಯಾಸ್ ಪಡೆಯಬೇಕಿತ್ತು ಈಗ ಕೇಂದ್ರ ಸರ್ಕಾರ ಉಚಿತ ಎಲ್​ಪಿಜಿ ಗ್ಯಾಸ್ ಸಂಪರ್ಕಕ್ಕೆ ಸರ್ಕಾರವೇ ರೀಟೇಲರ್​ಗಳಿಗೆ 1600 ರೂ. ಸಬ್ಸಿಡಿ ನೀಡಲಿದೆ. ಇದು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಪ್ರತಿ ಬಡ ಕುಟುಂಬಕ್ಕೂ ಒದಗಿಸುವ ಉಚಿತ ಎಲ್​ಪಿಜಿ ಗ್ಯಾಸ್ ವಿತರಣೆಯಾಗಿದೆ.

ಹೌದು ಈ ನಿರ್ಧಾರವನ್ನು ಸಚಿವ ಸಂಪುಟದಲ್ಲಿ ಉಜ್ವಲ ಯೋಜನೆಯನ್ನು ಕೇವಲ ಬಿಪಿಎಲ್​ ಕಾರ್ಡ್​ ಇರುವವರಿಗೆ ಮಾತ್ರವಲ್ಲದೆ ಎಲ್ಲ ಬಡಕುಟುಂಬಗಳಿಗೂ ವಿಸ್ತರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೊದಲು 2011ರ ಸಾಮಾಜಿಕ- ಆರ್ಥಿಕ ಜಾತಿಗಣತಿಯ ಆಧಾರದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳನ್ನು ಗುರುತಿಸಿ ಅವರಿಗೆ ಉಚಿತ ಎಲ್​ಪಿಜಿ ಸಂಪರ್ಕ ಒದಗಿಸಲಾಗಿತ್ತು. ಆದರೆ, ದೇಶದಲ್ಲಿ ಅನೇಕ ಬಡವರಿಗೆ ಎಲ್​ಪಿಜಿ ಸಂಪರ್ಕ ಸಿಗದ ಕಾರಣ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಆದರಿಂದ ಪ್ರಸ್ತುತ ಯಾವುದಾದರೂ ಬಡ ಕುಟುಂಬಗಳಿಗೆ ಉಚಿತ ಎಲ್​ಪಿಜಿ ಸಂಪರ್ಕ ಸಿಗುತ್ತಿಲ್ಲವಾದರೆ ಅವರು 14 ಅಂಶಗಳ ಅಫಿಡವಿಟ್​ ಸಲ್ಲಿಸಿ ಈ ಯೋಜನೆಯ ಉಪಯೋಗ ಪಡೆಯಬಹುದು.

ಈ ಯೋಜನೆಯ ಉದೇಶ?

2016ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದಾಗ, ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಬಿಪಿಎಲ್ ಕುಟುಂಬಗಳ ಮಹಿಳಾ ಸದಸ್ಯರಿಗೆ ಉಚಿತ ಎಲ್​ಪಿಜಿ ಗ್ಯಾಸ್ ಒದಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿತ್ತು. ಆದರೆ, ಹಲವು ಬಡ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಂಪರ್ಕವಿಲ್ಲದಿರುವುದು ಹಾಗೂ ಫಲಾನುಭವಿಗಳು ಇದರ ಲಾಭ ಪಡೆದುಕೊಳ್ಳದಿರುವ ಕಾರಣ ಪ್ರಧಾನಿ ಮಂತ್ರಿ ಉಜ್ವಲ ಯೋಜನೆಯನ್ನು ವಿಸ್ತರಿಸಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದಿಸಿದೆ.

ಸಂಪುಟದಲ್ಲಿ ಚರ್ಚೆ:

ನಿನ್ನೆ ನಡೆದ ಸಂಪುಟದಲ್ಲಿ ಈ ಬಗ್ಗೆ ಮಾತನಾಡಿರುವ ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್, ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನ ಶೇ.100ರಷ್ಟು ಬಡ ಕುಟುಂಬಗಳಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯಡಿ ಪ್ರತಿ ಬಡ ಕುಟುಂಬಕ್ಕೂ ಒದಗಿಸುವ ಉಚಿತ ಎಲ್​ಪಿಜಿ ಗ್ಯಾಸ್ ಸಂಪರ್ಕಕ್ಕೆ ಸರ್ಕಾರವೇ ರೀಟೇಲರ್​ಗಳಿಗೆ 1600 ರೂ. ಸಬ್ಸಿಡಿ ನೀಡಲಿದೆ. ಪ್ರಸ್ತುತ ಯಾವುದಾದರೂ ಬಡ ಕುಟುಂಬಗಳಿಗೆ ಉಚಿತ ಎಲ್​ಪಿಜಿ ಸಂಪರ್ಕ ಸಿಗುತ್ತಿಲ್ಲವಾದರೆ ಅವರು 14 ಅಂಶಗಳ ಅಫಿಡವಿಟ್​ ಸಲ್ಲಿಸಿ ಈ ಯೋಜನೆಯ ಉಪಯೋಗ ಪಡೆಯಬಹುದು ಎಂದು ತಿಳಿಸಿದ್ದಾರೆ.

ಈ ಯೋಜನೆಯ ಪಲಿತಾಂಶ:

ಈ ನಾಲ್ಕೂವರೆ ವರ್ಷಗಳಲ್ಲಿ ನಾವು ಮಾಡಿರುವ ಸಾಧನೆ ಬಗ್ಗೆ ತೃಪ್ತಿಯಿದೆ 2014 ರವರೆಗೆ ದೇಶದ 27 ಕೋಟಿ ಕುಟುಂಬಗಳಲ್ಲಿ 13 ಕೋಟಿ ಕುಟುಂಬಗಳಿಗೆ ಮಾತ್ರ ಎಲ್​ಪಿಜಿ ಸಂಪರ್ಕವಿತ್ತು. ಅಂದರೆ ಶೇ. 55ರಷ್ಟು ಕುಟುಂಬಗಳು ಎಲ್​ಪಿಜಿ ಸಿಲಿಂಡರ್​ ಬಳಸುತ್ತಿರಲಿಲ್ಲ. ಆದರೆ, ನಾವು ಈ ಯೋಜನೆಯನ್ನು ಆರಂಭಿಸಿದ ನಂತರ ಶೇ. 90ರಷ್ಟು ಮನೆಗಳಲ್ಲಿ ಎಲ್​ಪಿಜಿ ಬಳಕೆಯಾಗುತ್ತಿದೆ ಎಂದು ಧರ್ಮೇಂದ್ರ ಪ್ರಧಾನ್​ ಹೇಳಿ, ಎಲ್​ಪಿಜಿ ಪಡೆಯದೆ ಇರುವ ಕುಟುಂಬಗಳು ಈ ಯೋಜನೆಯ ಸದುಪಯೋಗ ಪಡೆಯಬೇಕು ಬೇಕು ಎಂದು ತಿಳಿಸಿದರು.