ಅಕ್ಟೋಬರ್-ನಲ್ಲಿ ಜಯದೇವ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಸ್ಟಂಟ್-ಆಂಜಿಯೋಪ್ಲಾಸ್ಟ್ ಕಾರ್ಯಾಗಾರವಿದೆ, ನೋಂದಾವಣಿಯ ಸಂಪೂರ್ಣ ವಿವರ ಇಲ್ಲಿದೆ ನೋಡಿ!!

0
359

ಹೃದಯ ಸಮಸ್ಯೆಯಿಂದ ಬಳತ್ತಿರುವ ಬಡ ರೋಗಿಗಳಿಗೆ ಉಚಿತ ಸ್ಟಂಟ್ ಅಂಜಿಯೋಪ್ಲಾಸ್ಟ್ ಕಾರ್ಯಗಾರವನ್ನು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹಮ್ಮಿಕೊಂಡಿದ್ದು, 200 ರೋಗಿಗಳಿಗೆ ಯಾವುದೇ ಹಣವಿಲ್ಲದೆ ಚಿಕಿತ್ಸೆ ಪಡೆಯಬಹುದಾಗಿದೆ. ಈಗಾಗಲೇ ಅಂಜಿಯೋಗ್ರಾಂ ತಪಾಣೆಗೆ ಒಳಪಟ್ಟ ರೋಗಿಗಳು ಈ ಸೌಲಭ್ಯ ಪಡೆಯಬಹುದು. ಅಂಜಿಯೋಪ್ಲಾಸ್ಟ್ ಕಾರ್ಯಾಗಾರ ಅಕ್ಟೋಬರ್ 11 ರಿಂದ 14 ವರೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಹಾಗೂ ಅಕ್ಟೋಬರ್ 15 ಮತ್ತು 16 ರಂದು ಮೈಸೂರುನಲ್ಲಿ ನಡೆಯಲಿದೆ.

ಹೌದು ಬಡ ರೋಗಿಗಳಿಂದ ಇಂತಹ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದು ಕಷ್ಟವಾಗುತ್ತದೆ. ಏಕೆಂದರೆ ನಗರದಲ್ಲಿ ಹೃದಯ ಸಂಬಂಧಿಸಿ ಆ್ಯಂಜಿಯೋಬ್ಲಾಸ್ಟ್‌ ಸಮಸ್ಯೆಯಿಂದ ಬಳಲುವ ಬಡರೋಗಿಗಳಿಗೆ ಎರಡು ಮೂರು ಲಕ್ಷಗಳು ವೆಚ್ಚ ಮಾಡಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಆ ಕಾರಣದಿಂದಾಗಿ ಬಡರೋಗಿಗಳಿಗೆ ಉಚಿತವಾಗಿ ಸ್ಟಂಟ್ಸ್‌ ಅಳವಡಿಕೆ ಮಾಡುವ ಉದ್ದೇಶದಿಂದಿಂದ ಬಡ ರೋಗಿಗಳಿಗೆ ಉಚಿತ ಸ್ಟಂಟ್ಸ್‌ ಅಳವಡಿಕೆ ಯೋಜನೆಯನ್ನು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹಮ್ಮಿಕೊಂಡಿದ್ದು ಈ ಉಚಿತ ಚಿಕಿತ್ಸೆ ಪಡೆಯಲು ಬಯಸುವರು ದಾಖಲಾತಿ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರ ಹೊಂದಿರಬೇಕು ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ತಿಳಿಸಿದ್ದಾರೆ ಆಸಕ್ತರು ಅಕ್ಟೋಬರ್. 1 ರ ಒಳಗೆ ಹೆಸರು ನೋಂದಾಯಿಸಬೇಕು.

ಕಳೆದ ವರ್ಷವೂ ಕೂಡ ರಾಜ್ಯದ ಹೃದ್ರೋಗಿಗಳು ಸೇರಿದಂತೆ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನ ಜನರಿಗೂ ಚಿಕಿತ್ಸೆ ನೀಡಿ, ಉಚಿತವಾಗಿ ಸ್ಟಂಟ್ ಅಳವಡಿಸಲಾಗಿತ್ತು ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ‘ನಾಲ್ಕು ದಿನಗಳಲ್ಲಿ 200 ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಮಾಡುವುದು ಸಾಧನೆಯೇ ಸರಿ. ಎಂದು ಹೇಳಿದ್ದರು, ‘ಅಮೆರಿಕದ ಡಾ. ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಷನ್, ಇಲಿನಾಯಿಸ್ ಹಾಗೂ ಮೆಡ್ಟ್ರಾನಿಕ್ ವ್ಯಾಸ್ಕುಲರ್ ಡಿವಿಷನ್ ವತಿಯಿಂದ ಸ್ಟಂಟ್-ಳನ್ನು ಅಳವಡಿಸಲಾಗಿತ್ತು.

ಅದರಂತೆ ಪ್ರತಿ ರೋಗಿಗೂ 75 ಸಾವಿರದಿಂದ 1 ಲಕ್ಷದವರೆಗಿನ ಸ್ಟಂಟ್- ಗಳನ್ನು ಉಚಿತವಾಗಿ ಅಳವಡಿಸಲಾಗಿತ್ತು. ಇವರೆಲ್ಲರೂ ಬಡ ರೈತರು, ದಿನಗೂಲಿ ನೌಕರರು, ಬೀದಿಬದಿಯ ಕಾರ್ಮಿಕರು ಹಾಗೂ ಹಿರಿಯ ನಾಗರಿಕರಾಗಿದ್ದರು. ಈಗ ಮತ್ತೆ ಉಚಿತ ಚಿಕಿತ್ಸೆ ಮಾಡಲು ಕಾರ್ಯಗಾರ ನಡೆಯಲಿದ್ದು, ಅಕ್ಟೋಬರ್. 1 ರ ಒಳಗೆ ಹೆಸರು ನೋಂದಾಯಿಸಿ ಚಿಕಿತ್ಸೆ ಪಡೆಯರಿ.