ಪ್ರಭಾಸ್ ನಟನೆಯ ಸಾಹೋ’ ಸ್ವಂತ ಚಿತ್ರವಲ್ಲ ಕದ್ದ ಮಾಲು ಎಂದ ಫ್ರೆಂಚ್ ನಿರ್ದೇಶಕ; ಹಾಗಾದ್ರೆ ತೆಲುಗು ನಿರ್ದೇಶಕರು ಕಾಪಿ ಮಾಡೋದು ಸತ್ಯವಾ??

0
331

ಬಾಹುಬಲಿ ಪ್ರಭಾಸ್ ನಟನೆಯ ಸಾಹೋ ಸಿನಿಮಾ ಒಂದೆಡೆ ಭಾರಿ ಕಲೆಕ್ಷನ್ ಮಾಡುತ್ತಿದ್ದರೆ ಇನ್ನೊಂದೆಡೆ ಸಿನಿಮಾದ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಅಭಿಮಾನಿಗಳಿಂದಲೂ ಕೂಡ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದಿದ್ದು, ಇಂದಿಗ ಸಾಹೋ ಕಾಪಿ ಮಾಡಿದ ಸಿನಿಮಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದನ್ನು ಫ್ರೆಂಚ್ ಚಿತ್ರದಿಂದ ಕಾಪಿ ಮಾಡಲಾಗಿದೆ ಎಂದು ಫ್ರೆಂಚ್ ಚಿತ್ರದ ನಿರ್ದೇಶಕರೇ ಈ ವಿಷಯವನ್ನ ಪ್ರಸ್ತಾಪಿಸಿದ್ದು, ಸಾಹೋ ಡೈರೆಕ್ಟರ್ ವಿರುದ್ಧ ಆರೋಪ ಮಾಡಿದ್ದಾರೆ. ಇಂತಹ ಸಿನಿಮಾ ಮಾಡಿ ಚಿತ್ರರಂಗಕ್ಕೆ ಯಾಕೆ ಅಪಮಾನ ಮಾಡುತ್ತೀರಾ ಎಂದು ಛೀಮಾರಿ ಹಾಕಿದ್ದಾರೆ.

ಸಾಹೋ’ ಸ್ವಂತ ಚಿತ್ರವಲ್ಲ?

ಹೌದು ಬಾಹುಬಲಿ ಚಿತ್ರದ ಬಳಿಕ ನಟ ಪ್ರಭಾಸ್ ತೆಲುಗು ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ಅವರ ನಟನೆಯ ಬಹು ನಿರೀಕ್ಷಿತ ಚಿತ್ರ ಸಾಹೋ ಕಳೆದ ವಾರ ತೆರೆಕಂಡಿದೆ. ವಿಶ್ವದಾದ್ಯಂತ ಬಿಡುಗಡೆಯಾಗಿರುವ ಸಾಹೋ ಚಿತ್ರಕ್ಕೆ ಪ್ರೇಕ್ಷಕರು ಮುಗಿಬಿದ್ದಿದ್ದು, ಚಿತ್ರ ಬಾಕ್ಸ್‌ ಆಫೀಸ್‌ನ ಕೊಳ್ಳೆ ಹೊಡೆಯುತ್ತಿದೆ. ಈ ಹಿಂದೆ ಸಿನಿಮಾದ ಕಥೆಯ ಕುರಿತಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಈ ಮಿಶ್ರ ಪ್ರತಿಕ್ರಿಯೆ ಚಿತ್ರದ ಕಲೆಕ್ಷನ್ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರಿಲ್ಲ. ಪ್ರಭಾಸ್ ಅಭಿಮಾನಿಗಳು ಚಿತ್ರದ ಕುರಿತಂತೆ ಪರ-ವಿರೋಧ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಅದರಂತೆ ಇಂದಿಗ ಆರೋಪ ಒಂದು ಕೇಳಿ ಬಂದಿದೆ.

ಏನಿದು ಆರೋಪ?

ಏತನ್ಮಧ್ಯೆ ಫ್ರೆಂಚ್ ನಿರ್ದೇಶಕರೊಬ್ಬರು ಪ್ರಭಾಸ್ ಅಭಿನಯದ ಸಾಹೋ ಚಿತ್ರ ಕದ್ದ ಮಾಲು ಎಂಬ ಬಾಂಬ್ ಸಿಡಿಸಿದ್ದು, ಈ ಹಿಂದೆ ತಾವು ಫ್ರೆಂಚ್ ಭಾಷೆಯಲ್ಲಿ ನಿರ್ದೇಶಿಸಿದ್ದ ಲಾರ್ಗೋ ವಿಂಚ್ ಚಿತ್ರದಲ್ಲಿನ ಅಂಶಗಳನ್ನು ಕದ್ದು ಸಾಹೋ ಚಿತ್ರ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಕುರಿತಂತೆ ಲಾರ್ಗೋ ವಿಂಚ್‌ ಚಿತ್ರದ ನಿರ್ದೇಶಕ ಜೆರೋಮ್ ಸಲ್ಲೇ ಸರಣಿ ಟ್ವೀಟ್ ಮಾಡಿದ್ದು, ‘ಲಾರ್ಗೋ ವಿಂಚ್ ಚಿತ್ರದ ಪೋಸ್ಟರ್‌ನ ಸಾಹೋ ಚಿತ್ರ ತಂಡ ಕಾಪಿ ಮಾಡಿದೆ ಎಂದಿದ್ದಾರೆ. ಅಲ್ಲದೇ ನನ್ನ ಕೆಲಸವನ್ನು ನೀವು ಕಾಪಿ ಮಾಡಿದ್ದೀರಿ. ಕಡೇ ಪಕ್ಷ ಕಾಪಿ ಮಾಡಿರೋದನ್ನಾದ್ರು ಸರಿಯಾಗಿ ಮಾಡಿದ್ದೀರಾ ಅಂತಾ ವ್ಯಂಗ್ಯವಾಡಿದ್ದಾರೆ. ಅಲ್ಲದೇ ಲಾರ್ಗೋ ವಿಂಚ್‌ನ ಫ್ರೀಮೇಕ್‌ ಅನ್ನು ಮೊದಲಿಗಿಂತ ಕೆಟ್ಟದಾಗಿ ತೋರಿಸಿದ್ದೀರಾ ಅಂತಾ ಕಿಡಿಕಾರಿದ್ದಾರೆ. ತೆಲುಗು ನಿರ್ದೇಶಕರೇ ನನ್ನ ಕೆಲಸವನ್ನ ಕಾಪಿ ಮಾಡ್ತೀರಾ, ಅದನ್ನಾದರೂ ಸರಿಯಾಗಿ ಮಾಡಿ” ಎಂದು ವ್ಯಂಗ್ಯ ಮಾಡಿ. ”ನನ್ನ ವೃತ್ತಿ ಜೀವನಕ್ಕೆ ಭಾರತದಲ್ಲಿ ಒಳ್ಳೆಯ ಭವಿಷ್ಯ ಎಂದು ಭಾವಿಸುತ್ತೇನೆ” ಎಂದು ಹೇಳುವ ಮೂಲಕ ಸಾಹೋ ಸಿನಿಮಾ ಬಗ್ಗೆ ಟೀಕೆ ಮಾಡಿದ್ದಾರೆ.

ಇನ್ನು ಲಾರ್ಗೋವಿಂಚ್ 2008ರಲ್ಲಿ ರಿಲೀಸ್ ಆದ ಫ್ರೆಂಚ್ ಭಾಷೆಯ ಸಿನಿಮಾವಾಗಿದ್ದು, ಜೆರೋಮ್ ಸಲ್ಲೇ ಅದರ ನಿರ್ದೇಶಕರಾಗಿದ್ದಾರೆ. ಇನ್ನು ಜೆರೋಮ್ ಸಲ್ಲೇ ಇದೇ ಮೊದಲ ಬಾರಿ ಈ ಆರೋಪ ಮಾಡಿಲ್ಲ. ಇದಕ್ಕೂ ಮುನ್ನ ತೆಲುಗು ನಿರ್ದೇಶಕರ ವಿರುದ್ಧ ತಮ್ಮ ಚಿತ್ರದ ಕಾಪಿ ಮಾಡಿರೋ ಆರೋಪವನ್ನು ಜೆರೋಮ್ ಮಾಡಿದ್ದರು. ಈ ಹಿಂದೆ ನಟ ಪವನ್ ಕಲ್ಯಾಣ್ ಅಭಿನಯದ ಅಜ್ಞಾತವಾಸಿ ಚಿತ್ರ ತೆರೆಕಂಡಾಗಲೂ ಜೆರೋಮ್ ಸಲ್ಲೇ ಇದೇ ರೀತಿಯ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಒಟ್ಟಾರೆಯಾಗಿ ತೆಲಗು ಸಿನಿಮಾಗಳು ಕದ್ದ ಮಾಲುಗಳು ಎಂದು ಹೇಳಿದ್ದಾರೆ.